ಓರಗಲ್ಲು ಗಣಪತಿರಾಜ
ಆನೆಗೊಂದಿ ರಾಮ ರೊಕ್ಕ ಒಯ್ದಾನಾಂತ
ಡಿಲ್ಲಿ ಪಟ್ನಕ್ಕ ಪತ್ರ ಹಾಕಿಬಿಟ್ಟ
ಡಿಲ್ಲಿ ಪಟ್ನದ ಗೊಲ್ಕಂಡ ನವಾಬೂದಾರ
ಬಂಗಾರದ ಟೋಪಿ
ಈಗ ಬೆರ್ಳಳಿ ಜಪ್ನ ಅಂಗಿ
ಬೆಳ್ಳಿದು ಬುಡಿಗಿ
ಆಗ ಏಳು ಸಾವಿರ ಮಂದಿ
ಆತನ ಕೈಯಾಗ
ಈ ಕರ್ನಾಟ ಆಂಧ್ರ ಒಂದೇ ನಂದೇ
ಎಂದು ಬರೆದುಬಿಟ್ಟ
ಈ ಲೋಕೆಲ್ಲ ದೇಶ ಹುಟ್ಟಿತಲ್ಲಿ ದೇಶ ಮುಣ್ಗಿತಲ್ಲಿ
ನಂದೇ ಅಂತ ಇನ್ನ ಬರೆದು ಬಿಟ್ಟಾ
ರೊಕ್ಕೆಲ್ಲ ಬರಬೇಕು ನನ್ನ ಕೈಯಾಗ
ಅರೆ ಕಿದರ್‌ ಬಂಚೇತರ್‌
ಅರೆ ನನ್ನ ಕೈಯಾಗ ಮಂತ್ರಿ
ಅರೆ ನನ್ನ ಮಂತ್ರಸಾಕ
ಬಂದಿಯಾ ಆನೆಗೊಂದಿ ರಾಮಯ್ಯ
ಈಗ ನನ್ನ ಮಂತ್ರಿಸ್ತೀಯಾ

ಲೇ ನಿನ್ನ ನಾನು ಮಂತ್ರಿಸೇನ
ಆನೆಗೊಂದಿ ಎಲೈತೊ
s ಆನೆಲಿದ್ದ ತುಳಿಸೇನ
ಕೊಬ್ಬು ನಾನು ನಾಟೇನ
ನಿಮ್ಮ ಆನೆಗೊಂದಿ ಕಂಪಿಲಿ
s ಬಾಳೆಗಿಡಗಳು ನಾಟೇನ
ಬಾಳೆಹಣ್ಣು ಒರಲ್ಲಿದ್ದ
s ಹುಟ್ಟಿದವ್ನೆ ರಾಮಯ್ಯಾ
ಇನ್ನ ನಿಮ್ನ ಕಡದೇನ || ತಂದಾನ ||

ಅಂತ ಡಿಲ್ಲಿದವ್ನು ಏನ್ ಮಾಡ್ದ
ಏಳು ಸಾವಿರ ಮಂದಿನ್ನ ಎಬ್ಬಿಸಿದ
ಎಲ್ಲ ಗಡ್ಡ ಬೋಳಗುಂಡ ಗಡ್ಡ ಬೋಳಗುಂಡ
ಗಡ್ಡ ಬೋಳಗುಂಡ ಎಲ್ಲಾ ಸಾಹೆಬ್ರೆ
ಬ್ಯಾರೆ ಕುಲ ಒಬ್ನು ಇಲ್ಲ
ಆಂಧ್ರ ಒಳಗೆ
ಡಿಲ್ಲಿ ಪಟ್ನದಾಗ
ಒಂದು ಸರ್ತಿ ನಲವತ್ತು ಪಲ್ಲ
ಅಕ್ಕಿ ಅನ್ನ ಮಾಡಿದ್ರೆ
ಹಿಡ್ಕಿ ಅನ್ನ ಬರಂಗಿಲ್ಲ
ಏಳು ಸಾವಿರ ಅಂದ್ರೆ
ಡೋಲು ಹೊಡದ್ರ ಮುಂದಕ ನಡಿಬೇಕು
ರಣಬೇನ ಹೊಡದ್ರ ಹಿಂದಕ್ಕ ತಿರುಗಿ ನೋಡ್ಬೇಕು

ಅರೆ ಕಿದರ್ಬಾಂಚೇದ ಎದ್ದಾಳ್ರೆ
s ಛೋಡ್ಲಗಾ ಲಗಾರೆ
s ಮಾದರ್ಚೋದ್ರಾಮಯ್ಯನ
ಆಲೆ ಪಕ್ಡಾ ಲಗಾ ಲೌಡಾಲೆ
ಬರತಿವಲೆ ರಾಮಯ್ಯ
ಆಗ ಮುಂದೆ ಬಂದವರಿಗೆ
ತೋs ಸಿಹಿನೀರ ಸಿಗತಾವಾ
ತೊಥಡಿ ಮುಂದೆ ಬಂದವರಿಗೆ
ಆಗ ಹಿಂದೆ ಬಂದವರಿಗೆ
ಆಗ ಕೆಸರು ಕೂಡ ಸಿಗುವಲ್ದು || ತಂದಾನ ||

ಆಗ ಬಂದು ಬಿಟ್ರಪ್ಪ ಆನೆಗೊಂದಿಗೆ
ನೀಲಿ ಪಟ್ಟಿ ಗೂಡಾರ ಹಾಕಿಬಿಟ್ರು
ಡೇರಿ ಹೊಡ್ದು
ಮೂರು ಸುತ್ತೂ ಸುತ್ತಿಗ್ಯಂಡ್ರಪ್ಪ
ಏಳು ಸಾವಿರ ಮಂದಿ
ಇರುವಿ ಹೊಗಾಕಿಲ್ಲ
ಇರುವಿ ಬರಾಕಿಲ್ಲ ಊರಾಗಲಿದ್ದ
ಏಳು ಅಗಸಿ ಸುತ್ತು
ಆಗ ಆಯುಧ ಗುಂಡುಗಳು
ಟೋಪ ಟೋಪ ಅಂತ ಊರಾಗ
ಒಗ್ದು ಬಿಡ್ತಾರ
ಮಾಳಿಗೆ ಮ್ಯಾಲೆ ಬಿದ್ದವು
ಈಗ ಆನೆಗುಂದ್ಯಾಗ
ಸ್ವಾದರಮಾವ ಬಚ್ಚಣ್ಣ
ಮಾಳಿಗೇರಿಬಿಟ್ಟ ಗವಾಕ್ಷಿಲ್ಲಿದ್ದ
ಮಾಳಿಗೆ ಮ್ಯಾಲ ನಿಂತ್ಕಂಡು ನೋಡ್ದ
ನೋಡಿದ್ರೆ ಏಳು ಸಾವಿರ ಮಂದಿ
ಆಗ ಏನಂತಾನ ರಾಮಯ್ಯ
ಈಗ ಮಾಳಿಗ್ಯಾಗ ಇಳ್ಕಂಡು
ರಾಮನ ಕೈ ಜೋಡಿಸಿದ
ಜೋಡಿಸಿ ಏನಂತಾನ ಮಾವ

ರಾಮ ಬೇಡ ರಾಮ ನನ್ನ ಮಾತ ಕೇಳೊ ರಾಮ
ರಾಮ ಡಿಲ್ಲಿಯವಂದಾಗಿ ಲೋಕವೈತಿ ರಾಮ
ಲೋಕೆಲ್ಲ ಡಿಲ್ಲಿಯೊಂದೆ ರಾಜ್ಯವೆಲ್ಲ
ರಾಮ ಆತನ ಕೈಯಾಗ ನಾವು ಮಂತ್ರಿ ರಾಮಾ
ಆತನ ಕೈಯಾಗ ಬರಿ ಅಂದ್ರ ಬರಿಯೋರು
ಕೆಡ್ಸು ಅಂದ್ರೆ ಕೆಡ್ಸೋರು ನಾವು || ತಂದಾನ ||

ರಾಮ
ಆತನ ಕೈಯಾಗ ಮಂತ್ರಿ ನಾವು
ಈಗ ಹೆದರಬ್ಯಾಡ ಜೀವಕ್ಕ
ಡಿಲಲೆಂದು ರಾಜ್ಯವೆಲ್ಲ
ಈ ಲೋಕೆಲ್ಲ ಆತನ್ದೆ
ಮಗನೆ ಬ್ಯಾಡಪ್ಪಾ
ಈ ಏಳುಸಾವಿರ ರೊಕ್ಕಕ್ಕೆ ಬಲವಂತ
ದೇಶಕ್ಕೆ ಬಲವಂತ
ಆತನಿಗೆ ನಾವ್‌ ತಡೆಯಾಕ ಕೈಲಾಗದಿಲ್ಲ
ಈಗ ನೀನು ರೊಕ್ಕಕೊಡು ರಾಮ
ಈಗ ಗಣಪತಿಯಿಂದ ಓರುಗಲಿದ್ದ ತಂದಿದ್ದು
ಓರಗಲ್ಲಿದ್ದ
ಈಗ ಕುಲದಲ್ಲಾಗಿ
ಈಗ ನಾವು ಕೊಡುವ ರೊಕ್ಕ ಐತಿ
ಲೆಖ್ಖ ಮಾಡಪ್ಪ
ನಾವು ಕೈಯಾಗಿಟ್ಟು
ನೀನು ಹೋಗಬ್ಯಾಡ
ನಾವು ಹೋಗಿ ಡಿಲ್ಲಿಯವ್ನಿಗಿ ಕೊಟ್ಟು
ಕೈ ಮುಗಿದು ಬರ್ತಿವಿ
ಎದಕ್ಕಾಗಿ ಯಪ್ಪಾ ಹಿರೇ ಕಂಪ್ಲಿ ರಾಜ
ಸ್ವಾದರಮಾವ ಬಚ್ಚಣ್ಣ
ನಮ್ಮ ಕರ್ಣಾಟ ರೊಕ್ಕ
ಆಂಧ್ರಗ ಹೋಗ್ಬೇಕಪ್ಪ ಡಿಲ್ಲಿಗೆ
ಅಬಾಬ ಈ ದೇಶಕ್ಕೆಲ್ಲಾ
ಡಿಲ್ಲಿ ದೊಡ್ಡದಾ ಅದು
ಈ ರೊಕ್ಕೆಲ್ಲ ದೇಶ ಮುಣಿಗಿತ್ತಲ್ಲಿಗೆ
ದೇಶ ಹುಟ್ಟಿತ್ತಲ್ಲಿಗೆ
ಸೂರ್ಯ ಬೆಳೆಯುತಲ್ಲಿಗಿಲ್ಲಿದ್ದ
ಡಿಲ್ಲಿಯವ್ನಿಗೆ ಹೋಗ್ಬೇಕಾ ರೊಕ್ಕ
ಯಪ್ಪಾ
ಈಗ ಅವನ ಕೈಯಾಗ
ಮಂತ್ರಿ ಇದ್ದೋರು ನಾವು
ಅರ್ಧರಾಜ್ಯ ನಮ್ಮದು
ಕರ್ನಾಟೆಲ್ಲಾ ನಂದೇ
ಆಂಧ್ರದೆಲ್ಲಾ ಅವಂದೆ
ಡಿಲ್ಲಿಯವ್ನಂದೆ

ಅವನ್ಗಿ ಕೊಡೋ ರೊಕ್ಕಪ್ಪ ನಾನು ದಾನ ಕೊಟ್ಟೇನ
s ಬುದ್ದಿ ಇಲ್ದ ಖಳಿಸ್ಬೇಕ
ನಾವು ಜ್ಞಾನ ಇಲ್ದ ಖಳಿಸ್ಬೇಕ
ಡಿಲ್ಲಿಗೆ || ತಂದಾನ ||

ಅಯ್ಯೋ ಅವನ್ನಪ್ಪಗ ಸಾಲಿಲ್ಲ
ಅವನ ತಾತಗೆ ಸಾಲಿಲ್ಲ
ಇವಾಗ ಬಂದಾರ
ಅಯ್ಯೋ ನೀವು ಹೆದರಿಕ್ಯಡೀರ್ಯಾ
ಅವರ ಟೋಪಿ ನೋಡಿ ಹೆದರಿಕ್ಯಂಡೀರ್ಯಾ
ಅವರ ಟೋಪಿ ನೋಡಿ ಹೆದರಿಕ್ಯಂಡೀರ್ಯಾ
ಅವರ ಗಡ್ಡ ನೋಡಿ ಹೆದರಿಕ್ಯಂಡಿರ್ಯಾ
ಇಗೋ ಏಳು ಸಾವಿರಲ್ಲ
ಇಪ್ಪತ್ತು ಸಾವಿರ ಬರಲಿ
ಒಂದೇಟಿಗೆ ಕಡ್ದು ಹಾಕ್ತಿನಿ
ಮಗ್ನಾ ನಿನ್ನ ಬಿಡೊದಿಲ್ಲ
ಒಂದು ಎರಡು ಕೈಗೆ
ಆಗ ಸಾವಿರ ಕೈಗೆ ಏನ್‌ ಸಂಬಂಧ
ನೋಡಪ್ಪ ನನ್ನ ಕೊಟ್ಟಿದ್ದ ದೇವರು
ಕಾಪಾಡಿಕ್ಯಂಡು ಬಂದ್ರೆ
ಕಡ್ದು ಕಡ್ದು ಹಾಕ್ತಿನಿ
ಇಗೋ ಯಾಕಂತ ದುಃಖ ಮಾಡ್ತೀಯಪ್ಪ
ನಾನು ಕೊಡೊದಿಲ್ಲ
ಆನೆಗೊಂದಿ ರೊಕ್ಕ ಕರ್ಣಾಟ ರೊಕ್ಕ
ಆಂಧ್ರಕ್ಕ ಖಳಿಸೋದಿಲ್ಲ
ಇಗೋ ಯುದ್ಧ ಮಾಡ್ತೀನಂತ
ಕುದುರಿ ಹೊರಗ ತಗ್ದಾ
ಬಾಯಿಗಿ ಸರಪಣಿ ಹಾಕ್ದ
ಬೆನ್ನಿಗೆ ಹತ್ತಿನ ದಿಂಡ ಹಾಕ್ದ
ಈಗ ಬಲಗಡೆ ಏಳುಕಂಡ ಚಂದ್ರಾಯ್ಧ
ಎಡಗಡೆ ಮೂರು ದಡೆ ಚಂದರಾಯ್ಧ

ಆಹಾ ರಾಮಯ್ಯ
ಕುದುರಿಮ್ಯಾಲೆ ಕುಂತವನ
ಇನ್ನ ಎಬ್ಬಿಸ್ತಾನಮ್ಮ ಸತ್ಯವಾದ ರಾಮಯ್ಯ || ತಂದಾನ ||

ಆ ಕುದುರಿ ಮ್ಯಾಲೆ ಕುಂತಗಂಡ
ಆ ರಾಮ ಕುದುರಿ ಹ್ಯಾಂಗ ಎಬ್ಬಿಸ್ತಾನಂದ್ರೆ
ಆಗ ಲೋಕಕೆಲ್ಲಾಗಿ
ಈಗ ಈ ರೀತಿ ಎಬುಸ್ತಾನಪ್ಪ ರಾಮಯ್ಯ

ಆಹಾ ರಾಮಯ್ಯ
ಎಷ್ಟು ಚೆಲುವಿ ರಾಮಯ್ಯ
ಕುದುರಿ ಒಂದ ನೋಡಣ್ಣೋ
ಹನುಮಂತನಂತ ಲಾಗ ಹೊಡ್ಧು
ಕುದುರಿ ಮ್ಯಾಗ ಕುಂತಾನ
ಕುದುರಿ ಮ್ಯಾಕ ಎಬ್ಬಿಸ್ಯಾನ
ಪಟಪಟಪಟಪಟ ರೆಕ್ಕೆ ಬಡಿದೋ
ಆಳ ಏಳು ಸಾವಿರ ಮಂದಿ ಮ್ಯಾಲೆ ತಿರುಗುತೈತಿ
ಮ್ಯಾಲೆ ಮೂರೋ ಮೇಘ || ತಂದಾನ ||

ಮೂರು ಮೇಗದಾಗ ತಿರುಗುತ್ತಿದ್ರೆ ನೆಳ್ಳು ಕಾಣ್ತೈತಿ

ಹೇ ಹಾಳು ಮಾದ್ರ ಚೋದಲೇ
ರಾಮ ಬಂದ ರಾಮ ಬಂದ
ಹಾಕ್ರಿ ಹಾಕ್ರಿ ಅಂತಾರೋ
ಭಲ್ಲೆವು ತಗಂತಾರಣ್ಣ ಅವ್ರು ನೆಳ್ಳಿನ್ಯಾಗ ತಿವಿತ್ಯಾರ || ತಂದಾನ ||

s ಇನ್ನಮುಂದ ರಾಮಯ್ಯೋ
ಏಡರೆಕ್ಕಿ ಬಲರೆಕ್ಕ್ಯೊ
ಹೊಟ್ಟಿಗೆ ಹಂಗೆ ಆನ್ಸ್ಯಾನ
ಗದ್ಗದ್ಗದ್ಗದ್ಅಂತ ತಿರುಕ್ಯಂತೋ
ಏಳು ಸಾವಿರ ಮಂದ್ಯಾಗ ಕುದುರಿ ಕುಪ್ಪಲಿಸಿ ಹಾರೈತೋ || ತಂದಾನ ||

s ಕುಪ್ಪಳಿಸಿ ಹಾರಿ ಬಿಟ್ಟೈತೋ
ಎಡಕ್ಕೆ ಬಂದ್ರೆ ಎಡಗೈಲೆ
ಬಲಕ್ಕೆ ಬಂದ್ರೆ ಬಲಗೈಲೆ
ಗಡ್ಡ ಸಿಕ್ರೆ ಗಡ್ಡನ್ನ
ತಲೆ ಸಿಕ್ರೆ ತಲೆಯನ್ನ
ಕೈ ಸಿಕ್ರೆ ಕೈಯನ್ನ
ಅಲ್ಲಾರೆ ಅಲ್ಲಾರೆ
ಸಲಾಂ ಸಲಾಂ ರಾಮಯ್ಯ
s ಅಲ್ಲಾ ಅಲ್ಲ ಮುಲ್ಲಾಮಾಡ್ತಿನಿ
ಯಾರಂತ ತಿಳಿದೀರೆ
ಇನ್ನು ಮ್ಯಾಲೆ ನೋಡಲೇ
ಮಂತ್ರಿದವ್ನು ಮಲ್ಲಾದ್ರೆ ನಿಮ್ಗ ಮಂತ್ರಿಸ್ಯಾಗಿ ಬಿಟ್ಟೇನ || ತಂದಾನ ||

s ಒಂದು ಏಟು ಕಡ್ದಾರೆ ಸಾವಿರ ತಲೆ ಸಾಪು ನೋಡಣ್ಣಾ
s ಎಡಗೈಲೆ ಕಡ್ದಾರೆ ನೂರು ತಲೆ ಸಾಪು ನೋಡಣ್ಣಾ || ತಂದಾನ ||

04_80_KMKM-KUH

ತುರುಕುರ್ನು ಕಡಿತಿದ್ರೆ ನೋಡಿದಾ
ಯಾರು ಡಿಲ್ಲಿಯವ್ನು
ಕುರ್ಚಿಮ್ಯಾಲೆ ಕುಂತೋವ್ನು

ಅರೆ ಬಂದ ಬಂದ ರಾಮಯ್ಯ
ಓಡು ಓಡು ರಾಮಯ್ಯ
ಟೋಪಿ ಬಗಲಾಗ ಇಟ್ಕಂಡ
ಒಂದು ಕುದ್ರಿ ಮ್ಯಾಲಣ್ಣ
ಮೂವರು ಕುಂದ್ರತಾರ
ಕುದ್ರಿ ಮಕಂಬಿಡುತೈತೋ || ತಂದಾನ ||

e ಬಂದ ಬಂದ ರಾಮಯ್ಯ
ಕುದ್ರಿ ಹೋಗುವಲ್ದಲೆ
ಕುದ್ರಿ ಎದ್ದೇಳವಲ್ಲದಂತ
ಕುದ್ರಿ ಬಿಟ್ಟಾರ
ಒಂಟೆಗಾಗಿ ಬಂದಾರ
ಏಳೆಂಟು ಮಂದ್ಯನ್ನ
ಒಂದು ಒಂಟೆಮ್ಯಾಲೆ
ಅದು ಮಕ್ಕಂಡು ಬಿಡ್ತಣ್ಣ
ಯವ್ವಾಯಮ್ಮ ಬಂದು ಬಿಟ್ಟ
ಟೋಪಿ ಬಗ್ಲಾಗ ಇಟ್ಟಾರ
ಓಡಿ ಓಡಿ ಹೋಗ್ತಾರ || ತಂದಾನ ||

ರಾಮ ಕಡಿಕ್ಯಾಂತ ಕಡಿಕ್ಯಾಂತ
ಬರೋ ರಾಮ ನೋಡ್ದ
ಅಬಾಬ ಒಂದು ಕುದ್ರಿಮ್ಯಾಲೆ
ಏಳೆಂಟು ಮಂದಿ
ಆ ಕುದ್ರಿ ನಡೀಲಾರ್ದ ಮಕ್ಕಂತೈತಿ
ಏs ಯಮ್ಮ ಮಕ್ಕಂತೈತೆಂತ
ಆಗ ಒಂಟೆ ಮ್ಯಾಲೆ ಕುಂದ್ರತಾವ
ಒಂಟಿ ಮಕ್ಕಂಣ ಬಿಡ್ತು
ಓಡ್ಹೋತಾರ
ಅಲೆಲೆ ಬಡವರ್ನು ಎಲ್ಲ ರೊಕ್ಕಾ ಕೊಟ್ಟು
ಕಡಿಬಾರಪ್ಪ ಅಂದ್ರೆ
ಎಲ್ಲಾರೂ ಕಡ್ದು ಬರ್ತಾರ
ಇವರನ್ಯಾಕೆ ಕಡಿಬೇಕು
ಕಡಿದವ್ನ ಕಡಿಬೇಕು ಅಂತ

ಕುದ್ರಿ ಮ್ಯಾಕ ಎಬ್ಬಿಸ್ಯಾನ ಆತನ ಮುದ್ಯಾಗಿ ಇಳಿಸ್ಯಾನ || ತಂದಾನ ||

ಮಳ ಕಾಲಿಗೆ ಬೀಳ್ತೈತಿ
ಆತನ ಗಜಗಡ್ಡ
ಡಿಲ್ಲಿ ಗೋಲ್ಕಂಡದ ನವಾಬುದಾರ
ಆಗ ಗಡ್ಡ ಎಡಗೈಲಿ ಹಿಡ್ಕಂಡ ಮಡಿಸಿ
ರೀ ಯಾರಂತ ತಿಳ್ಕಂಡಿಯೀ
ನೀನು ರಾಜ್ಯವೆಲ್ಲಾ ಒಂದು ಅಂತಿಯಾ
ಆಂಧ್ರವೆಲ್ಲಾ ನಿಂದು
ಕರ್ನಾಟೆಲ್ಲಾ ನಂದು
ಕರ್ನಾಟದ ರೊಕ್ಕ
ಆಂಧ್ರಕ್ಕ ಖಳ್ಸೋದಿಲ್ಲ
ನಿಂದೇ ಇರಬೋದು ರಾಜ್ಯವು
ನಾನು ಮಂತ್ರಿ ಇಪ್ಪತ್ತಳ್ಳಿ ಇನಾಮು
ಅರವತ್ತೂರು ಸಂಬಳ ನಂದು

ಇನ್ನೇನು ಕೊಟ್ಟೀರ ನನ್ನ ಕರ್ನಾಟಿಗೆ ನೀವು || ತಂದಾನ ||

ಸಂಬಳ ಆಯ್ತು ಇಪ್ಪತ್ತಳ್ಳಿ
ಅರವತ್ತೂರಿಗೆ ನನಗಿನ್ನೂ
ಇನಾಮು ಆಯ್ತು
ಇನ್ನೇನು ಕೊಟ್ಟೀಯಿ ನೀನು
ಈಗ ನೈಯಾ ಪೈಸ ಕೊಡೋದಿಲ್ಲ
ಇಗೋ ನಿನ್ನ ಗಡ್ಡ ಕೊಯ್ತಿನಿ ನೆಪ್ಪ ಮಾಡ್ಕೊ
ನಿನ್ನ ಬಿಡೋದಿಲ್ಲ ಡಿಲ್ಲಿ ಪಟ್ಣಕ್ಕೆ
ಅಯ್ಯೋ ರಾಮ

ಸರ್ವತಪ್ಪು ರಾಮಯ್ಯ ನಿನ್ನ ಮಂತ್ರಿಯಾಗಿ ಮಾಡ್ಸೇದವ್ನ || ತಂದಾನ ||

ಯಪ್ಪಾ ಮಂತ್ರಿಸ್ಬೇಡ ರಾಮಯ್ಯ
ಜೀವ ತಗೀಬ್ಯಾಡ ರಾಮಯ್ಯ
ಗಡ್ಡ ಬಿಡೋ ರಾಮಯ್ಯ
ನಿನ್ನ ಸಲಾಮ್‌ ಮಾಡ್ತಿನಿ
ಸತ್ರೇನು ಬರೋದಿಲ್ಲ
ನಿನ್ನ ಆನೆಗೊಂದಿಗೆ ರಾಮಯ್ಯ ನಾನು || ತಂದಾನ ||

ರಾಮ
ಸತ್ರೆ ಬರೋದಿಲ್ಲ
ನಿಮ್ಮ ಆನೆಗೊಂದಿಗೆ ರಾಮ
ಸಲಾಂ ಮಾಡ್ತಿನಿ
ಈಗ ನನ್ನ ಗಡ್ಡ ಕೊಯ್ಯಿಬೇಡ
ನನ್ನ ಜೀವ ಕಳೀಬ್ಯಾಡ
ಆಂಧ್ರೆಲ್ಲಾ ನನಗಿರ್ಲಿ
ಕರ್ನಾಟ ನಿಂದೇ ಇರ್ಲಿ
ಅರ್ಧ ಊರು ಇನಾಮು ಕೊಟ್ಟಂಗ
ಅರ್ಧ ಲೋಕ ನಿನಗ ಸಂಬಳ ಕೊಟ್ಟಂಗ

ಈಗ ನೀನೇ ತಿನ್ನು ರಾಮಯ್ಯ ನಾನು ಸತ್ರೇನು ಬರಾದಿಲ್ಲ || ತಂದಾನ ||

ಬರೋದಿಲ್ವ ಡಿಲ್ಲಿಯವನೇ
ಬರೋದಿಲ್ಲಪ್ಪ ರಾಮ
ಈ ಗಂಗಾಜ್ಞಾ ನಾನ್ ಬರೋದಿಲ್ಲ
ನೋಡೋ ಮೈ ತುಂಬ ಜೀವ ಇಟ್ಕಂಡು
ಡಿಲ್ಲಿ ಗೊಲ್ಕೊಂಡ ಪಟ್ಣದಾಗ ಇರ್ಬೇಕು ನೀನು
ಆಂಧ್ರಲಿಂದ ತಾವು ಕರ್ನಾಟಿಗ ಬಂದ್ರೆ

ನಿನ್ನ ಜಲ್ಮ ಉಳಿಯೋದಿಲ್ಲಲೇ
ನಿನ್ನ ಜೀವ ಉಳಿಯೋದಿಲ್ಲಲೇ || ತಂದಾನ ||

ಅಂತ ಅಷ್ಟಾಗಲ್ಯಪ್ಪ ರಾಮಯ್ಯ ಅಂದ್ರೆ
ಆಗ ರಾಮ ಕೈ ಬಿಟ್ಟ
ಕೈ ಬಿಡೋ ಹೊತ್ತಿಗೆ
ಡಿಲ್ಲಿ ಪಟ್ಣಕ್ಕೆ ದಿಲ್ಲೆವ್ನು ಹೋದ
ರಾಮ ಇನ್ನು ಕುದುರಿ ಹಾಕ್ಯಂಡೊ
ಆಗ ಆನೆಗೊಂದಿ ರಾಜ ಕಛೇರಿತಲ್ಲಿ ಬಂದ
ಶರಣಪ್ಪ ತಂದಿ ಕಂಪ್ಲಿರಾಜ
ಶರಣು ಮಾವ ಬಚ್ಚಣ್ಣ
ಶರಣಪ್ಪ ರಾಮ

ಯಮ್ಮಾ ರಾಮ ಇದ್ದಿದ್ಗೆ ಓಡಿ ಹೋದ್ರಮ್ಮ
ರಾಮ ಇದ್ದಿದ್ಗೆ ಓಡಿ ಹೋದ್ರು ದಿಲ್ಲಿಯವ್ನ || ತಂದಾನ ||

ರಾಮ ಎಷ್ಟು ಬಲ ನಿನಗೈತೋ ರಾಮ
ದೇವರು ಕೊಟ್ಟಿದ ಬಲ ಅಪ್ಪ ನಿನಗೆ || ತಂದಾನ ||

ರಾಮ ದೇವ್ರು ಕೊಟ್ಟಿದ ಬಲ
ನಿನ್ನ ಪರಾಕ್ರ ಎಷ್ಟಿರಬೋದು
ಶಕ್ತಿ ಎಷ್ಟಿರಬೋದು
ರಾಮ ನೀನು ಲೋಕಕ ಹುಟ್ಟಿದ
ರಾಮ ಅಲ್ಲಪ್ಪ
ನೀನು ಪರಮಾತ್ಮ ಕೊಟ್ಟಿದ ಮಗ
ಎಷ್ಟು ಬಲ ಇರಬಹುದಪ್ಪ
ಆಗ ನೀನಾಗಿ ಓಬ್ನೇ
ಏಳು ಸಾವಿರ ಮಂದಿನ ಓಡಿಸಿ ಬಿಟ್ಟಿ
ಇಲ್ದ್ರೆ ನಮ್ಮ ಆನೆಯಿಂದ
ತುಳ್ಸಿಬಿಡ್ತಿದ್ದ ಆನೆಗೊಂದಿ
ಈಗ ಕೊಬ್ಬು ನಾಟುತ್ತಿದ್ದ
ಕೊಬ್ಬು ತಿಳೀತಿದ್ದ ಆನೆಲ್ಲಿದ್ದ
ಈಗ ಇನ್ನ ಬಾಳೆ ಗಿಡಗಳು ನಾಟುತ್ತಿದ್ದ
ಆಗ ಸ್ವಾದರಮಾವ ಭಚ್ಚಣ್ಣ ನೋಡ್ದ
ಮಾವ ಈ ರಾಮ ಇದ್ದದಗೆ
ಈಗ ಹದಿನೆಂಟು ವಯಸ್ಸು
ಉಕ್ಕಿ ಮೀರಿ ಬಿಡ್ತು
ಹೆಚ್ಚಾಗಿ ಬಿಡ್ತು
ಈ ರಾಮನು ಬಲಕ್ಕೆ ತಕ್ಕಂತ
ಓರುಗಲ್ಲು ಗೆದ್ದುಕೊಂಡು ಬಂದ
ಕುದುರಿ ಗೆದ್ದುಕೊಂಡು ಬಂದ
ಡಿಲ್ಲಿಯವನ್ನ ಓಡಿಸಿದ