ತಂತಿಯ ಮೇಲೆ ಸದಾ ನಡೆಯುತ್ತಿರುವ
ನಿಮ್ಮನ್ನು ಕಂಡು, ನನಗೆ ಬೆರಗು, ಭಯ,
ಮತ್ತೆ ಮರುಕ.

ನೆಲದ ಮೇಲೆ ನಡೆಯುವ ನಾನು
ಸ್ಪರ್ಧಿಸಲಾರೆ ನಿಮ್ಮೊಡನೆ.
ಬದಲು, ನೀವು ಬೀಳದಿರಲಿ ಎಂದು
ಆಶಿಸುತ್ತೇನೆ ; ಬಿದ್ದರೂ ಹೆಚ್ಚು ಪೆಟ್ಟಾಗದಿರಲಿ
ಎಂದು ಹಾರೈಸುತ್ತೇನೆ ; ಇಷ್ಟರ ಮೇಲೆ
ನಾನು ಅಸಹಾಯಕ.