ಅಯ್ಯೋ ಚಿರಂಜೀವ ಚಿರಂಜೀವ ಅಂದ
ಏ ನಾವು ಬಡಿಬಾರ್ದು
ಈತ ಶಾಸ್ತ್ರ ಮಂತ್ರಘಳು
ತಂತ್ರಗಳು ಹಾಕೋನು
ನಾವು ಕೈಯೆತ್ತಿ ಬಡೀಬಾರ್ದು
ಶ್ಯಾನುಭೋಗರಿಗೆ ಬಡದ್ರೆ ಪಾಪನೆ
ಏನ್ರಿ ಏದಕ ಹೋಗಿದ್ರಿ ಊರಾಕ ಆನೆಗುಂದ್ಯಾಗ
ಏನ್ಮಾಡಬೇಕಪ್ಪ ನಿನ್ನ ರಾಮ ಸತ್ತಾನ
ಈವೊತ್ತು ನಾನು ಓದಬೇಕು
ಯಾವತ್ತು ದಿವ್ಸ ಮಾಡ್ತಾರಂತ
ಆಗ ಪೂಜೆ ಮಾಡಲಿಕ್ಕೆ ರಾಮನಿಗೆ
ಆಟ ಪೂಜೆ ಮಾಡಲಿಕ್ಕೆ ರಾಮನಿಗೆ
ಆಗ ತ್ವಾಟಕ್ಕೆ ಜೀವಕ್ಕಂತ
ನನ್ನ ಕರೆಕಳಿಸಿದ್ರು
ನಾನು ಹೋಗಿದ್ದೆ
ಈಗ ರಾಮನಿಗೆಲ್ಲ ಮಾಡಿಬಿಟ್ಟೀವಿ
ಈಗ ನನಗೆ ನೂರು ರೂಪಾಯಿ ಕೈಯಾಗ ಕೊಟ್ರು
ಅಕ್ಕಿ ಬ್ಯಾಳಿ ಕೊಟ್ರು
ಈಗ ಹೋಗುತ್ತಿದ್ದೀನ್ರೀ ಡಿಲ್ಲಿಯವ್ರೆ ಸಾಯಬ್ರೆ
ಏ ಅಚ್ಚಛೋಡೊ
ಅರೆ ಶಾಸ್ತ್ರ ಹೇಳೋನು ಆಗ ಜೀವಕ್ಕ
ಈಗ ರಸ್ತಾ ಛೋಡೋ ಮಾರ್ಗನೆ ಬಿಟ್ಟುಬಿಡ್ರಿ ಅಂದ
ಅಂಬೊತ್ತಿಗೆ
ಎಡಕ್ಕದವರು ಎಡಕ್ಕೊಳ್ಳಿದ್ರು
ಬಲಕ್ಕಿದ್ದೋರು ಬಲಕ್ಕೆ ಹೊಳ್ಳಿದ್ರು
ಆಗ ಮೂರು ಅಗಸಿ ತಟಾದು ಬಂದ
ಆಗ ಗಿಡ ಕೆಳಗೆ ನಿಂತ

ರಾಮ ಭೂಮ್ಯಾಗಿದ್ದ ಇನ್ನ ದೇವಲೋಕ || ತಂದಾನ ||

ದೇವರಿಗೆ ಧ್ಯಾನ ಮಾಡಂತಾ ರಾಮ
ಜಟೀಂಗೀಶ್ವರ ಮುನೀಶ್ವರದಲ್ಲಿದ್ದ
ಜೀವಕ್ಕ ಪೂಜೆ ಮಾಡಂತಹ ಮಗನೆ ರಾಮಯ್ಯ

ರಾಮ ನಿಮ್ಮ ತಂದಿನ ಕಡಿತಾನ ಲೋಕದಾಗ || ತಂದಾನ ||

ಆಗ ಜೀವಕ್ಕೆ
ರಾಮ ನಿಮ್ಮ ತಂದಿನ ಕಡ್ಯಾಕ ಬಂದಾನ
ಡಿಲ್ಲಿ ಗೋಲ್ಕಂಡ ನವಾಬುದಾರ
ಈಗ ನಿಮ್ಮ ತಾಯನ್ನ
ತುರುಕರು ಎಳ್ಕಂಡು ಹೋಗ್ತಾರ
ಬಾ ರಾಮ ನಿನ್ನ ಚಿಕ್ಕತಾಯಿ ರತ್ನಾಕ್ಷಿಯನ್ನ
ಅಂದ್ರೆ
ರಾಮ ಕಿವಿಲೆ ಕೇಳಿ ಸುಮ್ನೆ ಇರ್ತಾನ
ಹೊಟ್ಟ್ಯಾಗ ಹುಟ್ಟಿದ ಮಕ್ಕಳ್ಗಿ
ಕಡಿಂತ ಆರ್ಡರ್‌ ಕೊಟ್ರು
ತಾಯಿತಂದಿನ ಕಡೀಲಿ
ಈಗ ತುರುಕರು ಬಂದು ಇಷ್ಟು ಮಾಡ್ಲಿ
ನಮ್ಮ ಚಿಕ್ಕ ತಾಯಿ ದುಷ್ಟದವಳನ
ಅಯ್ಯೋ
ಹಿಂಗಂದ್ರೆ ಬರಂಗಿಲ್ಲ ರಾಮಂತ
ರಾಮ ಜೀವಗ್ಹುಟ್ಟಿದ ತಾಯಿ
ಮೊಲೆ ಹಾಲು ಕೊಟ್ಟಿದ ತಾಯಿ
ಜಲ್ಮ ಉಲಿಸಿದ ತಾಯಿನ
ಸೆರಗ್ಹಿಡಿದು ಎಳಿತಾರಪ್ಪಾ ರಾಮ

ಆಹಾ ರಾಮಯ್ಯ
ಹೋಗಿ ಬರುತ್ತೀನಿ
ಹೋಗಿ ಬಾರೋ ರಾಮಯ್ಯ
ಆಗ ಇನ್ನು ರಾಮಯ್ಯೊ
ಆಗ ಭೂಮ್ಯಾಲಿದ್ದಣ್ಣ ಗವಿ ಒಳಗಲಿದ್ದ ಬಂದಾನ ರಾಮ || ತಂದಾನ ||

ಮುನೀಶ್ವರ ನಾಗೀಶ್ವರ
ದೇವೀಶ್ವರ ಬಿಟ್ಟು ಬಂದ
ಶರಣು ಮಾವ
ಯಪ್ಪಾ ಡಿಲ್ಲಿದವ್ನು ಬಂದು ಬಿಟ್ಟಾನ
ಸರಿ ಮಾವ
ನನ್ನ ಕೈಯಾಗ ಮೂರು ದಡೇವಲ್ಲ
ಏಳು ದಡೇವು ಇಲ್ಲ
ಇಪ್ಪತ್ತಾರು ದಡೇವು ಚಂದ್ರಾಯ್ಧ ಬೇಕು ನನಗೆ
ಮೂರು ದಡೇವು ಎಡಗೈಲಿ ಬೇಕು
ಕಾಲಡಿಯಲ್ಲಿ ಕುದುರಿ ಇಲ್ಲ
ನಾನು ಹ್ಯಾಂಗ ಕಡಿಬೇಕು
ಹ್ಯಾಂಗ ಯುದ್ಧ ಮಾಡಬೇಕೋ ಮಾವ
ಮತ್ತೆ ಹ್ಯಾಂಗಪ್ಪ ರಾಮ
ಮತ್ತ ಆಯುದ್ಧ ಕೊಟ್ರೆ
ಬೆಳ್ಳಷ್ಟು ಚೂರಿ ಕೊಟ್ರೆ
ಕಡಿಕ್ಯಂಡು ಸಾಯ್ತೀನಿ ಅಂತ
ಎಲ್ಲಾ ಇಸ್ಕಂಡು ಹೋದೆಲ್ಲೋ ಮಾವ
ಎರಡು ಕೈಲಿ ಹ್ಯಾಂಗ ಮಾಡ್ಬೇಕು
ಏನಿಲ್ಲ ರಾಮ ನಾನು ಹೋಗ್ತಿನಿ
ಏಲ್ಲಾ ಇನ್ನ ಏಳು ಖಂಡುಗ ಚಂದ್ರಾಯ್ಧ
ಈಗ ಮೂರು ದಡೇವು ಚಂದ್ರಾಯ್ಧ
ಎಲ್ಲಾ ನಿಂದು ಡಿರುಸೆಲ್ಲ
ಈಗ ನೀ ಹಿಡಿಯೋದೆಲ್ಲ
ಕುದುರಿ ಮ್ಯಾಲೆ ಕಟ್ಟಿ
ಆಗ ಕುದುರಿ ಕಿವಿಯಾಗ ಹೇಳಿ ಬಿಡ್ತೀನಿ
ನಿನ್ನ ಮ್ಯಾಲೆ ಕುಂದ್ರಂತವ್ನು
ನಿನ್ನ ಮಗ ಜೀವದ ಮಗ ಕೇಳಿದ್ದಾನ
ತಲೆ ಒಡ್ಯೊ ಮರದ ಕೆಳಗ ಇದಾನ
ಹೋಗಬೇಕಮ್ಮ ಅರ್ಜಂಟ್‌
ಅಂತ ಹೇಳ್ತಿನಿ
ಓಹೋ ಹಂಗಾರೆ ಕಳ್ಸು ಮಾವ
ಖಲಿಸಂಗಿದ್ರೆ
ನಮ್ಮ ತಾಯಿ ಉಟ್ಟಿದ ಸೀರಿ ಕಚ್ಚಿ ಹಾಕ್ಯಂಡು
ಮುತ್ತಿನ ಸೆರಗು ನಡುವೆ ಸುತ್ತಿಕ್ಯಂಡು
ಹೊಟ್ಟ್ಯಾಗ ಹುಟ್ಟಿದ ಮಕ್ಕಳು
ಕೈಗ ಬಂದ ಮಕ್ಕಳುನ
ಕಳಿಸಂತಾಕಿ
ಯುದ್ಧಕ್ಕ ಹೊಂಟಬೇಕು ಆಕಿ
ನಮ್ಮ ತಂದಿ ಬಾಯಾಗ ಹಲ್ಲಿಲ್ಲದವ್ನು
ಸೊಸಿದವರನ್ನು ಲಗ್ನ ಮಾಡಿಕ್ಯಂಬೋನು
ಹರೆದವರು ಜೀವಕ್ಕ ಹಾಳು ಮಾಡಂತವ್ನು
ಹಾಳಾಗಿ ಹೋಗಬೇಕು
ಈಗ ಇನ್ನ ಯುದ್ಧಕ್ಕೆ ಹೊಂಟ್ರು ಮಾವ
ಈಗ ಎಲ್ಲರು ಊರು ಸುತ್ತಿದೋರು
ಹೊಲ್ದಾಗ ತೆನೆಲ್ಲ ಕಣದಾಗ ಹಾಕಿದಂಗ
ನಿಮ್ಮನ್ನ ಕಡಿಯಕ ಬರ್ತಾರ
ಬಂದಾಗ
ನಾನು ಮೂರು ಮೇಘದಾಗ ತಿರುಗಿಸಕ್ಯಂತ
ಎರಡುರೆಕ್ಕಿಕ್ಕಿ
ಆಗ ಕುದುರಿ
ಈಗ ಕೆಳಾಗ ಇಳ್ಸಿ ಬಿಡ್ತಿನಿ
ನೀವು ಹಿಂದಕ್ಕ ಇರ್ರಿ
ನಾನು ಮುಂದಕ್ಕ ಕಡಿಕ್ಯಂತ ಹೋಗ್ತಿನಿ
ಡಿಲ್ಲಿ ಬರೋ ತನಕ ನಾನು ಕಡಿತಿನಿ
ಅಷ್ಟಾಗಲ್ರಿ ರಾಮ
ಆಗ ಇಲ್ಲೇ ಇರಪ್ಪಾ
ನೀನು ಹೋಗುಬ್ಯಾಡ
ಅಯ್ಯೋ ಇಲ್ಲೇ ಕುಂದ್ರುತ್ತಿನಿ ಮಾವ
ಈಗ ಆಲದ ಗಿಡದ ನೆಲಬೊಡ್ಡಿಗೆ
ಆಗಲ್ಯಂತ

ಸ್ವಾದರಮಾವ ಬಚ್ಚಣ್ಣ ಹಿಂದಕಾಗಿ ಬರುತಾನೋ || ತಂದಾನ ||

ಆಗ ಮೂರು ಅಗಸಿ ತಟಾದು ಬರಬೇಕು
ಆನೆಗುಂದಿ ಪಟ್ನದಾಕ
ಅಗಸಿತಲ್ಲಿ ಐದಾರಪ ಮುನ್ನೂರು ಮಂದಿ
ದಿಲ್ಲಿದವನು ಕಾಯಾಕ ಇಟ್ಟಾನ

ಅರೆ ಚೂರಿ ಪಕಡಲಾಕಾರೆ
ಮಾದರಚೋದರ ಪಕಾಡರೆ
ಹಾಕ್ರಲೆ ಕಡಿರಲೇ || ತಂದಾನ ||

ಅರವತ್ತು ಭಲ್ಲೆವು ಇನ್ನವ್ರ ಮ್ಯಾಕ ಬಗ್ಗಿಸಿಬಿಟ್ರು
ಚಿರಂಜೀವ ಚಿರಂಜೀವ ವಿಷ್ಣು
ಈಶ್ವರ ಪರಮಾತ್ಮ
ಶಾಸ್ತ್ರ ಹೇಳೋನು ನಾನು
ನಿನ್ನ ಜೀವ ಉಳಿಸೋನು
ಏ ಈವಾಗ ಹೋದ್ರೆ
ರಸ್ತಾ ಛೋಡೋ ಮಾರ್ಗ ನಕೊ ಅಂತ ಬಿಟ್ಟೀವಿ
ಮತ್ತೇ ವಾಪಾಸ ಬಂದಿ
ಇಲ್ರಿ ಅಕ್ಕಿಬ್ಯಾಳಿ ಕೊಟ್ಟಿದ್ದು
ಕೈ ಚೀಲ ಅಲ್ಲೆ ಮರ್ತು ಬಂದೀನ್ರಿ
ಅದಕ್ಕಾಗ್ರಿ ಆಗ ನಾನ್ಗ ಬಿಡ್ರಿ
ನಿಮ್ಗ ಕೈ ಮುಗಿತೀನಿ
ಏ ನಿನ್ನ ಶಾಸ್ತ್ರ ಪುರಾಣ
ಓ ಎಲ್ಲಾ ಕಂಪ್ಲೀಟ ಹೇಳ್ತಿನಿ
ನೀನು ಹುಟ್ಟಿದ್ದು ಸಾಯೋದು
ಉಳಿಯೋದು ಎಲ್ಲಾ ಒಪನ್ನೇ
ಸರಿ ಅಂಗಾರೆ ಹೇಳು
ರಾಮ ಸತ್ತಾನ ಐದಾನ
ಏ ನಿನ್ನೆ ಮೂರು ಗಂಟ್ಯಾಗ
ಮಣ್ಣ ಮಾಡಿ ಬಿಟ್ಟಾರ
ಈಗ ಎಂಟು ಗಂಟೆಗೆ
ರಾಮನ ಪುರಾಣ ಕೀರ್ತನ ಮುಗಿದು ಹೋಗೈತಿ
ಈಗ ಜೀವಕ್ಕ ನಾವು ದಿವಸಕ ಹೋಗಿದ್ದೀವಿ
ಏನಪ್ಪ, ರಾಮ ಇಲ್ಲ ಊರಾಗ
ಮತ್ತ ಏನು ಸತ್ತೋತಾರ ಯಾರನ ಕಂಪ್ಲಿರಾಜ
ಏ ನೀವು ಕುತ್ತಿಗಿಕೊಯ್ದು ಬಿಡ್ತಾರ
ಇನ್ನೊಂದು ಗಂಟೆ ಹೊತ್ತು ಹೋಗಬ್ಯಾಡ್ರಿ
ಇಗೋ ರತ್ನಾಕ್ಷಿ ಸೂರ್ಯ ಚಂದ್ರ ಇದ್ದಂಗ ಇದಾಳ
ಆಕಿನ್ನ ನೀವೇ ಸೆರಗು ಹಿಡ್ಕಂಡು
ಏಳ್ಕಂಡ ಆನೆಮ್ಯಾಲೆ ಕುಂದ್ರಿಸಿಕ್ಯಂಡು
ಆಗ ಡಿಲ್ಲಿ ಪಟ್ಣಕ್ಕ ಹೋಗ್ರಿ
ಓಹೋ ಅಷ್ಟಾಗ್ಲಿ
ಸಿಗುತೈತಾ
ಓ ಸಿಕ್ಕು ಬಿಡ್ತೈತಿ
ಅಂಬೋತ್ತಿಗೆ ಏ ಬಿಡ್ರ್ಯೋ
ಶಾಸ್ತ್ರ ಹೇಲೋನು ಅಂದ್ರು
ಆಗ ಮೂರು ಅಗಸಿ ತಟಾದು ಒಳಕ್ಕ ಬಂದ
ಈಗ ಆನೆ ಒಂಟಿ ಕುದುರಿ ಕಟ್ಹಾಕ ಮನಿಗೆ ಬಂದ
ಆಗ ಕಡ್ಡಿ ಬಾಕ್ಲ ಬೀಗ ತೆರೆದ
ಎರಡು ರೆಕ್ಕೆ ಕುದುರಿ ತೆಗೆದ
ಪಂಚಕಲ್ಯಾಣ ಅರಸಿನ ಬಣ್ಣದ ಠೇಕಿನ ಕುದುರಿ
ರಾಮಂದು ಕುದುರಿ ತೆಗ್ದು
ಆಗ ಏಳು ಕಂಡ ಚಂದ್ರಾಯ್ಧ
ಈಗ ಮೂರು ದಡೇವು ಬ್ಯಾಟಿ ಕುಡುಗೋಲು
ಆಗ ಕುದ್ರಿ ಮ್ಯಾಲೆ ಕಟ್ಟಿ
ಬಾಯಿಗೆ ಸರಪಣಿ ಹಾಕಿ
ಯಮ್ಮಾ ಕಿವಿಯಾಗ ಏನಂತ ಹೇಳ್ತಾನ
ಈಗ ನಿನ ಮ್ಯಾಲೆ ಕುಂದ್ರಂತ
ಜೀವದ ಮಗ ತೆಲೆ ಒಡೆಯೋ ಗಿಡಮರ ಕೆಳಗಿದಾನ

ಕರದಾನ ಹೋಗಮ್ಮ ಶರಣಮ್ಮ ನಿನಗಾಗಿ || ತಂದಾನ ||

ಜೀವದ ಮಗ ಕರ್ದಾನ ಹೋಗು ತಾಯಿ ಅಂಬೋತ್ತಿಗೆ

ಆಹಾ ಕುದುರೆಣ್ಣ
ಇನ್ನ ಶಬ್ದ ಕೇಳೈತೋ
ಪಡ್ಪಡಪಡಪಡ ರೆಕ್ಕೆ ಬಬ್ಡೋ
ದಗ್ದಗ್ದಗ್ದಗ್ಅಂತ ತಿರುಕ್ಯಂತ
ಮೂರು ಮೇಘ ಎದ್ದೈತೋ
ಇನ್ನ ಏಳು ಅಗಸ್ಯಲ್ಲಾ
ಇನ್ನ ತಟಾದು ನೋಡಣ್ಣೋ
ರಾಮಂತಲ್ಲಿ ಬಂದೈತೋ ಕುಪ್ಪಳ್ಸಿ ಹಾರೈತೋ || ತಂದಾನ ||

ಗಡ್‌ಗಡ್‌ಗಡ್‌ ತಿರುಕ್ಯಂತ ಬಂದು
ರಾಮಂತಲ್ಲಿ ಇಳಿದು ಬಿಡ್ತು
ಆಗ ರಾಮ ಕುಂತ್ವದು ದಿಗ್‌ನೆ ಎದ್ದು

ಬಂದೆಮ್ಮ ನನ್ನತಲ್ಲಿ ನನ್ನ ಜಲ್ಮ ಹೋತಂದಿ
ಯಮ್ಮಾ ಡಿಲ್ಲಿದವ್ನು ಬಂದಾನ ಹಾಳು ಮಾಡಿ ಹೋತಾನ
ಕರ್ನಾಟಕದ ಆನೆಗುಂದಿ || ತಂದಾನ ||

ಕರ್ನಾಟಕದಲ್ಲಿರೋದು ಆನೇಗುಂದಿ
ಆನೆ ಕರ್ಕಂಡು ಬಂದು ಹಾಳು ಮಾಡಿ ಹೋತಾನ
ಓಹೋ ರಾಮ
ನೀ ಇನ್ನ ಮ್ಯಾಲಿನ ತಲೆ ಕೊಯ್ದರೆ
ಕೆಳಗೆಲ್ಲ ರೆಕ್ಕೇಲಿ ಬಡಿತಿನಿ
ಬಲಕ್ಕೆ ಬಂದ್ವನ ಬಲರೆಕ್ಕೆಲಿ
ಎಡಕ್ಕೆ ಬಂದ್ವನ ಎಡರೆಕ್ಕೆಲಿ
ಹಿಂದೆ ಬಂದ್ವನ ಕಾಲಲ್ಲಿ ಒದಿತಿನಿ
ಮುಂದೆ ಬಂದ್ವನ ಬಾಯಲ್ಲಿ ಹೊಟ್ಟೆ ಕಡಿತಿನಿ
ನೀ ಮ್ಯಾಲೆ ತಲೆ ಸವರಿಕ್ಯಂತ ಹೋಗು
ತಲೆ ಎಲ್ಲ ಕಡಿಕ್ಯಂತ ಹೋಗಂದ
ಆಗ ತಾವು ಕೈಯೊಳಗೆ
ಈಗ ಏಳುಖಂಡ ಚಂದ್ರಾಯ್ಧ
ಆಗ ಬ್ಯಾಟಿ ಕುಡುಗೋಲು ಮೂರು ದಡೇದು
ಆಗ ರಾಮ ಕುದುರಿಮ್ಯಾಲೆ ಕುಂತ್ಕಂಡು

ಕುದುರಿ ಮ್ಯಾಕ ಎಬ್ಬಿಸ್ತಾನ
ರಾಮ ಬಂದ ನೋಡಣ್ಣ || ತಂದಾನ ||

ರಾಮ ಎಬ್ಬಿಸಾಂವ ನಿಂತಾನ
ಇತ್ತ ಇನ್ನ ಬಚ್ಚಣ್ಣ
ಏನಯ್ಯ ಕಂಪಲಿರಾಜ
ಮತ್ತ ನಿನ್ನ ಜೀವನ್ನ ಹೋಗ್ಲಿ
ನನ್ನ ಜೀವನ್ನ ಹೋಗ್ಲಿ
ಮತ್ತೆ ಏನು ಮಾಡಬೇಕಪ್ಪ
ಕೈಗೆ ಬಂದ ಮಕ್ಳು
ಹೆಂಡ್ರು ಮಾತ ಕೇಳಿ ಕಳಕಂಡ ಮ್ಯಾಲೆ
ಮತ್ತ ಜೀವಕ್ಕ ಆನೆಗುಂದಿಲಿದ್ದ ತುಳುಸಿ ಬಿಡುತಾನ
ಹಾಳಾಗಿ ಹೋತೈತಿ
ನಡ್ರೀ ನಿಮ್ಮ ಜೀವಕ್ಕ ನ್ನ ಬರತೈತಿ
ಈಗ ಮೂರು ಕುದುರಿ ಹೊರಾಗ ತೆಗ್ಯಾನ
ಏನಮ್ಮಾ ರತ್ನಾಕ್ಷಿ
ಹಿಟ್ಟ್ಯಾಗ ಹುಟ್ಟಿದ ಜೀವಮಕ್ಳುಳ ಕಳಯೋಳೆ
ಜೀವಕ್ಕ ಯುದ್ಧಕ್ಕೆ ಹೋಗಾನ ನಡಿಯೇ ತಾಯಿ
ಅಂದ್ರೆ ರತ್ನಾಕ್ಷಿ ನೊಡ್ದುಳು
ಇಲ್ರೀ ಮಕ್ಳು ಪೋಟೋ ತೋರಿಸಿ ಬಚ್ಚಿಕ್ಕಿ ಜೀವದಲ್ಲಿ
ಕಂಬ್ಳಿ ಮುಚ್ಚಿ ಕಣ್ಣು ತೆರೆದು
ತಾಳಿ ಕಟ್ಟಿದ ಮುದೇಯೊನು ಬಾಯಾಗ ಹಲ್ಲಿಲ್ಲದವನು
ಸೊಸೆಯರನ್ನ ಲಗ್ನ ಮಾಡಿಕ್ಯಂಬಾಕ ಬರ್ತೈತಂತೆ

ಹರೆದವರ ತಾಳಿಯ ಕಟ್ಟಿದೋವ್ನ ಯುದ್ಧ ಮಾಡನ್ನೋ || ತಂದಾನ ||

ಹರೆದವರು ತಾಳಿಕಟ್ಯಾಕ ಬರ್ತಾನಂತೆ
ಬಾಯಾಗ ಹಲ್ಲು ಇಲ್ಲದವ್ನು
ಯುದ್ಧ ಮಾಡಾಕ ಯಾಕ ಬರಾದಿಲ್ಲ
ಹರೇವು ಯಾಕ ಬಂದಿಲ್ಲ ಆತಗೆ
ಯುದ್ಧ ಮಾಡನು
ಯಮ್ಮಾ ಎಲ್ಲಾರು ಹೋಗಬೇಕು
ಇಲ್ಲನಾ ಬರಾದಿಲ್ಲ ಬಚ್ಚಣ್ಣ
ಇಲ್ಲಮ್ಮಾ ಬರಬೇಕು
ಹೀಗ ಅಂಬೋತ್ತಿಗೆ
ಏನಂತಾನ ಕಂಪ್ಲಿರಾಜ
ಅಪ್ಪಾ ಸೂರ್ಯ ಚಂದ್ರ ಇದ್ದಂಗೈದಾಳ
ನನ್ನ ಚಿಕ್ಕ ಹೆಂಡ್ತಿ ರತ್ನಾಕ್ಷಿ

ಏಳಕಂಡೆ ಹೋತಾರ ಡಿಲ್ಲಿ ಸಾಯಬ್ರು ನೋಡಾಪೊ || ತಂದಾನ ||

ಇಲ್ಲಯ್ಯಾ ಆಕೆ ಏಳೆಯಾಕ ಬಂದಾರನ್ನೆಲ್ಲ
ನಾವು ಕಡಿಯಾನ ಮ್ಯಾಲೆ
ನೀನು ನಾನು ಕಡಿಯಾನ
ಅಂಬೊತ್ತಿಗೆ ಆಗ ಉಟ್ಟಿದ ಸೀರೆ ಕಾಸಿ ಹಾಕಿ
ಮುತ್ತಿನ ಸೆರಗು ನಡುವೆ ಸುತ್ತಿ ಮೂರು ದಡೇವು
ಚಂದ್ರಾಯುಧ ಹಿಡಿದಳು
ಎರಡು ದಡೇವು ಬ್ಯಾಟಿ ಕುಡುಗೋಲು ಹಿಡಿಕಂಡ್ಳು
ಕಂಪ್ಲಿರಾಜ ಕುದುರಿ ಮ್ಯಾಲೆ
ಈಗ ಬಚ್ಚಣ್ಣ ಕುದುರಿ ಮ್ಯಾಲೆ
ರತ್ನಾಕ್ಷಿ ಕುದುರಿ ಮ್ಯಾಲೆ
ಈಗ ಬಚ್ಚಣ್ಣ ಹಿಂದೆ ಬರ್ತಾನ
ಈಗ ಕುಲಕ್ಕಾಗಿ ನಡೆಪ್ಪಾ
ಏ ಹಾಂಗ ಅಲ್ಲಪ್ಪೋ
ನನಗೆ ಹೆದರಿಕೆ ಆಗ್ತೈತಿ
ಡಿಲ್ಲಿಯವ್ರು ಅಂದ್ರೆ ನಾನು ಒಬ್ರುನ ಬಡದಿಲ್ಲ
ಒಬ್ರುನ ಕಡದಿಲ್ಲ
ಮತ್ತ ಹ್ಯಾಂಗ ಮಾಡ್ಬೇಕು ಮಾವ
ನೀನೇ ಮುಂದೆ ನಡಿ
ನಾನ್ಹಿಂದೆ ಬರ್ತಿನಿ
ನನ್ನ ಚಿಕ್ಕೆಂಡ್ತಿ ರತ್ನಾಕ್ಷಿ ನಡುವಿಗೆ ಬರ್ತಾಳ
ಸರಿಬಿಡಂತ

ಮೂವರು ಕುಂತಾರ್ರೀ
ಮೂವರು ಕುದುರಿ ಬರುತಾವ
ತೋಥಡಿ ಮೂರು ಅಗಸಿ ತಟಾದು
s ಇನ್ನ ಆಗ ಏಳುಸಾವಿರ ಮಂದಿ
ಆರೆ ಚೂರಿ ಪಕಾಡೋ ಲೌಡು ಮಾರೋ
ಹೇ ಹಾಕ್ರಲೇ ಕಡಿರೇಲೇ
s ಊರು ಸುತ್ತ ಇದ್ದವ್ರು
ಅಗಸಿ ಮುಂದಕ ಬಂದಾರ
ನೆಳ್ಳಾಗಿ ನೋಡ್ತಾರ
ರಾಮರಾಮ ಬಂದಾನೋಡಾ
ಹಾಕ್ರಲೇ ಅಂತಾರ
s ಮರಗಯಿರೆ ಮಾರಲೇ
ಆಗ ನೆಳ್ಳು ತಗ್ದು ನೋಡ್ತಾರ
ಆಗ ಬಲ್ಲೆವು ತಗಂಡು ತಿವಿತಾರ
ಮಾದ್ರಚೋದು ಇನಹಾಕ್ರ || ತಂದಾನ ||

ಅಂತ ನೆಳ್ಳು ನೋಡಿ ತಿವಿತಾರ
ಊರು ಸುತ್ತ ಇದ್ದೋರು ಎಲ್ಲ
ಅಗಸಿ ಮುಂದೆ ಬಂದ್ರು
ಇವರು ಇನ್ನು ಮೂವರು ಅಗಸ್ಯಾಗ ಬರ್ತಾರಪ್ಪ
ಈ ರಾಮ ಮ್ಯಾಲೆ ತಿರುಸೋನು
ಎಡರೆಕ್ಕೇನ ಹೊಟ್ಟಿಗೆ ಆನಿಸಿದನು
ಬಲರೆಕ್ಕೇನು ಹೊಟ್ಟಿಗೆ ಆನ್ಸಿ

ಎರಡು ರೆಕ್ಕೆ ಆನ್ಸ್ಯಾನ
ಗಡ್ಗಡ್ಗಡ್ತಿರುಗೋದು
ಮ್ಯಾಲ ಮೂರು ಮೇಘದಾಗ
ಇನ್ನ ತಿರುಗಿಕ್ಯಂತನ್ನ
ಆಗ ಇನ್ನ ಮ್ಯಾಲೆ ಇಳಿಸ್ಯಾನ
ದೈ ಮ್ಯಾಲೆ ಇಳಿಸೋ ಹೊತ್ತಿಗೆಲ್ಲೋ
ಜೈ ಬಲಗೈಲಿ ಕಡಿದಾರೇನು ನೂರು ತಲೆ ಸಾಪನ್ನ
ಥೋತಡಿ ಎಡಗೈಲಿ ಕಡಿದಾರೇನು ಐವತ್ತು ಕಲಿನಾರು || ತಂದಾನ ||

ಅನ್ನ ಮೂಗು ಸಿಕ್ರ ಮೂಗನ್ನ
ಕಿವಿ ಸಿಕ್ರೆ ಕಿವಿಯಣ್ಣ
ಗಡ್ಡ ಸಿಕ್ರೆ ಗಡ್ಡಣ್ಣ
ಅರೆ ಅಲ್ಲಾರೆ ಸಾಲಾಮು
ಆನೆಗುಂದಿ ಸಾಲಾಮು
ರಾಮಯ್ಯ ಶರಣಾಗಿ || ತಂದಾನ ||

s ಸಾಲಾಮ್ಮಿಲ್ಲ ಗಿಲಾಮಿಲ್ಲ
s ಕಡ್ದು ಕಡ್ದು ಹಾಕುತಾನ
s ಕಬ್ಬು ಕಡ್ಡಂಗ ಕಡಿತಾನಲ್ಲೋ
ವಾವ್ರೇ ಇನ್ನ ಹೆಣಗಳು ಬೀಳ್ತಾವ
ಲೇs ಒಂದು ಸರ್ತಿ ಕಡಿದಾರೇನ ಸಾವಿರ ತಲಿ ಸಾಪನ್ನ || ತಂದಾನ ||

s ಇನ್ನುವಾಗಿ ರಾಮ ಯುದ್ದಾ
ಆಗ ಇನ್ನ ಕುದುರಿ ಮ್ಯಾಲೆ ಯುದ್ಧ ಮಾಡ್ತಾನ
ಲೇ ಎಡಕ್ಕೆ ಬಂದ್ರೆ ಎಡಗೈಲಿ
ರೆಕ್ಕೆಲಿದ್ದ ಬಡಿತೈತೋ
ಬಲಕ್ಕೆ ಬಂದ್ರ ಬಲಗೈಲೆ ರೆಕ್ಕೆಲ್ಯಾಗ ಬಡಿತೈತೋ
ಆಗ ಸಾಯಬ್ರು ನೋಡಿಬಿಟ್ರು || ತಂದಾನ ||

ಅರೆ ರಾಮ ಬಂದ ಅಂತ
ಸಾಯಬ್ರು ನೋಡದ್ರು

ಈಗ ಓಡಿ ಓಡಿ ಹೋಗ್ತಾರ
ಲೇ ಟೋಪಿ ಬಗ್ಲಾಗ ಇಟ್ಟಿದಾರ || ತಂದಾನ ||

ಅಣ್ಣಾ ಒಂದು ಕುದುರಿ ಮ್ಯಾಲಣ್ಣ
ಎಂಟು ಮಂದಿ ಎಗ್ರತಾರ
ಕುದುರ್ಯಾಗಿ ನಡಿವಲ್ದು || ತಂದಾನ ||

ವಾಯಬ್ಬೋ ಕುದುರಿ ಬಿಟ್ಟ ಓಡ್ತಾರ
ಏಯ್ರಾಮ ಒಂದೇ ಲೋಕದಾಗ
ಹತ್ತರ್ಕಿ ಕುದುರಿ ಅಂದೇ ಎಬ್ಬಿಸಿಬಿಟ್ಟ || ತಂದಾನ ||

ಆಗ ರಾಮ ಇಳ್ದಾ
ಡಿಲ್ಲಿ ತುರುಕರವನು ಇಳ್ದ

ನಿನ್ನ ಬಿಡದಿಲ್ಲಲೆ ನಿನ್ನ ಜಲ್ಮ ಕಳಿತೀನಿ || ತಂದಾನ ||

ಏ ಸಾಯ್ಬ
ನಿನ್ನ ಜೀವ ತೆಗಿತೀನಪ್ಪ
ನಿನ್ನ ಉಳಿಸೋದಿಲ್ಲ
ಅಯ್ಯೋರಾಮ

ಸರ್ವ ತಪ್ಪು ಆಗೈತಿ ರಾಮ ಶರಣು ರಾಮ
ಆನೆಗೊಂದಿ ಕರ್ಣಾಟಿ ರಾಮ ಶರಣು ರಾಮ
ರಾಮೋ ನನ್ನ ಬಿಡೋ ನನ್ನ ದಯಮಾಡೋ ರಾಮಾ
ದಯಮಾಡೋ ರಾಮ
ಆಗ ಜೀವದಲ್ಲಿ ನನ್ನ ಉಳಿಸೋ ರಾಮ || ತಂದಾನ ||

ಶರಣು ಎಂಬುವರಿಗೆ ಮರಣಿಲ್ಲ
ಕೈಯೆತ್ತಿ ಬಡಿದೋರ ನೀನು ಬಿಡೋದಿಲ್ಲ
ರಾಮ ಕೈಯೆತ್ತಿ ಶರಣು ಮಾಡಿದವ್ರು
ಹೋಗಿ ಬಾರಪ್ಪ
ಈಗ ನೀನು ಸಾಯೋವರಿಗೂ
ಆನೆಗುಂದಿಗೆ ಬರಬಾರ್ದು
ರಾಮ ಬರಾದಿಲ್ಲ
ನಿನ್ನ ಪಾದಕ್ಕೆ ಶರಣು ರಾಮಯ್ಯ ಅಂಬೋತ್ತಿಗೆ
ಆಗ ರಾಮ ಕುದುರಿ ಹಕ್ಯಂಡು
ಈಗ ಆನೆಗುಂದಿ ಅಗಸಿತಲ್ಲಿ ಬಂದ