ನರ್ತಿಸು ಶಂಕರ, ಮತ್ತ ಭಯಂಕರ,

ನೃತ್ಯಲೋಲ ಹೇ ನಟರಾಜ!

ಸೃಷ್ಟಿ ಸ್ಥಿತಿ ಲಯಕರ, ಮೃತ್ಯುಂಜಯ,
ತಾಂಡವಗೈ, ಹೇ ನಟರಾಜ!

ಹೇ ಸಂವರ್ತಕ, ಸೃಷ್ಟಿಪ್ರವರ್ತಕ,
ಮತ್ತೋನ್ಮತ್ತ, ಸನಾತನ ನರ್ತಕ,
ಮಹಾ ವಿರಕ್ತ, ನಿರುಪಮ ಶಕ್ತ,
ಜನನ ಮರಣ ಸಂಬಂಧ ವಿಮುಕ್ತ,
ನರ್ತನಗೈ, ಹೇ ನಟರಾಜ!

೨೯ – ೪ – ೧೯೨೯