ಸಾಮಾನ್ಯವಾಗಿ ನೀರುಗುಳ್ಳೆ ಸಸ್ಯವು ಸಿಹಿ ನೀರಿನಲ್ಲಿ ಬೆಳೆಯುವ ಸಸ್ಯ. ಇದು ಬೇರುಗಳಿಲ್ಲದ  ಸಸ್ಯ. ಕೆಲವೊಂದು ಪ್ರಭೇದಗಳು ಜೌಗುಪ್ರದೇಶದಲ್ಲೂ ಬೆಳೆಯುತ್ತವೆ. ಇದಕ್ಕೆ ಉದ್ದವಾದ ಹಾಗೂ ಳವಾದ ಸೂಕ್ಷ್ಮಕಾಂಡವಿದ್ದು, ಅದರ ಮೇಲೆ ಎರಡು ಬಗೆಯ ಎಲೆಗಳಿವೆ. ಚಿಕ್ಕ ಹಾಗೂ ಸರಳ ಎಲೆಗಳು ಗುಂಪಾಗಿ ಕಾಂಡದ ತಳಭಾಗದಲ್ಲಿ ಬೆಳೆಯುತ್ತವೆ. ಎರಡನೆಯ ಬಗೆಯ ಎಲೆಗಳು ಛಿದ್ರವಾಗಿ ಸೀಳಿರುತ್ತವೆ.

ತ್ತವೆ. ಇನ್ನೂ ಕೆಲವು ತುಣುಕುಗಳು ಒಂದೊಂದು ಚಿಕ್ಕ ಚೀಲಗಳಾಗಿ ಮಾರ್ಪಟ್ಟಿವೆ. ಈ ಚೀಲಗಳ ವ್ಯಾಸ ೧-೨ ಮಿ.ಮೀ. ಚೀಲದ ಬಾಯಿಯ ಬಳಿಯಲ್ಲಿ ಸುಂದರವಾದ, ಆಕರ್ಷಕ ಹಾಗೂ ಬಣ್ಣ ಬಣ್ಣದ ರೋಮಗಳಿವೆ. ಅವು ಚಿಕ್ಕ ಜಲ-ಚರ ಪ್ರಾಣಿಗಳನ್ನು ಆಕರ್ಷಿಸುತ್ತವೆ. ಚೀಲದ ಬಾಯಿಯ ತುದಿಗೆ ಹಾಗೂ ಒಳಗಡೆ, ಒಳಮುಖವಾಗಿ ತೆರೆದುಕೊಳ್ಳುವ ಒಂದು ಕವಾಟು ಇದೆ. ಹೊರಗಿನಿಂದ ಒಳಗಡೆ ನೂಕಿದಾಗ ಕವಾಟು ಒಳಗಡೆ ಮಾತ್ರ ತೆರೆದುಕೊಳ್ಳುತ್ತದೆ. ಅಂದರೆ ಚೀಲವು ‘ಇಲಿ-ಬಲೆ’ಯಂತೆ ಕೆಲಸ ಮಾಡುತ್ತದೆ.


ಚೀಲದಲ್ಲಿಯ ಗ್ರಂಥಿಗಳು ನೀರನ್ನು ಹೀರಿಕೊಳ್ಳುವುದರಿಂದ ಚೀಲದಲ್ಲಿ ನಿರ್ವಾತವುಂಟಾಗುತ್ತದೆ. ನೀರಿನಲ್ಲಿಯ ಸೂಕ್ಷ್ಮ ಕೀಟಗಳು ಕವಾಟವನ್ನು ಒಳಗಡೆ ನೂಕಿದಾಗ ನೀರಿನ ಸಂಗಡ ಅವೂ ಚೀಲದೊಳಗೆ ಪ್ರವೇಶಿಸುತ್ತವೆ. ಒಮ್ಮೆ ಈ ಕೀಟಗಳು ಚೀಲದಲ್ಲಿ ಪ್ರವೇಶಿಸಿದರೆ ಹೊರಬರಲು ಸಾಧ್ಯವಿಲ್ಲ. ಯಾಕೆಂದರೆ ಚೀಲದಲ್ಲಿ ಒಮ್ಮೆ ನೀರು ತುಂಬಿಕೊಂಡರೆ ಕವಾಟ ತೆರೆದುಕೊಳ್ಳುವುದಿಲ್ಲ. ಚೀಲದೊಳಗೆ, ಅದರ ಮೈಮೇಲೆ ಅಸಂಖ್ಯಾತ ಕವಲೊಡೆದ ಸೂಕ್ಷ್ಮ ಪಾಚಕ ಗ್ರಂಥಿಗಳಿವೆ. ಪಾಚಕ ಗ್ರಂಥಿಗಳು ಕೀಟವನ್ನು ಪಚನ ಮಾಡಿ ನೈಟ್ರೋಜನ್‌ಯುತ ಪೋಷಕಗಳನ್ನು ಹೀರಿಕೊಂಡ ಮೇಲೆ ಮತ್ತೆರಡು ಗಂಟೆಗಳಲ್ಲಿ ಚೀಲವು ಮತ್ತೆ ಕೀಟಗಳನ್ನು ಹಿಡಿಯಲು ತಯಾರಾಗುತ್ತದೆ. ಕೀಟ ಹಿಡಿಯುವ ಪ್ರಕ್ರಿಯೆಯು ಕ್ಷಣಾರ್ಧದಲ್ಲಿ ಮುಗಿಯುತ್ತದೆ. ನಾಲ್ಕೈದು ದಿವಸಗಳಾದನಂತರ ಸತ್ತ ಕೀಟದ ದೇಹವು ಕೊಳೆತು ಚೀಲದಿಂದ ಹೊರಬರುತ್ತದೆ.