೧. ಅಮೀರಸಾಬ್‌ : ಓರಗಲ್ಲಿನ ಅರಸ ಗಣಪತರಾಜನ ತೋಟದ ಆಳು

೨. ಓಲಿಕರಾಮ : ಹರಿಯಾರಳದೇವಿಯ ಮನಿದಾಸಿ ಚಿನ್ನುಮಾಯಿ ತಾಯಮ್ಮನ ಮಗ

೩. ಕಂಪಿಲರಾಜ : ಹರಿಯಾಳದೇವಿ ಮತ್ತು ರತ್ನಾಕ್ಷಿಯ ಗಂಡ, ಕುಮಾರರಾಮನ ತಂದೆ, ಕಂಪ್ಲಿ ಆನೆಗೊಂದಿಯ ಅರಸ

೪. ಕುಮಾರರಾಮ : ಹರಿಯಾಳದೇವಿ ಕಂಪಿಲರಾಜನ ಮಗ, ಈ ಮಹಾಕಾವ್ಯದ ನಾಯಕ

೫. ಗಣಪತಿರಾಜ : ಓರಗಲ್ಲಿನ ಅರಸ

೬. ಗಣರಾಮ : ಓರಗಲ್ಲಿನ ರಾಜಕುಮಾರ, ಗಣಪತಿರಾಜನ ಮಗ

೭. ಗಾಳಿಮಾರೆಮ್ಮ : ಗಾಳಿಧೂಳಿ ದೇವತೆ

೮. ಗೂಡಸಾಬ್‌ : ಗಣಪತಿರಾಜನ ತೋಟದ ಆಳು

೯. ಚಾವುಲರಾಜ : ರತ್ನಾಕ್ಷಿಯ ತಂದೆ, ಚಿತ್ರಗಿರಿ ಪಟ್ಟಣದ ಅರಸ

೧೦. ಚಿಕ್ಕ ತಿರುಪತಿ : ಓರಗಲ್ಲಿನ ಒಕ್ಕಣ್ಣ ಅಂಬಿಗ ಭೋಯಿ ಯಂಕಣ್ಣನ ಮಗ

೧೧. ಚಿನ್ನುಮಾಯಿ ತಾಯೆಮ್ಮ : ಹರಿಯಾಳದೇವಿ ಮನಿದಾಸಿ

೧೨. ಜಟಿಂಗೇಶ್ವರ : ಕುಮಾರರಾಮನ ಪಟಾಲುಗಾರ

೧೩. ಟಪಾಲು ಹುಸೇನ್‌ : ಕಂಪ್ಲಿರಾಜನ ಟಪಾಲುಗಾರ

೧೪. ದಸ್ತಗಿರಿ : ಡಿಲ್ಲಿ ಹುಸೇನಿಯ ವಿದ್ಯಾಗುರು

೧೫. ದೇವಿ ತಿರುಪತಿ : ಓರಗಲ್ಲಿನ ಒಕ್ಕಣ್ಣ ಅಂಬಿಗ ಭೋಯಿ ಯಂಕಣ್ಣನ ಮಗ

೧೬. ನಾಗ ತಿರುಪತಿ : ಓರಗಲ್ಲಿನ ಒಕ್ಕಣ್ಣ ಅಂಬಿಗ ಭೋಯಿ ಯಂಕಣ್ಣನ ಮಗ

೧೭. ಪಾಟೇಲಸಾಬ್‌ : ಓರಗಲ್ಲಿನ ಅರಸ ಗಣಪತಿರಾಜನ ತೋಟದ ಆಳು

೧೮. ‍ಪೀರ್‌ಸಾಬ್‌ : ಓರಗಲ್ಲಿನ ಅರಸ ಗಣಪತಿರಾಜನ ತೋಟದ ಆಳು

೧೯. ಫಕೀರಸಾಬ್‌ : ಓರಗಲ್ಲಿನ ಅರಸ ಗಣಪತಿರಾಜನ ತೋಟದ ಆಳು

೨೦. ಬಚ್ಚಣ್ಣ : ಹರಿಯಾಳದೇವಿಯ ತಮ್ಮ, ಕುಮಾರರಾಮನ ಸೋದರಮಾವ, ಕಂಪ್ಲಿರಾಜನ ಭಾವ ಮತ್ತು ಮಹಾಮಂತ್ರಿ

೨೧. ಬ್ಯಾಗರ ಸುಂಕ : ಓರಗಲ್ಲಿನ ಎರಡು ರೆಕ್ಕೆ ನಾಕು ಪಾದದ ದೇವತಾ

೨೨. ಭದ್ರ ತಿರುಪತಿ : ಓರಗಲ್ಲಿನ ಒಕ್ಕಣ್ಣ ಅಂಬಿಗ ಭೋಯಿ ಯಂಕಣ್ಣನ ಮಗ

೨೩. ಭೋಯಿ ಯಂಕಣ್ಣ : ಓರಗಲ್ಲಿನ ಒಕ್ಕಣ್ಣ ಅಂಬಿಗ

೨೪. ಮದರಸಾಬ್‌ : ಓರಗಲ್ಲಿನ ಅರಸ ಗಣಪತಿರಾಜನ ತೋಟದ ಆಳು

೨೫. ಮಹಬೂಬಸಾಬ್‌ : ಡಿಲ್ಲಿ ಬಾದಶಾಹ (ನವಾಬುದಾರ) ಹುಸೇನಿಯ ತಂದೆ

೨೬. ಮಾಣಿಕ್ಯಮ್ಮ : ರತ್ನಾಕ್ಷಿಯ ಇನ್ನೊಂದು ಹೆಸರು

೨೭. ಮುನಿತಿರುಪತಿ : ಓರಗಲ್ಲಿನ ಒಕ್ಕಣ್ಣ ಅಂಬಿಗ ಭೋಯಿ ಯಂಕಣ್ಣನ ಮಗ

೨೮. ರತ್ನಾಕ್ಷಿ : ಚಿತ್ರಗಿರಿ ಪಟ್ಣದ ಚಾವುಲರಾಜನ ಮಗಳು, ಕಂಪ್ಲಿರಾಜನ ಹೆಂಡತಿ

೨೯. ರುದ್ರ ತಿರುಪತಿ : ಓರಗಲ್ಲಿನ ಒಕ್ಕಣ್ಣ ಅಂಬಿಗ ಭೋಯಿ ಯಂಕಣ್ಣನ ಮಗ

೩೦. ಲಾಲಿಸಾಬ್‌ : ದಿಲ್ಲಿಯ ನವಾಬ

೩೧. ಹಂಪಯ್ಯ : ಬಚ್ಚಣ್ಣನ ಇನ್ನೊಂದು ಹೆಸರು

೩೨. ಹಂಪಕ್ಕ : ಬಚ್ಚಣ್ಣನ ಹೆಂಡತಿ, ಕುಮಾರರಾಮನ ಸೋದರತ್ತಿ

೩೩. ಹರಿಯಾಳದೇವಿ : ಕಂಪಿಲ ರಾಜನ ಪಟ್ಟದ ರಾಣಿ, ಕುಮಾರರಾಮನ ತಾಯಿ

೩೪. ಹಿರೇತಿರುಪತಿ : ಓರಗಲ್ಲಿನ ಒಕ್ಕಣ್ಣ ಅಂಬಿಗ ಭೋಯಿ ಯಂಕಣ್ಣನ ಮಗ

೩೫. ಹುಸೇನಿ : ರತ್ನಾಕ್ಷಿಯ ಪುನರವತಾರದ ಹೆಸರು, ದಿಲ್ಲಿ ನವಾಬದಾರ ಮಹಬೂಬಸಾಬನ ಮಗಳು

೩೬. ಹುಸೇನಸಾಬ್‌ : ಓರಗಲ್ಲಿನ ಅರಸ ಗಣಪತಿರಾಜನ ತೋಟದ ಆಳು