ಒಂಬತ್ತು ತಿಂಗಳ ಒಂಬತ್ತ ತಾಸಿಗೆ
ಇನ್ನವರು ತಾವಾಗಿ ಕುಲದಲ್ಲಾಗಿ
ಸ್ವಾಮಾರ ಹನ್ನೆರ್ಡ ಗಂಟ್ಯಾಗ

ಆಹಾ ನೋಡಮ್ಮಾ
ಹೆದರು ಬ್ಯಾಡ ನನ್ನ ತಾಯೇs
ಬೆದರು ಬ್ಯಾಡ ನನ್ನ ತಾಯಿ
ಲೋಕ ದೊಡ್ಡ ನಮ್ಮಮ್ಮ
ಎಡಕಲಿಂದ ಬಲಕ್ಕಾಗಿs
ಕುಪ್ಪಳ್ಸಿವಾರ್ಯಾನ ಮಗ ನಂದು ನೋಡಣ್ಣಾ ||ತಂದಾನ||

ಹರಿಯಾಳದೇವಿ ಹಡ್ಡುಬಿಟ್ಳು
ಒಟ್ಟ ಹುಟ್ಟಬೇಕಲ್ಲ ಇನ್ನವರತ್ತಾ ಓಲಿಕೆ ರಾಮ

ಆಹಾ ನೋಡಮ್ಮ
ಇನ್ನ ಗಂಡ ಇಲ್ದಂಗ
ಲೋಕ ನಾನು ಉಡ್ತೀನಿs
ಎಡಕ್ಕಾಗಿ ಹೊಳ್ಯಾನ
ಬಲಕ್ಕಾಗಿ ಹೊಳ್ಯಾನ
ಕುಪ್ಪಳ್ಸಿ ವಾರ್ಯಾನ ಭೂಮಿ ಮ್ಯಾಲೆ ಮಗನಮ್ಮ ||ತಂದಾನ||

ಮನಿದಾಸಿ ಹಡ್ದು ಬಿಟ್ಳು
ಒಂದೇ ಬಾಳೆಹಣ್ಣಾಗ ಇಬ್ರು ಹಡ್ದು ಬಿಟ್ರು
ಆ ಮಕ್ಕಳಿಗಿನ್ನ ನೀರ್ಹಾಕಿ
ಗಂಧದ ತೊಟ್ಲ ತಂದು
ಬೆಳ್ಳಿ ಉಡ್ದಾರ
ಕಿರಬೆರಳಿಗೆ ಬಂಗಾರದ ಉಂಗ್ರ ತಂದು
ಆಗ ಏನಂತ ಹೆಸರಿಡಬೇಕು ಇವ್ರು
ಆನೆಗೊಂದಿ ಕಂಪ್ಲಿದಾಗ ಹುಟ್ಟಿದವರು ಅಂತಾ

ಹೊಳೆ ದಂಡಿ ಬಲದಾಗ ಆನೆಗೊಂದಿ ಪಟ್ಣಾಗ
ಹುಣ್ಣಿಗ್ಹುಟ್ಟಿದ ಕುಮಾರರಾಮಯ್ಯ ಒಟ್ಟಿಗ್ಹುಟ್ಟಿದ ಓಲಿಕ
s ಹಿರಿಕಂಪ್ಲಿ ಪಟ್ಣಾಗ ಈಶ್ವರ ವರದಲ್ಹುಟ್ಟೀರಿ
ಯಪ್ಪಾ ದುಷ್ಟಲೋಕದಲ್ಲಿ ಹುಟ್ಟೀರ್ಯಾ ದುಷ್ಟಲೋಕ ನೋಡ್ತಿರ್ಯಾ ||ತಂದಾನ||

ಅಂತ ಮಕ್ಕಳಿಗೆ ಹೆಸ್ರಿಟ್ಟುಬುಟ್ರು
ಹಣ್ಣಿಗ್ಹಿಟ್ಟಿದ ರಾಮಯ್ಯ
ಒಟ್ಟಿಗ್ಹುಟ್ಟಿದ ಓಲಿಕಾ ಅಂತ ಹೆಸರಿಟ್ಟೆ
ಆ ಮಕ್ಳಿಗ ಯಾ ರೀತಿ ಇನ್ನ ಕಂಪ್ಲಿ ಪಟ್ಣದಾಗ
ಎಷ್ಟು ಛೋಲ್ವಿ ಜೋಪಾನ ಮಾಡ್ತಾರ

ಕೆಳಗ ಇಟ್ರೆ ಮಗನಮ್ಮ ಮಣ್ಣಾಗಿ ಹೋತಾನೆ
s ತೊಟ್ಲದಾಗ ಸಲವೋದು ಕೈಯಾಗ ಬೆಳೆಸೋದು
s ಒಂದು ವರ್ಷವಾಗಿತ ಎರಡು ವರ್ಷವಾಗಿತ ಮಕ್ಳ ||ತಂದಾನ||

ಒಂದು ದಿನಗ ಮೂರುಸಾರ್ತಿ ಮೈ ತೋಳಿತಾರ
ಮಕ್ಕಳಿಗೆ ಮುಂಜಾಲಿ
ಆಗ ಹನ್ನೆರ್ಡು ಗಂಟೆಗೆ
ಆಗ ನೋಡು ಮಧ್ಯಾಹ್ನ ಟೈಮು
ಮತ್ತೆ ಮೂರು ಗಂಟೆಯೊಳಗೆ ಸ್ನಾನ
ಆಗ ಮೂರು ಸರ್ತಿನು ಅವ್ರು
ಹಾಲಿ ಸಕ್ರಿ ಕುಡಿಸೋದು ಮಕ್ಕಳಿಗೆ
ಹಾಂಗಿನ್ನವ್ರ ತಾವು ಆನೆಗೊಂದ್ಯಾಗ ಬೆಳೆಸಾಕ ನಿಂತಬಿಟ್ರು