ಈ ಆಟಕ್ಕೂ ಬೆಟ್ಟೆಬೇಕು. ಮನೆಯ ಹೊರಗೆ ನಿಂತು, ಒಂದನೆಯ ಮನೆಯಲ್ಲಿ ಬೆಟ್ಟೆ ಚೆಲ್ಲಿ. ೨ – ೩ನೆಯ ಮನೆಗೆ ಹಾರಿ, ಒಂದು ಕಾಲು ೨ನೆಯ ಮನೆಯಲ್ಲಿ ಇನ್ನೊಂದು ಕಾಲು, ೩ನೆಯ ಮನೆಯಲ್ಲಿರುವಂತೆ ನೋಡಿಕೊಂಡು ೪ನೆಯ ಮನೆಯಲ್ಲಿ ಒಂಟಿ ಕಾಲಲ್ಲಿ ನಿಂತು, ಮತ್ತೆ ಹಾರಿ, ೫ನೆಯ ಮನೆಯಲ್ಲೊಂದು ೬ನೆಯ ಮನೆಯಲ್ಲೊಂದು ಕಾಲು ಇಡಬೇಕು. ಮತ್ತೆ ಹಾರಿ ಅದೇ ಮನೆಯಲ್ಲಿ ತಿರುಗಿ ನಿಲ್ಲಬೇಕು. ನಾಲ್ಕನೆಯ ಮನೆಗೆ ಒಂಟಿ ಕಾಲಲ್ಲಿ ಬಂದು ೨ ಮತ್ತು ೩ನೆಯ ಮನೆಯಲ್ಲಿ ಒಂದೊಂದು ಕಾಲಿರುವಂತೆ ಹಾರಿ, ಅಲ್ಲಿಂದಲೇ ಹಣಿಕಿ, ಕೈ ಯಲ್ಲಿ ಬೆಟ್ಟೆ ತೆಗೆದುಕೊಂಡು ಅಂಗಳಕ್ಕೆ ಹಾರಬೇಕು. ಎರಡನೆಯ ಮನೆಗೆ ಬೆಟ್ಟಿ ಒಗೆದು ೧,೩,೪ ನೆ ಮನೆಗಳಲ್ಲಿ ಕುಂಟುತ್ತ ಹೋಗಿ ೫,೬ನೆಯ ಮನೆಯಲ್ಲಿ ಕಾಲೂರಿ, ತಿರುಗಿನಿಂತು, ಕುಂಟುತ್ತ ಬಂದು ೩ನೆಯ ಮನೆಯಿಂದ ೨ನೆಯ ಮನೆಯ ಬೆಟ್ಟೆಯನ್ನು ಎತ್ತಿಕೊಳ್ಳಬೇಕು. ಒಂದನೆಯ ಮನೆಯಲ್ಲಿ ಕುಂಟಿಕೊಂಡು ಹೊರಗೆ ಬರಬೇಕು. ೩ನೆಯ ಮನೆಯನ್ನು ೨ನೆಯ ಮನೆಯಂತೆ,೪ನೆಯ ಮನೆಯನ್ನು ೧ನೆಯ ಮನೆಯಂತೆ, ೫,೬ ಮನೆಗಳಲ್ಲಿ ೨,೩ನೆಯ ಮನೆಯಂತೆ ಆಡಬೇಕು. ಎಲ್ಲ ಮನೆಯನ್ನು ಆಡಿ ಅಂಗಳದಿಂದ ಹೊರಬೈಲಿಗೆ ಬೆಟ್ಟಿ ಎಸೆದು, ಅಲ್ಲಿಗೆ ಕುಂಟುತ್ತ ಹಾರುತ್ತ ಹೋಗಿ ಬೆಟ್ಟೆ ಮೆಟ್ಟಬೇಕು. ಮನೆಗೆ ಬೆನ್ನು ಮಾಡಿ ನಿಂತು, ಬೆಟ್ಟೆಯನ್ನು ಯಾವುದಾದರೊಂದು ಮನೆಗೆ ಒಗೆಯಬೇಕು. ಬೆಟ್ಟೆ ಬಿದ್ದ ಮನೆಯನ್ನು ಕಟ್ಟಬೇಕು. ಕಟ್ಟಿದ ಮನೆಯ ಬಗೆಗೆ ಗುಯ್ಟಾಟದ ನಿಯಮಗಳನ್ನೇ ಪಾಲಿಸುವರು. ಉಳಿದ ಹೆಚ್ಚಿನ ನಿಯಮಗಳೂ ಸಾಧಾರಣ ಒಂದೇ ಬಗೆಯವು, ಜೋಡುಮನೆಗಳನ್ನು ಒಮ್ಮೆಲೆ ಕಟ್ಟಲು ಆಗದು. ೨ನೆಯ ಮನೆಯಲ್ಲಿ ಬೆಟ್ಟೆ ಬಿದ್ದರೆ ಅದೊಂದೇ ಮನೆಯನ್ನು ಕಟ್ಟಬೇಕು. ಆಗ ೩ನೆಯ ಮನೆಯಲ್ಲಿ ಇನ್ನೊಂದು ಪಕ್ಷದವರು ಕುಂಟುತ್ತ ಆಡುವದು ನಿಯಮ, ಮನೆ ಕಟ್ಟಿದವರು ತಮ್ಮ ಮನೆಯಲ್ಲಿದ್ದಾಗ ಎರಡೂ ಕಾಲೂರಿ ನಡೆದು ಹೋಗಬಹುದು.