ಹೂಜಿ ಸಸ್ಯಗಳಲ್ಲಿ ಎಲೆಗಳು, ಮುಚ್ಚಿದ ಗುಂಡಿ, ಬೀಕರ್, ಹೂಜಿ, ಬಟ್ಟಲು, ತುತ್ತೂರಿ ಹಾಗೂ ಕೊಳಲಿನಾಕಾರದಂತೆ ಮಾರ್ಪಾಟಾಗಿ ಕೀಟಗಳನ್ನು ಹಿಡಿದು, ಪೋಷಕಗಳನ್ನು ಪಡೆಯುತ್ತವೆ. ಚಿಕ್ಕ ಹೂಜಿಗಳು ಆಶ್ರಯ ಸಸ್ಯದ ಮೇಲೆ ಜೋತಾಡುವಾಗ ಬೆಳಗದೆ ಇರುವ ಜೋತುಬಿಟ್ಟ ವಿದ್ಯುದ್ದೀಪಗಳಂತೆ ಕಾಣಿಸುತ್ತವೆ. ದೊಡ್ಡ ಹೂಜಿಗಳು ನೆಲದ ಮೇಲೆ ತಮ್ಮ ಹೊಟ್ಟೆಯನ್ನು ಉಬ್ಬಿಸಿಕೊಂಡು ಕುಳಿತಿರುತ್ತವೆ.