ಚೆಂಡು ಕಳ್ದ ಹೋಯ್ತು
ಚೆಂಡು ಎತ್ತಾಗೋಯ್ತೋ ಸ್ವಾದರ ಮಾವ ಬಚ್ಚಣ್ಣ
ಯಪ್ಪಾ ಏನು ಮಾಡ್ತಿ ಕುಮಾರ ರಾಮಾ
ಎತ್ತಾಗಾನಹೋಗ್ಲಿ ಚೆಂಡು
ನಿಮ್ಮಪ್ಪ ಇಲ್ಲ ಊರಾಗ ನೋಡಿದ್ರೆ
ನಡಿ ಮನಿಗ ಹೋಗಾನ
ಹಂಗಲ್ಲ ಮಾವ
ಈಗ ಚೆಂಡು ಕಳಕಂಬೋದು ಒಂದೇ
ಜೀವ ಕಳಕಂಬೋದು ಒಂದೇ
ಇಗೋ ಚೆಂಡು ನೋಡ್ಬೇಕೋ ಮಾವ
ಚೆಂಡಿಲ್ಲದೆ ನಾನು ಮನಿಗಿ ಬರಾಂಗಿಲ್ಲ
ನೋಡಪ್ಪ ನಿನ್ನ ಚಿಕ್ಕತಾಯಿ
ರತ್ನಾಕ್ಷಿ ಮನಿಕಡಿಗೆ ಹೋದಾಂಗಾತು
ಮತ್ತೆ ಮಾಳಿಗೆ ಮ್ಯಾಲೆ ಬಿತ್ತೋ
ಮನ್ಯಾಗ ಬಿತ್ತೋ
ಆಗ ಆ ಕಡಿ ಮನೆ ತಟಾದೇ ಹೋಯ್ತೋ
ನೋಡು ಮಾವ
ಇಲ್ಲೆ ನಿಂತಕೋರಿ ನನ್ನ ತಮ್ಮಾ ನೀನು
ನಾನು ಹೋಗಿಬರ್ತೀನಿ
ನಮ್ಮ ತಾಯಿಗೆ ಈಗ ಕೈ ಮುಗ್ದು ಕಾಲಿಗೆ ಬಿದ್ದು
ಕೈಗ ಚೆಂಡು ಕೊಡಂತ ಇಸ್ಕಂಡು ಬರ್ತಿನಿ
ಅಯ್ಯೋ ರಾಮ
ನೀ ಇನ್ನು ಚಿಕ್ಕತಾಯಿ ಮನಿಗಿ ಹೋದ್ರೆ

ರಾಮ ನಿನ್ನ ಜೀವ ಗ್ಯಾರಂಟಿ ಹೋಗುತದ ರಾಮಾ
ರಾಮೋ ನಿನ್ನ ಜಲ್ಮ ಹೋತದ ರಾಮದೇವ || ತಂದಾನ ||

ಆ ತಾಯಿಗೆ ಅಂದರೆ ಕೆಟ್ಟ ಗುಣ ಇರಬಹ್ದು
ನನಗೆ ಕೆಟ್ಟತನ ಇಲ್ಲ
ಓಲಿಕ್ಯ ನೋಡ್ದ ಅಣ್ಣಾ
ನೀನು ಹೋಗ್ಬೇಡ
ಈಗ ನಾನು ಹೋತಿನಿ
ನಮ್ಮ ತಾಯಿ ಅಲ್ಲ
ನಾನು ಹೋತಿನಿ
ಕೊಟ್ರೆ ಕೊಟ್ಟಂಗ ಇಲ್ಲದ್ರೆ ಇದ್ದು ಇಲ್ಲಂದ್ರೆ
ನಾನು ಕಡ್ದು ಹಾಕಿಬರ್ತಿನಿ
ಏಯಪ್ಪಾ ನೀನು ಕೆಟ್ಟವನು
ನೀನು ಹೋಗ್ಬೇಡ
ತಾಯಿ ಸಿಟ್ಟುಮ್ಯಾಲೆ ಬೈದ್ರೆ
ನಾವು ಕಿವಿ ಮುಚ್ಚಿಕ್ಯಂಡು
ಕಣ್ಣು ಮುಚ್ಚಿಕ್ಯಂಡು ಬರಬೇಕಾಗತೈತಿ
ಕೈ ಮುಗ್ದು ನಿನಗ ಸಾಧ್ಯವಿಲ್ಲಪ್ಪ ಅಂತ
ಆಗ ಮಾವ ತಮ್ಮ ಕೆಳಗ ನಿಂತ್ಕಂಡ
ಜನ ಲೋಕ ಎಲ್ಲ ಹೋಗ್ತಾರ
ಈಗ ರಾಮ ಜಟ್ಟಿ ಆಕ್ಯಂಡಾನ
ಈಗ ಲುಂಗಿ ಉಟ್ಟ್ಯಾನ
ಆ ಕಾಲಕ್ಕೆ ಯಾರೂ ಉಟ್ಟಂಗಿಲ್ಲಪ್ಪ
ಎಲ್ಲಾ ಗೋಸ್ಯಪ್ಪನೋರೆ ಎಲ್ಲರು ಗೋಸ ಹಾಕೋದೆ
ಆಗ ರಾಮ ಉಟ್ಟಕ್ಕೊಂಡು

ರಾಮ ತಾಯಿ ಮನಿಗೆ ಮಗ ಬರ್ತಾನಮ್ಮ
ಆನೆಗುಂದಿ ರಾಮಯ್ಯ
ರಾಮ ಇನ್ನ ಪಾಂಟಿಗೆ ಏರಿ ಬಂದಾನ ರಾಮ || ತಂದಾನ ||

ರಾಮ ಇನ್ನವರ ಪಾಂಟಿಗೇರಿ ಮನ್ಯಾಕ ಬಂದ
ತಾಯಿ ಹೊರ್ಸಮ್ಯಾಲೆ ಕುಂತಿದ್ದಳು
ಒಂದು ಪಾದ ಎರಡು ಕೈ ಜೋಡಿಸಿದ
ಆಗ ಮೂರು ದಡೇವು ಚಂದ್ರಾಯ್ಧ ಕೆಳಗಿಟ್ಟ
ಅಮ್ಮಾ ತಾಯಿ

ನಾನು ಮಗ ಬಂದೀನಿ ಕೈಯೊಳಗೆ ಬೆಳೆದವ್ನೆ ತಾಯಿ
ಯಮ್ಮಾ ಚೆಂಡು ಕೊಡೆ ಹಡದಮ್ಮಾ ನಿನ್ನ ಪಾದಕ್ಕೆ ಶರಣಮ್ಮಾ || ತಂದಾನ ||

ಯಮ್ಮಾ ಚೆಂಡು ಕೊಡೆ ತಾಯಿ ನಿನ್ನ ಮಗ
ಮನೆ ಕೆಳಗೆ ಓಡ್ಯಾಡಿ ಆಡುತ್ತಿದ್ದೆ
ಚೆಂಡು ಮನಿ ಕಡಿಗೆ ಬಂದು ಮನ್ಯಾಗ ಬಿದಿದ್ರೆ
ಕೊಡವೇ ತಾಯಿ
ಛೀ ರಾಮ

ನಿನು ತಾಯಿ ಅಂದ್ರೆ ರಾಮಣ್ಣ ನಿನಗ ಬಾಳೆಹಣ್ಣು ಕೊಟ್ಟೇನ
ಬಾಯಿಗೆ ಬಾ ಇಲ್ಲಿ
ರಾಮ ನಿನ್ನ ಮಕ ನೋಡಬೇಕು
ನೀ ನನ್ನ ಕೈ ಹಿಡಿ ರಾಮ || ತಂದಾನ ||

ರಾಮ ನಿನ್ನ ಬಂಗಾರದ ಪೋಟ ತೋರ್ಸಿ
ಈಗ ನಿನ್ನ ಬಚ್ಚಿಟ್ಟು ನಿಮ್ಮ ತಂದಿ
ಕಂಬ್ಳಿ ಮುಚ್ಚಿಗ್ಯಂಡು
ಹಗಲತ್ತೇ ಕಣ್ಣು ತೆರ್ದು ತಾಳಿ ಕಟ್ಟಿಸಿದ
ಇದೋ ನಿಮ್ಮ ತಂದಿ
ಇನ್ನವ್ರ ತಾವಾಗಿ ಇರೋನಲ್ಲ
ನೀನೇ ನನ್ನ ಜೀವದ ಗಂಡ
ಜೀವ ಪೋಟೋ ನೋಡಿದವ್ನು
ಈಗ ನನ್ನ ಇನ್ನ ಕೈಲಿ ಹಿಡಿ
ನನ್ನ ಮನಸ್ಸು ಕಳಿ ರಾಮ
ಚೆಂಡು ಕೊಡ್ತಿನಿ
ಛೀ ಛೀ ಛೀ ಛೀ ಅಮ್ಮಾ

ಪಾಪಿ ಮಾತ ನುಡಿಬ್ಯಾಡ ನಾನು ಮಗ ಇದೀನಿ
s ಕರ್ಮ ಮಾತ ನುಡಿಬ್ಯಾಡ ಜೀವದಲ್ಲಿ ನ್ನ ತಾಯಿ || ತಂದಾನ ||

ಆಗ ರಾಮ ನನ್ನ ಜೀವಕ್ಕ ಕಲೀಬೇಕು
ಜೀವಕ್ಕ ಚಂಡು ಕೊಡ್ಬೇಕ
ಅಷ್ಟು ಮಾತುಗಳು ನುಡಿತಿದ್ರೆ
ಕಬ್ಬಿಣ ಪುಟ್ಟಿ ಮುಚ್ಚಿದಂತ
ಬಂಗಾರದ ಮುತ್ತಿನ ಚೆಂಡು
ಛೀ ದುಷ್ಠ ಮಾತುಗಳು ಕೇಳ ಬಾರದಂತ

ಆಹಾ ನೋಡಣ್ಣಾ
ಬುಟ್ಟಿಮ್ಯಾಕ ಎಬಿಸೈತೋ
ಇನ್ನೂ ಬಾಳೇವು ಆಗ್ಯಲ್ಲೋ
ತೂತು ಓಡಿಕ್ಯಂಡಣ್ಣಾ ಮೂರು ಮೇಗದಾಗ ಹೊಂಟೈತೊ || ತಂದಾನ ||

ರಾಮ ಕೆಳಗಿಟ್ಟಾನ
ಮೂರು ದಡೆವು ಚಂದ್ರಾಯ್ಧ
ನೋಡಿಬಿಟ್ಟು ರತ್ನಾಕ್ಷಿ
ಚೆಂಡು ಓಡ್ವಾಗ ರಾಮ ಎಗರಿ ಹೋಗಿಬಿಡ್ತಾನ
ಚೆಂಡ್ಹಿಂದೆ ತಾವು ಅಂತ

ಕೈಯಾಗ ಇರೊ ಚಂದ್ರಾಯ್ಧ ಕೇಳಗಿಟ್ಟಿದ್ದೇ ತಗಂಡು ಕೈಲಿ || ತಂದಾನ ||

ಹೊರ್ಸ ಮ್ಯಾಲಿದ್ದ ಕುಪ್ಪಳ್ಸಿ ಎಗರಿ
ಕೆಳಗಿಟ್ಟಿದ್ದ ಚಂದ್ರಾಯ್ಧ ತಗಂಡು
ರಾಮನ ಬಟ್ಟೆ ಕೊಯಿಕ್ಯಂಡ್ಲುಪ್ಪ ಲುಂಗಿ

ಆಗ ಮಗ ನೋಡ್ಯಾನ
ಕೈಯಾಗ ಚೆಂಡು ಕಸ್ಕಂಡು
ಕುಪ್ಪಳ್ಸಿ ಮ್ಯಾಕ ಎಗರಿದ
ಚೆಂಡ್ಹಿಂದೆ ಬರುತಾನ
ಒಂದು ಮೇಗ ಬಂದಾನ
ಎರಡು ಮೇಗ ಬಂದಾನ
ಮೂರು ಮೇಗ ನೋಡ್ಯಾನ ಸಾಧ್ಯಾಗಲಿಲ್ಲ ರಾಮನಿಗೆ
s ಕೈ ಕಾಲು ಸೋತ್ಯಾವ ರಾಮ ಕುಪ್ಪಿಸಿ ಹಾರ್ಯಾನ || ತಂದಾನ ||

ಮೊಣಕಾಲಷ್ಟು ಭೂಮಿ ಕಿಣಿ ಬಿದ್ದು ಬಿಡ್ತು
ದೇವ್ರಪಟ್ಟಣ ಹೋಗಿಬಿಡ್ತು
ದುಷ್ಟ ಲೋಕಾನೇ ಇರಬಾರದಂತ