ಇದು ತುಮಕೂರು ಜಿಲ್ಲೆಯ ದಕ್ಷಿಣ ತುದಿಯಲ್ಲಿದ್ದು ಈ ತಾಲ್ಲೂಕಿನಲ್ಲಿ ದೊಡ್ಡಕೆರೆ, ಕುದುರೆ ಫಾರಂ, ಮಾರ್ಕೋನಹಳ್ಳಿ ಜಲಾಶಯ ಮುಂತಾದ ಪ್ರಮುಖ ಸ್ಥಳಗಳಿವೆ.

ದೊಡ್ಡಕೆರೆ ಬಳಿ ಬೃಹದಾಕಾರದ ಕಲ್ಲುಗಳಿದ್ದು, ಅದರ ಮೇಲೆ ಶಿವಪಾರ್ವತಿಯರು ನರ್ತನ ಮಾಡಿದ್ದರಿಂದ “ಕುಣಿಯುವಕಲ್ಲು” ಎಂದು ಹೆಸರುವಾಸಿಯಾಗಿದ್ದು, ಕ್ರಮೇಣ ಕುಣಿಗಲ್ ಎಂದು ನಾಮಕರಣವಾಗಿದೆ, ಎಂದು ಇತಿಹಾಸ ತಿಳಿಸುತ್ತದೆ.

ಕೈಗಾರಿಕ ಸಂಕೀರ್ಣ:-

ದೂರ ಎಷ್ಟು?
ತಾಲ್ಲೂಕು : ಕುಣಿಗಲ್
ತಾಲ್ಲೂಕು ಕೇಂದ್ರದಿಂದ: ೮ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೪೮ ಕಿ.ಮೀ

’ಇಂಡೋ ಸ್ಪಾನಿಷ್ ಟೇಸ್ಟಿ ಫುಡ್ ಕೈಗಾರಿಕೆಯ ಹೊರನೋಟ’

ತಾಲ್ಲೂಕಿನ ಪೂರ್ವಕ್ಕೆ ಅಂಚೆಪಾಳ್ಯದ ಬಳಿ ’ಜಾನ್ಸನ್ ಟೈಲ್ಸ್’ ವಿಂಡರ್ ಬರ್ಗರ, ರೆಕ್ಸಾಲ್,ಸ್ಯಾಮಿ ಕೆಮಿಕಲ್ಸ್ ’ಇಂಡೋ ಸ್ಪಾನಿಷ್ ನಂತಹ ಬಹುರಾಷ್ಟ್ರೀಯ ಸಹಭಾಗಿತ್ವದ ೧೦ ಕ್ಕೂ ಹೆಚ್ಚು ಕೈಗಾರಿಕೆಗಳಿವೆ. ’ಇಂಡೋ ಸ್ಪಾನಿಷ್ ಟೇಸ್ಟಿ ಫುಡ್ ಸಂಸ್ಥೆಯು ಮೆಡಿಸಿನ್ ಸೌತೆಕಾಯಿಯನ್ನು ರೈತರು ಬೆಳೆಯಲು ಪ್ರೋತ್ಸಾಹಿಸಿ ಅವರಿಂದ ಬೆಂಬಲ ಬೆಲೆಗೆ ಕೊಂಡು ಸಂಸ್ಕರಿಸಿ ಬೇಬಿ ಕಾರ್ನ ಉಪ್ಪಿನ ಕಾಯಿಯಂತಹ ತಿನಿಸುಗಳನ್ನು ತಯಾರಿಸಿ, ಸ್ಪೈನ್ ಮತ್ತು ಯೂರೋಪ್ ದೇಶಗಳಿಗೆ ರಫ್ತು ಮಾಡುತ್ತಾರೆ.

 

ಕುಣಿಗಲ್ ಕೆರೆ

“ಮೂಡಲ್ ಕುಣಿಗಲ್ ಕೆರೆ ನೋಡೋರ್ಗೋಂದೈಭೋಗ” ಎಂಬ ಜನಪದ ಗೀತೆ ಕುಣಿಗಲ್ ದೊಡ್ಡಕೆರೆಗೆ ಸಂಬಂಧಿಸಿದ್ದು. ಸಂಪೂರ್ಣವಾಗಿ ತುಂಬಿದಾಗ೧೪ ಮೈಲಿ ಸುತ್ತಳತೆಯುಳ್ಳದ್ದಾಗಿರುವುದೆಂದು ಹೇಳಲಾಗುವ ಈ ಕೆರೆಯಲ್ಲಿ, ಉತ್ತರ ದೇಶದಿಂದ ಬಂದು ಇಲ್ಲಿ ಸ್ನಾನ ಮಾಡಿ ಕುಷ್ಠರೋಗವನ್ನು ಕಳೆದುಕೊಂಡ ನೃಂಗನೆಂಬ ಚಕ್ರವರ್ತಿ ಕಟ್ಟಿಸಿದನೆಂದು ಸ್ಥಳಪುರಾಣ ಹೇಳುತ್ತದೆ. ಚೋಳರ ಕಾಲದಲ್ಲಿ ನಿರ್ಮಿತವಾದ  ’ಕೊಂಕನೋಮೇಶ್ವರ’ದೇವಾಲಯ, ಅಲ್ಲದೆ ಪಂಚಲಿಂಗಗಳು, ನಾಗಶಿಲೆಗಳು ಪ್ರತಿಷ್ಠಾಪನೆಗೊಂಡಿವೆ. ಈ ಕೆರೆಗೆ ಇತ್ತೀಚೆಗೆ ಹೇಮಾವತಿ ನದಿ ನೀರನ್ನು ಬಿಡಲಾಗುತ್ತಿದೆ.

ಶ್ರೀ ಸೋಮೇಶ್ವರ ದೇವಾಲಯವನ್ನು ಒಳಗೊಂಡಂತೆ ಮೂಡಲ್ ಕುಣಿಗಲ್ ಕೆರೆಯ ಸುಂದರ ನೋಟ ನೋಡಲು ಚೆನ್ನ.

 

ಜಾನ್ಸನ್ ಟೈಲ್ಸ್ ಕಾರ್ಖಾನೆ

ಜಾನ್ಸನ್ ಟೈಲ್ಸ್ ಕಾರ್ಖಾನೆಯು ಬೃಹತ್ ಕೈಗಾರಿಕೆಯಾಗಿದ್ದು, ಇದರ ಉತ್ಪನ್ನವಾದ ಟೈಲ್ಸ್ ಗಳನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಶ್ರೀಲಂಕಾ ಮತ್ತು ನೈಜೀರಿಯಾ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.

ಜಾನ್ಸನ್ ಟೈಲ್ಸ್ ಕಾರ್ಖಾನೆಯ ಹೊರನೋಟ

ರೆಕ್ಸಾಲ್ ಕಾರ್ಖಾನೆಯ ಹೊರನೋಟ


ಕುದುರೆ ಫಾರಂ

ದೂರ ಎಷ್ಟು?
ತಾಲ್ಲೂಕು : ಕುಣಿಗಲ್
ತಾಲ್ಲೂಕು ಕೇಂದ್ರದಿಂದ: ೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೪೦ ಕಿ.ಮೀ

ಭಾರತದ ಮೊದಲ ಅಶ್ವವರ್ಧನ ಶಾಲೆ (ಸ್ಟಡ್ ಫಾರಂ) ಎನಿಸಿರುವ ಕುದುರೆ ಫಾರಂನ್ನು ಟಿಪ್ಪುಸುಲ್ತಾನ್ ಕಾಲದಲ್ಲಿ, ಸೈನ್ಯಕ್ಕೆ ಕುದುರೆಗಳನ್ನು ಸರಬರಾಜು ಮಾಡುವ ಉದ್ದೇಶದಿಂದ ಪ್ರಾರಂಬಿಸಲಾಯಿತು. ೩೧೪ ಎಕರೆ ವಿಸ್ತೀರ್ಣವಿರುವ ಈ ಕುದುರೆ ಫಾರಂನಲ್ಲಿ, ಈಗ ಜೂಜಿನ ಕುದುರೆಗಳ ತಳಿಗಳನ್ನು ಬೆಳೆಸಲಾಗುತ್ತದೆ. ಈಗ ಸ್ಟಡ್ ಫಾರಂ ಮದ್ಯದ ದೊರೆ ಕುದುರೆಗಳಷ್ಟೇ ಉತ್ತಮವೆನಿಸಿ ಹಲವಾರು ರೇಸ್ ಗಳಲ್ಲಿ ಹೊಸ ದಾಖಲೆಗಳನ್ನು ಸ್ಥಾಪಿಸಿವೆ. ಕುಣಿಗಲ್ ಕಿಂಬರ್ಲಿ ಎಂದು ಹೆಸರುಪಡೆದಿದೆ.

 

ಕಗ್ಗೆರೆ

ನಾಗಿನಿ ತೀರದ ಈ ಕ್ಷೇತ್ರವು ಶ್ರೀ ತೋಂಟದ ಸಿದ್ಧಲಿಂಗಸ್ವಾಮಿಗಳ ತಪೋಭೂಮಿಯಾಗಿದ್ದು. ಅವರು ತಪಸ್ಸಿಗೆ ಕುಳಿತಾಗ ಅವರ ಮೈಮೆಲೆ ಹುತ್ತ ಬೆಳೆಯಿತೆಂದೂ, ಅದರ ಮೇಲೆ ಹಸುವೊಂದು ನಿತ್ಯವೂ ಹಾಲು ಕರೆಯುತ್ತಿತ್ತೆಂದು ಪ್ರತೀತಿ ಇದೆ. ಇದರ ಸುತ್ತ ಅಲ್ಲಿ ಉದ್ಯಾನವನವನ್ನು ನಿರ್ಮಿಸಲಾಗಿದೆ.

 

ಎಡೆಯೂರು

ದೂರ ಎಷ್ಟು?
ತಾಲ್ಲೂಕು : ಕುಣಿಗಲ್
ತಾಲ್ಲೂಕು ಕೇಂದ್ರದಿಂದ: ೨೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೬೫ ಕಿ.ಮೀ

ಶ್ರೀಕ್ಷೇತ್ರವು ಉತ್ತಮ ಪ್ರವಾಸಿ ಮತ್ತು ಧಾರ್ಮಿಕ ಕೇಂದ್ರವಾಗಿದ್ದು ಕ್ರಿ.ಶ. ೧೫ನೇ ಶತಮಾನಕ್ಕೆ ಸೇರಿದ ವೀರಶೈವ ಧರ್ಮಗುರುಗಳಾದ ಶ್ರೀ ತೋಂಟದ ಸಿದ್ಧಲಿಂಗೇಶ್ವರಸ್ವಾಮಿಗಳ ಸಮಾಧಿ ಇದೆ. ಇದು ವೀರಶೈವ ಧಾರ್ಮಿಕ ಕೇಂದ್ರವಾಗಿದ್ದರೂ, ಜಾತಿಮತಗಳ ಭೇದ ವಿಲ್ಲದೆ ಎಲ್ಲಾಮತಗಳ ಭಕ್ತರೂ ಶ್ರೀಕ್ಷೇತ್ರಕ್ಕೆ ಬರುತ್ತಾರೆ.

ಶ್ರೀಕ್ಷೇತ್ರದ ದೇವಾಲಯವು ದ್ರಾವಿಡ ವಾಸ್ತು ಶೈಲಿಯಲ್ಲಿದ್ದು, ಮಹಾದ್ವಾರದ ಬಲಬದಿಯ ಪ್ರಾಂಗಣವನ್ನು ಚನ್ನವೀರಪ್ಪ ಒಡೆಯರ್ ನಿರ್ಮಿಸಿದರೆಂದು ತಿಳಿದುಬರುತ್ತದೆ. ಹಜಾರದ ಛಾವಣಿಯ ಮೇಲೆ ಸಿದ್ಧಲಿಂಗೇಶ್ವರಸ್ವಾಮಿಗಳ ಜೀವನದ ಹಲವು ದೃಶ್ಯಗಳನ್ನು ಚಿತ್ರಿಸಲಾಗಿದೆ.

 

ಮಾರ್ಕೋನಹಳ್ಳಿ ಜಲಾಶಯ

ದೂರ ಎಷ್ಟು?
ತಾಲ್ಲೂಕು : ಕುಣಿಗಲ್
ತಾಲ್ಲೂಕು ಕೇಂದ್ರದಿಂದ: ೨೩ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೫೩ ಕಿ.ಮೀ

ಶಿಂಷಾನದಿಗೆ ಅಡ್ಡಲಾಗಿ, ಅಮೃತೂರಿನ ಬಳಿ ಕ್ರಿ.ಶ. ೧೯೩೦ರಲ್ಲಿ ಕಟ್ಟಿರುವ ಅಣೆಕಟ್ಟು ಮಾರ್ಕೋನಹಳ್ಳಿ ಜಲಾಶಯ. ಮೈಸೂರು ಅರಸರಾದ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ರವರಿಂದ ನಿರ್ಮಿಸಲ್ಪಟ್ಟಿದ್ದು, ಇದರ ಯೋಚನೆಯನ್ನು ಭಾರತರತ್ನ ಶ್ರೀ.ಸರ್.ಎಂ. ವಿಶ್ವೇಶ್ವರಯ್ಯನವರು ರೂಪಿಸಿದರು. ಈ ಅಣೆಕಟ್ಟಿನ ಎತ್ತರ ೨೨.೨ ಮೀ, ಉದ್ದ ೧೬೦೯ ಮೀ, ನೀರಿನ ಪ್ರಮಾಣ ೮೮೦ ಯೂನಿಟ್ ಗಳು, ೮ ಅಡಿ ವ್ಯಾಸದ ೨೦೦೦ ಕ್ಯೂಸೆಕ್ಸ್ ನೀರನ್ನು ಹೊರಹಾಕುವ ಸೈಫನ್ ಗಳನ್ನು ಅಳವಡಿಸಿರುವುದು ಇದರ ವಿಶಿಷ್ಠ ತಾಂತ್ರಿಕ ರಚನೆಯಾಗಿದೆ. ಈ ಜಲಾಶಯಕ್ಕೆ ಹೇಮಾವತಿ ನದಿ ನೀರನ್ನು ಹರಿಸುತ್ತಿರುವುದರಿಂದ ಕುಣಿಗಲ್ ತಾಲ್ಲೂಕಿಗೆ ಜೀವನಾಡಿಯಾಗಿದೆ. ಇದು ಜಿಲ್ಲೆಯ ದೊಡ್ಡನೀರಾವರಿ ಯೋಜನೆಯಾಗಿದೆ.