ಕಗ್ಗತ್ತಲೆಯ ಕೂಡೆ ಕವಿಯುತಿದೆ ಭೀತಿ:

ಬಾರಯ್ಯ, ಜೀವನ ಪಥದ ಪರಂಜ್ಯೋತಿ!
ಕತ್ತಲೆಯ ಕತ್ತರಿಸಿ ಹಾದಿಯನು ತೋರಯ್ಯ;
ಹೃದಯ ಭೀತಿಯನಳಿಸಿ ಧೈರ್ಯ ನೀಡಯ್ಯ.
ಸಂಶಯವ ಕಿತ್ತು ದೃಢಚಿತ್ತತೆಯ ತಾರಯ್ಯ;
ಜನ್ಮವೆತ್ತುದಕೆ ಸಾರ್ಥಕತೆ ಮಾಡಯ್ಯ!
ಕಗ್ಗತ್ತಲೆಯ ಕೂಡೆ ಕವಿಯುತಿದೆ ಭೀತಿ:
ಬಾರಯ್ಯ, ಜೀವನ ಪಥದ ಪರಂಜ್ಯೋತಿ!

೧೪ – ೧ – ೧೯೩೩