ಅಂಗಳದ ಆಟಗಳಲ್ಲಿ ಹೆಚ್ಚು ಜನ ಪ್ರಿಯವಾದ ಆಟವಿದು. ಈ ಆಟಕ್ಕೆ ಮಾವಿನ ಗೊರಟೆಯನ್ನೇ ಉಪಯೋಗಿಸುತ್ತಾರೆ. ಅದೇ ಗೊರಟು ದೊರೆಯುತ್ತಿದ್ದರೂ ಎಲ್ಲವೂ ಆಟಕ್ಕೆ ಯೋಗ್ಯವಲ್ಲ. ಚಪ್ಪಟೆ ಯಾದುವುಗಳನ್ನು ಮಾತ್ರ ಆರಿಸಿಕೊಳ್ಳಬೇಕು. ತುಂಬ ಚಪ್ಪಟೇ ಗೊರಟು ಕಾಲಿನಿಂದ ತೂರಿದಾಗ ಮುಂದೆ ಸಾಗುವುದಿಲ್ಲ. ತುಂಬ ಚಪ್ಪಟೆ ಗೊರಟು ಕಾಲಿನಿಂದ ತೂರಿದಾಗ ಮುಂದೆ ಸಾಗುವುದಿಲ್ಲ. ತುಂಬ ಉಬ್ಬಿಕೊಂಡಿದ್ದರೆ ಗುರಿತಪ್ಪಿ ದೂರ ಉರುಳುವ ಸಂಭವ ಹೆಚ್ಚು. ಚಪ್ಪಟೆ ಗೊರಟು ಸಿಗದಾಗ ದಪ್ಪ ಗೊರಟನ್ನೇ ಜಜ್ಜಿ ತಿರುಳು ಹೊರಹಾಕಿ ಚಪ್ಪಟೆ ಮಾಡಿಕೊಳ್ಳುವರು. ಎರಡೂ ಪಕ್ಷದವರು ಒಂದೇ ಗೊರಟು ಉಪಯೋಗಿಸಬೇಕು.

ಮುಂದಿನ ಕೆಲಸ ಮನೆ ಸಿದ್ಧಪಡಿಸುವದು. ಸುಮಾರು ಹದಿನೈದು ಫೂಟು ಉದ್ದ, ನಾಲ್ಕು ಫೂಟು ಅಗಲ ಮನೆ ಬೇಕು. ಕಾರ್ಗದ್ದೆ, ಹೊಳೆ, ಸಮುದ್ರ ಅನುಕ್ರಮವಾಗಿ ಹೆಚ್ಚು ಹೆಚ್ಚು ಅಗಲವುಳ್ಳವು. ಸಮುದ್ರದ ಆಚೆ ಹೊರಬೈಲು; ಮೊದಲ ನಾಲ್ಕು ಮನೆಯ ಈಚೆ ಅಂಗಳ, ಅಂಗಳ ಮತ್ತು ಹೊರಬೈಲಿನಲ್ಲಿ ಗೊರಟಿನ ಗಡಿ ರೇಖೆಯನ್ನು ಎಳೆಯಲಾಗುತ್ತದೆ.

ನಿಯಮಗಳು.

೧. ಆಡುವಾಗ ಗೆರೆ ಮುಟ್ಟಬಾರದು.

೨. ಗೊರಟು ಗೆರೆಯ ಮೇಲೆ ಬೀಳಬಾರದು

೩. ಎಸೆದ ಗೊರಟು ನಿರ್ದಿಷ್ಟ ಮನೆ ಬಿಟ್ಟು ಮುಂದೆ ಬೀಳಬಾರದು. ಹಿಂದಿನ ಮನೆಯಲ್ಲಿ ಬಿದ್ದರೆ ರೂರಿಕೊಂಡು ನಿರ್ದಿಷ್ಟ ಮನೆಗೆ ಹೋಗಬಹುದು.

೪. ಬೇರೆಯವರು ಕಟ್ಟಿದ ಮನೆಯಲ್ಲಿ ಗೊರಟು ಬೀಳಬಾರದು.

೫. ಬಾವಿ ಬಿಟ್ಟು ಬೇರೆ ಮನೆ ಆದುವಾಗ, ಗೊರಟು ಬಾವಿಯಲ್ಲಿ ಬಿದ್ದರೆ ಅವನ ಪಕ್ಷದ ಇನ್ನೊಬ್ಬ ಹೊಸದಾಗಿ ಆಡಬೇಕು. ಆದರೆ ಕಟ್ಟಿದ ಮನೆ ಮಾತ್ರ ಉಳಿಯುತ್ತ್ದೆ.

೬. ಒಂದು ಪಕ್ಷದವರು ಕಟ್ಟಿದ ಮನೆಯನ್ನು ಇನ್ನೊಂದು ಪಕ್ಷದವರು ಮೆಟ್ಟಿದರೆ, ಅಲ್ಲಿ ಗೊರಟು ಬಿದ್ದರೆ, ಆಟಗಾರ ಔಟು. ಆದರೆ ಒಂದರ ಮುಂದೆ ಒಂದು ಸಾಲಾಗಿ ಇರುವ ಮನೆಯನ್ನು ಒಂದು ಪಕ್ಷ ಕಟ್ಟಿದರೆ ಎದುರಾಳಿಗೆ ಹೆಜ್ಜೆಯಿಡುವಷ್ಟು ಸ್ಥಳ ಬಿಟ್ಟು ಕೊಡುವರು.

೭. ಆಟಗಾರರು ತಮ್ಮ ಕಟ್ಟಿದ ಮನೆಯಲ್ಲಿ ಎರಡೂ ಕಾಲನ್ನು ಊರಬಹುದು. ಆದರೆ ಬೇರೆ ಕಡೆ ಎತ್ತಿದ ಕಾಲನ್ನು ನೆಲಕ್ಕೆ ತಾಗಿಸಿದರೆ ಔಟು.

೮. ಬಾವಿಯನ್ನು ಕಟ್ಟಿದವರ ಗೊರಟು ಬಾವಿಯಲ್ಲಿ ಬಿದ್ದರೆ ಹೊಸದಾಗಿ ಆಡಬೇಕೆಂದಿಲ್ಲ. ವಿರುದ್ಧ ಪಕ್ಷದವರಾದರೆ ಹೊಸದಾಗಿ ಆಡಬೇಕು.

ಪ್ರಾರಂಭ –  ತಮ್ಮೊಳಗೇ ಒಪ್ಪಿ ಯಾವುದೇ ಪಕ್ಷ ಆಟ ಆರಂಭಿಸುತ್ತದೆ. ಅಂಗಳದಲ್ಲಿ ಎರಡೂ ಕಾಲೂರಿ ನಿಂತು ಒಂದನೆಯ ಮನೆಗೆ ಗೊರಟೆ ಒಗೆಯಬೇಕು. ಬಲಗಾಲನ್ನು ಎತ್ತಿ, ಗೊರಟನ್ನು ಎಡಗಾಲಲ್ಲಿ ಮೆಟ್ಟಿ ಹಿಂದಕ್ಕೆ ಅಂಗಳಕ್ಕೆ ತೂರಿ ಬಲಗಾಲಲ್ಲಿ ಮೆಟ್ಟಬೇಕು. ಅಂಗಳದಲ್ಲಿದ್ದಾಗ, ಕುಂಟು ಕಾಲಲ್ಲಿ ನಿಲ್ಲುವದಿಲ್ಲ. ನಂತರ ಎರಡನೆಯ ಮನೆಗೆ ಗೊರಟು ಒಗೆದು ಮೇಲಿನಂತೆ ಮೆಟ್ಟಿ ಅಂಗಳಕ್ಕೆ ತರಬೇಕು. ಎರಡನೆಯ ಮನೆಗೆ ಗೊರಟು ಒಗೆದು ಮೇಲಿನಂತೆ ಮೆಟ್ಟಿ ಅಂಗಳಕ್ಕೆ ತರಬೇಕು. ಹೀಗೆಯೇ ಮುಂದಿನ ಮನೆಗಳನ್ನು ಆಡಬೇಕು. ಆಡುವ ಮನೆಯಿಂದ್ ಅನೇರವಾಗಿ ಅಂಗಳಕ್ಕೆ ತೂರಿ ಕುಂಟುತ್ತ ಬಂದು ಅಂಗಳದಲ್ಲಿ ಬಲಗಾಲಿನಿಂದ ಮೆಟ್ಟಬಹುದು. ಆದರೆ ಗೊರಟು ತೂರಿದಾಗ ಅಂಗಳಕ್ಕೆ ಹೋಗದೆ ನಡುವೆ ಬೇರೊಂದು ಮನೆಯಲ್ಲಿ ಬಿದ್ದರೆ, ಆ ಮನೆಯ ಹಿಂದಿನ ಮನೆಗೆ ಕುಂಟುತ್ತ ಬಂದು ಗೊರಟಿನ ಮೇಲೆ ಹಾರಿ, ಮುಂದಿನ –  ಮನೆಗೆ ತೂರಿಕೊಳ್ಳಬೇಕು. ಅಂಗಳ ಮುಟ್ಟುವವರೆಗೂ ತೂರಿಕೊಂಡೇ ಮುಂದಿನ –  ಮನೆಗೆ ತೂರಿಕೊಳ್ಳಬೆಕು. ಅಂಗಳ ಮುಟ್ಟುವವರೆಗೂ ತೂರಿಕೊಂಡೇ ಬರಬಹುದು. ಎಂಟು ಮನೆಗಳನ್ನು ಆಡಿದ ಮೇಲೆ ಹೊರಬೈಲಿಗೆ ಅಂಗಳದಲ್ಲಿ ನಿಂತು ಗೊರಟೆ ಒಗೆಯಬೇಕು. ಕುಂಟುತ್ತ ಹೋಗಿ ಅದನ್ನು ಬಲಗಾಲಲ್ಲಿ ಮೆಟ್ತಿ ನಿಂತುಕೊಳ್ಳಬೆಕು. ಬಲಗಾಲ ಹೆಬ್ಬೆರಳ ಸಂದಿಯಲ್ಲಿ ಗೊರಟನ್ನು ಸಿಕ್ಕಿಸಿ, ಅಂಗಳಕ್ಕೆ ಕಾಲಿನಿಂದಲೇ ಒಗೆಯಬೇಕು. ಬೀಸಿದ ಗೊರಟು ಅಂಗಳಕ್ಕೆ ಹೋಗಿ ಬೀಳಬೇಕು. ಒಗೆಯಲು ಎತ್ತಿದ ಕಾಲನ್ನು ಊರದೆ, ಕುಂಟುತ್ತ  ಹೋಗಿ ಅಂಗಳಕ್ಕೆ ಹಾರಿ, ಗೊರಟನ್ನು ಮೆಟ್ಟಿದರೆ ಒಂದು ಮನೆ ಕಟ್ಟಿದಂತೆ, ಮನೆಕಟ್ಟುವಾಗ ಕುಂತುತ್ತ ಹೋಗಬಾರದು. ಕಟ್ಟುವ ಮನೆಯ ನಾಲ್ಕು ಮೂಲೆಗೆ ಗೊರಟಿನಿಂದxಹೀಗೆ ಗೆರೆ ಎಳೆದರೆ ಮನೆಕಟ್ಟಿದಂತೆ, ಕಟ್ಟಿದ ಮನೆಯನ್ನು ಯಾರು ಆಡಬಾರದು. ಮನೆ ಕಟ್ಟಿದವರು ತಮ್ಮ ಮನೆಯಲ್ಲಿ ಕುಂಟದೆ ನಿಂತು ಆಡಬಹುದು. ಆದರೆ ತೂರಿದ ಗೊರಟನ್ನು ಮಾತ್ರ ಅಂಗಳದಲ್ಲಿಯೇ ಮೆಟ್ಟಬೇಕು. ಕೊನೆಯಲ್ಲಿ ಹೊರಬೈಲು ಕಟ್ಟುವುದು. ಅಂಗಳದಲ್ಲಿ ನಿಂತು ಹೊರಬೈಲಿಗೆ ಗೊರಟೆಸೆದು ಕುಂಟುತ್ತ ಹೋಗಿ ಮೆಟ್ಟಿ, ಅಂಗಳಕ್ಕೆ ಕಾಲಿನಿಂದ ಒಗೆಯುವದು. ತಿರುಗಿ ನಡೆದು ಹೋಗಿ ಹೊರಬೈಲು ಕಟ್ಟಿ ಅಲ್ಲಿ ಹಿಂತಿರುಗಿ ನಿಂತು, ಹಿಂಬದಿಯಿಂದ ಕೈಯಲ್ಲಿ ಗೊರಟು ಹಿಡಿದು ಒಗೆಯುವರು. ಅದು ಅಂಗಳದಲ್ಲಿ ಬಿದ್ದರೆ ಅದನ್ನೂ ಕಟ್ಟುವರು.