ಈ ರಾಮನೆನ್ನುವ್ರು ಓಲಿಕರಾಮ
ಒಟ್ಟಿಗ್ಹುಟ್ಟಿದವ್ನು ಹಣ್ಣಿಗೆ ಬೆಳೆದ ರಾಮಯ್ಯ
ಸ್ವಾದರಮಾನ ಬಚ್ಛಣ್ಣ
ದ್ವಾದರತ್ತಿ ಹಂಪಕ್ಕ
ಹಂಪಿ ಪಟ್ಣದಾಗ
ಅವ್ರಿಗೆ ಮಕ್ಕಳ್ ಆಗಿಲ್ಲ
ಯಪ್ಪಾ ಇವ್ರೇ ಮಕ್ಳಂತ
ಅಕ್ಕ ಹರಿಯಾಳದೇವಿ
ಏನಪ್ಪಾ ತಮ್ಮಾ
ಈಗ ಬಚ್ಚಣ್ಣ
ಓಹೋ
ಈ ಅಳಿಯರವ್ನ ಕರ್ಕೊಂಡ್ಹೋಗಿ
ವಿದ್ಯೆಕಲಿಸೊ ಗುರುವಿನ ಮೇಷ್ಟ್ರುತಲ್ಲಿ
ನಾನು ಸೇರ್ಸಿತೀನಮ್ಮ
ಓಹೋ ಕರ್ಕೊಂಡ್ಹೋಗಪ್ಪಾ
ಈ ಸ್ವಾದರಮಾವ ಬಚ್ಚಣ್ಣ
ತೆಲಿಗೊಂದು ಕೈ ಹಿಡ್ಕೊಂಡು
ಈ ಮಕ್ಕಳ್ಗಿ ಮುದ್ದು ಕೊಟ್ಟು

ಯಮ್ಮಾ ಬಜಾರದಾಗ ಕರಕೊಂಡು ಬರ್ತಾನಮ್ಮs
ಮಗ ತಲೀಬಗ್ಗಿಸಿ ಮಗ ನಡೀತಾನಮ್ಮಾs
ಕಂಪ್ಲಿ ಪಟ್ಣದಾಗ ರಾಮಯ್ಯ ಬಜಾರದಾಗ
ರಾಮ ಇನ್ನೂ ಕರಕಂಡು ನನ್ನ ರಾಮದೇವಾ
ಅಪ್ಪಾ ರಾಮದೇವಾ ರಾಮಯ್ಯ ||ತಂದಾನ||

ಆ ರಾಮನ ಕರಕೊಂಡು
ವಿದ್ಯೆ ಕಲಿಸೋ ಗುರುವಿನತಲ್ಲಿ ಬಂದ
ವಿದ್ಯೆ ಕಲಿಸೋ ಗುರುವ್ಗಿ ಶರಣ್ರೀ
ಓಹೋ ಯಾರಪ್ಪ ನೀವು?
ಹಿರಿ ಕಂಪ್ಲಿರಾಜನ ಮಕ್ಕಳು
ಒಂದೇ ಬಾಳೆಹಣ್ಣಾಗ ಇಬ್ರು ಹುಟ್ಟ್ಯಾರ
ಒಟ್ಟಿಗೆ ಹುಟ್ಟಿದ ಓಲಿಕ್ಕ
ಹಣ್ಣಿಗೆ ಬೆಳೆದ ರಾಮಯ್ಯ
ಓಹೋ ರಾಮದೇವ
ನಿನ್ನ ಪಾದಕ್ಕೆ ಶರಣ್ರೀ
ಆಗ ಕೂಡ್ರಿ ಅಂತ
ಅವುರ್ನ ಕುಂದ್ರಿಸಿದ
ನಾಲ್ಕು ಬುಟ್ಟಿ ಆಗ ಮಣ್ಣು ತಂದ್ಹಾಕಿ
ಈಗ ಪೂಜೆ ಮಾಡಿ ಕೈ ಮುಗಿದು

ಬಲಗೈ ಬೋಳಿಟ್ಟಾ ಇನ್ನೂ ಮಗ ಬರಿತಾನ
s ಸರಸ್ವತಿ ಬರುದಾನಾ ಓ ನಾಮ ಬರುದಾನಾ
ಕಾಗುಣಿತಾ ಬರುದಾನಾ
ತೋಥಡಿ ಬೊಳ್ಳು ತೋರ್ಸಿದರ ಮಗನಮ್ಮ
ಬೊಳ್ಳು ನುಂಗಿ ಬಿಡುತಾನ
ಕಣ್ಣು ಬಿಟ್ರೆ ಮಗನಮ್ಮ ಕಂಠಪಾಠ ತೆಗಿತಾನ ಮಗ || ತಂದಾನ ||

ಕಣ್ಣು ತೆಗಿದ್ರೆ ಕಂಠಪಾಠ ತೆಗಿತಾನ
ಬೊಳ್ಳು ತೋರ್ಸಿದ್ರೆ ಬೊಳ್ನುಂಗ್ತಾನ
ಆಗ ಇಬ್ರು ಅಣ್ಣತಂಬ್ರು ಕುಂತ್ಗಂಡು
ಅಗಿನ್ನವ್ರು ಐದು ಗಂಟೇತನಕ ಓದಿಕೊಂಡು
ಮತ್ತೇ ಸ್ವಾದರುಮಾವ ಕರ್ಕೊಣ ಬಂದ್ರು
ಅಮ್ಮಾ ಹರಿಯಾಳದೇವಿ
ಆಗ ಕರ್ಕೊಂಡು ಬಂದೀನಂತ
ಜೀವನಕ್ಕೇನು ಮಾಡಿಬಿಟ್ಟಿ
ಈಗಿನ್ನವ್ರು ತಾವು ಮಕ್ಕಳು ಸ್ನಾನ ಮಾಡಿಕ್ಕಂಡು
ಗಂಧದ ಹೊರಿಸಿನ ಮ್ಯಾಲೆ
ಹತ್ತಿನ ದಿಂಡು ಮ್ಯಾಲೆ

ಮಕ್ಕಾಳಾಗಿ ನೋಡಣ್ಣ ಇಬ್ಬುರಾಗಿ ಮಲಗ್ಯಾರೋ
ಒಂದು ವರ್ಸು ಸಲಿವ್ಯಾರ ಎರ್ಡು ವರ್ಸ ಸಲಿವ್ಯಾರ
s ಮೂರು ವರ್ಸ ಆಯಿತೊ ಮತ್ತ ನಾಲ್ಕು ವರ್ಸ ಆಯಿತೋ
ಹದ್ನೇಳವರ್ಸಾಯಿತೋ ಹದ್ನೆಂಟುವರ್ಸ ಆಯ್ತು || ತಂದಾನ ||

ಹದ್ನೆಂಟು ಮರ್ಸಾಯ್ತು ಹದ್ನೆಂಟು ವರ್ಸಾಗಿದ ಮ್ಯಾಲೆ
ಮಕ್ಳಿಗೆ ಇನ್ನವ್ರ ಮೇಷ್ಟ್ರು ಈ ಗುರುವು ಏನಂತ ಹೇಳ್ದ
ಯಪ್ಪಾ ಈ ಮಕ್ಳ ಬಲ ಎಷ್ಟೈತೋ
ಈ ಮಕ್ಳ ಶಕ್ತಿ ಎಷ್ಟೈತೋ
ಈ ಮಕ್ಕಳಾಗಿನ್ನ ನೋಡಣ್ಣ ಆನೆಗೊಂದಿಯಾಗ್ಹಟ್ಟಿದವ್ರನ್ನಾ || ತಂದಾನ ||

ಈ ಕಂಪ್ಲಿ ಪಟ್ಣದಾಗ ಹುಟ್ಟಿದವ್ರು ನೋಡಬೇಕಂತ
ಇಪ್ಪತ್ತಾರು ದಡೆವು ಕಬ್ಬಿಣ ಗುಂಡು ತಂದು ಹಾಕಿದ್ರು
ಏನಪಾ ಈಗ ಒಟ್ಟಿಗೆ ಹುಟ್ಟಿದವ್ನು ಬಲ ಇದ್ದಾನೊ
ಹಣ್ಣಿಗೆ ಹುಟ್ಟಿದವ್ನು ಬಲ ಇದ್ದಾನೋ ನೋಡಬೇಕು
ಅಂದ್ರೆ ಅಷ್ಠಾಗಲೆಂತ
ಆ ರಾಮ ಏನ್ಮಾಡ್ದ
ಎಲೈದಿ ಸ್ವಾಮಿ ಜಟಿಂಗೇಶ್ವರ
ನಿನ್ನ ಪಾದಕ್ಕೆ ಶರಣಂತ

ಆಹಾ ನೋಡಣ್ಣಾ
ಮುಂದು ಮೂರು ಗೇಣಾದ
ಹಿಂದಕ್ಕೇಳ ಗೇಣಾದ
ಲಾಗ್ದಮ್ಯಾಲೆ ಲಾಘ ಹೊಡೆದಾ
ಕೈಯೊಂದು ಮುಗುದಾನ
ಗುಂಡುವಾಗಿ ನೋಡಣ್ಣ ಎಡ್ಡ್ ಕೈಯಿಲಾಗಿ ಹಿಡುದಾನ
s ಗೇಣು ಅಷ್ಟು ಎತ್ತ್ಯಾನ ಭೂಮಿ ಮ್ಯಾಲೆ ಗುಂಡಮ್ಮ || ತಂದಾನ ||

ತೊಪ್ಪಂತ ಕುಪ್ಪಳ್ಸಿ ಕೆಳಗ್ಹಾಕಿದ
ಓಹೋs ಗೇಣಷ್ಟು ಎತ್ತಿ
ಇಪ್ಪತ್ತಾರದಡೆವ ಕೆಬ್ಬಿಣ ಗುಂಡು ಎತ್ತಿ ಹಾಕಿದ
ಒಹೋ ಅಪ್ಪಾ ಅಣ್ಣ ಇನ್ನವ್ರ ಇಪ್ಪತ್ತಾರದಡೆವು
ಕೆಬ್ಬಿಣದ ಗುಂಡು ಒಂದು ಗೇಣು ಎತ್ತ್ಯಾನ
ನಿನೇಷ್ಟೆತ್ತುತ್ತೀಯೋ
ಒಟ್ಟಿಗ್ಹುಟ್ಟಿದವ್ನು ನೋಡಪ್ಪ

ಆಹಾ ನೋಡಣ್ಣಾ
ಎರ್ಡ ಕೈಲಿ ಎತ್ತಿಯೋ
ದೊಡ್ಡವ್ನೆ
ನೀನಣ್ಣ
ಒಟ್ಗಿತೊಗಲಿಗ್ಹುಟ್ಟಿದ್ದವ್ನೋs
ನಾನುವಾಗಿ ಹಿಡಿತೀನೀ
ಎಡಗೈಲಿ ನೋಡಮ್ಮ ಒಂದು ಕೈಲಿ ಎತ್ತಿ ಬಿಟ್ಟಾನ ||ತಂದಾನ||

02_80_KMKM-KUH

ಆಹಾಹಾ
ಇದ್ಯೆ ಕಲಿಸಿದ ಗುರು ಮೇಷ್ಟರು ನೋಡಿ
ಏ ಒಟ್ಟಿಗ್ಹುಟ್ಟಿದವನು ಎಷ್ಟು ಬಿಗಿ
ಎಷ್ಟು ಬಲ ಐದಿಯಪ್ಪಾ
ಹಣ್ಣಿಗ್ಹುಟ್ಟಿದವ್ನು ಎಷ್ಟಿನ್ನು ಮೆದುವು ಇದ್ದಾನಪ್ಪ
ಎಷ್ಟು ನಿಧಾನದ ಮನುಷ್ಯನು
ಓಹೋ
ಆಗ ಅಣ್ಣಗಿನ್ನೆ
ತಮ್ಮ ಒಂದು ಪಾವಲಿ ತೂಕ ಹೆಚ್ಚು ಐದಾನ ಬಲ
ಏನಪ್ಪಾ ಅಂತ
ಆ ಮಕ್ಕಳಿನ್ನ ಸಾಕಪ್ಪ ಅಂತ
ಈಗ ಸ್ವಾದರ ಮಾವ ಬಚ್ಚಣ್ಣ ಕರ್ಕೊಂಡು ಬರ್ವಾಗ
ಈಗಿನವ್ರು ಹನ್ನೆರಡು ಮಂದಿ ಹುಡುಗರು

ಏನಂತ ಆಡವರೋ ಗೋಲಿ ಆಟವಾಡವರೆ
ತಾಯಿ ಬಂದು ಮನಿಗೆಮ್ಮ ಗೋಲಿಯಾಟ ನೋಡವ್ರೆ
ನೋಡಿಕ್ಯಂತ ಬರ್ತಾರ ||ತಂದಾನ||

ನೋಡಿಕ್ಯಂತ ಬಂದು
ಆಗ ತಾಯಿ ಇನ್ನವ್ರ ನೀರ್ಕೋಟ್ರೆ
ಕಾಲು ಮುಖ ತೊಳ್ಕಂಡು
ಹಾಲ್ಸಕ್ರೆಯನ್ನ ಊಟ ಮಾಡಿದ್ರು
ಊಟ ಮಾಡಿದ ಮ್ಯಾಲೆ
ಈಗ ಮಕ್ಳು ಇನ್ನ ರೂಮಿನಾಗ ನಿದ್ದಿ ಮಾಡಿದ್ರು