೧. ಎದಿನಗಂಧಿ : ಎದಿನಗಂಧಿ ಪಟ್ಣದ ಬಕಾಸುರನ ತಂಗಿ, ಮೈರಾಮನ ಮಗಳು, ಶರಬಂಧರಾಜನ ಹೆಂಡತಿ.
೨. ಐನೋರ ಈರಮ್ಮ : ಇಲಾಮಂತ್ರ ಪಟ್ಣದ ಐನೋರ ಸಮುದಾಯದ ಮಹಿಳೆ
೩. ಐನೋರ ಮಡಪ : ಚಾಂಪುರ ಪಟ್ಣದ ಮಠಪತಿಯ ಮಗ
೪. ಕಮಲಮ್ಮ : ಭೂಪತಿಪಟ್ಣದ ರೈತನ ಮಗಳು
೫. ಕಾಂಭೋಜರಾಜನ : ಚಾಂಪುರ ಪಟ್ಣದ ಅರಸ, ಚಾಮರಾಜ ನೀಲವೇಣಿದೇವಿಯರ ಮಗ
೬. ಕಾಂಭೋಜರಾಜನ ಹೆಂಡರು: ಗಿರಿದೇವಿ, ಮಾಣಿಕ್ಯದೇವಿ, ಸುಂಕಮ್ಮ ದೇವಿ, ಮಾಡಲ್ ದೇವಿ, ರತ್ನಾಲದೇವಿ, ಮಂಕನದೇವಿ ಮತ್ತು ಚಿಕ್ಕಾಕಿ ಸಿರಿದೇವಿ ಎಲ್ಲರೂ ಚಿತ್ರಗಿರಿ ಪಟ್ಣದ ಗೊಲ್ರ ಚಿತ್ತಪ್ಪನ ಮಕ್ಕಳು.
೭. ಕಾಂಭೋಜರಾಜನ ಮಕ್ಕಳು: ನಾಗಚತ್ತರಿ, ದೇವಚತ್ತರಿ, ಮುನಿಚತ್ತರಿ, ಯೋಗಚತ್ತರಿ, ಭೋಗಚತ್ತಿರಿ, ಚಿಕ್ಕಚೆತ್ತಿರಿ.
೮. ಕಾಳ : ಇಲಾಮಂತ್ರ ಪಟ್ಣದ ಕಂಬಾರ ಸಮುದಾಯದ ಕುಶಲಕರ್ಮಿ
೯. ಗಂಗಮ್ಮ : ಶರಬಂಧರಾಜನ ಅತ್ತೆ, ನೀಲಮ್ಮನ ಮಗಳು
೧೦. ಗೊಲ್ರಚಿತ್ತಪ್ಪ : ಚಿತ್ರಗಿರಿ ಪಟ್ಣದ ಅರಸ, ಕಾಂಭೋಜರಾಜನ ಮಾವ
೧೧. ಚಾಮರಾಜ : ಚಾವುಲರಾಜ ಪಟ್ಣದ ಕೃಷ್ಣಗೊಲ್ಲರ ಅರಸ, ಕಾಂಭೋಜರಾಜನ ತಂದೆ
೧೨. ಚಾವುಲರಾಜ : ಚಾವುಲರಾಜ ಪಟ್ಟಣದ ಅರಸ, ಶಾಮಗಂಧಿಯ ತಂದೆ
೧೩. ಚಾವುಲರಾಜ ಪಟ್ಟಣದ ಅಂಬಿಗರು : ಟಂಕಬೈಯಿನಾ, ನರಸಬೈಯಿನಾ, ಕಮಲಬೈಯಿನಾ, ಚಿಕ್ಕತಿರುಪತಿ, ದೊಡ್ಡ ತಿರುಪತಿ, ರಾಗತಿರುಪತಿ ದೇವಿತಿರುಪತಿ
೧೪. ಚಿತ್ರಾಂಗಿ : ಚಿತ್ರಗಿರಿ ಪಟ್ಣದ ರಾಕ್ಷಸಿಗಳ ಸಾಕು ಮಗಳು, ಶರಬಂಧರಾಜನ ಹೆಂಡತಿ
೧೫. ಜವಳಿ ತಿಪ್ಪಣ್ಣ : ಇಲಾಮಂತ್ರ ಪಟ್ಣದ ಜವಳಿ (ಬಟ್ಟೆ) ವ್ಯಾಪಾರಿ
೧೬. ಜೀರಗೂರು ಸುಬ್ಬಮ್ಮ : ಭೂಪತಿ ಪಟಟಿದ ಹೂ ಕಟ್ಟುವ ಜೀರಗೂರು ಸಮುದಾಯದ ವಯೋವೃದ್ಧೆ
೧೭. ತಿಪ್ಪಣ್ಣ : ಭೂಪತಿ ಪಟ್ಣದ ಅಗಸ
೧೮. ತೊಂಟಗಿತ್ತಿ : ಇಲಾಮಂತ್ರ ಪಟ್ಣದ ಪಾತರಗಿತ್ತಿ ಮನಿಯ ದಾಸಿ
೧೯. ದಾಸಗಿತ್ತಿ : ಇಲಾಮಂತ್ರ ಪಟ್ಣದ ಪಾತರಗಿತ್ತಿ ಮನಿಯ ದಾಸಿ
೨೦. ದೇವಸ್ತಾನಿ : ದೇವಗಿರಿಯ ನಾಗೇಶನ ಮಗಳು, ಶರಬಂಧರಾಜನ ಹೆಂಡತಿ
೨೧. ನೀಲವೇಣಿದೇವಿ : ಚಾಮರಾಜನ ಹೆಂಡತಿ, ಕಾಂಭೋಜರಾಜನ ತಾಯಿ
೨೨. ನೀಲಮ್ಮ : ಚಾಂಪುರ ಪಟ್ಣದ ಕ್ರಿಷ್ಟಗೊಲ್ಲರ ಗಂಗಮ್ಮನ ಮಗಳು, ಶರಬಂಧರಾಜನ ಚಿಕ್ಕಪತ್ನಿ
೨೩. ಪಾತರಗಿತ್ತಿ : ಇಲಾಮಂತ್ರ ಪಟ್ಣದ ಪಾತರಗಿತ್ತಿ, ಶರಬಂಧರಾಜನ ಹೆಂಡತಿ
೨೪. ಭೂಪತಿರಾಜ : ಭೂಪತಿಪಟ್ಣದ ಅರಸ ಮಾಣಿಕ್ಯಮ್ಮನ ತಂದೆ
೨೫. ಮಾಣಿಕ್ಯಮ್ಮ : ಭೂಪತಿಪಟ್ಣದ ಭೂಪತಿರಾಜನ ಮಗಳು, ಶರಬಂಧರಾಜನ ಹೆಂಡತಿ
೨೬. ಮಾರೆಪ್ಪ : ವೇಷಗಾರ ರಾಮಜೋಗಿಯ ತಂದೆ
೨೭. ರತ್ನಮ್ಮ : ಭೂಪತಿಪಟ್ಣದ ಶಾನುಭಾಗರ ಮಗಳು
೨೮. ರಾಣೆಮ್ಮ : ಭೂಪತಿಪಟ್ಣದ ಗೌಡ್ರ ಮಗಳು
೨೯. ರಾಮಜೋಗಿ : ಮೇಟೌಷಧಿ ವೇಷಧಾರಿ ಶರಬಂಧರಾಜನ ಹೆಸರು
೩೦. ಶರಬಂಧರಾಜ : ಸಿರಿದೇವಿಯ ಮಗ, ಮಹಾಕಾವ್ಯದ ನಾಯಕ
೩೧. ಶಾನುಭೋಗ : ಕಾಂಭೋಜರಾಜನ ಆಸ್ತಾನದ ಭವಿಷ್ಯಗಾರ
೩೨. ಶಾಮಗಾಂಧಿ : ಚಾವುಲರಾಜ ಪಟ್ಣದ ಅರಸ ಚಾವುಲರಾಜನ ಮಗಳು ಶರಂಬಂಧರಾಜನ ಹೆಂಸ್ತಿ
೩೩. ಶಿವ : ಇಲಾಮಂತ್ರ ಪಟ್ಣದ ಬಡಿಗೇರು ಸಮುದಾಯದ ಕುಶಲಕರ್ಮಿ
೩೪. ಸುಂಕ : ಗೇಟು ಕಾಯುವವ, ಮೇಟೌಷಧಿಯ ದಾರಿ ತೋರಿಸುವವ
೩೫. ಸುಬ್ಬಮ್ಮ : ವೇಷಗಾರ ರಾಮಜೋಗಿಯ ತಾಯಿ
೩೬. ಹನುಮಕ್ಕ : ದೇವಗಿರಿ ಪಟ್ಣದ ತಳವಾರರ ಹಣಮಂತನ ತಾಯಿ
೩೭. ಹಣಮಂತ : ದೇವಗಿರಿ ಪಟ್ಣದ ತಳವಾರರ ಯುವಕ
Leave A Comment