ನೀನೆ ರಕ್ಷಿಸಬೇಕೊ,

ಪುಳು ನಾಂ, ಪರೀಕ್ಷಿಸುವುದೇಕೊ?
ನನ್ನ ಕೆಚ್ಚಿನೊಳೆನಗೆ ನೆಚ್ಚಿನ್ನು ಸಾಕೊ;
ಧೈರ್ಯ ಭಿಕ್ಷೆಯ ಹಾಕೊ!

ಮೇನಕೆಗೆ ಮನಸೋತ ಮುನಿ ಕೌಶಿಕಗೆ ನಮೋ:
ಮುನ್ನೆ ಲಲನೆಯನರಿತ ಬ್ರಹ್ಮಚರ್ಯದ ನೋಂಪಿ
ಸುರ ಸುಂದರಿಗೆ ಸೋತ ಪತನವದು ಸೋಜಿಗವೆ?
ಮೊನ್ನೆ ತುಂಬಿದ ಹೊಟ್ಟೆ ಅನ್ನಮೋಹಕೆ ನಿನ್ನ
ಕನ್ನೆ ನೈವೇದ್ಯವನು ಎಂಜಲಿಸದಂತೆ,
ನನ್ನ ಇಷ್ಟಕೆ ಇದಿರೆ, ಹೊರೆಯದಿದ್ದರೆ ನೀನು
ಗುರುದೇವನೆಂಬ ಒಲಿವಿಗೆ ಅರುಹನೇನು?

೨೬ – ೧೨ – ೧೯೪೧