ವ್ಯೋಮಸಂಭವರಿಲ್ಲಿ ಸಂಚರಿಸುತಿಹರಯ್ಯ:
ರೋಮಾಂಚನವೆ ಅವರ ಸಾನ್ನಿಧ್ಯಸಾಕ್ಷಿ!
ವೇದನಾದದ ಘೋಷದಿಂದವರ ಸತ್ಕರಿಸಯ್;
ಸಾಮಸಂಗೀತವನು ನೈವೇದಿಸೈ.
ಬಣಗು ಸಂಶಯ ಸಾಕು; ಒಣ ತರ್ಕವನು ನೂಕು;
ಹೃದಯ ತಂತ್ರಿಯಿಂದಾನಂದವನು ಮೀಂಟಯ್.
ಪ್ರಾಣವೀಣಾ ಓಂಕೃತಿಗೆ ಲೋಕಲಯವಾಗೆ
ಬ್ರಹ್ಮಮೇವ ಮಧು ರಸೋ ವೈ ಸಹವನೀಂಟಯ್!
೨೧ – ೧ – ೧೯೪೩
Leave A Comment