ಮೂರು ಜನ ಆಟಗಾರರು ಬೇಕು. ಅವರೆಲ್ಲರು ತಮ್ಮ ತಮ್ಮ ಬಲಗಾಲನ್ನು ಹಿಂದಕ್ಕೆ ಎತ್ತಿ, ಮೂರು ಕಾಲುಗಳನ್ನು ಒಂದರೊಳಗೊಂದು ಜೋಡಿಸಿ. ಒಕ್ಕಾಲಲ್ಲಿ ಕುಣಿಯುತ್ತಾ, ಚಪ್ಪಾಳೆ ತಟ್ಟುತ್ತಾ, “ಹಕ್ಕೀಕಾಲ್ ಪಟಪಟೇ, ಕಕ್ಕಿಕಾಲ್ ಪಟಪಟೇ ಎನ್ನುತ್ತ ಚಪ್ಪಾಳೆ ಹಾಕಿ ಕುಣಿಯುವರು.” ನೋಡಲು ಈ ಆಟ ಮೋಜಿನ ಕೂಟವೇ ಸರಿ.