ಕೆಲವು ಗ್ರಂಥಿಗಳು ಅಂಟು ದ್ರವವನ್ನು ಸ್ರವಿಸಿ ಕೀಟವನ್ನು ಹಿಡಿಯಲು ಸಹಕಾರಿ. ಇನ್ನು ಕೆಲವು ಪಾಚಕ ರಸಗಳನ್ನು/ಜೀರ್ಣಕಾರಿ ಕಿಣ್ವಗಳನ್ನು ಸ್ರವಿಸಿ ಪಚನ ಕ್ರಿಯೆಗೆ ಸಹಾಯ ಮಾಡುತ್ತವೆ. ಜೀರ್ಣಕಾರಿ ಕಿಣ್ವಗಳನ್ನು ಸ್ರವಿಸುವ ಗ್ರಂಥಿಗಳು ಅನೇಕ ಬಗೆಯಲ್ಲಿ ಪ್ರಾಣಿಗಳ ಗ್ರಂಥಿಗಳನ್ನು ಹೋಲುತ್ತವೆ. ಉದಾ : ಕೀಟ ತಿನ್ನುವ ಸಸ್ಯಗಳ ಪಾಚಕ ಗ್ರಂಥಿಗಳ ‘ರಸದಾನಿ‘ಗಳು ಕಿಣ್ವಗಳನ್ನು ಸಂಗ್ರಹಿಸಿರುತ್ತವೆ. ಅಂದರೆ ಇವು ಪ್ರಾಣಿ ಕೋಶಗಳ ಲೈಸೋಸೋಮುಗಳಿದ್ದಂತೆ. ಈ ಗ್ರಂಥಿಗಳ ಕೋಶಗಳಲ್ಲಿ ಡ್ರೊಸೋಫಿಲಾ ನೊಣದ ಸೆಲಿವರಿ (ಜೊಲ್ಲು) ಗ್ರಂಥಿಯ ಹಾಗೆ ಹೆಚ್ಚು ಡಿ.ಎನ್.ಎ. (DNA) ಇದೆ. ‘ಗಾಲ್ಗಿ’ ಕಾಯಗಳು ಕೂಡಾ ಇಬ್ಬನಿ ಸಸ್ಯ ಹಾಗೂ ಬಟರ್ವರ್ಟ್ಸ್ಗಳಲ್ಲಿ ಚೆನ್ನಾಗಿ ವೃದ್ಧಿಯಾಗಿವೆ. ಕೀಟದ/ಪ್ರಾಣಿಯ ಗಾತ್ರಕ್ಕೆ ತಕ್ಕಂತೆ ಕಿಣ್ವಗಳು ಸ್ರವಿಸುತ್ತವೆ. ಹೆಚ್ಚು ಕಿಣ್ವಗಳು ಸ್ರವಿಸಿದರೆ ಕೀಟ ತಿನ್ನುವ ಸಸ್ಯದ ಎಲೆಯು ಕೊಳೆಯುತ್ತದೆ. “ವೀನಸ್ ಹುಳು ಹಿಡುಕ”ದ ಮಧ್ಯನಾಳವು ಪ್ರಾಣಿಗಳ ನರಗಳಂತೆ ಕೆಲಸಮಾಡಿ, ಎಲೆಯು ಮುಚ್ಚಿಕೊಳ್ಳುವಂತೆ ಮಾಡುತ್ತದೆಂದು ವಿಜ್ಞಾನಿಗಳ ಅಭಿಪ್ರಾಯ.
ಕೀಟಾಹಾರಿ ಸಸ್ಯಗಳು : ಪಾಚಕ ಗ್ರಂಥಿಗಳು
By kanaja|2016-11-08T04:12:04+05:30January 16, 2012|ಜೀವ ವಿಜ್ಞಾನ, ನೈಸರ್ಗಿಕ ವಿಜ್ಞಾನ, ವಿಜ್ಞಾನ|0 Comments
Leave A Comment