ತೇಲಿಸೆನ್ನನು, ತೇಲಿಸೆನ್ನನು
ತೇಲಿಸೆನ್ನನು ಅಮೃತಕೆ.
ಬಾಳ ಮುಳ್ಳಿನ ಮೇಲೆ ಹೃದಯವು
ಗೀರಿ ಸೋರಿದೆ ನೆತ್ತರು,
ಸಂಗೀತವೇ ಓ ಸಂಗೀತವೇ!
ದ್ವೈತವಳಿವಂದದಲಿ ಮನವನು
ಅದ್ದು ನಿನ್ನದ್ವೈತಕೆ.
ಭಿನ್ನತೆಯನುಳಿವಂತರಾತ್ಮಕೆ
ಬ್ರಹ್ಮತೆಯ ನೈವೇದಿಸೈ,
ಸಂಗೀತವೇ ಓ ಸಂಗೀತವೇ!
೨೭ – ೧ – ೧೯೪೩
ತೇಲಿಸೆನ್ನನು, ತೇಲಿಸೆನ್ನನು
ತೇಲಿಸೆನ್ನನು ಅಮೃತಕೆ.
ಬಾಳ ಮುಳ್ಳಿನ ಮೇಲೆ ಹೃದಯವು
ಗೀರಿ ಸೋರಿದೆ ನೆತ್ತರು,
ಸಂಗೀತವೇ ಓ ಸಂಗೀತವೇ!
ದ್ವೈತವಳಿವಂದದಲಿ ಮನವನು
ಅದ್ದು ನಿನ್ನದ್ವೈತಕೆ.
ಭಿನ್ನತೆಯನುಳಿವಂತರಾತ್ಮಕೆ
ಬ್ರಹ್ಮತೆಯ ನೈವೇದಿಸೈ,
ಸಂಗೀತವೇ ಓ ಸಂಗೀತವೇ!
೨೭ – ೧ – ೧೯೪೩
Leave A Comment