ಸಾಮಾನ್ಯವಾಗಿ ಎಲ್ಲ ಕೀಟ ತಿನ್ನುವ ಸಸ್ಯಗಳು ಅಳಿವಿನ ಅಂಚಿನಲ್ಲಿರುವುದರಿಂದ ಅವುಗಳ ಸಂಗ್ರಹಣೆ ನಿಷಿದ್ಧ.

* ಇಲ್ಲಿ ವಿವರಿಸಿದ ಕೀಟ ತಿನ್ನುವ ಸಸ್ಯಗಳು ಹೂವು ತಳೆಯುತ್ತವೆ. ಸುಮಾರು ೨೦೦ ಮಾಂಸಾಹಾರಿ ಶಿಲೀಂಧ್ರಗಳೂ ಇವೆ. ಅವುಗಳ ಬಗ್ಗೆ ಈ ಪುಸ್ತಕದಲ್ಲಿ ವಿವರಿಸಿಲ್ಲ.

Acid ಆಮ್ಲ  
Adhesive trap ಅಂಟು ಜಾಲ ವ್ಯವಸ್ಥೆ  
Albani pitcher ಅಲ್ಬನಿ ಹೂಜಿ.  
Bacteria ಬ್ಯಾಕ್ಟೀರಿಯಾ  
Bog ಜೌಗು ಪ್ರದೇಶ  
Carnivorous ಮಾಂಸಾಹಾರಿ  
C 14 ಸಮಸ್ಥಾನೀಯ ಕಾರ್ಬನ್ -೧೪  
Climber ಏರು ಬಳ್ಳಿ  
Cobra lily ನಾಗ ಲಿಲಿ.  
Decompose ವಿಘಟನೆಯಾಗು.  
Digestive glands ಪಾಚಕ ಗ್ರಂಥಿ  
Digestive juice ಪಾಚಕ ರಸ  
Electric potential ವಿದ್ಯುದ್ವಿಭವ  
Enzyme ಕಿಣ್ವ  
Fluid ದ್ರವ  
Fly paper trap ಅಂಟು ಜಾಲ ವ್ಯವಸ್ಥೆ.  
Glands ಗ್ರಂಥಿಗಳು  
Hairs ರೋಮಗಳು  
Heavy metals ಭಾರಲೋಹಗಳು  
Hinge ತಿರುಗಣಿ  
Hood ಹೆಡೆ  
Insectivorous ಕೀಟ ತಿನ್ನುವ, ಕೀಟಾಹಾರಿ  
Jaw ದವಡೆ  
Killer plants ಹಂತಕ ಸಸ್ಯಗಳು  
Leaf apex ಪತ್ರಾಗ್ರ  
Leaf base ಪತ್ರ ಪೀಠ  
Lid ಮುಚ್ಚಳ  
Lobster – pot trap ಏಡಿಕುಳಿ ಜಾಲವ್ಯವಸ್ಥೆ  
Man eater ನರಭಕ್ಷಕ  
Margin ಅಂಚು  
Midrib ಮಧ್ಯನಾಳ  
Minerals ಲವಣಗಳು  
Mouth ಬಾಯಿ  
Nector ‘ಮಧು’  
Nutrition ಪೋಷಕ  
Organic Nitrogen ಸಾವಯವ ನೈಟ್ರೋಜನ್‌ಯುತ ಸಂಯುಕ್ತಗಳು.  
Petiole ಎಲೆ ತೊಟ್ಟು  
Phosphorous ರಂಜಕ  
Photosynthesis ದ್ಯುತಿಸಂಶ್ಲೇಷಣೆ  
Pitcher ಹೂಜಿ  
Pit fall trap ಮುಚ್ಚಿದ ಕುಳಿ ಜಾಲವ್ಯವಸ್ಥೆ  
Pointed ಮೊನಚಾದ  
Poor soil ಬಂಜರು ಭೂಮಿ  
Predator ಪರಭಕ್ಷಕ, ಮಾಂಸಾಹಾರಿ.  
Prey ಬಲಿ ಬಿದ್ದ ಪ್ರಾಣಿ.  
Rhizome ರೈಸೋಮ, ಗುಪ್ತಕಾಂಡ.  
Slippery ಜಾರಿಕೆ  
Snap trap ತಟ್ಟನೆ ಮುಚ್ಚಿಕೊಳ್ಳುವ ಜಾಲವ್ಯವಸ್ಥೆ.  
Sticky trap ಅಂಟು ಜಾಲ ವ್ಯವಸ್ಥೆ.  
Sundew ಇಬ್ಬನಿ ಸಸ್ಯ.  
Sun pitcher ಸೂರ್ಯನ ಹೂಜಿ.  
Tendril ನುಲಿ ಬಳ್ಳಿ, ಪ್ರತಾನನ, ಕುಡಿಬಳ್ಳಿ.  
Tentacle ಗ್ರಹಣಾಂಗ, ಸ್ಪರ್ಶಕ  
Trap ಜಾಲ, ಪಾಶ  
Trigger ಚೋದನೆ  
Trumet pitcher ತುತ್ತೂರಿ ಹೂಜಿ  
Vacuole ರಸದಾನಿ  
Valve ಕವಾಟ  
Venus Fly trap ವೀನಸ್ ನೊಣ ಹಿಡುಕ  
Water Wheel ನೀರ್ಗಾಲಿ.  

* * *