ಸೃಷ್ಟಿಯಲಿ ಸೃಷ್ಟಿಕರ್ತನು; ಕವಿಯು ಕವನದಲಿ:
ಒಂದೊಂದು ಉದಯವೂ ಅವತಾರವೆಂದು ತಿಳಿ!
ಕಣ್ಣು ಕಾಣುವುದೆಲ್ಲ ಸುಂದರೇಶ್ವರನ ಗುಡಿ;
ಕಿವಿಯು ಕೇಳುವುದೆಲ್ಲ ಆ ಕವೀಶ್ವರನ ನುಡಿ!
ಶಶಿ ಸೂರ್ಯರಂತೆಯೇ ಹುಡಿ ಪೂಜ್ಯವೆಂದು ಅರಿ:
ಅರಿತೆನ್ನ ಹಿಂದೆ ಬಾ, ದೊರಕುವುದು ನಿನ್ನ ಗುರಿ!
೬ – ೨ – ೧೯೩೩
ಸೃಷ್ಟಿಯಲಿ ಸೃಷ್ಟಿಕರ್ತನು; ಕವಿಯು ಕವನದಲಿ:
ಒಂದೊಂದು ಉದಯವೂ ಅವತಾರವೆಂದು ತಿಳಿ!
ಕಣ್ಣು ಕಾಣುವುದೆಲ್ಲ ಸುಂದರೇಶ್ವರನ ಗುಡಿ;
ಕಿವಿಯು ಕೇಳುವುದೆಲ್ಲ ಆ ಕವೀಶ್ವರನ ನುಡಿ!
ಶಶಿ ಸೂರ್ಯರಂತೆಯೇ ಹುಡಿ ಪೂಜ್ಯವೆಂದು ಅರಿ:
ಅರಿತೆನ್ನ ಹಿಂದೆ ಬಾ, ದೊರಕುವುದು ನಿನ್ನ ಗುರಿ!
೬ – ೨ – ೧೯೩೩
Leave A Comment