ಆಟಗಾರರಲ್ಲಿ ಇಬ್ಬಿಬ್ಬರು ಕೈಗಿಂಚು ಹಾಕಿ ನಿಲ್ಲುವರು. ಉಳಿದವರು ಇಬ್ಬರ ನಡುವೆ ಒಬ್ಬರಂತೆ ನಿಲ್ಲುವರು. ನಿಂತವರು ತಮ್ಮ  ಎಡಬಲದಲ್ಲಿರುವವರ ಹೆಗಲ ಮೇಲೆ ಕೈಯಿಟ್ಟು ಒಂದು ಕಾಲನ್ನು ಕೈಗಿಂಚಿನ ಮೇಲಿಡುತ್ತಾರೆ. ಇನ್ನೊಂದು ಕಾಲು ನೆಲದ ಮೇಲೆಯೇ ಇರುತ್ತದೆ. ಎಲ್ಲರೂ ಒಮ್ಮೆಲೇ ಮುಂದೋಡಿದಾಗ ನಡುವಿನವನು ಕುಂಟುತ್ತ ನಡೆಯುವನು. ಕೈಗಿಂಚು ತಪ್ಪಿ ಹೋದರೆ ಆಟ ಮುಗಿಯಿತು. ಮತ್ತೆ ಹಾಗೆಯೇ ಹೊಸದಾಗಿ ಆಡುವರು. ಇದನ್ನು ಗಳೆಗೂಸಾಟವೆಂದು ಕರೆದರೆ ತಪ್ಪಾಗಲಾರದು.