ಅಂಗಿ – ಪುರುಷರು ತುಡುವ ಮೇಲ್ವಸ್ತ್ರ
ಅಂಬಿಗರು – ಮೀನುಗಾರರು, ನಾವಿನ ಮುಖೇನ ಜೀವನ ಸಾಗಿಸುವವರು
ಅಚ್ಚೇರು – ಅರ್ಧ ಸೇರು, ಎರಡುಪಾವು, ಅಳತೆಗೋಲು
ಅರ್ಜೆಂಟ್ – ಶೀಘ್ರ
ಅಧೋನಿ ಜಟ್ಟಿ – ಆದೋನಿ (ಆಂದ್ರ)ಯ ಪೈಲ್ವಾನ ಆಟಗಾರ
ಅಭ್ಯಾಸ – ರೂಡಿ
ಅಲ್ಲಾರೆ – ದೇವ್ರೆ
ಅಳಿಯ – ರಕ್ತಸಂಬಂಧಿ ಅಕ್ಕನ ಮಗ
ಆರಂಡಿ – ಅಡವಿ
ಆದಿಶಕ್ತಿ – ಮೂಲಶಕ್ತಿ, ಶಕ್ತಿ ದೈವ
ಆನ್ಸ್ಯಾನ – ಮುಟ್ಟಿಸ್ಯಾನ, ತಗಲಿಸಿದಾನ
ಆನೆಗೊಂದಿಮಾರಮ್ಮ- ಆನೆಗೊಂದಿಯ ಶಕ್ತಿದೈವ ಮಾರಮ್ಮ
ಆಯುಧ – ಮಾರಕಾಸ್ತ್ರ
ಆಲ – ಆಲದ ಮರ
ಇಟ್ಟಿಗ್ಲೋರು – ಬೇಡ ಸಮುದಾಯದ ಒಂದು ಬಳಿ
ಇರಕಟ್ಟು – ಇಕ್ಕಟ್ಟು
ಇರಿಶೆಟ್ಟಿ – ಆನೆಗೊಂದಿಯ ಶ್ರೀಮಂತ ವ್ಯಾಪಾರಿ
ಈಶ್ವರ – ಶಿವ
ಉಚ್ಚಿ – ಕಳಚಿ
ಉಡ್ತೀನಿ – ಹುಟ್ಟುತ್ತೇನೆ
ಉಣ್ಣನೀರ ಸಮುದ್ರ- ಸೀನೀರ ಸಮುದ್ರ
ಉಫಾಸ – ಉಪವಾಸ
ಊರು – ಗ್ರಾಮ
ಏಟ – ಹೊಡತ
ಎಲೆವನಂತ್ರ – ವಿಳ್ಯದೆಲೆಯ ತೋಟ
ಒಟ್ಟಿಗೆ – ಹೊಟ್ಟಿಗೆ, ಸಪ್ಪೆಗೆ, ಬಾಳೆಹಣ್ಣಿನ ಸಿಪ್ಪೆ
ಒಣಕಿ – ಕಟ್ಟಿಗೆಯ ಉದ್ದನೆಯ ಕಟ್ಟುವ ಸಾಧನ
ಕಡ್ಡಿಬಾಕ್ಲ – ಕಬ್ಬಿಣದ ಸರಳುಗಳಿಂದ ಮಾಡಿದ ಬಾಗಿಲು
ಕರಣಗಿ – ಲೇಖನಿ
ಕಾವು – ಬೆಚ್ಚಗೆ, ಬಿಸಿ
ಕಾಸು – ಬಿಸಿಮಾಡು
ಕಾಸುಬಾಕು – ವಿಳ್ಯೆದೆಲೆಯ ವನ
ಕ್ವಾಮಟ್ರು – ವ್ಯಾಪಾರಿ ಸಮುದಾಯ
ಕಿದರ್ – ಎಲ್ಲಿಗೆ
ಕುಪ್ಳಿಸಿ – ಜಿಗಿದು
ಕೂಳು – ಊಟ
ಕೇಜಿ – ಕಿಲೋಗ್ರಾಂ
ಕೊಡಪಾನ – ನೀರು ತುಂಬುವ ಬಿಂದಿಗೆ
ಕೊಬ್ಬು – ಕಬ್ಬು
ಖಂಡುಗ – ಇಪ್ಪತ್ತು
ಖರ್ಸಿ – ದವಸ ಧಾನ್ಯಗಳನ್ನು ಸಂಗ್ರಹಿಸುವ ಸಾಧನ
ಖರೆವಾ – ನಿಜವೇ
ಗಂಗಾಜ್ಞೆ – ಗಂಗೆಯ ಆನೆ ಪ್ರಮಾಣ, ನೀರಿನ ಆಣೆ ಪ್ರಮಾಣ
ಗಡಾರ – ಹಾರೆ, ಗುಸ್ಸಿ
ಗವಾಕ್ಷಿ – ಗಾಳಿ ಬೆಳಕು ಬರುವುದಕ್ಕಾಗಿ ಮಾಡಿರುವ ಕಿಂಡಿ
ಗಾವುದ – ಐದು ಹರ್ದಾರಿ
ಗ್ವಾಡಿ – ಗೋಡೆ
ಗ್ಯಾನ – ಜ್ಞಾನ
ಗುಜ್ಲೋರು – ಬೇಡ ಬುಡಕಟ್ಟಿನ ಒಂದು ಬಳಿ
ಗುಡಿಮಿ – ಚಿಕ್ಕ
ಗುತ್ತ – ಕಂದಾಯ
ಗೋಸ – ಪಂಚೆ ಕಚ್ಚೆ
ಚಂಪೆ – ಗಲ್ಲ
ಚಿತ್ರಗಿರಿ – ರತ್ನಾಕ್ಷಿಯ ತವರುಮನೆ ಚಾವುಲ ರಾಜನ ವಾಸಸ್ಥಾನ
ಚಿಪ್ಲೋರು – ಬೇಡ ಬುಡಕಟ್ಟಿನ ಒಂದು ಬಳಿ
ಛೋಡ – ಬಿಡು
ಛೊಲ್ವಿ – ಚೆನ್ನಾಗಿ
ಜಗದಾಂಬ – ಜಗದಾಂಬೆ
ಜಗ್ಗಿ – ಹೆಚ್ಚು ಬಹಳ
ಜಪ್ನ – ಅಂಗಿ
ಜಾಜ – ಗೋಡೆಗೆ ಬಳಿಯುವ ಕೆಂಪು ಬಣ್ಣ
ಜೋತಿ – ದೀಪ
ಠೇಕು – ಠೀವಿ
ತಖ್ತ – ಸಿಂಹಾಸನಪೀಠ
ತಟ್ಕ – ಸ್ವಲ್ಪು
ತಟ್ಟಿ – ಊಟದ ತಟ್ಟೆ
ತಳವಾರ – ಗ್ರಾಮದ ಕಾವಲುಗಾ
ತಾಳನು ಹೊತ್ತಿಗೆ – ಪಂಚಾಂಗ
ತ್ವಾಟ – ತೋಟ
ತುರುಕರು – ಮುಸ್ಲಿಮರು, ಇಸ್ಲಾಮರು
ತೋಲ – ಹತ್ತು ಗ್ರಾಂ
ಥೇರು – ತೇರು
ದಡೆವು – ಭಾರ ಮಾಪನ
ದೇವೀಶ್ವರ – ದೈವ
ದೇವೇಂದ್ರ – ದೈವ
ನಕೋ – ಬೇಡ
ನರ್ತ್ – ಋತುಮತಿ
ನಾಗೀಶ್ವರ – ದೈವ
ನಾಯಕರು – ಬೇಡ ಸಮುದಾಯದ ಪರ್ಯಾಯ ನಾಮ
ನಾಶನ – ನಾಶ
ನೈಯ್ಯಾಪೈಸಾ – ಒಂದು ದುಡ್ಡು
ಪಂಚಕಲ್ಯಾಣ ಕುದುರಿ- ಐದು ಬಣ್ಣದ ಕುದುರಿ
ಪಕ್ಕೆ – ಎಲುಬು
ಪಡಗ – ಮಣ್ಣಿನ ದೊಡ್ಡ ಗಡಿಗೆ
ಪತ್ರಾಳ ಸುಳಿ – ಮುತ್ತಲ ಎಲೆಗಳಿಂದ ಮಾಡಿದ ಊಟದೆಲೆಯ ಆಕಾರದ ಸುಳಿ
ಪಟ್ಲಿ – ಕುರಿಮರಿ
ಪಲ್ಲ – ಧಾನ್ಯಗಳನ್ನು ಅಳೆಯುವ ಮಾಪನ, ನೂರು ಸೇರುಗಳ ಅಳತೆ
ಪಾಂಟಗಿ – ಪಾವಟಿಗೆ, ಮೆಟ್ಟಿಲು
ಪುಟ್ಯಾ – ಹಣ್ಣು ಸೌತೆಕಾಯಿ
ಪೊಡುಗ – ಮಣ್ಣಿನ ದೊಡ್ಡ ಪಾತ್ರೆ
ಪೌರ್ – ಶಕ್ತಿ
ಬಾಲಗ್ರಹ ಪುಸ್ತಕ – ಪಂಚಾಂಗ
ಬ್ಯಾಕಳ ಕಟಿಗಿ – ಆಲದ ಕಟ್ಟಿಗೆ
ಬ್ಯಾಟೆ – ಬೇಟೆ
ಬ್ಯಾಮುಣ್ರು – ಬ್ರಾಹ್ಮಣರು
ಬ್ಯಾಸಿಗಿ – ಬೇಸಿಗೆ ಕಾಲ
ಬಿಜ್ಲೋರು – ಬೇಡ ಸಮುದಾಯದ
ಬುಗ್ಡಿ – ದಡಿ, ದಂಡಿ
ಬುಡ್ಗಿ – ಚಡ್ಡಿ ನಿಕ್ಕರ್
ಭಾಳ – ಬಹಳ ಹೆಚ್ಚು
ಮಕಾ – ಮುಖ
ಮೀಟ್ರುವಾಯ್ – ಪ್ರೇಮ ರೋಗ
ಮೀನಲೋರು – ಬೇಡ ಸಮುದಾಯದ ಒಂದು ಬಳಿ
ಮುಂಜೂರಾದವನು – ಮುಂದಿದ್ದವನು
ಮೇನ್ – ಮುಖ್ಯ
ಮೋಡ್ಯೊರು – ಬೇಡ ಸಮುದಾಯದ ಒಂದು ಬಳಿ
ರಣಬೇನ – ರಣರಂಗದಲ್ಲಿ ವಾದಿಸುವ ವಾದ್ಯ
ರಸನ್ಹಾಡ – ಲೈಂಗಿಕ ಬೈಗಳು
ರಸ್ತಾ – ದಾರಿ
ರಾಗಳ ಕಟಿಗಿ – ಆಲದ ಮರದ ಕಟ್ಟಿಗೆ
ರಾಗಿ ಕೊಡಪಾನ – ತಾಮ್ರದ ಕೊಡ
ಲುಚ್ಚಾ – ಬೈಗಳು, ಮೋಸಗಾರನು
ವರಸು – ಹೊರಸು, ಮಂಚ
ವಾಚ್ – ಗಡಿಯಾರ
ವಾಯ್ಲೋರು – ಬೇಡ ಸಮುದಾಯದ ಒಂದು ಬಳಿ
ಶಂಬೀಸ – ಸಿಂಹಾಸನ
ಶಾರಗಲ – ಅಂಗೈಯಗಲ
ಸಟ್ಟ ಸರಿಹೊತ್ನಾಗ – ಮಧ್ಯರಾತ್ರಿ
ಸಲಾಂ – ನಮಸ್ಕಾರ
ಸಾಹೆಬ್ರು – ಮುಸ್ಲಿಮರು
ಸ್ಟ್ರ್ಯಾಂಗ – ಬಲಿಷ್ಟ
ಸುಂಕ್ಲಮ್ಮ – ದೈವ
ಸೇಮ್ – ತದ್ರೂಪ
ಸೇದ್ಹಗ್ಗ – ನೀರು ಸೇದುವ ಹಗ್ಗ
ಸೇರು – ಅಳತೆಯ ಮಾಪನ
ಹಗೆ ಭೂಗತ ಮನೆ
ಹತ್ತಿನ ದಿಂಡು – ಹತ್ತಿಯ ಹಾಸಿಗೆ, ಗಾದಿ
ಹೆಣಸು – ಹೆಂಗಸು
ಹುಶಾರ್ – ಎಚ್ಚರ, ಪ್ರಜ್ಞಾವಂತ
Leave A Comment