ಮಗ ಹೊಂಟು ಬರುತಾನ
ಆಗ ಮಗನು ಇನ್ನಾಗಿ
ಸುಡುಗಾಡು ರುದ್ರಭೂಮಿ
ಮಗ ಹೊಂಟು ಬರುತಾನ  || ತಂದಾನ ||

ಹಡೆದ ತಾಯಿ ಸಿರಿದೇವಿ
ಮಲ್ಲಿ ಹೂ ಗಿಡದ ಕೆಳಗೆಬಿದ್ದು
ದುಃಖ ಮಾಡಿ ಮಾಡಿ
ಆಗ ಮಗ ಹೋದಾಗಲಿದ್ದ
ಆರು ತುಂಡಾಗಿ ಬಿದ್ದಾಗಲಿದ್ದ

ಯಪ್ಪಾ ಯಾಗ ಬರುತಿಯೋ ಯಾಗ ಇಲ್ಲ ಮಗನೇ
ನಿನ್ನ ರೂಪ ನೋಡಲಾರ್ದ ಯಾರು ಕಡ್ಡರು ಮಗೂ
ಇನ್ನ ನಾನು ಉಳ್ಯೋದಿಲ್ಲಪ್ಪ ಲೋಕ ಮಗನೆ || ತಂದಾನ ||

ಮನಿದಾಸಿ ಯಮ್ಮಾ ಊಟ ಮಾಡು
ಯಮ್ಮ ಎದ್ದೇಳು
ಆಳ್ದು ಆಳ್ದು ದುಃಖ ಮಾಡಿ ಮಾಡಿ
ಆಗ ಮಾತಾಡುವಲ್ಲಪ್ಪ ತಾಯಿ
ಮಗ ಬಂದ
ಆರು ಮಂದಿ ಹೆಂಡ್ರನ್ನ ಕರಕಂಡು
ಯಮ್ಮಾ ಮನೆದಾಸಿ
ನಮ್ಮ ತಾಯಿ ಎಲ್ಲೈದಾಳ
ಹೋಗಪ್ಪ
ಆಗ ಮಾಳಿಗೆ ಮ್ಯಾಲೆ
ಮಲ್ಲಿಗೆ ಹೂವಾ ಗಿಡ ಕೆಳಗ ಬಿದ್ದು
ದುಃಖ ಮಾಡಿ ಮಾಡಿ
ಆಗ ಮಾತಾಡವಲ್ಲಳಪ್ಪಾ

ಧಿಗಿ ಧಿಗಿ ಏರ್ಯಾನ ಎರ್ಡು ಪಾದ ಹಿಡಿದಾನ
ಯಮ್ಮಾ ನನ್ನ ತಾಯಿ ನಿನ್ನ ಪಾದಕ್ಕೆ ಶರಣಮ್ಮ          || ತಂದಾನ ||

ಯಮ್ಮಾ ನಿನ್ನ ಪಾದಿಗಿ ಶರಣ ಅಂಬೋತ್ತಿಗೆ
ಕಣ್ಣು ತಾಯಿ ತೆರೆದು ನೋಡಿದ್ಳು

ಯಪ್ಪಾ ಬಂದೇನೋ ನನ್ಮಗ
ಜೀವಗ್ಹುಟ್ಟಿದ ಜೀವ ಮಗ    || ತಂದಾನ ||

ಮಗ ಜೀವ ಹುಟ್ಟಿದ ಜೀವದ ಮಗ
ಬಂದೇನಪ್ಪಾ ನನ್ನ ಜೀವಕ್ಕ ಅಂದ್ಳು
ಆರುಮಂದಿ ಸೊಸೆಯರು ಬಂದು

ಶರಣತ್ತಿ ಸಿರಿದೇವಿ
ನಿನ್ನ ಪಾದಗಾಗಿ ಅತ್ತಿ
ಶರಣಮ್ಮ ಆರುಮಂದಿ ಸೋಸಿನೋರು ನಿಮ್ಮಿಗೆ          || ತಂದಾನ ||

ಶರಣಮ್ಮ ಆರು ಮಂದಿ ಸೋಸಿಯವ್ರೇ
ಏಯಪ್ಪಾ ಆಗ ಇನ್ನ ಇಷ್ಟು ಮಂದಿನ
ಯಾಕ ಕರಕಂಡು ಬಂದೀ ಮಗನೆ
ಅಮ್ಮ ಇವು ಸಾಮಾನ್ಯ ಹೆಂಗಸರಲ್ಲ
ಗಂಡಸರ್ನ ಕೋಲ್ಲವು
ನನಗ್ಯಾಗಿ ಬಗ್ಗ್ಯಾವ
ಯಾರಿಗೆ ಬಗ್ಗೋವಲ್ಲ
ಸೂಟಿ ನೋಡಿ ಕೀಲು ತಪ್ಸಿನಿ
ಅಮ್ಮಾ ಜೀವಕ್ಕಾಗಿ ಅಂದ್ರೆ
ಆರು ಮಂದಿ ಪಾದ ಮುಗಿದ್ರು
ಯಮ್ಮಾ ನಮ್ಮಪ್ಪ ಸತ್ತಾನ ಐದಾನ
ಯಪ್ಪಾ ನಾನು ಹೋತೀನ್ಯಾ ನೋಡ್ತಿನ್ಯಾ
ಕೊಟ್ಟೀದ್ದೇವ್ರು ನಿಮ್ಮಪ್ಪಗ ನನ್ಗ
ಋಣ ಇಲ್ದಂಗ ಅಗಲಿಸಿ ಬಿಟ್ಟ್ಯಾನ
ನಾನೇನು ಮಾಡ್ಲಿ ಮಗನಾ
ಸರಿ ತಾಯಿ
ನಮ್ಮಪ್ಪಗ ಹುಣ್ಣು ಹುಟ್ಟೈತೆ
ಯಮ್ಮಾ ಊರಾಕ ಹೋಗನ
ಸುಡುಗಾಡು ರುದ್ರಭೂಮಿ ಬಿಟ್ಟು
ಬಾ ತಾಯಿ
ಯಪ್ಪಾ ನಾನು ಬರೋದಿಲ್ಲ
ಕತ್ರಿ ಕುಡುಗೋಲು ನೆಗ್ಗಿನ ಮುಳ್ಳು ಮ್ಯಾಲೆ ಇಟ್ಟದವ್ನು
ನಾನು ಬರಂಗಿಲ್ಲ
ಈಗ ಆ ಕಾಲಕ್ಕೆ ಬಿಟ್ಟು ಹೋಗ್ಯಾನಾ
ಈ ಕಾಲಕ್ಕೆ ನಿಮ್ಮ ತಂದಿ ಬಂದು
ಬಾರೆ ತಪ್ಪಂಗಿಲ್ಲ ಅಂತ ಕೈ ಹಿಡಿದ್ರೆ

ಆಗ ನಾನು ಬಂದು ಬಿಡ್ತೀನಪ್ಪ
ಅಷ್ಟ ತನಕ ನಾನು ಬರಂಗಿಲ್ಲ ಮಗನಾ
ನಿಮ್ಮ ತಂದಿ ಮಕ ನಾನು ನೋಡೋದಿಲ್ಲ      || ತಂದಾನ ||

ಸರಿ ನಮ್ಮಪ್ಪ ಬಂದು ಬಾರೆ ಅಂತ
ಕೈ ಹಿಡ್ದರೆ ಬರ್ತಿಯೇನಮ್ಮ
ಬರಬೇಕಾಕೈತಪ್ಪಾ
ಸರಿ ಬಿಡು ತಾಯಿ
ನಾನು ಬರ್ತೀನಂತ
ಆಗ ಮಗ ಏನು ಮಾಡಿದಾ
ಅತ್ತಾಗೊಂದು ಪುಟ್ಟಿ
ಇತ್ತಾಗೊಂದು ಪುಟ್ಟಿ ಬಿದಿರು ಪುಟ್ಟಿಗಳು
ಆಗ ಯೇನು ಮಾಡಿದ
ಈಗ ಕಯಚಿಳ ಗಾಜಿನ ಬುಡ್ಡೆ ಮದ್ದು ಇಟ್ಟುಗಂಡ
ಕೇಳವೇ ಯೇದಿನಗಂಧಿ ಮದ್ದುಮಾಡಾಕಿ
ಮೇಟೌಷಧದವಳೆ
ನಿನಗ್ಯಾದ್ರೆ ಇನ್ನು ತಿಳುವಳಿಕೆ
ಹ್ಯಾಂಗ ಹಾಕಬೇಕು ಹ್ಯಾಂಗಿಲ್ಲ ಹುಣ್ಣಿಗೆ ಅಂತ
ಈಗ ನನಗೆ ತಂದೆ ನಿನಗೆ ಮಾವ
ಬಾ ಹೋಗಾನ ಅಂಬೋತ್ತಿಗೆ
ನಡ್ರೀ ಹೋಗಣ ಅಂದ್ಳು
ಆಗ ಕರಕಂಡು ಆಗ ಜೀವಕ್ಕಾಗಿ ನಡ್ದ