ನೆಚ್ಚಲೊಲ್ಲದು ಎದೆಯು

ಮನ ಮೆಚ್ಚಿದುದನು;
ಮೆಚ್ಚಲೊಲ್ಲದು ಮನವು
ಎದೆ ನೆಚ್ಚಿದುದನು.
ಒಮ್ಮೆ ಮನದೊಲು ಸುಳಿವೆ;
ಒಮ್ಮೆ ಎದೆಯೊಲು ಹೊಳೆವೆ.
ಒಮ್ಮೆ ಎಲ್ಲೆಡೆ ನಲಿವೆ
ಎಲ್ಲ ನೀನಾಗಿ!
ತಿಳಿದು ತಿಳಿಯದೆ ಇಹೆನು
ಅರೆಮೂಕನಾಗಿ!

೧೫ – ೧೨ – ೧೯೨೯