ನೆಲದ ಮೇಲೆ ಬೆಳೆಯುವ ಬಿರಡಿ ತಿರುಪು ಸಸ್ಯದ ಗುಪ್ತಕಾಂಡದಿಂದ ಗುಂಪಾಗಿ ಎರಡು ಬಗೆಯ ಎಲೆಗಳು ಬೆಳೆಯುತ್ತವೆ. ಒಂದು ಬಗೆಯ ಎಲೆ ಕಲಸು ಚಾಕುವಿನಂತೆ ಮತ್ತೊಂದು ಉಬ್ಬಿದ ಕೊಳವೆಯಂತೆ ಇವೆ. ಕೊಳವೆಯೊಳಗೆ ಕೀಟವು ಪ್ರವೇಶಿಸಿದರೆ ಒಳಗೆ ಸಿಕ್ಕು ಸಾಯುತ್ತದೆ ಹಾಗೂ ಪಾಚಕ ರಸದಲ್ಲಿ ಮುಳುಗಿ ಪಚನವಾಗುತ್ತದೆ.