ಅಂಬಿಗರು – ಮೀನು ಹಿಡಿಯುವ ಸಮುದಾಯದವರು

ಅಂಬ್ರೆಕಾಳು – ಅವರೆಕಾಯಿ, ಅವರೆಕಾಳು

ಅಗಸರು – ಬಟ್ಟೆ ಸ್ವಚ್ಛಗೊಳಿಸುವ ಸಮುದಾಯ

ಅಚ್ಚೇರು – ಅರ್ಧಸೇರು

ಅಡವಿ ಚೆಂಚರು – ಚೆಂಚು ಬುಡಕಟ್ಟಿನವರು

ಅತ್ರಾಣಿ ಬತ್ರಾಣಿ – ಸುಗಂಧದ ಎಣ್ಣೆ

ಅಬದ್ಧ – ಸುಳ್ಳೂ, ಕ್ರಮವಲ್ಲದ

ಅರಚು – ಚೀರು

ಅರ್ಪಾವು – ಅರ್ಧಪಾವು

ಆರಂಡಿ – ಅರಣ್ಯ ಅಡವಿ

ಆಚಂಪೆ – ಆಗಲ್ಲ

ಆಪ್ಲಗುಡಿಸಲು – ಚಪ್ಪರ ಗುಡಿಸಲು ಆಪ್ಲ ಹುಲ್ಲಿನಿಂದ ನಿರ್ಮಿಸಿದ್ದು

ಆರಕಟ್ಟುಗರು – ಪ್ರಾಣಿಗಳನ್ನು ಕೊಲ್ಲುವ ಸಮುದಾಯದವರು

ಆರುಎತ್ತುಗಳು – ವ್ಯವಸಾಯಕ್ಕೆ ಬಳಸುವ ಎತ್ತುಗಳು

ಆಸರ – ದೃಷ್ಟಿ

ಇಲಚಿ – ಇಲಿ

ಇಲಾಸ – ವಿಳಾಸ

ಇಷಾ – ವಿಷಾ

ಈ ಚಂಪೆ – ಈಗಲ್ಲ

ಈಡಲ್ಲಾ – ಜೋಡಲ್ಲಾ

ಉದ್ಮಾನ – ಗೊಲ್ರ ಹಟ್ಟಿ, ಓಣಿ, ಊರಹೊರಗೆ, ಊರಲ್ಲ

ಉದ್ರಿಗಿರಿಪಟ್ಲ – ರುದ್ರಗಿರಿ ಪಟ್ಣ

ಉಪಾಸ – ಉಪವಾಸ

ಉಪ್ಪಾರ – ಗೋಡೆ ಕಟ್ಟುವವರು

ಉರಪಟ – ಬೆಂಕಿ ಬೀಳುವುದು

ಉರ್ಲುಗಡ್ಡೆ – ಆಲುಗಡ್ಡೆ

ಉಳ್ಳುಗ – ಹುಳಿ

ಊದುನಗೋಲು – ಕೊಳಲು

ಎಡೆ – ನೈವಿದ್ಯ

ಎಪೆ – ಎಲೋ

ಎರ್ರಿತಾತ – ಮುದಿಯಾತ, ತಾತ

ಏಷಾ – ವೇಷಾ

ಐಲು – ಹುಚ್ಚು

ಒಡ್ರು – ಕಲ್ಲು ವಡೆಯುವವರು

ಒತ್ತಿಬಾಣ – ಒತ್ತಿದ್ರೆ ಬಾಣ ಪ್ರಯೋಗವಾಗುವುದು

ಒಪ್ಪಿಗಲ್ಲಾಗಿ – ಒಪ್ಪಿಗೆಯಾಗಿ, ಮೆಚ್ಚಿ

ಓನಾಮ – ಓಂ ನಮಃ ಶಿವಾಯ, ಶಿಕ್ಷಣದ ಮೊದಲ ಮಂತ್ರ

ಕಡ್ಡಿಬಾಕ್ಲ – ಕಬ್ಬಿಣದಿಂದ ತಯಾರಿಸಿದ ಬಾಕ್ಲ

ಕದೆಬಿಳು – ಗೋಣು ಹಿಡ್ಕಳದ್ದು

ಕತ್ತಿಮಹಲು – ಖಡ್ಗಗಳಿಂದ ತಯಾರಿಸಿದ ಮಹಲು

ಕನ್ನಡಿಮನಿ – ಕನ್ನಡಿಯಿಂದ ನಿರ್ಮಿಸಿದ ಮನಿ

ಕಪ್ಲಿಬಾಯಿ – ಮೊಟ್ಟೆ ಹೊಡೆಯುವ ಬಾಯಿ

ಕಳಸೇರ – ಕ್ಷೌರಿಕರು

ಕರಕಂಚಿ – ಬೆಳಂಕಿ, ನೀರು ಕೋಳಿಯಂತದ್ದು

ಕಾಮದೇವತಿ – ದೇವಲೋಕದ ಕಾಮಧೇನು

ಕಾಲ್ಮರಿ – ಚಪ್ಪಲಿ, ಪಾದರಕ್ಷೆ

ಕಾಸ್ಯಾಕಿ – ಕಚ್ಚೆಹಾಕಿ

ಕಿರಿಕಿ ಕಾಲ್ಮರಿ – ಕಿರ್ಕ್ ಎಂದು ಸಪ್ಪಳ್ ಮಾಡುವ ಠೇಕಿನ ಪಾದರಕ್ಷೆ

ಕುಂದಲ – ಮೊಲ

ಕುವಾಡಾಡ್ತಿರ್ಯಾ – ನಾಟಕೀಯವಾಗಿ ಹೇಳುವುದು, ಸಲಿಗೆಯಿಂದ ಹೇಳುವುದು

ಕೆಬ್ಬಿಣ ಚೇಳು – ಕಪ್ಪು ಚೇಳು

ಕರ್ಸೆ – ಕಾಳು ಸಂಗ್ರಹಿಸುವ ಸಾಧನ

ಕೊಂಪೆ – ಊರು

ಕೊಡಬು – ಕಡಬು, ತಿನ್ನುವ ಪದಾರ್ಥ

ಖಂಡುಗ – ಇಪ್ಪತ್ತು

ಖನಾ ಅಡ್ಡಾಲಿ – ಖಳಾ, ರಾಶಿಮಾಡುವ ಖಳದಗಲ

ಖೂನ – ಪರಿಚಯ

ಗಂಗಾದೇವತಿ – ನೀರಿನ ದೈವ

ಗಡಾರೆ – ಹಾರೆ

ಗಡಿಮಾನ – ಗುಳಿ, ಬಾಗಿಲ, ಹಿಂದಿರುವ ಬಾಗಿಲ ಮುಚ್ಚುವ ಬಲವಾದ ಕಟ್ಟಿಗೆ

ಗಾಜಿನ ಬುಡ್ಡಿ – ಗಾಜಿನ ಸೀಸ, ಬಾಟಲಿ

ಗುಂಡಾಳು – ಅಡಿಗೆ ಮಾಡುವ ಪಾತ್ರೆ

ಗೆಗ್ಗರಿ – ಲಂಬಾಣಿ ಹೆಣ್ಮಕಳು ಉಡುವ ಲಂಗ

ಚಂದಪ್ಪನ ಕುಂಕುಮ – ಚಂದ್ರನಂತೆ ದುಂಡಾಗಿ ಕುಂಕುಮ ಧರಿಸುವುದು

ಚಂಪೆ – ಗಲ್ಲ

ಚಾರಕ್ಕಿ – ಒಂದು ಮುಷ್ಠಿಯಷ್ಟು ಅಕ್ಕಿ

ಛಟ್ನ – ಶ್ರೀಘ್ರ

ಜಲ್ಲಿಪುಟ್ಟಿ – ಬಿದಿರಿನ ಬುಟ್ಟಿ

ಜಾಮ್‌ – ಗ್ಲಾಸ್, ಕಪ್ಪು, ಚಿಕ್ಕ ಲೋಟ

ಜ್ವಾಳ – ಜೋಳ

ಜೀವನ – ಜೀವದ ಗಂಡ

ಡಂಗ್ರ – ಡಂಗುರ

ಡಿರಸು – ಡ್ರೆಸ್ಸು, ಉಡುಪು

ತಂಟೆ ಗೊಲ್ರು – ಜಗಳಗಂಟಿಗೊಲ್ರು

ತಖ್ತ – ಪೀಠ ಆಸನ

ತಿರುವಣ – ಪರಸ್ಪರ ಪಡೆಯುವುದು

ತಾಬೇಲು – ಆಮೆ

ತೆತ್ತೆ – ತತ್ತಿ, ಮೊಟ್ಟೆ

ತೊಗೆ – ಉಣ್ಣುವ ಗಟ್ಟಿಬೇಳೆ

ತೋಲ – ಹತ್ತು ಗ್ರಾಂ

ತೌಡು – ಹೊಟ್ಟು

ದಾದಿ ಮಾವಳಹಣ್ಣು – ಮಾವಿನ ಹಣ್ಣಿನ ಜಾತಿಯಲೊಂದು ಹಣ್ಣು

ದ್ವಾತ್ರಾ – ಧೋತ್ರ, ತೊಡುವ ವಸ್ತ್ರ

ದಿವ್ಸ – ತಿಥಿ

ಬಟ್ಟೆದಿಂಡುಗಳು – ಬಟ್ಟೆಯ ಗಂಟುಗಳು

ದೇವಿಶ್ವರ – ದೈವ

ದೊಡ್ಡ ಮಾವಳಿ – ದೊಡ್ಡ ಮಾವಿನಕಾಯಿ

ನಾಗಿಶ್ವರ – ದೈವ

ನಾಯಕರು – ಬೇಡ ಸಮುದಾಯದ ಪರ್ಯಾಮ ನಾಮ, ಸಮುದಾಯದ ಮುಖಂಡ

ನಾರು ಹುಣ್ಣು – ಹುಣ್ಣುಗಳಲ್ಲೊಂದು

ನಾರ್ಯೆಳ್ಳ – ಚಿಕ್ಕ ಹಳ್ಳ

ನಿವ್ವಾಳಿ – ಸಲಿಗೆ ಹೂವಿಂದ ಅಂಲಕೃತಗೊಂಡ ಶವದ ಆಸನ

ನಿಶದಮ್ಯಾಲೆ – ಮತ್ತಿನಲ್ಲಿ

ನೆರ್ತ್‌ – ಋತುಮತಿ

ನೆವಿಲು – ನವಿಲು

ಪಡಗ – ಮಣ್ಣಿನ ಗಡಿಗೆ

ಪರಮಾತ್ಮ – ದೈವ

ಪಲ್ಲ – ಚೀಲ

ಪಾಂಟಗೆ – ಪಾವಟಿಗೆ

ಪಿಂಜಾರ – ಗೋಡೆ ಕಟ್ಟುವ ಸಮುದಾಯ

ಪುಗುಸಟ್ಟೆ – ಪುಕ್ಕಟೆ

ಪೊಡಗ – ಮಣ್ಣಿನ ಪಾತ್ರೆ

ಬಂಗಳ ದುಃಖ – ನಟನೆಯ ದುಃಖ

ಬಕ್ಕಣದಾಗ – ಜೇಬಿನಾಗ

ಬಗಡಿಮಾಲ – ಹಳ್ಳದ ದಡ್ಡಿಮ್ಯಾಲ, ಗಡ್ಡಿಮ್ಯಾಲೆ

ಬಡಿಮಟ್ಟಿ – ಬಣವೆ

ಬರಂಗಿ – ಕುಣಿ, ಸುರಂಗ

ಬಸುವೇಶ್ವರ – ಕಾಮದೇವತಿಯ ಮಗ, ಕಾಮಧೇನುವಿನ ಕರು

ಬಾಯಿಸತ್ತಾಕಿ – ಮೆದು ಮಾತಾಡುವಳು, ಶಾಂತ ಸ್ವಭಾವದವಳು

ಬ್ಯಾಗಾರ – ಕುಣಿ ತೊಡುವ ಸಮುದಾಯ

ಬ್ಯಾಸಾಯ – ಬೇಸಾಯ, ಒಕ್ಕಲುತನ

ಬಿದರೆರು – ಮೇದರು

ಬುಡಿಗಿ – ಪ್ಯಾಂಟ

ಬೋಳು – ಕೂದಲಿಲ್ಲದ

ಬೆಳ್ಳಿಮಟ – ಬೆಳ್ಳಿ ಧಾತುವಿನಿಂದ ತಯಾರಿಸಲ್ಪಟ್ಟ ಮಟ

ಭೂಯಾರ – ಗವಿ, ನೆಲದಲ್ಲಿ ಗುಪ್ತ ಮಾರ್ಗ

ಮಲ್ಲುವ್ವ – ಮಲ್ಲಿಗೆ ಹೂ

ಮಾವಳಿಗಿಡ – ಮಾವಿನ ಗಿಡ

ಮಂಜೂರಾದ – ಮುಂದಾದ

ಮುಕ್ಕಟ್‌ – ಮುಂದೆ ಆರಂಭದ್ದು ಪ್ರಥಮದ್ದು

ಮುಗುಳಿ – ಕುಂಡಿ, ಗುದ

ಮುನಿಶ್ವರ – ದೈವ

ಮೂರು ಅಂಕಣದ ಮನಿ – ಮೂರು ದಾರಿ ಎರ್ಡು ಕಂಬ ಹೊಂದಿರುವ ಮನಿ

ಮೈಂಡು – ತಲೆ, ಬುದ್ಧಿ

ಯಮನ ಗುಂಡ – ಯಮಲೋಕ

ರವ್‌ದಿ – ಹೊಟ್ಟು, ಸಿಪ್ಪೆ, ತೆಳ್ಳಗ

ರಾಗಿಮಟ – ತಾಮ್ರ ಲೋಹದಿಂದ ನಿರ್ಮಿತಗೊಂಡ ಮಟ

ರಾಗಿದುಡ್ಡು – ತಾಮ್ರದ ದುಡ್ಡು, ಹಣ

ರಾಗಿನಾಮ – ಹಿತ್ತಾಳಿ ನಾಮ

ರ್ವಾಗ – ರೋಗ

ರೋಟ – ಸ್ವಲ್ಪ

ಲಂಬಡಿಕೇರು – ಲಂಬಾಣಿಗಳು

ಲಾಸ್ಟು – ಕೊನೆಯ

ಲೈನ್ – ಸಾಲು

ವನಂತ್ರ – ವನ

ವರಸು – ಹೊರಸು

ವರ್ತಿ – ಹಳ್ಳದಲ್ಲಿ ಕೈಯಿಂದ ತೋಡಿದ ನೀರಿನ ಗುಂಡ

ವಾರಿಬಡ್ಡಿ – ಚಕ್ರಬಡ್ಡಿ

ವಿಷ್ಣು – ದೈವ

ಸಬ್ಬು – ಸಾಬೂನು

ಸವಕೋಳಿ – ಸರಿರಾತ್ರಿಯಲ್ಲಿ ಕೂಗುವ ಕೋಳಿ

ಸಾಂಬಶಿವ – ದೈವ, ಶಿವ

ಸ್ವಾಟಿ – ಗಲ್ಲ

ಸೀಟಿಕ್ಕಿದ್ರೆ – ಚೂಟಿದ್ರೆ

ಸುಟ್ಟು ಸುರಮಂಡಲ – ಸುಟ್ಟು ಭಸ್ಮ ಮಾಡುವುದು

ಸೂಸುಗ – ದಂಡೆಹೂಗಳು

ಸೆದೆ – ಕಸಕಡ್ಡಿ

ಸೆರ್ಕೆ – ಬಾವಿಯಲ್ಲಿ ಹಿಡಿದುಕೊಳ್ಳಲು ಸಿಕ್ಕ ಸಂದಿಕಲ್ಲು

ಹರಿ – ರಂಜಣಗಿ, ನೀರು, ತುಂಬುವ ಮಣ್ಣಿನ ಪಾತ್ರೆ

ಹಾಲದ ಕಡಗ – ಮುಂಗೈಯಲ್ಲಿ ಬಲಗೈಯಲ್ಲಿ ತೊಡುವ ಬೆಳ್ಳಿಯ ಅಥವಾ ಹಿತ್ತಾಳೆಯ ಆಭರಣ

ಹಾಳಗದ್ದಿ – ಹದ್ದು (ರಣ ಹದ್ದು)

ಹಿತ್ತಾಳಿ ಮಟ – ಹಿತ್ತಾಳಿ ಧಾತುವಿನಿಂದ ತಯಾರಿಸಿದ ಮಟ