ಕೆಲವು ಹೂಜಿ ಸಸ್ಯಗಳಲ್ಲಿ ಹೂಜಿಯ ನಿರ್ಮಾಣ ಬಹಳ ವಿಚಿತ್ರವಾಗಿದೆ. ಎಲೆಯು ಎಳೆಯದಿದ್ದಾಗಲೆ ಪ್ರತಾನವಾಗಿ ಬೆಳೆಯುತ್ತದೆ. ಅನಂತರ ಅದು ಆಶ್ರಯ ಸಸ್ಯದ ಮೇಲೆ ಆಸರೆ ಪಡೆದು ಸುತ್ತುವರಿಯುತ್ತದೆ. ಅನಂತರ ತುದಿಯು ಉಬ್ಬುತ್ತ ಹೋಗುತ್ತದೆ. ಜೊತೆಗೆ ಹೂಜಿಯ ಮೇಲೆ ವಿವಿಧ ಬಣ್ಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಹಾಗೂ ಹೂಜಿಗಳಲ್ಲಿ ದ್ರವವು ತುಂಬಿಕೊಳ್ಳುತ್ತದೆ. ಹೂಜಿಯ ಬೆಳವಣಿಗೆ ಪೂರ್ಣಗೊಂಡಮೇಲೆ ಅದರ ಬಾಯಿಯ ಮುಚ್ಚಳವು ಹೊರತೆಗೆದುಕೊಳ್ಳುತ್ತದೆ. ಈಗ ಹೂಜಿಯು ಕೀಟಗಳ ಬೇಟೆಗೆ ಸಜ್ಜಾಗಿ ನಿಲ್ಲುತ್ತದೆ.

ಹೂಜಿಸಸ್ಯಗಳು ಕೇವಲ ಚಿಕ್ಕ ಕೀಟಗಳನ್ನಲ್ಲದೆ ಜೊಂಡಿಗ, ಶತಪದಿ, ಚೇಳು, ಮರಗಪ್ಪೆ, ಹಾಗೂ ಚಿಕ್ಕ ಇಲಿಗಳನ್ನು ಭಕ್ಷಿಸುತ್ತವೆ.