ಕಿವುಡನ ಮಾಡೆನ್ನ, ಕುರುಡನ ಮಾಡೆನ್ನ,

ಮೂಕನ ಮಾಡೆನ್ನ:
ನಿನ್ನನಲ್ಲದೆ ಅನ್ಯವನಾಲಿಸದೋಲನ್ನ
ಕಿವುಡನ ಮಾಡೆನ್ನ.
ನಿನ್ನನಲ್ಲದೆ ಅನ್ಯವ ಕಾಣದವೋಲನ್ನ
ಕುರುಡನ ಮಾಡೆನ್ನ.
ನಿನ್ನನಲ್ಲದೆ ಅನ್ಯವನಾಡದವೋಲನ್ನ
ಮೂಕನ ಮಾಡೆನ್ನ.
ಕಿವುಡನ ಮಾಡೆನ್ನ, ಕುರುಡನ ಮಾಡೆನ್ನ,
ಮೂಕನ ಮಾಡೆನ್ನ!

೨೨ – ೧೦ – ೧೯೪೪