ನೀ ಒಲಿದರೆ ಸುಮಂಗಲ;

ನೀ ಮುನಿದರೆ ಅಮಂಗಲ!
ಮತ್ತೆಲ್ಲಿಯ ತಾರಾಬಲ,
ಓ ಅಚಂಚಲಾ?

ನಿನ್ನ ಕರೆಯೆ ಸುಮಂಗಲ;
ನಿನ್ನ ಮರೆಯೆ ಅಮಂಗಲ!
ಇನ್ನೆತ್ತಣ ಗ್ರಹಗತಿ ಬಲ,
ಓ ಅಚಂಚಲಾ!

ನೀನಿರುವುದೆ ಸುಮಂಗಲ;
ನೀ ತೊರೆವುದೆ ಅಮಂಗಲ!
ನೀನೆ ಸಕಲ ಬಲಾಬಲ,
ಓ ಅಚಂಚಲಾ!

೧೫ – ೧೨ – ೧೯೬೧