ಮುಂಡ ಐತಿ ಇನ್ನ ರಾಮುಂದು ಆನೆಗುಂದಿಲಿ ಅಂತ
ತಗಂಡು ಬರ್ತಿದ್ರೆ
ಈ ಹುಸೇನಿ ನೋಡಿಬಿಟ್ಟು
ರಾಮ ಜೀವ ಕಲೀಲಾರದೆ ಜೀವ ಕಳಕಂಡೆ
ಈಗಿನವ್ರು ರಾಜ್ಯವು ಕೊಡುತ್ತಿದ್ದೆ
ರಾಜ್ಯನೇ ಒಲ್ಲೆಂತ ಸತ್ತೇನೋ ರಾಮಯ್ಯ
ನೀನು ಸತ್ಯಮ್ಯಾಲೆ ನಾನ್ಯಾಕ ಉಳಿಬೇಕು
ಎರಡು ಅವತಾರದಲ್ಲಿ ಬಂದ್ರು
ಜೀವಕ್ಕಲೀಲಾರದವನು
ನಿನ್ನ ಜೀವತಲ್ಲಿ ನನ್ನ ಜೀವ ಕಳಕಂತೀನಿ ಅಂತ

ಚಂದ್ರಾಯ್ದ ಹಿಡದಾಳ
ಗರ್ಗರ್ತಿರುಗಿಕೊಂಡು
ಕಡಿಕ್ಯಂಡು ಬಿಟ್ಟಾಳ ರಾಮ ಅಂತ ಕತ್ತರ್ಸಿ ಬಿದ್ದಾಳ
ಡಿಲ್ಲಿ ಮಗಳು ಹುಸೇನಿ, ರಾಮ ಅಂತ ಜಲ್ಮ ಬಿಟ್ಟಾಳ || ತಂದಾನ ||

ರಾಮ ಅಂತ ಕಡಿಕ್ಯಂಡು ಸತ್ತು ಹೋದ್ಳು
ಸತ್ತು ಹೋದ ಮ್ಯಾಲೆ ಆಗ ಕುಲದಲ್ಲಾಗಿ
ಡಿಲ್ಲಿದವ್ನು ಈಗ ತಾವು ಬಂದು ಬಿಟ್ಟ
ಬಂದಷ್ಟಿಗೆಲ್ಲ
ಆಗ ಆನೆಗುಂದಿ ಪಟ್ಣದಾಗ
ಮುಂಡದ ಮ್ಯಾಲೆ ಬಿದ್ದು ದುಃಖ ಮಾಡ್ತಾನ
ಡಿಲ್ಲಿದವನು ನೋಡ್ದ

ಮಗಳ ಇನ್ನ ನೀನು ಕಡಿಕ್ಯಂಡು ಸತ್ತೇನಮ್ಮಾ
ರಾಮ ಸತ್ತೇತಲ್ಲಿ ನೀನು ಸತ್ತೇನಮ್ಮಾ
ರಾಮನ ಜಲ್ಮ ಕಳದು ಜಲ್ಮ ಬಿಟ್ಟೇನಮ್ಮಾ ||ತಂದಾನ ||

ಅಂತಾ ಡಿಲ್ಲಿದವನು ಮಗಳ ಮ್ಯಾಲ
ಬಿದ್ದು ದುಃಖ ಮಾಡ್ತಾನ
ಬೆಳ್ಳಿ ಸೂಜಿಕೂಟ ಬೆಳ್ಳಿ ತಂತಿಕೂಟ
ಕೂದಲಷ್ಟು ದಪ್ಪಕೂಟ
ಆಗ ಮುಂಡಗೆ ತಲಿಗೆ ಹೊಲಿದು ಬಿಟ್ಟ
ಯಾರು
ಡಿಲ್ಲಿದವನು ಮಗಳು ಹುಸೇನಿಗೆ
ಆಗ ಕುಣಿತೋಡಿ
ಗಂಧದ ಚಕ್ಕಿ ಹಾಕಿ
ಆಗ ಮಗಳಿಗೆ ಉರಿ ಹಚ್ಚಿ
ಈಗ ಸಮಾದಿ ಕಟ್ಟಿಸಿಬಿಟ್ಟ
ಈಗ ಆನೆಗುಂದಿ ಪಟ್ಣದಾಗ
ಆಗ ಡಿಲ್ಲಿ ಪಟ್ಣದ ಹುಸೇನಂಬಾಕಿ
ಆ ಆನೆಗುಂದ್ಯಾಗ

ದರಗಾವನ್ನು ನಿನಾಗಬೇಕು ನನ್ನ ಮಗಳೆ
ಆನೆಗುಂದಿದ್ಯಾಗಮ್ಮ ನಿನ್ನ ಲೋಕಪೂಜೆ ಇಲ್ಯಮ್ಮ
ಇಲ್ಲೇ ಜೀವ ಬಿಟ್ಟಿ || ತಂದಾನ ||

ದರಗ ಹುಸೇನಂತ
ಹುಸೇನಿ ಇಲ್ಲೇ ಇರಬೇಕಮ್ಮ
ನನ್ನ ಮಗಳೆ ಆನೆಗುಂದ್ಯಾಗಂತ
ಆಗ ಸಮಾಧಿ ಕಟ್ಟಿ
ಬಣ್ಣದ ಶಲ್ಲೇವು ಹೊದಿಸಿ
ಆಗ ದಡಿ ಅಂತ ಮಲ್ಲಿಗೆ ಹೂ ಹಾಕಿದ
ಯಾರು
ಡಿಲ್ಲಿದವನು