ಹಗಲಿನಲಿ ಬಂದರೈ
ಎನ್ನ ಮನೆಗೆ;
‘ಮೈಲೆಯಲಿ ಜಾಗ ಕೊಡು’
ಎಂದರೆನಗೆ.
ಪೂಜೆಯಲಿ ನೆರವಾಗಿ
ದೇವಕಿಂಕರರಾಗಿ
ಕೊಟ್ಟುದನೆ ಕೊಳ್ಳುವೆವು
ಎಂದರೆನಗೆ.
ನುಡಿದಿಂತು ಬಡತನದ
ವೇಷದಲ್ಲಿ
ಮೆಲ್ಲನೆಯೆ ಮುದುಗಿದರು
ಮೂಲೆಯಲ್ಲಿ.
ನೋಡಿದರೆ ನಡುರಾತ್ರಿ
ದೇಗುಲವ ನೆರೆ ಮುತ್ತಿ
ಮೈಲಿಗೆಯ ಮಾಡಿಹರೊ
ಪೀಠದಲ್ಲಿ!
೮ – ೨ – ೧೯೩೪
Leave A Comment