ನಾ ನಿನ್ನ ಶಿಶುವಾಗಿ ನಿನಗೊಂದು ಮುತ್ತಿಡುವೆ
ನೀನೆನ್ನ ಕವನಗಳನುಲಿದು ತಣಿಸೆ:
ದನಿಯ ಅಲೆಅಲೆಯಲ್ಲಿ ಬನ ಬಾನು ಮಲೆಗಳನೆ
ಹೂಹಗುರಗೈದಂತೆ ತೇಲಿ ಕುಣಿಸೆ!
ಚರಣ ಚರಣದ ಛಂದಸಿಗೆ ಚಲಿಸುವಂತಾಯ್ತು
ಚಾರಣರ ಚರಣಚಿಹ್ನೆಯ ಚುಕ್ಕಿಲೀಲೆ:
ಚಂದ್ರತಂತ್ರಿಯ ಮೇಲೆ ಪದಮೃದಂಗವನಿಡುವ
ಬಿಂಬ ಚಂದ್ರಾಧರದ ಸ್ವರರಾಸಲೀಲೆ!
ಹೃದಯ ಮಧುಕುಂಜದಲಿ ಹಕ್ಕಿಯಿಂಚರವಾಯ್ತು,
ರಾಸ ಬೃಂದಾವನದ ಕಿಂಕಿಣಿಯವೋಲೆ:
ಮಂಚನೂಪುರ ಘಂಟಿಕಾ ನಿಕ್ವಣನವಾಯ್ತು
ರಣಿತ ವೀಣಾರೂಪಿ ಭಗವತಿಯ ಲೀಲೆ!
೪ – ೬ – ೧೯೫೦
Leave A Comment