ಈಗ ಕಂಪ್ಲಿರಾಜ ಏನ್ಮಾಡ್ದ
ಇಡ್ಡ್ರು ಕರ್ಕಂಡು ಬಂದು
ಹೊಳೆ ದಂಡ್ಯಾದ ಮೈ ತೊಳ್ಕಂಡು
ಆಗ ಜೀವದಲ್ಲಾಗಿ
ಈಗ ಯಪ್ಪಾ
ಕೊಲ್ಲು ಥೇರು ಮಾಡ್ಬೇಕು ನೀವು
ತಾತಲಿದ್ದ ನಾವು ಉದ್ದಾರ ಆಗ್ತಿದ್ದೀವಿ
ತಾತಲಿದ್ದ ಇನ್ನ ಲೋಕ ಆನೆಗೊಂದಿ
ಕಂಪ್ಲಿ ಹಿರೇಕಂಪ್ಲಿ ಪಟ್ಣದಾಗ ಅಂತ
ಹೊಳೆದಂಡೀಲಿ ಮೈ ತೊಳಕೊಂಡು
ಒಡ್ಡ್ರು

ಆಗ ಒಂದು ನೋಡಣ್ಣಾ ಅಚ್ಚಿನ ಬಂಡಿಯಲ್ಲಿ ಬಂದಾರೋ ||ತಂದಾನ||

ಅಚ್ಚಿನ ಬಂಡಿಗೆ ಪೂಜೆ ಮಾಡಿ
ಕೈ ಮುಗಿದು ಒಡ್ಡ್ರು
ಆಗಿನ್ನವ್ರು ಗಡಾರ ತಗಂಡು
ಆಗಿನ್ನವ್ರು ಕೊಲ್ಲುನ್ನೇರಿಸಿ

ಕೊಲ್ಲು ಥೇರು ಮಾಡ್ಸ್ಯಾರ ಕಂಪ್ಲಿ ಪಟ್ಣದಾಗಣ್ಣ
ತೋಥಡಿ ಹಂಪಿದಾಗ ನೋಡಣ್ಣ ಕೊಲ್ಲು ಥೇರು ಎಷ್ಟೈತೋ ||ತಂದಾನ||

ಇಪ್ಪತ್ಹಳ್ಳಿ ಇನ್ನವ್ರು ತಾವಾಗಿ ಆನೆಗೊಂದಿ ಸುತ್ತ
ಕಂಪ್ಲಿ ಪಟ್ಣ ಸುತ್ತ
ಇನ್ನವ್ರು ತಾವಾಗಿ ಪತ್ರ ಹಾಕಿಬಿಟ್ಟ
ಥೇರಳ್ತೀವಿ ಸ್ವಾಮಾರ ಮೂರು ಗಂಟೆಗೆ
ಇನ್ನವರತ್ತ ಕುಲದಲ್ಲಿ ಆನೆಗೊಂಡ್ಯಾಗ
ಬರೋರಿದ್ರೆ ಜನಲೋಕಕ್ಕೆಲ್ಲ ನೋಡಬಹುದು
ದುಷ್ಟರು ದುರ್ಮಾರ್ಗರು ಕರ್ಮರು ಬಂದು
ಬಂಡಿ ಬಂಡಿ ಬಂಡಿ ಬರ್ತೈತಪ್ಪಾ ಲೋಕೆಲ್ಲ
ಈಗ ಬಂಗಾರದ ಕೊಡಪಾನ ಮಾಡ್ಸಿ
ಹೂಳಿದಂಡಿಗ ಬಂದು ಸ್ನಾನ ಮಾಡ್ಕೊಂಡು
ಆಗಿನ್ನವ್ರು ಮಡಿಯುಟ್ಕೊಂಡು ಕೊಡ ಹೊತ್ಕೊಂಡು
ಆಗ ಗಿಡ ಮ್ಯಾಲೆ ಕಾಯಿ ಹರಕಂಡು
ತೆಂಗಿನ ಕಾಯಿ ಕೊಡ ಮ್ಯಾಲ ಇಟ್ಕಂಡು
ಗಿಡಮ್ಯಾಲ ಹೂ ಹರ್ಕೊಂಡು
ಕೊಡ ಮ್ಯಾಲ ಹಾಕ್ಯಂಡು
ಮಾಡಿಮ್ಯಾಲೆ ಡೋಳ್ಳು ಹೋಡಿಯೋರು ಮ್ಯಾಳ ಊದೋರು

ಯಮ್ಮಾ ಇನ್ನ ಮಡಿಯಾಮ್ಯಾಲ ತಾನು ತರುತ್ತಾನಮ್ಮಾ
ರಾಮಾs ಎಷ್ಟು ಚಲುವಿ ತಾನು ಹೊಂಟಾನಮ್ಮ
ಜೀವಾ ಕೊಟ್ಟಿದ ತಾತ ಹೆಂಗ ನಡಿತಾನಮ್ಮ ||ತಂದಾನ||

ಆಹಾಹಾಹಾಹಾ
ಆ ತಾತನ ಮಾಲ್ಕಿಮ್ಯಾಲೆ ಬಂದು
ಥೇರು ಮ್ಯಾಲೆ ತಾತನ ಕೊಡ ಇಟ್ರು
ತಾತ ನೀನು ಹಗ್ಗ ಇಲ್ದಂಗ ನಡಿಬೇಕು
ಲೋಕ ದುಷ್ಟರು ದುರ್ಮಾಗು ಹಿಡಿಬಾರ್ದು
ನಿನ್ನಷ್ಟಕ್ಕೆ ನೀನೇ ನಡಿಬೇಕು ತಾತ
ಆ ತಾತ ಏನಂತಾನ
ಯಪ್ಪಾ ಯಾರೂ ಎಳಿಬ್ಯಾಡ್ರಿ ದುಷ್ಟ್ರು
ಕುತ್ತಿಗೆಗೆ ಹಗ್ಗ ಹಾಕ್ದಂಗ

ಹಗ್ಗ ಇಲ್ಲದಂಗ ನಾನು ನಡೀತೀನಲ್ಲೋ
ಎಷ್ಟು ಚೆಲುವಿವಾಗಿ ತೇರು ನಡೀತದಮ್ಮಾ
ತೋಥಡಿ ದಡ್ಡ್ ದಡ್ಡ್ ದಡಾಂತಾ ನಡೀತದಮ್ಮಾ ||ತಂದಾನ||

ಆನೆ ಒಂಟೆತಲ್ಲಿ ಬಂದು ನಿಂತ್ಕಂಡು ಬಿಡ್ತು
ಆನೆ ಕೆಚ್ಚಿದು
ಆಹಾ ತಾತಾ
ಇಷ್ಟೇ ಸಾಕು ನಿನ್ನ ದೈವ
ನಿನ್ನ ಭಕ್ತಿ ಇಷ್ಟೇ ಸಾಕು ನನ್ಗ
ಹಗ್ಗಿಲ್ದೆಂಗ ಇಲ್ಲಿವರ್ಗೆ ನಡ್ದು ಬಂದಿ ತಾತ
ನಿನ್ನ ಸತ್ಯವಿಷ್ಟೇ ಸಾಕು ಅಂತ
ತಾತನ ಬಂಗಾರದ ಕೊಡಪಾನ
ತಲೀಮ್ಯಾಲೆ ಇಟ್ಕಂಡು ನಡೀತಾತಾ
ನಮ್ಮ ಮನಿಗೆ ಮನಿದೇವ್ರು
ಛೀ ಛೀ ಛೀ ನಿಮ್ಮನಿಗೆ ಬರೊದಿಲ್ಲ

ನನ್ನ ಮಠಾ ಸೇರ್ಸಾರೇ ನನ್ನ ಪಾಡಿಗ್ಹೋಗುತ್ತಿನಿ ||ತಂದಾನ||

ಆ ತಾತನ ಮತ್ತೆ ಪಾಲ್ಕಿಮ್ಯಾಲೆ
ಈಗಿನ್ನ ಮಡಿಮ್ಯಾಲೆ
ದೊಳ್ಳು ಮ್ಯಾಖ ಕೂಟ ತಂದು
ಆ ತಾತನವರ ಬಂಗಾರದ ಪಾಲ್ಕಿ ಮ್ಯಾಲೆ
ತಾತನ ಕೊಡ ಕುಂಡ್ರಿಸಿದ್ರು

01_80_KMKM-KUH