ತಮ್ಮಾ ನನ್ನ ಎಡಗೂ ಲೋಕದವ್ನೆ ತಮ್ಮಾ
ತಮ್ಮಾ ಒಂದ ಮಾತನ್ನ ಹೇಳಿಲ್ಲ ತಮ್ಮಾ
ತಮ್ಮಾ ಒಂದ ಮಾತನ್ನ ಹೇಳಿಲ್ಲಪ್ಪ || ತಂದಾನ ||

ತಮ್ಮ ಹೋಗಿ ಬಂದುದ ನಾನು ನೋಡಲಿಲ್ಲ ತಮ್ಮಾ
ಎಲ್ಲಿಗಿ ಹೋಗಿದ್ದು ನಾನು ನೋಡಲಿಲ್ಲ ತಮ್ಮಾ || ತಂದಾನ ||

ಮಾವಾ ನೀನು ಇಲ್ಲೆ ಕೊಡೋದಿಲ್ಲೋ ಮಾವಾ
ಮಾವಾ ಸ್ವಾದರಮಾವ ಬಚ್ಚಣ್ಣ || ತಂದಾನ ||

ಅಳಿಯ ಕಣ್ಣಿಲ್ಲೆಲ್ಲ ನಾನು ನೋಡಿಲಲ್ಲ
ಯಪ್ಪ ಅಳಿಯನನ್ನು ನಾನು ಕೂಡಾ ನೋಡಲಿಲ್ಲಾ || ತಂದಾನ ||

ನನ್ನ ಕಂಬಳಿನ್ನ ತೆರದು ನೋಡಲಿಲ್ಲೇ
ಆಗ ನನಗೆ ಗೊತ್ತಾಗಲಿಲ್ಲಪ್ಪ ನನ್ಗ ಏನ ಬಂತಪ್ಪಾ || ತಂದಾನ ||

ಆಹಾ ತಮ್ಮ ಎಷ್ಟು ಮೋಸ ಮಾಡ್ದಾ
ಈಗ ಜೇಲದಾಗ ಬಿದ್ದಾ
ಹ್ಯಾಂಗ ಮಾಡ್ಲಿ ಮಾವಾ
ಆಯ್ತಪ್ಪಾ ತಮ್ಮಗ ಮರೆಂಗಿಲ್ಲ
ತಂದಿ ಮಾತಿಗೆ ಎದುರಾಡಂಗಿಲ್ಲ
ಇಪ್ಪತ್ಹಳ್ಳಿಗೆ ಬುದ್ಧಿವಂತೆ
ರಾಜತನ ಮಾಡವನು
ಈಗ ನ್ಯಾಯ ಪಂಚಾಯತಿ ಹೇಳುವನು
ಈಗ ರಾಜವಾಳವನು

ಅಂಥವನ ಕೂಟ ನಾವು ಮಾತನಾಡುವುದಿಲ್ಲಾ
ಯಪ್ಪಾ ಮಗನೆ ಅಂತ ತಾಯಿ ದುಃಖ ಮಾಡ್ತಾಳ
ಯಾಕ ಅಳ್ತಿಯಪ್ಪ
ತಮ್ಮಗೇ ನನಗೇ ಋಣ ಇಲ್ಲವಮ್ಮಾ
ಎಂಥವನು ಕರ್ಮಿಷ್ಠಿಗೇಡಿ ತಂದೀ || ತಂದಾನ ||

ಅಂತ ತಾಯಿ ಮಗ ದುಃಖ ಮಾಡಿ
ಈಗಪ್ಪ ಈಗನ್ನ ಬುದ್ಧಿವಂತನಾಗಿ
ಜ್ಞಾನವಂತನಾಗಿ ಇರಬೇಕಪ್ಪ ರಾಮಾ
ಅಂಬೊತ್ತಿಗೆ
ಈ ಹಿರಿ ಕಂಪ್ಲಿ ರಾಜಾ
ನೋಡಪ್ಪ ಮಗನೆ
ಒಬ್ಬನು ಕಳತನ ಮಾಡ್ದ
ಓದಿಸಿವಿ
ಓದಿ ಕಲಿತ ಕೊಂಡು
ಕಳತನ ಸೂಳೆತನ ಮಾಡಿ
ಕೈಗ ಸರಪಣ ಕಾಲಿಗಿ ಸರಪಣ
ರೂಮಿನಾಗ ಹಾಕಿವಿ
ಲೋಕೆಲ್ಲ ಏನಂತಾರ
ತಲೆ ಕಡ್ದು
ಅಗಸಿಗ ಕಟ್ಟು ಅಂತಾರ
ಹೊಟ್ಟ್ಯಾಗ್ಹುಟ್ಟಿದ ತಾಪಕ್ಕೆ
ಮಕನ ನೋಡಿಕ್ಯಂತ ಇರಾನ
ಅವ್ನ ತಲೆ ಕಡ್ದ ಮ್ಯಾಲೆ
ಎದಕ್ಕ ಬರಂಗಿಲ್ಲಂತ
ರೂಮಿನಾಗ ಹಾಕಿನಿ
ಇಗೋ ನೀನು ಹಣ್ಣಿಗೆ ಹುಟ್ಟಿವಂತಾಗಿ
ಕೇಳಪ್ಪ

ಬಾಳ ಹುಶಾರ್ ಮ್ಯಾಲ ಇರಬೇಕು
ಹೆಣಮಕ್ಕಳಿಗೆ ಕಣ್ಣೆತ್ತಿ ನೋಡಬ್ಯಾಡ
ಹೆಣಮಕ್ಕಳಿಗೆ ಮಾತನಾಡಬ್ಯಾಡ
ತಂದಿ ನಿನ್ನ ಪಾದಾಜ್ಞ ಯಾರ ನೋಡಲ್ಲ ನಾನಾಗಿ
ಯಪ್ಪ ಅಂಥ ಗುಣ ಇಲ್ಲಪ್ಪ ನನ್ಗ ಕೆಟ್ಟ ಗುಣ ಇಲ್ಲಪ್ಪ
ಯಪ್ಪ ಕೆಟ್ಟ ಗುಣ ಇಲ್ಲಪ್ಪ ನನ್ನ ಜಲ್ಮದಾಗ || ತಂದಾನ ||

ಅಷ್ಟಾಗಲಪ್ಪ ರಾಮ
ಕೇಳವೋ ಭಾವ ಮೈದ ಬಚ್ಚಣ್ಣ
ಈ ರಾಮನ ಹಿಂದೆ ಇರಬೇಕು ನೀನು
ಅಷ್ಟಾಗಲಪ್ಪ
ಆಗಿನ್ನ ರಾಮನ ಕರಕಂಡು ಬರೋದು
ಈಗ ಹನ್ನೆರ್ಡು ಗಂಟೆ ತನಕ
ರಾಜ ಕಛೇರಿಗ ತಂದಿ ಮಗ ಬರೋದು
ಹನ್ನೆರ್ಡು ಗಂಟೆಗೆ ತಂದಿ ಹಂಗೆ ಇರ್ತಾನಾ
ಈಗ ಸ್ವಾದರಮಾವ ಬಚ್ಚಣ್ಣ
ಈಗ ಅಳಿಯನ ಕರಕಂಬೋದು
ಆಗ ತಾಯಿ ಮನಿಗೆ ಬಂದು
ಹರಿಯಾಳದೇವಿ ಮನಿಗೆ ಬಿಡೋದು
ಹೀಗೆ ಇಲ್ಲಿ ಆನೆಗುಂದಿ ಪಟ್ಣದಲ್ಲಿ