ಚಿಂತೆಯ ರೆಕ್ಕೆಗೆ ದಣಿವೂ ಇಲ್ಲ, ನಿಲೆ ಕಾಲೂ ಇಲ್ಲ:

ಜ್ಞಾನದ ಅಕೂಲ ಪಾರಾವಾರಕೆ ದಡಗಿಡವೊಂದಿಲ್ಲ!
ಎಳೆದೂ ಎಳೆದೂ ನೊಂದಿತು, ಪಾಪ, ಬ್ರಹ್ಮದ ಲಾಂಗೂಲ:
ಆದರೆ ಅದೇನು ವಿದ್ವಜ್ಜನರಿಗೆ ಇದೆ ಕಳೆಯಲು ಕಾಲ!
ಸುಳ್ಳೋ ನಿಜವೋ ಕನಸೋ ನನಸೋ ಎಂಬುವ ವಾದದಲಿ
ಸುಳ್ಳನೆ ತಿಂದು ಡೊಳ್ಳನೆ ಬೆಳಸಿ ನಲಿವರು ಮೋದದಲಿ!
ಚಿಂತೆಯ ರೆಕ್ಕೆಗೆ ದಣಿವೂ ಇಲ್ಲ, ನಿಲೆ ಕಾಲೂ ಇಲ್ಲ:
ಜ್ಞಾನದ ಅಕೂಲ ಪಾರಾವಾರಕೆ ದಡಗಿಡವೊಂದಿಲ್ಲ!

೨೧ – ೯ – ೧೯೩೧