ಶಿವ ಬಂದ ನೋಡಣ್ಣ
ಆದೃಷ ಮಾಯವಾಗಿ
ಚಾಂಪೂರ ಅಗಸ್ಯಾಗ ಶಿವನು ಒಂದೇ ಹುಟ್ಟ್ಯಾನ || ತಂದಾನ ||

ಚಾಂಪುರ ಪಟ್ಣದಾಗ ಆಗಸ್ಯಾಗ ಹುಟ್ಟಿ ಬಿಟ್ಟ
ಅಗಸ್ಯಾಗಲಿದ್ದ ಬಜಾರಕೂಟ
ಊರಿಗೆ ರಾಜತನ ಗೌಡ ಆಳಿದವನು
ರಾಜ ಕಛೇರಿಗೆ ಬಂದ
ಬಂದು ಕೆಳಗ ನಿಂತ್ಕಂಡ
ಕುರ್ಜಿ ಮ್ಯಾಲೆ ರೂಮಿನಾಗ ಕುಂತಾನ
ಶಿವ ಶಿವರಾತ್ರಿ ಜಾಗರಣ
ಇಲ್ಲ ಅನ್ನಬಾರದು
ಶಿವರಾತ್ರಿ ದಿವಸ
ಎಲ್ಲರು ಕೊಂಡ್ಕೋಂಡು ಬಂದು ದಾನ ಮಾಡಬೇಕು
ಇಲ್ಲ ಅಂದ ಮನಿ ಆವೊತ್ತು ಹಾಳಾಗಿ ಹೋತ್ತೈತಿ ಅಂದ
ಕುಂಬಳಕಾಯಿ ಇರೇಕಾಯಿ ಎಳ್ಳು ಹೆಸರು
ಆಗ ಗೋಧಿ ಬೆಲ್ಲ ಅಕ್ಕಿ ಬ್ಯಾಳಿ ಎಲ್ಲ ದಾನ ಕೊಡಬೇಕು
ಅಂತ ಆಗಿನ್ನ ಏನಂದ ಶಿವ

ಗಣಗಣಗಣ ಗಂಟೆ ಬಡಿದಾನ
ಬೊಂ ಬೊಂ ಬೊಂ ಬೊಂ ಶಂಕು ಉದ್ಯಾನ
ಶಿವ ಬಂದಿನೆ ದಾನ ಮಾಡುವಯ್ಯ
ಧರ್ಮ ಗೊಲ್ರದವನೆ
s ದಾನ ಗೊಲ್ರು ದಾನಮಾಡು
ಧರ್ಮದ ಗೊಲ್ರು ಇನ್ನ ವೈದಿಯೋ
ಧರ್ಮ ಕೊಡಪ್ಪ ಧರ್ಮ ಬೇಡವನು
ನಿನ ಮನೀಗೆ ಬಂದೀನಿ || ತಂದಾನ ||

ಅಂದ್ರೆ
ಇದ್ದೋರು ರೊಕ್ಕ ಹಾಳಾಗೋದು ಹ್ಯಾಂಗಂದ್ರೆ
ಹುಣ್ಣನ್ನ ಹುಟ್ಟುಬೇಕು
ಇಲ್ಲಿದ್ರೆ ಅವರಿಗೆ ಏನ್ನನ್ನ ಬ್ಯಾನಿನ ಬರಬೇಕು
ಇಲ್ಲಿದ್ರೆ ಇಸ್ಪೇಟು ಆಡೋ ಹುಚ್ಚಿರಬೇಕು
ಇಲ್ಲಿದ್ರೆ ಯಾರನ್ನ ಹೆಣುಮಗಳನ ಕಲೆ ಬೀಳಬೇಕು
ಅಷ್ಟೋತ್ತನಕ ದಾನ ಮಾಡಾದಿಲ್ಲ ಹೊಟ್ಟಿಗೆ ಉಂಬಾದಿಲ್ಲ
ಆಗ ಏನಂದು ಬಿಟ್ಟ
ಗೊಲ್ರವನು ಕಾಂಭೋಜರಾಜ
ಇಲ್ರಿ ನಾವು ಗೊಲ್ರು ಹಾಲು ಗೊಲ್ರು
ಕೃಷ್ಣ ಗೊಲ್ರು ನಾವು
ನಾವು ನಾಮ ಉದ್ದಕ್ಕ ಹಚ್ಚಿಕ್ಯಂಡೋರಿಗೆ ದಾನ ಮಾಡೋದು

ಅಡ್ಡ ಹಚ್ಚಿದವರಿಗೆ ದಾನ ಮಾಡೋದಿಲ್ಲ
ಶಿವ ರಾತ್ರಿ ಶಿವ ಬಂದೀಯಪ್ಪ
ಶಿವಗಾಗಿ ನಾವು ದಾನ ಮಾಡೋದಿಲ್ಲ ನಾವು ಗೊಲ್ರು || ತಂದಾನ ||

ಆಗ ಶಿವ ನಾವು ದಾನ ಮಾಡೋದಿಲ್ಲ
ಅಡ್ಡ ಹಚ್ಚಿದವರಿಗೆ ಕೊಡೋದಿಲ್ಲ
ಉದ್ದ ಹಚ್ಚಿದವರಿಗೆ ದಾನ ಮಾಡೋದು
ಗೋವಿಂದ ಅಂದೋರಿಗೆ ನಾವು ದಾನ ಕೊಡೋದು ಗೊಲ್ರು
ಈಗ ಶಿವಶಿವ ಅಂದೋರಿಗೆ ದಾನ ಮಾಡೋದಿಲ್ಲ
ಊರಿಗೆ ಶಿವ ಬಂದಿಯಲ್ಲ
ಊರೆಲ್ಲ ಐತಿ ಅತ್ಗೆ ಹೋಗಾಂದ
ಇಲ್ಲಪ್ಪ ಊರಿಗ ನೀನು ರಾಜ್ಯವಾಳೋನು
ಊರಿಗೆ ನಾನು ಶಿವ ಬಂದೀನಿ

ನೀನು ದಾನಮಾಡಬೇಕಲೆ ನೀನ್ನ ಬಿಟ್ಟು ನಾನು ಹೋಗ್ಬೇಕು || ತಂದಾನ ||

ನೋಡಪ್ಪ ನನಗೇನು ಕೊಡಬ್ಯಾಡ
ಒಂದು ರಾಗಿ ಪೈಸ ಕೊಡು
ಒಂದೇ ರಾಗಿ ದುಡ್ಡು
ಈಗ ಒಂದು ಪಾವು ಅಕ್ಕಿ ಕೊಡು
ಆಗ ಅರಪಾವು ಬ್ಯಾಳಿ ಕೊಡು
ಎಲ್ಲೇನ ಇನ್ನ ಬಾಯಿ ಯಿದ್ದತಲ್ಲಿ ಅಡ್ಗಿ ಮಾಡಿಕ್ಯಂಡು
ಸ್ನಾನ ಮಾಡಿಕ್ಯಂಡು ಊಟ ಮಾಡಿ ಹೋತಿನಿ
ಅಂದ್ರೆ ದಾನ ಮಾಡಿದ್ರೆ ಬೇಸಿತ್ತು
ಏ ನಾವು ಸ್ವಾಮಿಯವರಿಗೆ ದಾನ ಮಾಡದಿಲ್ಲ ಅಂಬೋದಿಲ್ಲ
ನಾಳೆ ಇಷ್ಟೋತ್ತನಕ ನಿಂತ್ಕೋ
ನನ್ನ ಮನಿ ಮುಂದೆ
ಈಗ ಪಾವು ಅಕ್ಕಿ ಅಲ್ಲ
ಅಕ್ಕಿ ಕೇರಿದ್ದ ಹೊಟ್ಟು ಕೊಡಂಗಿಲ್ಲ
ಒಂದು ತೌಡು ಕೊಡಂಗಿಲ್ಲ
ರಾಗಿ ದುಡ್ಡು ಅಲ್ಲ
ಬೋಕ್ಯಾಗಿಟ್ಟ ದುಡ್ಡು ಕೊಡಂದ್ರೆ ಕೊಡದಿಲ್ಲ
ಅರ್ಪಾವು ಬ್ಯಾಳಿ ಅಲ್ಲ
ಆಗ ಜೀವ ಕಿತ್ತಿಕ್ಯಂಡ್ರು ಒಂದು ಹಿಡಿಕಿ ಕೊಡಂಗಿಲ್ಲ
ಅಬ್ಬೋ ಅಂಗಾದ್ರೆ ದಾನ ಮಾಡಂಗಿಲ್ಲ ಶಿವ
ಇಲ್ಲ ಮಾಡಂಗಿಲ್ಲಪ ಅಂಬೊತ್ತಿಗೆ
ಏ ಊರಿಗೆ ನೀನು ಗೌಡ
ಊರಿಗೆ ನಾನು ಶಿವ
ಇಗೋ ನಿನ್ನ ಬಿಟ್ಟೋದ್ರೆ ನಾನು ನಿನಗ ಹುಟ್ಟಿದಂಗ
ಏ ಶಿವ ನಾನು ನಿನ್ಗ ನೀಡಿದ್ರೆ ನಾನು ನಿನ್ಗ ಹುಟ್ಟಿದಂಗ
ಇಗೋ ನೋಡಾನ ನಿಂದು ಗೆಲಿತೈತೋ ನಂದು ಗೆಲಿತೈತೋ
ಸ್ವಾಮಿ ಈ ದೇಶ ಎಲ್ಲಾ ತಿರುಗಿ ಬಂದೋನು
ಮ್ಯಾಲೆ ಬಿಸಿಲು ಬಡೀತದ
ಕೆಬ್ಬಣ ಮಾಳಮ್ಯಾಲೆ ನಿಂತ್ಕೋ
ನಾನು ದಾನ ಮಾಡೋನಲ್ಲ
ಅಷ್ಟೆ ಆಗಲಿ ನೋಡೋನಂತ

ಕೆಬ್ಬಿಣ ಮಳಿ ಮ್ಯಾಲೆ ನಿಂತಾನ ಶಿವ
ಉಕ್ಕಿನೆ ಮಳಿ ಮ್ಯಾಲೆ ನಿಂತಾನ ಶಿವ
ಶಿವ ಒಂದು ತಪ್ಪಸ್ಸು ನಿಂತಾನಮ್ಮ || ತಂದಾನ ||

ಗೇಣುಗೇಣು ಉಕ್ಕಿನ ಮಳಿ
ಪಾದ ಮ್ಯಾಲೆ ಪಾದವಿಟ್ಟು ನಿತ್ಕಂಡ
ಎರಡು ಕೈ ಜೋಡ್ಸಿಕ್ಯಂಡ

09_80_KMKM-KUH

ಆಗ ಕುರ್ಚಿ ಮ್ಯಾಲೆ ಕುಂತ ಕಾಂಭೋಜರಾಜ ನೋಡಿದ
ಏ ನನ್ನ ಕೈಯಾಗಿದ್ದವ್ರೇ
ಐದು ಮಂದಿ
ಆಗಿನ್ನು ಹೋಗ್ಯಾನ ಶಿವ
ನಿಂತ್ಕಂಡಾನ
ಅಯ್ಯೋ ನೀಲುವು ಕೋಲ್ಲು ನಿತಂಗ ನಿಂತು ಬಿಟ್ಟಾನ್ರಿ ನೆಟ್ಟಗ
ಗೇಣಷ್ಟು ಉಕ್ಕಿನ ಕಬ್ಬಿಣ ಮಳೆ ಮ್ಯಾಲೆ ನಿಂತು ಬಿಟ್ಟಾನ್ರಿ
ಲೇ ಬ್ಯಾಕಾಳ ಕಟ್ಟಿಗಿ ತಗಂಡು ಹೋಗಿ
ಕುತ್ತಿಗಿ ಮ್ಯಾಲೆ ಎದಿಮ್ಯಾಲಿಟ್ಟು
ಅಗಸಿ ಹೊರಾಗ ದಬ್ಬಿಕ್ಯಂಡು ಹೋಗಿ
ಬಿಟ್ಟು ಬರ್ರಿ ಸುಡುಗಾಡಿಗಿ
ಅಂದ್ರೆ ನಾಲಾರು ಗುಡಿಮೆಕಾಯಿ ಇದ್ದಂಗ ಇದಾರಪ್ಪ
ಬ್ಯಾಕಾಳು ಕಟ್ಟಿಗೆ ತಗಂಡು ಬಂದ್ರು
ಏ ಶಿವ ಹೋದ್ರೆ ಹೋದಂಗಂತೆ
ಇಲ್ಲಿದ್ರೆ ನಮ್ಮ ಗೌಡ ಹೇಳಿ ಬಿಟ್ಟಾನ
ಎದಿ ಮ್ಯಾಲೆ ಕುತ್ತಿಗೆ ಮ್ಯಾಲಿಟ್ಟು ಊರು ಹೊರಾಗ ಅಗಸಿ ಹೊರಾಗ
ದಬ್ಬಿಕ್ಯಂಡು ದಬ್ಬಿಕ್ಯಂಡು ಹೋಗಿ ನಿನ್ನ ಸುಡುಗಾಡ್ಯಾಗ ಇಟ್ಟು ಬಿಡ್ತೀವಿ
ಏ ಹೆಂಡ್ರು ಮಕ್ಕಳು ಮ್ಯಾಲೆ ಜೀವದ ಮ್ಯಾಲೆ ಆಸೆ ಇದ್ರೆ
ನನ್ನ ಮ್ಯಾಕ ಬರುಬ್ಯಾಡ್ರಿ
ರಕ್ತ ಕೂಳಿಗೆ ಆಸೆ ಇದ್ರೆ ಬರ್ರಿ ಎಡಗೈ ನೋಡಾನ ಅಂದ
ನೀವು ನಾಲರು ಅದೀರಿ
ನಾನು ಒಬ್ಬನೇ ಐದೀನಿ
ಕೈಯಾಗ ಬಲಗೈಯಾಗ ನೋಡ್ರಿ ಗಂಟಿ
ಇಲ್ಲಿ ಕೈಯಾಗ ಗಣ ಅಂಬೋತ್ತಿಗಿ
ನಿಮ್ಮ ತಲೆ ಲೋಳ ಅನ್ನಬೇಕು ನೋಡ್ರಿ
ಮೊಸರು ಗಡಿಗೆ ಒಡೆದಂಗ
ನೋಡಿದ್ರಪ್ಪ ನಾಲರು
ಏ ಅವನಾನ ಸತ್ತೋಗ್ಲಿ
ಇವನಾನ ಸತ್ತೋಗ್ಲಿ
ನಮಿಗೆ ಬಂದಿದ್ದೆನು ನಟ್ಟನಡುವಿಲಿ ಒದ್ದಾಡಕ
ನೀಡೋನನ ಹೋಗ್ಲಿ
ನೀಡಿಸಿಕ್ಯಂಬೋನನ ಹೋಗ್ಲಿ
ಏ ಆತನ ತಂಟೆ ಬ್ಯಾಡಪ್ಪೋ
ಗಂಟೆ ನೋಡಲೇ
ಆಗ ಎರಡು ದಡೇವೈತೊ ಮೂರು ದಡೇವೈತೋ
ಗಳಾ ಗಳಾ ಅಂತೈತಿ
ಅಂತಾ ಬಂದು ಬಿಟ್ಟು
ಏನಪ್ಪಾ ಕಾಂಭೋಜರಾಜ
ಏನಿಲ್ರಿ
ಆಗ ಎಲ್ಲಾರು ದಬ್ಬಿಟ್ಟ್ರೆ ಮಿಸುಕಾಡವಲ್ರಿ
ನಾಟಾಕಿದ ಕೋಲ್ಲು ನಿಂತಂಗ ನಿಂತಾನ
ಶಿವ ಇವೊತ್ತು ನಾನು ಮಾತು ಅಂದು ಬಿಟ್ಟೀನಿ
ನಿನಗೆ ನೀಡಿದ್ರೆ ನಾನು ಹುಟ್ಟಿದಂಗ
ಅಗ ನೀಡದಿಲ್ರಿ
ಸರೀ ಅಂಗಾರೆ ನೀಡದಲ್ರಿ
ನೀಡದಿಲ್ಲ
ಏನಪ್ಪಾ ನಿನ್ನ ಧರ್ಮ ನನಗೆ ಬ್ಯಾಡ
ನಂದಾನ ನಿನ್ನ ಮ್ಯಾರಲಿ
ನಾನ್ನ ವಿಭೂತಿ ಹಚ್ಚಿ ಹೋತಿನಿ
ನಿನ್ನ ಹಣಿಗೆ ಅಂದ
ಏ ನಾವು ಗೋಲ್ರು ಹಚ್ಚಿಕ್ಯಂಬೋದಿಲ್ಲ
ಶಿವನ ವಿಭೂತಿ ಅಡ್ಡ ಹಚ್ಚಿಕ್ಯಂಬೋದಿಲ್ಲ ನಾವು
ನಾವು ಉದ್ದ ನಾಮ ಇಟ್ಕಂಬೋರು ಅಂದ
ಸರಿ ಅವ್ವಾದ್ರೆ ಮೂರು ಬೊಳ್ಳಲ್ಲ ಉದ್ದಗ
ಇವು ಆದ್ರೆ ಅಡ್ಡ ಮೂರು ಬೊಳ್ಳಲ್ಲ
ಅವು ಮೂರೇ ಇವು ಮೂರೇ
ಸರಿಪ್ಪಾ ಸ್ವಾಮಿ ಮತ್ತೆ ಹ್ಯಾಂಗಪ್ಪ
ಗೋವಿಂದ ಅಂದ್ರೆ ನೀಡೋದಿಲ್ಲ
ಗ್ವಾಡಿ ಕೆಳಗೆ ನಾಳೆ ಇಷ್ಟೊತ್ತು ನಿಂತಕಂಡ್ರೂ ನೀಡೋದಿಲ್ಲ
ಸರಿ ಗೋವಿಂದ ಅಂದೋರಿಗೆ ನೀಡ್ತೀಯಲ್ಲಪ್ಪ
ಗೋವಿಂದ ಅಂದೋರಿಗೆ ನಾನು ನೀಡ್ತಿನಿ
ಸರಿ ಹಾಂಗೆ ಆಗಲ್ಯಪ್ಪ ಅಂತ

ಗೋವಿಂದ ಗೋವಿಂದ ಕೋಟಿ ಗೋವಿಂದ || ತಂದಾನ ||

ಈಗನ್ನ ದಾನ ಮಾಡು

s ಗೋವಿಂದ ಅಂದ್ರೆ ನೀಡಾದಿಲ್ಲ
ಗ್ವಾಡಿ ಕೆಳಗೆ ನಿಂತ್ರೆ ನೀಡದಾಲ್ಲ || ತಂದಾನ ||

ಏ ಗೋವಿಂದ ಅಂದೋರಿಗೆ ನೀಡ್ತೀನಂದೆ
ನಾನು ಗೋವಿಂದ ಅಂದೆ
ಆಗ ನೀಡದಿಲ್ಲಾಂದೆ
ನನ್ನ ವಿಭೂತಿ ಕೈಯಾಗಿಡಕಂಡಿದ್ದು ಏನ್ಮಾಡ್ಬೇಕಪ್ಪ
ಎಲ್ಲಿ ಹಾಕ್ಬೇಕು ಇದು
ಏ ಶಿವ ನಾನು ಹಣಿಗೆ ಹಚ್ಚಿಕ್ಯಂಬೋದಿಲ್ಲ
ಕೈಯಾಗ್ಹಿಡಕಂಡಿದ್ದು ಎಲ್ಲಿ ಹಾಕಬೇಕಂತಿ
ನನ್ನ ಬೆನ್ನಿಗೆ ಹಾಕಿ ಹೋಗಂದ ಕಾಂಭೋಜರಾಜ