ಈಗ ಕಾಂಭೋಜರಾಜಗೆ
ಅಂಬ್ರಿ ಕಾಳಿನಷ್ಟು ಹೋಗಿ
ನಿಂಬೆಕಾಯಷ್ಟು ಅಗಲಾಯ್ತು
ನಿಂಬೆ ಹಣ್ಣಿನಷ್ಟು ಹೋಗಿ
ಟೆಂಗಿನಕಾಯಿ ಅಗಲಾಯ್ತು
ಟೆಂಗಿನಕಾಯಿ ಅಗಲ ಹೋಗಿ
ಕುಂಬಳಕಾಯಿ ಅಗಲಾಯ್ತು
ಬೆನ್ನಗಲಾಗ ಬೊಬ್ಬೆ
ಇನ್ನ ಹುಣ್ಣು ಒಡೆದಿಲ್ಲ
ಒಳಗ ಹದ್ನಾರು ಹಲ್ಲು ಕೂಟ ಕಡಿತಿದ್ರೆ
ಆಗ ದಬ್ಬಣ ಸೂಜಿ ತಕ್ಕಂಡು
ಕಚಕಚ ಕುದ್ಸಿದಂಗೈತಪ್ಪಾ ಚುಚ್ಚಿದಂಗ
ಬಗ್ ಬಗ್ ಉರೀತಿದ್ರೆ ಎಡಗೈಲಿ ಬಲಗೈಲಿ
ಲಬ್‌ಲಬ್‌ಹೊಯಿಕ್ಯಂತಾನ

ಯಪ್ಪಾ ಸಾಯ್ತಿನಿ ನಾನು ಉಳಿಯೋದಿಲ್ಲ ಶಿವನೆ
ಕೊಡೊ ಹೊಗ್ಯ್ರೊ ವಿಷ ಕುಡಿದು ಸಾಯ್ತಿನಿ ನಾನು
ನನಗೆ ಭಲ್ಲ್ಯವುಕೊಡ್ಯ್ರೋ ತಿವಿಕ್ಯಂಡು ಸಾಯ್ತಿನಿ ನಾನು
ಯಪ್ಪಾ ಚಂದ್ರಾಯ್ಧ ಕೊಡ್ಯೋ ಕಡಿಕ್ಯಂಡು ಸಾಯ್ತಿನಿ ನಾನು || ತಂದಾನ ||

ಏನಂತಾರ ಕೈಯಾಗಿರೋರು
ಆಗ ಸಂಬಂಳದವರು
ಏನ್ಮಾಡಬೇಕ್ರಿ ಬೊಬ್ಬೆ ಒಡದ್ರೆ
ಯಾವದೋನ್ನ ತಪ್ಪಲು ತಿಪ್ಪೊ ಗುಂಡಿಗ್ಹಾಕಿ ರುಬ್ಬಿ ಔಷಧ ಕಟ್ಟಕ
ಮೇಟಿ ಔಷಧ
ಈಗ ಯಾರು ಇನ್ನ ಹುಡುಕ್ಯಾಡಬೇಕಲ್ರಿ
ಈ ಬೊಬ್ಬೆ ಒಡೇದಿಲ್ಲ ಹ್ಯಾಂಗ ಮಾಡ್ಬೇಕ್ರಿ
ಅಂಬೋತ್ತಿಗೆ ಯಪ್ಪಾ ಸತ್ತೋತ್ತಿನಿ
ಜಲ್ಮ ಉಳಿಸ್ರಿ
ಎಡಕ್ಕ ಹೊಳಾಕ್ಕಿಲ್ಲ ಬಲಕ್ಕ ಹೊಳ್ಳಾಕ್ಕಿಲ್ಲ
ಬಕ್‌ಬಾರ್ಲಿ ಮಲಗಬೇಕು ಬೆನ್ನ ಅಗಲಾಗ
ಬಾರ್ಲಿ ಗಂಜಿ ಕುಡಿಬೇಕು
ಆಗ ಏನು ಮಾಡಿದ
೧೨ ಗಂಟೆ ಇನ್ನು ಶನಿಮಹಾತ್ಮ
ಶನಿವಾರ ದಿವಸ

ಹುಣ್ಣುವಾಗ ನೋಡಮ್ಮ ಇನ್ನ ಫಟ್ಟಂತ ಒಡೆದೈತೋ
ಬೊಬ್ಬೆ ಒಡಿತು
s ಒಂದು ಕೆಬ್ಬಿಣ ಪುಟ್ಟಿಯಮ್ಮ ಕೀವು ರಕ್ತಯೆಲ್ಲಾ ಇಳಿದೈತೋ || ತಂದಾನ ||

10_80_KMKM-KUH

ಒಂದು ಕೆಬ್ಬಿಣ ಪುಟ್ಟಿ ಕೀವು ರಕ್ತ ಇಳಿದು ಬಿಡ್ತು
ಹೊಟ್ಟ್ಯಾಗಿನ ಕರುಳ ತಿರುವಿ ಬರತಾವ
ಏನನಾಯ್ತು
ಬರೀ ಎಲುಬು ಕಾಣ್ತಾವಪ್ಪ
ಒಳಗ ಕಳ್ಳು ಕಾಣ್ತಾವ
ಆಗ ಬೊಬ್ಬೆ ಒಡಿತಂತ
ಅಪ್ಪಾ ನನ್ನ ಜಲ್ಮಕ ಮೇಟಿ ಔಷಧ ತಂದು ಹಾಕ್ರಲೋ
ನನ್ನ ಜಲ್ಮ ಉಳಿಸಿರಿ
ಅಂದ್ರೆ ಜಲ್ಲಿ ಪುಟ್ಟಿ ತಗಂಡು
ಆಗಿನ್ನ ಬಡಿಮಟ್ಟಿ ಕಡೀಗೆ ಬಂದ್ರು
ಅಂಬ್ರೆ ತಪ್ಪಲ ಎಕ್ಕೆ ತಪ್ಪಲ ಬೇವಿನ ತಪ್ಲ
ಆಗ ಹುಣಿಸೇ ತಪ್ಲ ಎಲ್ಲಾ ತಪ್ಲ ಹರ್ಕಂಡು ಬಂದ್ರು
ಗುಂಡಿಗೆ ಹಾಕಿ ನೀರು ಹಾಕಿ ರುಬ್ಬಿಬಿಟ್ರು
ವಿಷ ತಪ್ಲ ಇಟ್ರೆ
ಈ ಶನಿ ಮಹಾತ್ಮ ಏನಂತಾನ

ಮುಂಚಾಗಿ ನೋಡಪ್ಪ ನನ ವಿಷ ತಪ್ಲ ಬಂದೈತೆ ನನಗೆ || ತಂದಾನ ||

ಹುಣ್ಣು ಒಳಗೆ ಶನಿಮಹಾತ್ಮ ಕುಂತುಬಿಟ್ಟಾನ
ಬೆಮ್ಮಮ್ಯಾಲೆ ಬಾಯಿ ತೆರಕಂಡು
ಹುಣ್ಣು ಎಷ್ಟು ಅಗಲ ಐತೋ
ಅಷ್ಟಗಲ ಬಾಯಿ ತೆರದಾನ ಒಳಗ
ಆಗ ಪುಟ್ಟಿತುಂಬ ತಪ್ಪಲ ತಂದು
ರುಬ್ಬಿ ಗುಂಡಿಗೆ ಹಾಕಿ
ತಪ್ಪಲು ವಿಷ ತಪ್ಪಲ ಇಟ್ರೆ
ಬಾಯಿ ತುಂಬ ಆಗಿತಪ್ಪ ಶನಿಮಹಾತ್ಮನಿಗೆ
ಬಟ್ಟೆ ಹೊದಿಸಿದ್ರೆ
ಶನಿಮಹಾತ್ಮ ಗುಟುಕ್ ನುಂಗಿ ಬಿಟ್ಟ ವಿಷ ತಪ್ಪಲ
ತಾಸೊತ್ತು ಸುಮ್ಮನಿದ್ದ
ಎರಡು ಜೀವ ಹುಟ್ಟುಸಲಾಯ್ತ
೧೬ ಹಲ್ಲಿನ ಕೂಟ ಕಡೀತಾನ
ಬಗ್ ಬಗ್ ಅಂದಾಗ

ಲಬ್ ಲಬ್ನೆ ಹೊಯ್ಯಿಕ್ಯಂತಾನ
ನೋಡರಲೋ ನನ್ನ ಹುಣ್ನು ನೋಡರಲ್ಲೋ
ಸಾಯ್ತಿನಲ್ಲೋ ನಾನು ಉಳಿಯೊದಿಲ್ಲ ಶಿವನೇ || ತಂದಾನ ||

ನೋಡಿದ್ರೆ ಪುಟ್ಟಿ ತಪ್ಪಲದಾಗ ಹಿಡಿಕಿ ತಪ್ಪಲ ಕೂಡ ಇಲ್ಲ
ಅಯ್ಯೊಯ್ಯಪ್ಪ ಇದೆಂಥ ಹುಣ್ಣಲೋ
ಅಯ್ಯೋ ರಾಜ್ಯ ವಾಳೋನಿಗೆ ರಾಕ್ಷಸ ಹುಣ್ಣಹುಟ್ಟೈತಿ
ಬೆನ್ನಿಗೆ ಶನಿಮಹಾತ್ಮ ಸೇರಿಬಿಟ್ಟಾನ
ಹ್ಯಾಂಗಾರೆ ಹೋತಾನಪ್ಪ
ಯಪ್ಪಾ ನಿಮಗ ಶರಣು ಮಾಡ್ತೀನಿ
ಲೇ ಮೇಟಿ ಔಷಧ ಹಾಕೋರಿದ್ದಾರೆನ್ನ ಕರಕಂಡುಬರ್ರೀ
ಕೇಳಿದಷ್ಟು ಕೊಡ್ತಿನಿ
ನಮ್ಮ ಜಲ್ಮ ಗಡ್ಡಿಗೆ ಹಾಕ್ರಿ
ಆರು ಮಂದಿ ಮಕ್ಕಳು ಇದಾರ
ಎಷ್ಟು ಕಷ್ಟು ಪಡ್ದ
ಜೀವಗ್ಹುಟ್ಟಿದ ಮಕ್ಕಳ ಜೀವ ಉಳಿಸ್ತೀನಂದ್ರೆ
ಒಬ್ಬೊಬ್ಬನು ಹುಲಿ ಇದ್ದಂಗ ಇದಾನ
ಯಪ್ಪಾ ಹುಟ್ಟಲಾರದ ನಮ್ಮಪ್ಪಗ ಹುಟ್ಟಿತು

ಸಾಯೆನ್ನ ಸಾಯ್ವಲ್ಲ ಜಲ್ದಿ ಬೇಸಾಗ್ವಲ್ಲಾ || ತಂದಾನ ||

ಲೋಕೆಲ್ಲ ನಮ್ಮನ್ನ ಬೈಯಿಸಾಕ ನಿಂದ್ರಿಸಿಬಿಟ್ಟಾರ
ಏ ಹುಲಿ ಇದ್ದಂಗೈದೀರಲ್ಲೋ
ಕತ್ತಿಗೆ ಹುಟ್ಟಿದ್ರೆ ಹತ್ತುಮಂದಿ ಏನ್ಮಾಡಬೇಕು ಭೂಮಿಮ್ಯಾಲೆ
ನಿಮ್ಮ ತಂದಿಗ ಜಲ್ಮ ಹುಟ್ಟಿದವ್ರು
ಮೇಟಿ ಔಷಧ ಎಲ್ಲೆನ್ನ ಹಾಕೋನು
ಹಿಡ್ಕಂಡು ಬಂದು ಬೇಸು ಮಾಡಿಕ್ಯಂಬಾಕಿಲ್ಲಂತ ಅಂತಾರೆ
ಏಲ್ಲೈದಾರಂತ ನಾವು ಹುಡುಕ್ಯಾಡಾನ
ಅಂತ ಮಕ್ಕಳು ದುಃಖ ಮಾಡ್ತಾರ
ಆರು ಮಂದಿ ಹೆಂಡ್ರು ಇದ್ರೆ
ಹೆಂಡ್ರಿಗೆ ಗಂಡ್ರು ನೋಡ್ತಾರ
ಗಂಡ್ರಿಗೆ ಹೆಂಡ್ರು ನೋಡ್ತಾರ
ಜೀವ ಹೋಗೋ ಕಾಲಕ್ಕೆ ಯಾವ ಹೆಂಡ್ರು
ಕೊಟ್ಟಿದ್ದ ದೇವರು ಯಾವ ಹೆಂಡ್ರು ಐಳಿದಾಗ
ಉಳಿಸಿಕ್ಯಂಬಾಗಿಲ್ಲ ಯಾರು ಉಳಿಸಿಕ್ಯಂಬಾಗಿಲ್ಲ
ಹೆಂಡ್ರು ಏನಂತಾರ
ಏ ಯಮ್ಮಾ ಹೆಣನಾಥ ಹೋಡೀತಾನ
ಹೊಟ್ಟ್ಯಾಗನ ಕರಳು ತಿರುಗಿ ಬರ್ತಾವ

ಯಮ್ಮ ಯಂಗ ಹೋಗಾನ ನಾವು ನೊಡು ಯಮ್ಮಾ
ಪಾಪ ಮಾಡಿದವನು ಹುಣ್ಣು ಹುಟೈತಿಯಮ್ಮ
ಕರ್ಮ ಮಾಡಿದವನಮ್ಮೊ ಯಮನ ಗುಂಡ ತೋಡಿಸ್ಯಾನ ದೇವರು || ತಂದಾನ ||

ಯಮ್ಮಾ ಸಾಯ್ಲಿ ಇರಲಿ ಹೋಗೋದಿಲ್ಲ ತಾಯಿ
ಅಂತ ಆಗಿನವ್ರು ಇನ್ನ ಗಲೀಜು ನಾತಪ
ಅವರೇ ಪುಣ್ಯಾತ್ಮರು ಮಕ್ಕಳು ಇದ್ಹಂಗ
ಯಾರು
ಕೈಯಾಗಿದ್ದೋರು
ಗೋಧಿಗಂಜಿ ಕಾಸೋದು ಆಗ ಆತನಿಗೆ ಕುಡಿಸೋದು
ಕಣ್ಣೀರು ಎತ್ತೋದು
ಬಕ್ ಬಾರ್ಲಿ ಮಕ್ಕಂಡಿರತಾನಪ್ಪ
ತಣ್ಣೀರು ಹುಣ್ಣ ಮೇಲೆ ಹಾಕೋದು