ಆನೆಗುಂದಿ ಕಂಪಿಲಿ ರಾಜ
ಮುನ್ನೂರು ಮಂದಿನ್ನ ಕಟ್ಟಿಕ್ಯೆಂಡು
ಆಗ ಕುದುರಿಮ್ಯಾಲೆ ಕುಂತ್ಕೊಂಡು
ಆಗಿನವ್ರು ಭಲ್ಲೆವು ತಗಂಡು
ಈಗ ಮೂರು ದಡೆವು ಚಂದ್ರಯುದ್ಧ ತಕಂಡು
ಈಗ ಬ್ಯಾಟಿಮಾಗ ಹೊಂಟ
ಆಗ ಬ್ಯಾಟಿಮಾರ್ಗ ಹೊಂಟುವಾಗ
ಕೇಳಲೋ ಭಾವ ಮೈದ ಬಚ್ಚಣ್ಣ
ಏನ್ಭಾವ
ಏನಿಲ್ಲಪ್ಪಾ
ನನ್ನ ಚಿಕ್ಕ ಹೆಂಡ್ತಿ ರತ್ನಾಕ್ಷಿ ಇದಾಳ
ಬಾಳ ಮನೆ ಕಡೆಗೆ ನೋಡಿಕೊಂತ ಇರ್ರಪ್ಪಾ ಅಂದ
ಅಷ್ಟೆ ಆಗಲ್ರಿ ಅಂದ
ಆತ ಮಂದಿನ ಕರ್ಕಂಡು

ಅನ್ನಾ ಮುನ್ನೂರು ಮಂದಿ ಕರ್ಕಂಡು
ತಾನು ಹೊಂಟು ಬರುತಾನ
ತೋಥಡಿ ಇನ್ನ ರಣವಿಲಿ ಹೊಡಿತಾರಾ
ಒಳಗಿನ ಶಬ್ದ ಮಾಡುವುದು
ಒಂದು ಗಾಗುವುದಿಲ್ಲಣ್ಣಾ
ಎರಡು ಗಾವುದವಲ್ಲಣ್ಣಾ
ಊರು ಬಿಟ್ಟು ಆರಂಡಿಗೆ
ಹನ್ನೆರಡು ಗಾವುದ ಬಂದಾನ || ತಂದಾನ ||

ಆರಂಡಿಗೆ ಬಂದ್ರು
ಉಗಾದಿ ಬ್ಯಾಸಿಗಿ ಕಾಲ
ಪಾಡ್ಯ ದಿವುಸ ಬಂದ್ರೆ
ಮ್ಯಾಲ ಬಿಸಿಲು ಉರಿತಾವ
ಕೆಳಗೆ ಕಾಲು ಸುಡುತಾವ

ಮುನ್ನೂರು ಮಂದೆನ್ನ ನೀರಾಡಿಕೆವಾಗೈತೋ
s ಹೊಟ್ಟೆಹಸಿವಿ ಆಗೈತೋ ಜನಲೋಕದವರೀಗೆ || ತಂದಾನ ||

ಏನ್ರಿ
ನೀನಿರಿಗುಟ್ಟಿದ ಜಲ್ಮ ಅದಕ್ಕ ಬೆಳೆದ ಜಲ್ಮ
ನಮ್ಮ ಜೀವ ತಡೆಯೋದಿಲ್ಲರ್ರಿ
ಆಗ ನೀರಡಿಕೆ ಅಂತ
ಉಗಾದಿ ಬ್ಯಾಸಿಗೆ ಕಾಲ
ಓಹೋ ಕೇಳಪ್ಪಾ ಜನಲೋಖ
ನಿಮ್ಮನ್ನ ಕರಕಂಡು ಬಂದು
ಬ್ಯಾಟಿ ಮಾರ್ಗ ನಿಮ್ಮನ್ನ ಯಾಕ ಕೊಲ್ಲಬೇಕು
ನಡ್ರಿ ವಾಪಸು ಹಿಂದಕ ಹೋಗಾನ
ಅಂತಾ ನಾರಿಹಳ್ಳಿ ಬಂದ್ರು ಊರು ಮುಂದೆ
ನಾರಳ್ಳತಲ್ಲಿ ಎಲೆ ವನಂತ್ರ
ಆಗ ಕಾಸುಬಾಕು
ಕದಿರೀಕೆ ಖರ್ಜೂರ ಬಾಳೆಗಿಡಗಳ ತ್ವಾಟ
ನಾರಳ್ಳಿದಾಗ ಆಗ ಬಂದು ನೀರು ಕುಡಿಯೋ ಟೇಮಿನಾಗ
ಈಗ ಜೀವಕ್ಕಾಗಿ
ಈ ಜನಲೋಕವೆಲ್ಲ ನೀರು ಕುಡಿದರು
ಈಗ ತಾವಾಗಿ ಬರ್ತಾರ
ಅವರ ಕತೆ ಹಂಗಿರ್ಲಿ