ಆಹಾಹಾ
ತಮ್ಮನೋಡ
ಆಗ ಇನ್ನ ಕೈಜೋಡಿಸಿ ಮುಗಿತಾನಪ್ಪ
ಮುಗಿತ್ತಿದ್ರೆ ಏನಂತಾರ
ಹೇ ತಮ್ಮ
ನೀನೆಷ್ಟು ಬೇಡಿಕ್ಯಂಡ್ರೂ ನಾವು ಬಿಡೋದಿಲ್ಲಪ್ಪ
ಆರು ಮಂದಿ ಹೆಂಡ್ರೂನು ಖಳಿಸ್ತಿ
ಮೇಟೌಷಧ ನಮ್ಗ ತಂದುಕೊಡ್ತಿ
ಎಲ್ಲರೂ ಹೋಗ್ತಿವಿ
ತಂದಿ ಹುಣ್ಣು ಬೇಸು ಮಾಡ್ತಿವಿ
ತಂದೆ ಏನಂತಾನ ಸೈಯಪ್ಪಾ ಅಂತಾನ
ಆಗ ಸೈ ಅಂಬ್ವಾಗ
ನೀನೇನಂತಿ ತಮ್ಮ
ಏನಪ್ಪ ಅವುರ್ನು ಮುಂಜೂರು ಮಾಡ್ತಿ
ನಾನ್ಹೋಗಿ ಮೇಟೌಷಧ ತಕ್ಕಂಡು
ಆರುಮಂದಿ ಗೆದ್ದಕೊಂಡು ಬಂದಿನಿ
ನನ್ನೆಂಡ್ರು ಇವ್ರು
ಆಗ ಕಡಿತಿದ್ರೆ
ಆಗ ನನ್ನೆಂಡ್ರು ಖಳಿಸಿ
ಮದ್ದು ಕೊಟ್ಟು ಕರ್ಕಂಡು ಬಂದಿನಿ
ಅವುರ್ನು ಸೈ ಅಂತಿ
ಅಂದ್ರೆ ನೇ ವಾಲಿಸುಗ್ರೀವರ ಕುಲ ಆಯ್ತು
ಲಂಬಡಿಕೇರು ಜಾತಿ ಇದ್ದಾಂಗೆ
ಆಗ ತಮ್ಮನ ಹೆಂಡ್ರು
ಅಣ್ಣೋರ ಮಾಡಿಕ್ಯಂತಿರಾ ಅಂತಾರ
ಆಗ ಹೆಂಡ್ರು ಏನಂತಾರ
ಏನ್ರೀ ಆತೆ ನಮ್ಮ ಜೀವಗೆದ್ದುದು
ಕಿಲು ನೋಡಿ ಕೀಲು ತಪ್ಪಿಸಿದ
ನಮ್ಮನ್ನು ಗೆದ್ದುಕಂಡು ಬಂದ
ಒಳ್ಳೆ ಒಳ್ಳೆ ಗಂಡು ಮಗಗಳಿಗೂ ಬಗ್ಗಿದವರಲ್ಲ
ಈಗ ಆತನೆ ಗಂಡ
ಇವರಲ್ಲ
ಜೀವ ಹೋತಿದ್ರೆ ಇವರ್ಹಿಂದೆ ಬಂದ್ವಿ
ಅಂದ್ರೆ ನಾವು ಹುಟ್ಟಿದ್ದೇನು ಫಲ
ಹಾಲಂತ ಅವರಿನ್ನು ಗೊಲ್ಲರೆನಿಸ್ಕಂಡು
ಕೃಷ್ಣ ಗೋಲ್ಲರೆನಿಸ್ಕಂಡು
ನಾವು ವಾಲಿ ಸುಗ್ರೀವ ಕುಲ ಆಗಾನ
ಲಂಬಡಕೇರ ಜಾತಿ ಆಗಾನ
ಇಲ್ಲ ನಿನ್ನ ಆರು ತುಂಡು ಕಡಿತಿವಿ ತಲೆ ಬಗ್ಗಿಸು
ಜೀವ ಹೋಗೋಕಾಲಕ್ಕೆ ಯಾವ ದೇವ್ರು
ನೆನಿಸಿದ್ರೂ ಅಡ್ಡ ಬರಂಗಿಲ್ಲ
ಆ ಗುಡಿಯಾಗಿದ್ದ ತಾಯಿಗೂಡ ಬರಂಗಿಲ್ಲ
ಆಗ ಬೊಗೆಸೊಡ್ಡಿ ಬೇಡಿಕೊಂಡ್ರೆನಾ
ನಿನ್ನ ಕಡಿತಿವಪ್ಪಾ ಬಿಡಾದಿಲ್ಲ ಅಂದ್ರು

ಆಗಾ ಶಿವಾ ಶಿವಾ ಅಂದಾನೋ
ಮಗ ತಲೆಯೊಂದು ಬಗ್ಗಿಸ್ಯಾನು
ಅಣ್ಣ ಕಡಿರಣ್ಣ ನನ್ನ ಜಲ್ಮ
ನಿಮ್ಮಗೆಲ್ಲರಿಗೂ ಶರಣಣ್ಣ
s ಆರು ಮಂದಿ ನೋಡಣ್ಣ ಗರಗ್ ನಂಗೆ ಕಡದಾರ      || ತಂದಾನ ||

ಆರು ತುಂಡು ಬಿದ್ದುಬುಟ್ಟುವು
ಆಗ ಶಿವಾ ಅಂತ ಜೀವಬುಟ್ಟು ಬುಟ್ಟಾ ಅವ್ನು
ಆರು ಮಂಡ ಬೀಸ್ಹಾಕಿ

ಕ್ಯವ್ನುಂಗೆ ಕೇಕೆ ಹೊಡೆದರಣ್ಣ
ಆಗ ಬುರುಡೆ ಹಿಂದೆ ಕಡದರಮ್ಮಾ    || ತಂದಾನ ||

ದೇವಿ ಗುಡಿ ಹಿಂದಕ್ಕೆ ಕಡುದು
ಗುಡಿಮುಂದಕ್ಕೆ ಬಂದ್ರು
ಗುಡಿಯಾಗಿದ ಎಲ್ಲಮ್ಮ ದೇವಿ
ಇದನ್ನ ನೋಡಿ ಬುಟ್ಳು
ಇಲಾಮಂತ್ರ ಪಟ್ಣದ ಎಲ್ಲಮ್ಮ
ಬರ್ರ್ಯೋ ದುಷ್ಠರ ಅಂದ್ಳು
ಆಗ ನಿನ್ನ ಪಾದಾಜ್ಞೆ ತಾಯಿ
ನಿನ್ನ ಶಿಶುವನ್ನ ಕಡಿಯೋದಿಲ್ಲ ಅಂದ್ರಿ
ಆಗ ಪಾದಾಜ್ಞೆ ಅಂದೋರು
ನನ್ನ ಬೆನ್ನು ಹಿಂದುಗೇ ಕಡುದು ಬಂದ್ರಿ ಅಂತ

ಆರು ಮಂದಿ ಕಣ್ಣು ಕಳೆದಳಮ್ಮಾ
ಒಬ್ರಿಗೆನ್ನ ಕಣ್ಣು ಇಲ್ಲ ಶಿವನೇ
ಗೋಡಿಗೋಗ್ತಾರೆ ಡೆಮ್ಮ ತಟ್ಟತ್ತಾರಂತ
ಗ್ವಾಡಿಗೋಗ್ತಾರ ಡೆಮಂತ ತಟ್ತಾರ
ಆಗ ಇವುರಿಗೆ ಕಣ್ಣು ಹೋದವಮ್ಮಾ   || ತಂದಾನ ||

ದೇವಿ ನೋಡೊ ಹೊತ್ತಿಗೆ ಕಣ್ಣು ಹೋಗಿಬಿಟ್ಟು
ಆರುಮಂದಿ ಕಣ್ಣು ಕಳೆದು ಬಿಟ್ಳು
ಅಂದ್ರೆ ಕುರ್ಡಿರಿಗೆ ಇದ್ದೋಟು ಯುಕ್ತಿ ಯಾವೋನಿಗಿಲ್ಲ
ಆಗ ಕುಂಟ್ರುಗಿದ್ದ ಶಕ್ತಿ ಯಾರಿಗಿಲ್ಲ
ಆಗ ಅಂದಾಜು ಮ್ಯಾಲೆ ಹ್ಯಾಂಗ ಬರ್ತಾರಪ್ಪ ಇನ್ನ
ಎಲ್ಲಮ್ಮನ ಗುಡಿ ಬಿಟ್ಟು
ಅವ್ರು ತಾಯೋರ ಮನೆಗೊಗಲು
ಆರು ಮಂದಿ ಕೈಕೈ ಹಿಡಕಂಡ್ರು

ಆಗ ಆರು ಮಂದಿ ಹುಡಿಕ್ಯಾಡಿಕ್ಯಾಂತ ಯಮ್ಮಾ
ಎಡಕೆ ಗ್ವಾಡಿ ಧಮ ತಟತಾದಮ್ಮಾ
ಗ್ವಾಡಿ ಹಿಡಕಂಡು ಬಾಕ್ಲಿಗೆ ಬಂದಾರ  || ತಂದಾನ ||

ಹೊಸ್ತಾಲಂದು ಬಾಕಲು ತಟಾದು ಹೊರಗೆ ಬಂದ್ರು
ಆಗ ದಾರಿ ಹಿಡಕಂಡು

ಆಗ ಮುಳ್ಳು ಕಲ್ಲು
ತುಳುಕಾಂತಾ ರೀ
ಗಿಡ ಒಂದು ತಟ್ಟಗ್ಯಾಂತ ಯಾಮ್ಮಾ || ತಂದಾನ ||

ಚಾಂಪುರ ಪಟ್ಣಕ ಬಂದ್ರು
ತಾಯೋರು ನೋಡಿ

ಯಾಪ್ಪಾ ಕಣ್ಣು ಕಳದು ನೀವೆಲ್ಲಾ ಬಂದೀರಲೋ
ಔಷಧ ಮೇಟೌಷದ ಹೋಗಿರ್ಯಲ್ಲೋ           || ತಂದಾನ ||

ಯಪ್ಪಾ ಮೇಟೌಷಧ ಅಂತ ಹೋಗಿಬಿಟ್ರಿ
ಕಣ್ಣು ಕಳಕಂಡು ಬಂದ್ರೀ
ಯಪ್ಪಾ ಹರೇದವ್ರು
ಈಗ ನಿಮ್ಗ ಕಣ್ಣಹೋದವರಿಗೆ
ಹೆಣ್ಣು ಯಾರು ಕೊಡುತಾರ

ಇನ್ನ ಎಲ್ಲಿ ನಿಮ್ಗೆ ಮದ್ವಿ ಇಲ್ಲ ಮಕ್ಕಳಾ
ಕುರ್ಡಿರಿಗೆ ಯಾರು ಕೊಡತಾರ
ಕಣ್ಣು ಇದ್ದೋರಿಗ್ಯಾಗಿ ಲೋಕ ಸಿಗಾಂಗಿಲೋ
ಕಣ್ಣು ಇದ್ದೋರಿಗೆ ಸಿಗಾಂಗಿಲ್ಲ ಹೆಂಗಸರು       || ತಂದಾನ ||

ಅಂತ ದುಃಖ ಮಾಡುತಾರಪ್ಪಾ ತಾಯೋರು
ಅವ್ರು ಊರು ಸೇರಿ ಬಿಟ್ರು
ಈ ಹುಡುಗ ಆರು ಮಂಡಾಗಿ ಬಿದ್ದಾಂವ
ಜೀವ ಅಂತರ ಒಳಗ ಹೋತೈತಪ್ಪ
ಎರಡು ಮೇಘದಾಗ ಮ್ಯಾಕ
ಆಗ ಏನ್ಮಾಡ್ದ ಶಿವ ನೋಡಿದ
ಹೇ ನಾವು ಕೊಟ್ಟಿದ ಮಗ
ನಮ್ಮ ತಂಗಿ ಬೆನ್ನ ಹಿಂದೆ
ಕಡಿದು ಹೋಗ್ಯಾರ ಆರುಮಂದಿ
ಜೀವ ಎರ್ಡು ಮೇಘದಾಗ ಬರುತೈತಿ
ಕೇಳವೋ ಶಿವ
ಈಗ ಬರೋ ಜೀವ
ಶೀಸನಾಗ ತುಂಬುಕ್ಯಂಡು
ಆಗ ಹೋಗಿ ಜೀವ ತುಂಬಿಸಿ ಬಾರಪ್ಪ ಅಂದ
ಬರೋ ಜೀವಾನ ಶೀಸನಾಗ ತುಂಬಿಸಿಕ್ಯಂಡ
ತುಂಬಿಸಿಕ್ಯಂಡು ಸಾದರ ಅವತಾರ ಆಗಿಬಿಟ್ಟ
ಕಾವಿ ದೋತರ ಕಾವಿ ಅಂಗಿ ತೊಟಗಂಡ
ಕೋಲು ಹಿಡಕಂಡ
ಒಂದ ರಾಗಿ ಚರಗ್ಯಾಗ ಹಿಡಕಂಡು
ಚರಿಗಿ ತಂಗಂಡು ಬಂದ
ಆತ ಬರ್ತಾನಪ್ಪ ದಾರಿ ಹಿಡ್ಕಂಡು
ಇವ್ರು ಆರುಮಂದಿ ಇದಾರಲ್ಲಾ
ಊರು ಹೊರಗ
ಏಯಮ್ಮ ಬಹಳ ಹೊತ್ತು ಆಯ್ತು
ಮೂವಾರ್ಹೋಗಿ ನೋಡಿ ಬರಾನು
ಮುವರು ಇಲ್ಲೇ ಇರಾನ ಅಂತ
ಪಾತ್ರಗಿತ್ತಿ
ಆಗ ಭೂಪತಿ ರಾಜನ ಮಗಳು
ಶಾಮಗಂಧಿ
ಮೂವರು ಬಂದ್ರು
ಆಗ ಇನ್ನ ನೋಡಿದ್ರೆ ಗುಡ್ಯಾಗಿಲ್ಲ
ಗುಡಿ ಹಿಂದಕ್ಕೆ ಇದಾರೆನಂತ ಬಂದ್ರು
ಆರು ಮಂಡೆ ಬಿದ್ದಾವ
ಲಭಲಭ ಬಾಯಿ ಬಾಡಿಯೋ ಹೊತ್ತಿಗೆ
ಅವ್ರು ಏನೋ ಬಾಯಿ ಬಡೀತ್ಯಾರೆ ಅಂತ
ಅವ್ರು ಮೂವರು ಬಂದ್ರು
ಆರು ಮಂದಿ ತಲೆಗೊಂದು ಮಂಡೆ
ಉಡ್ಯಾಗ ಇಟ್ಟು ಕಂಡ್ರು
ಆ ಎಲ್ಲಮ್ಮನ ಮುಂದೆ ಬಂದು
ಎಷ್ಟು ಚೆಲುವೀಲಿ ದುಃಖ ಮಾಡ್ತಾರಪ್ಪಾ
ಆರು ಮಂದಿ ಹೆಣ್ಮಕ್ಳು

ಯಮ್ಮಾ ಐದೀಯಿಲ್ಲ ಗುಡ್ಯಾಗಿಲ್ಲಿ ನನ್ನತಾಯಿ
ಯಮ್ಮಾ ಆರುಮಂದಿಗಿ ರಂಡೆ ಮಾಡಿದೆವ್ವೋ
ನಾವು ಧರ್ಮ ಕಾಣಿವಿ ಪಾಪ ಕಾಣಿವಮ್ಮ
ನಮ್ಮ ಮುತ್ತಯದೆತನ ರಂಡೆ ಮಾಡಬೇಡ
ನಿನ್ನ ಮಗನ ನೀನೆ ಕಣ್ಣಿಲಿ ನೋಡಿಲ್ಲೇನೆ
ನಿನ್ನ ಮಗನ ಇನ್ನ ಜೀವ ಕೊಡತಾಯೇ          || ತಂದಾನ ||

ಆರು ಮಂದಿ ಅಕ್ಕ ತಂಗೇರು
ಆಗ ಗೊಲ್ರ ಹೆಂಡ್ರು
ಆಗ ಪಾದಕ್ಕೆ ಬಿದ್ದು ದುಃಖ ಮಾಡ್ತಾರಪ್ಪ
ಎಲ್ಲಮ್ಮ ದೇವಿಗಿ
ಈ ತಾತ ಸಾಂಬ ಶಿವ ಸಾದರಾಗಿ ಬಂದ
ಏಯಮ್ಮಾ ಏನೋ ತಣ್ಣಗ ಮಠದಾಗ ಇರಾನ
ಇಲ್ಲೇ ಬಾಯಿ ಐತಿ ತಂದ್ಕೊಂಡ ಬುತ್ತಿ
ಊಟ ಮಾಡಾನ ಅಂದ್ರೆ
ಏನು ಗಬಗಬ ಗಬಗಬ ಅಂತೀರಿ
ಏನಮ್ಮಾ ಮಕ್ಕಳ ಕಳಕಂಡೀರ್ಯಾ
ಬೆಳ್ಳಿ ಬಂಗಾರ ಕಳಕಂಡೀರ್ಯಾ
ತಾತ ಬೆಳ್ಳಿ ಹೋದ್ರೆ ಬಂಗಾರಹೋದ್ರೆ ಸಂಪಾದಿಸಿಕ್ಯಂತಿವಿ
ಮಕ್ಳು ಸತ್ರೆ ಮಕ್ಕಳು ಹುಟ್ಟತಾರ
ಜೀವದ ಗಂಡಗ ಜೀವಕ್ಕೆ ಇಲ್ಲದಾಂಗ
ಕಡದ್ಹೋಗಿ ಬಿಟ್ಟಾರ ಅಣ್ಣೋರು
ಅಣ್ಣೋರು ಕಡಿದ್ಹೋಗೇರೇನು
ಇಲ್ಲಮ್ಮ ಒಂದು ತಂದಿಗೆ ಹುಟ್ಟಿ
ಒಂದು ತಾಯಿಗ ಬೆಳಿದೋರು ಹ್ಯಾಂಗ ಕಡಿತಾರಮ್ಮ
ಇಲ್ರೀ ಆರು ತುಂಡು ಕಡಿದು ಬಿಸ್ಯಾಕಿ ಹೋಗ್ಯಾರ
ನೀವು ಆರು ಮಂದಿ ಏನಾಗ್ಬೇಕು ಅಂದ
ಸ್ವಾಮಿ ಆರು ಮಂದಿ ನಾವ್ ಹೆಂಡ್ರು
ನಮ್ಮ ಗಂಡ ಜೀವಕ್ಕ
ಇಲ್ಲಮ್ಮ ನಿಮಗೆ ಗಂಡ್ರು ಎಲ್ಲಿ ಸಿಗಲಿಲ್ಲೇನು
ಒಬ್ಬನ್ಹಿಂದೆ ಆರು ಮಂದಿ ಬಂದ್ರೆ ಹ್ಯಾಂಗಮ್ಮ
ಅಣ್ಣೋರು ಹ್ಯಾಂಗ ಕಡಿತಿದ್ದರಮ್ಮ
ನೀವು ಆರುಮಂದಿ ಆತನ ಒಂದ ಜೀವಕ್ಕ ಬಂದ್ರೆ

ನಿಮಗಾಗಿ ತಡೀಲಾರ್ದ ಆತ ಕಡಿಕ್ಯಂಡೆ ಸತ್ತಾನಾ
ಒಬ್ಬನ ಹಿಂದೆ ಲೋಕಮ್ಮ
ಈಸು ಮಂದಿಯ್ಯಾಕ ಬಂದೀರಿ ನೀವು           || ತಂದಾನ ||

ಒಬ್ಬನ ಹಿಂದೆ ಈಸು ಮಂದಿ ಯ್ಯಾಕ ಬಂದೀರಿ
ಮತ್ತೆ ಸತ್ಹೋಗ್ಯಾನ
ಏನ್ಮಾಡ್ಬೇಕು
ಆತೇ ಕಡಿಕ್ಯಂಡು ಸತ್ಹೋಗ್ಯಾನ
ಅಣ್ಣೋರ್ಹೆಂಗ ಕಡೀತಿದ್ದರಮ್ಮಾ
ಎಂಜಲು ಹಾಲು ಬಿಟ್ಟೋರು
ಈಗೇನು ಬಿಡಮ್ಮ
ಆಗ ಎಲ್ಲಾರ ನಡುವೆ ಒಬ್ಬ ಗಂಡ ಏನು ಚೆಂದ
ನನ್ಹಿಂದೆ ಬರ್ರಿ
ತೆಲಿಗೊಂದು ಗಂಡನ್ನ ತೋರಿಸ್ತಿನಿ

ನಿಮ್ಗೇನು ಕಮ್ಯಮ್ಮ ಊರು ತುಂಬ
ಗಂಡಸರು ಐದಾರ           || ತಂದಾನ ||

ಹಂತ ಮಾತ ನುಡಿಬ್ಯಾಡ ತಾತ
ದೊಡ್ಡೊವ್ನು ಯಜಮಾನ
ಅಂತ ನೀವು ತೋರಿಸೋ ಗಂಡನ್ನ
ನಾವೇ ಮಾಡಿಕ್ಯಂಡಿವಿ
ಇಲ್ದಿದ್ರೆ ಒಳ್ಳೆ ಒಳ್ಳೇರು
ಬಂದ್ರೆ ಮಾಡಿಕ್ಯಂಡಿಲ್ಲ
ಹಂತಾ ಮಾತು ನುಡಿಬ್ಯಾಡ ಸ್ವಾಮಿ
ಮತ್ತೆ ಏನು ಮಾಡಬೇಕಮ್ಮ ಈವಾಗ
ಹೋದ ಗಂಡನ್ನ ಬಾ ಅಂದ್ರೆ ಬರತಾನ
ತೆಲಿಗೊಂದು ಮಂಡೆ
ಉಡ್ಯಾಗಿಟ್ಟಿಕೊಡಿರಿ
ಆರು ತುಂಡು ಕಡ್ದ ಹೋಗ್ಯಾರ
ಏನು ಮಾಡಬೇಕು ಇವಾಗ
ಮತ್ತೆ ಏನು ಮಾಡಬೇಕು ಸ್ವಾಮಿ
ಏನಿಲ್ಲ ನಾನು ಬಂದಿನಿ ಯಜಮಾನ
ಎಲ್ಲಾ ಆರು ತುಂಡು ತಾವು ತಗೊಂಡು ಹೋಗಿ
ಕುಣಿತೋಡಿ ಕುಣ್ಯಾಗಿಟ್ಟು
ಯಮ್ಮ ನಿನ್ನ ಮಗ ನಿನ್ನ ಮುಂದೆ ಕಡಿದಾಕೆ ಹೋಗ್ಯಾರ
ನಿನ್ನ ಮುಂದೆ ಹೂಣಿಕ್ಕಿ ಹೋಗ್ತೀವಿ ಅಂತ
ನೀವು ಗಂಡ ಜೀವ ಬಿಡುವಾಗ ಗಂಡನ ಜಿವಕ್ಕೆ
ನೀರು ಹಾಕೀರ್ಯಾ ಅಂತ ಕೇಳಿದ್ಳು
ಓ ಯಾವಾಗ ಸತ್ಹೋಗ್ಯಾನೋ ನಮಗೇನು ಗೊತ್ತು ತಾಯಿ
ಆಗ ತಾಯಿ ಮುಂದೆ ಅಂದ
ಸರೆಬಿಡು ನಿಮ್ಮ ಜೀವಗೆ ನೀರು ಹಾಕಿ
ಹೆಣ ಮುಟ್ಟಬೇಕು
ಬಾಯಾಕ್ಹೋಗಿ ನೀರು ಕುಡ್ರಿ
ಆಗ ಕೈಕಾಲು ತೊಳಕಂಡು ನೀರು ಕುಡಿರಿ
ನನ್ನಲ್ಲಿ ರಾಗಿ ಚೆರಗಿ ಐತಿ
ಚೆರ್ಗಿ ತುಂಬ ನೀರು ತುಂಬಿಕ್ಯಂಡು ಬರ್ರೀ
ನಾನೂ ನೀರು ಕುಡಿತಿನಿ
ಹೆಣಕೀಟು ಉಗ್ಗಾನ
ಸರಿಬಿಡು ಸ್ವಾಮಿ ಅಂದ್ರು
ನಾಗ ಎಡೆ ಹಾಕ್ಯಾನಪ್ಪಾ ರಾಗಿ ಚೆಗಿಗ
ತಾತನ ತಗಂಡು ಬಂದ್ರು
ಆಗ ನೀರು ಕುಡಿದ್ರು
ಮಕತೊಳಕಂಡ್ರು
ಚೆರಗೆ ತುಂಬುವಾಗ

ಕೈಯಾಗನ ಚೆರಿಗೆ ಜಾರಿಕೆಂಡು ಹೋಯ್ತಣ್ಣ
ನೀರು ಒಳಗ್ಯಾನೆ ಜಾರಿ ಬಿದ್ದೈತಣ್ಣಾ  || ತಂದಾನ ||

ಏಯಮ್ಮಾ ಮೇಟೌಷಧ ಮಾರಾಕಿ
ಆಗ ಔಷಧ ಇದ್ರೆ ನಿದ್ದೆ ಮಾಡಾಕಿ
ಬಾಳ ತಿಳುವಳಿಕೆ ಅಂತ ಕೈಗ ಕೊಟ್ಟಿವಲ್ಲ ನಿನ್ಗ
ಆಗ ತಾತಗೆ ಕೊಡ ಇಲ್ಲ ಪಡವಿಲ್ಲ ಹೇಣ್ತಿಲ್ಲ ಮಕ್ಳಿಲ್ಲ
ಇದೇ ಒಂದು ಜೀವ ಉಳಿಸೋದು
ಜೀವಕ್ಕೆ ನೀರು ಕುಡಿಯೋದು
ಏಯಮ್ಮ ಆಗ ರಾಗಿ ಚೆರಿಗೆ ಕಳದು ಬಿಟ್ಟೀಯಲ್ಲ
ಏಯಮ್ಮ ಹಿಂಗೆ ತುಂಬಾಕ ಹೋದ್ರೆ
ಲೊಟಕ್ನೆ ಜಾರಿಕ್ಯಂಡುಹೊಯ್ತು
ನಾನೇನು ಮಾಡ್ಲಮ್ಮ
ಮತ್ತೆ ಹ್ಯಾಂಗ ಮಾಡಣ
ಅಯ್ಯಯೋ ತಾತ ಬಾಯಿಗೆ ಬಂದಾನ ಬಯ್ತಾನ
ಲೇ ಅದಕ್ಕೆ ನೀವು ಹೊತ್ತುಂಟ್ಲೆ ರಂಡೆ ಆಗೀರಿ
ಮಕ್ಳಾಗಿಲ್ಲ ಮರಿ ಆಗಿಲ್ಲ ಅಂತ
ಬಾಯಿಗೆ ಬಂದಾಗ ಬಯ್ತಾನಮ್ಮ
ಏನಿಲ್ಲ ಅರ್ಧರ್ಧ ಸೀರೆ ಹರೇಬಿಡಾನ
ಪಾಂಟಗೆ ಮ್ಯಾಲೆ ಇಡಾನ
ಅರ್ದರ್ಧ ಸೀರೆ ಸುತ್ತರಿಕ್ಯಂಡು
ಆರು ಮಂದಿ ಬಾಯಾಗಿಳೇಣ
ಬಾಯಾಗ ಹುಡಿಕ್ಯಾಡಿದ್ರೆ ಆರು ಮಂದಿರದಲ್ಲಿ

ಒಬ್ಬರಿಗೆನ್ನ ಚೆರಗೆ ಸಿಗಿತೈತೊ
ರಾಗಿನ್ನ ಚೆರಗೆ ತಾತನ ಚೆರಗೆಮ್ಮ
ಆಗ ನಮ್ಮ ಕೈಗಾಗಿ ಸಿಗತೈತಮ್ಮ    || ತಂದಾನ ||

ಆರು ಮಂದಿ ಪಾಟಿಗೆ ಮ್ಯಾಲೆ ಆರು ಸೀರೆಗಳು ಇಟ್ರು
ಅರ್ಧರ್ಧ ಸೀರೆ ಹರೇಬಡಿದ್ರು
ಆಗ ಆರುಮಂದಿ ಬಾಯಗಿಳಿದ್ರು
ತೇಲ್ಯಾಡ್ತಾರಪ್ಪಾ ಮುಣುಗಿ ಮುಣುಗಿ
ಕ್ರಿಷ್ಣ ಹೆಂಡ್ರಿನ್ನ ತಾವು
ಗೊಲ್ರು ಹೆಣ್ಮಕ್ಕಳು ತೆಲ್ಯಾಡ್ತಾರ
ಈ ಶಿವ ಏನು ಮಾಡಿಬಿಟ್ಟ
ಆರುಮಂಡೆ ಲೈನಿಟ್ಟ
ವಿಭೂತಿ ಒಗದು ಬಿಟ್ಟ
ಆರು ಮಂಡೆ ಹತ್ತಿಗ್ಯಂಡ್ವು
ಸೀಸನ್ಯಾಗ ತುಂಬಿಕ್ಯಂಡು
ಬಂದಾನ ಜೀವ
ಎಡಕ್ಕ ಮೂಗು ಮುಚ್ಚಿದ
ಬಲಕ್ಕ ಮೂಗಿನ್ಯಾಗ ಏರಿಸಿ ಬಿಟ್ಟ

ಆಗ ಮೂಗಿನ್ಯಾಗಲಿದ್ದಮ್ಮ ಇನ್ನ ತೆಲಿಗೆ ಜೀವ ಹರೀತು
ಎಡಕ್ಕಲಿದ್ದ ಬಲಕ್ಕಮ್ಮ ಮಗ ಎದ್ದುಬಿಟ್ಟ ಜನ್ಮಕ್ಕೆ           || ತಂದಾನ ||

ಎಡಕ್ಕಲಿದ್ದ ಬಲಕ್ಕ ಎದ್ದುಬಿಟ್ಟ
ತಾತ ಹೋದ ಜೀವ ಯಾಕ ಉಳಿಸಿದೆ
ತಾತಾ ಅಂತ ಪಾದ ಹಿಡಕಂಡ
ನೀನು ಗೊಲ್ರು ಹಾಲು ಕುಲದಾಗ ಹುಟ್ಟೀಯಿ
ನೀನು ಮಾಯಿ ಕೃಷ್ಣ
ಮೂರು ನಾಮದೋನು
ಮೂರು ಅವತಾರ ಆದ್ರೆ
ಸಾಯಂಗಿಲ್ಲಪ್ಪ ದುಷ್ಠ ಲೋಕದಾಗ
ಕೇಳವೋ ನೀನು ಸತ್ತೋಗಿಯಂತೆ
ನಿನ್ನ ಹೆಂಡ್ರು ನೋಡು
ಪಾಪ ಒದ್ದಾಟ ಹೆಂಗೈತಿ
ಗಂಡಿಲ್ಲದ್ದು ಯಾಕ ಇರಬೇಕು ಅಂತ

ಬಾಯಾಗ ಬಿದ್ದ ಒದ್ದ್ಯಾಡುತಾವ
ನೋಡಿಲೆ ತಮ್ಮ ಗೊಲ್ರ ಕೃಷ್ಣದವ್ನೆ    || ತಂದಾನ ||

ನೋಡು ಬಾಯಾಗ ಬಿದ್ದು ಒದ್ದ್ಯಾಡ್ತಾರ ಅಂತ
ಅಂಬೊತ್ತಿಗೆ ಬಾಯಿಕಡಿಗೆ ನೋಡ್ಹೋತ್ತಿಗೆ

ಅದೃಶ್ಯವೇ ಮಾಯವಾಗ್ಯಾನಮ್ಮ
ಶಿವನೇ ಒಂದೇ ಮಠಕ್ಕೆ ಹೋಗ್ಯಾನಮ್ಮ        || ತಂದಾನ ||

ಹೌದಲ್ಲ ತಾತ ಅಂದ್ರ
ತಾತಿಲ್ಲ ಭೂತಿಲ್ಲ
ಅಲೆಲೆಲೆ
ತಾತ ಅಲ್ಲ ಆಗ ಸಾಂಬ ಶಿವ
ನನ್ಗ ಜೀವಕೊಟ್ಟವನು
ಜೀವ ತುಂಬಿಸಿ ಹೋದನಲ್ಲ
ಹೆಣ್ಮಕ್ಕಳು ಓದ್ದ್ಯಾಡತಾರ
ಇವ್ರು ಬಾಯಾಗಿದ್ದೋರು
ಬಾ ಅಂದ್ರೆ ಬರಾಂಗಿಲ್ಲ
ಅಲ್ಲಿ ಶಂಕೇಶ್ವರ ಮರ ಐತಿ ಯಪ್ಪ ಗಡ್ಡಿ ಮ್ಯಾಲೆ
ಬಾಯಿಗಡ್ಡೆ ಮ್ಯಾಲೆ
ಪಾಂಟ್ಗಿ ಮ್ಯಾಲ ಇಟ್ಟು ಹೋಗ್ಯಾರ
ಬಾಯಿ ಗಡ್ಡೆ ಮ್ಯಾಲೆ ಆರು ಸೀರೆ

ಎಡಗೈಲಿ ಸೀರೆ ಹಿಡದಾನಮ್ಮ
ಗಿಡದ ಮ್ಯಾಲೆ ಒಗೆದು ಬಿಟ್ಟಾನಮ್ಮ
ಗಿಡ ಏರಿ ಬಿಟ್ಟಾನ ಗಿಡಮ್ಯಾಲೆ ಕುಂತಾನ ಮಗ
ಬೆಳ್ಳಿನ ಊದುನುಗೋಲು ಹಿಡದಾನ
ಅವ್ರುನಾಗಿ ಕರಿತಾನೆ         || ತಂದಾನ ||

ಬೆಳ್ಳಿನ ಊದಿನ ಗೋಲ್ಹಿಡಿದು
ಗಿಡಮ್ಯಾಲೆ ಕುಂತುಗಂಡು

ಬರ್ರೆಲೆ ನೀವು ಗೊಲ್ರು ಹೆಂಡ್ರುದವ್ರೆ
ಆಗ ನೀವು ಬಾಯಾಗ ಸಾಯಬ್ಯಾಡ್ರಿ
ಅಯ್ಯೋ ಕೃಷ್ಣವಂತ ಬಂದಾರಣ್ಣಾ
ಕೂದುಲು ಬಿಟ್ಟುಕೊಂಡಾರ
ಬಗ್ಗಿ ಬಗ್ಗಿ ಬರ್ತಾರ            || ತಂದಾನ ||

ದಿಗ ದಿಗ ದಿಗ ಪಾಂಟಿಗೇರಿ ಬಂದ್ರು
ಆಗ ಕೂದಲು ಮೈತುಂಬ ಮುಚ್ಚಿಗ್ಯಂಡಾವ
ಹೆಣ್ಮಕ್ಳಿಗೆ
ಆಗ ಆರು ಮಂದಿ ನಿಂತರು
ಏನಂತ ಬೇಡ್ತಾರೆ

12_80_KMKM-KUH

ಗಿಡದ ಮ್ಯಾಲೆ ಜೀವ ಗಂಡದವ್ನೆ
ಯಪ್ಪಾ ಜೀವ ಮುಚ್ಚು ನಮ್ಮ ಜನ್ಮ ಮುಚ್ಚು ನೀನು
ಆಗ ನಮ್ಗೆ ಸೀರೆ ಕೊಡುವಯ್ಯ
ಬೊಗಸೆ ಒಡ್ಡ್ಯಾರ ಕೈಯೊಂದು ಮುಗಿತಾರ
s ಎಡಗೈಲಿ ನೋಡಮ್ಮ ಸೀರಿಗಳು ಕೆಳಗ ಹಾಕ್ಯಾನ
ಈಗ ಬಂದ ಶಿವನಾಲೆ
ಜೀವಕೊಟ್ಟು ಹೋದಾಲೆ    || ತಂದಾನ ||

ಅಯ್ಯಾ ಮಾಯಕೃಷ್ಣ ಹಾಲು ಕೃಷ್ಣ
ನಿನ್ನ ಪಾದಕ್ಕೆ ಶರಣಯ್ಯ
ಈಗ ಇನ್ನವರು ದುಷ್ಟದವರು ಕಡದಾರ
ಈಗ ಜೀವಕೊಟ್ಟು ಜೀವದಲ್ಲಿ
ನನ್ನ ಧರ್ಮ ಇದ್ರೆ
ಧರ್ಮದೇವರು ಬಂದು
ನನ್ನ ಜೀವಕೊಟ್ಟು ಎಬ್ಬಿಸಿ ಹೋದ
ಸರಿ ಬಾಮ ನಮ್ಮಪ್ಪ
ಸತ್ತನೋ ಐದಾನೋ ಅಂತ
ಆರು ಮಂದಿ ಹೆಂಡ್ರನ್ನ ಕರಕಂಡು
ಆಗ ದೇವಿ ಗುಡಿಗೆ ಪ್ರದಕ್ಷಣೆ ಮಾಡಿಕ್ಯಂಡ್ರು
ಯಮ್ಮಾ ತಾಯಿ ಏಳು ಮಂದಿ
ನಿಮ್ಮ ಪಾದ ಮುಗಿದು ಹೋತೀವಿ ಅಂತ
ಪಾದ ಮುಗಿದು
ಏಳು ಮಂದಿ ಹೆಂಡ್ರನ್ನ ಕರಕಂಡು
ಆಗ ಮದ್ದು ತಗಂಡು ನಡ್ದ