ಈ ರಾಮನಿಗೆ
ಬೆಳ್ಳಿ ತಂತಿ ತಗಂಡು
ಬೆಳ್ಳಿ ಸೂಜಿ ತಕಂಡು

ರಾಮನ ತಲೆ ನೋಡಮ್ಮ ಮುಂಡದಾಗೆ ಹೊಲಿದಾರೊ
s ಹೊಲಿದ ಹೊತ್ತಿಗೆ ನೋಡಮ್ಮ ಲೋಕವಿದ್ದ ರಾಮಯ್ಯೋ || ತಂದಾನ ||

ರಾಮ ಅಮ್ಮ ಅಂತ ಮ್ಯಾಕ ಎದ್ದು ಬಿಡ್ಡ ರಾಮ
ಯಮ್ಮಾ ಎರಡು ಅವತಾರದ್ರೆ ಜೀವ ಬಿಡೋನಲ್ಲ
ಈ ಲೋಕ ಹುಟ್ಟಿದವ್ನು ಲೋಕನೇ ಬ್ಯಾಡ
ಜೀವದ ತಾಯಿ ಕಾಲಾಗ ಜೀವ ಬಿಟ್ಟಿನಿ
ಹೆಣ್ಣು ಮಕ್ಕಳ ಕಾಲಾಗ ಜಲ್ಮ ಕಳಿಕಂಡಿನಿ

ಲೋಕನೇ ಬ್ಯಾಡಮ್ಮ ಹೆಣ್ಣು ಮಕ್ಕಳ ಮಕ ನೋಡಾದಿಲ್ಲ
s ಕ್ಯವು ಕ್ಯಾಕಿ ಹೊಡೆದಾನ
ರಾಮ ಬಂದು ನೋಡಣ್ಣೊs
ಇನ್ನ ಮಾವಂತಲ್ಲಿಗೆ
ಶರಣಪ್ಪ ಮಾವ ಹಂಪಕ್ಕ ಹಂಪಯ್ಯ || ತಂದಾನ ||

ಮಾವ
ಆನೆಗುಂದ್ಯಾಗ ನಿಮ್ಮದೇ ನಡೀಬೇಕು
ಜೀವ ಉಳಿಸಿದೋರ ಜೀವ ತೇರು ಮಾಡಿ ಎಳಿಸಬೇಕು
ಲೋಕದಾಗ ಈಗಿನವರ ಕುಲದಲ್ಲಿ ರಾಮ ಅಂಬೋದು
ಹೂವಿನ ತೇರು ಮಾಡಿ ಲೋಕ ಏಳಿಸಿರಿ
ನಿಮ್ಮದು ಅತ್ತೆ ಮಾವಂದು ಮುಂದೆ
ಆಗ ಅಳಿಯನವರ ಹೂವಿನ ತೇರು ಹಿಂದೆ
ರಾಮ ಅಂತ ಇಲ್ಲ ಅವತಾರ
ಶರಣಪ್ಪ ಆಗಲೆಪ್ಪ ತಮ್ಮಾ
ಅಂಬೋತ್ತಿಗೆ ಅಣ್ಣಾ ಅಂತ ಬಂದ
ಬಂದೊತ್ತಿಗೆ
ಈಗ ನಾನು ಹೋತಿನಿ
ಅಂತ ರಾಮನ ಪೋಟ ಇಟ್ಟು
ತಮ್ಮನ ಬಗಲಾಗ
ಸಟ್ಟು ಸರವತ್ತಿನ್ಯಾಗ
ಆಗ ತಮ್ಮಗ ಕಿವ್ಯಾಗ ತಿಳಿಲಾರದಂಗ
ಈಗ ರಾಮಯ್ಯ ಆಗಿ

ಆಹಾ ರಾಮಯ್ಯ
ಕ್ಯವು ಕ್ಯಾಕಿ ಹೊಡೆದಾನ
ಆನೆಗುಂದಿಲಿದ್ದನ್ನೋ
ಇನ್ನು ಬಾರ ರಾಮಯ್ಯೋ
ಸೊಂಡುರ ನಗರಕ್ಕೆ ರಾಮ ಲಾಗ ಹೊಡೆದುಬಿಟ್ಟಾನೋ || ತಂದಾನ ||

ಸೊಂಡೂರ ನಗರಮ್ಯಾಕೆ ಇನ್ನ ಬರುವಾಗ
ಸೊಂಡೂರು ನಗರದಾಗ
ಡಿಲ್ಲಿದವನಿಗೆ ಮಗಳು ಕೊಟ್ಟಿದವರು
ಆಗಿನ್ನ ನೋಡಿಬಿಟ್ಟರು
ಏ ರಾಮಯ್ಯ ಬರುತಾನ
ಆನೆಗುಂದಿಗೆ ಇನ್ನ ರಾಮಯ್ಯ ಹೋತನಂತ

ಹಾಕ್ರಲೆ ರಾಮನ್ನ
ರಾಮನ್ನ ಜಲ್ಮ ಕಳೀರಲೆ
ಜೀವವೊಂದು ಕಳೀರಲೇ
s ಸಂಡೂರು ನಗರದಾಗೋ
ಥೋತಡಿ ಏಳು ಅಗಸಿ ತುಳಿದು ಬಿಟ್ಟ
ಎಡಗಾಲಲೆ ತುಳಿದುಬಿಟ್ಟನಮ್ಮ
ಯೋಳ ಮಂದಿನಾಗೆ ಕಡ್ದುನೋಡಿ
ಆಗ ನಗರದಾಗ ಇದ್ದೊರೆಲ್ಲ || ತಂದಾನ ||

ರಾಮಕಾಂತ ಅಂತ
ಜೀವಬಿಟ್ರಪ್ಪ
ಜೀವಬಿಡೊತ್ತಿಗೆ
ಏಳು ಮಸೀದಿ ನಡೀಬೇಕು
ನಗರಾದಾಗ ಏಳು ಅಗಸಿ ತುಳ್ದು

ಅಲ್ಲಿದ್ದ ರಾಮಯ್ಯ
ಇನ್ನ ಇಲ್ಲಿ ಬರುತಾನ
ಸೊಂಡೂರು ಗುಡ್ಡದ ಮ್ಯಾಕ ರಾಮಯ್ಯ
ಆರಂಡಿಗೆ ರಾಮಯ್ಯೋs
ಆಗ ಎಗರಿಬಿಟ್ಟಾನ
ರಾಮ ಎಗರಿ ನೋಡಮ್ಮ || ತಂದಾನ ||

ಆರಂಡಿ ಸೇರಿಬಿಟ್ಟ
ಆರಂಡಿದಾಗ ಆಗ ಗುಡ್ಡದಲ್ಲಿ ಸೇರಿಬಿಟ್ಟ
ಸೇರೋಹೊತ್ತಿಗೆ ಈ ತಾಯಿ

ಯಮ್ಮಾ ನನ್ನ ಮಗ ಹೋದ ಹ್ಯಾಂಗ ಮಾಡ್ಲ್ಯೊ
ಯಪ್ಪಾ ಎತ್ತಗೋದಿ ಕ್ಯವು ಕ್ಯಾಕಿ ಹೊಡ್ದು || ತಂದಾನ ||

ರಾಮ ಅಂತ ತಾಯಿ ತಂದಿ
ಆಗ ಆನೆಗುಂದಿ ಬಿಟ್ಟು
ಆಗ ಸೊಂಡೂರು ನಗರಕ್ಕ ಬಂದ್ರು
ನಗರದಲ್ಲಿ ಈಗ ಏಳು ಅಗಸಿ ತುಳುದುಬಿಟ್ಟಾನ
ಏಳು ಮಂದಿ ಅಲ್ಲ ಲಕ್ಷ ಮಂದಿ ಕಡ್ದು
ರಾಮ ಅಲ್ಲಿದ್ದ ಎಲ್ಲಿಗೋದ್ರೆ
ಈಗ ಇನ್ನ ದೇವಛತ್ರದಲ್ಲಿ
ಗುಡ್ಡನಾಗಿರೋ ಜಂಟಿಂಗೀಶ್ವರ ಮಠಕ್ಕೆ ಬಂದ್ರು

ಯಮ್ಮಾ ಸೆರಗೊಡ್ಡೆ ತಾಯೇ ಬೇಡುತಾಳ || ತಂದಾನ ||

ಸ್ವಾಮಿ
ನಿನ್ನ ಮಗ ಎಲ್ಲಿಗೆ ಹೋಗ್ಯಾನ
ನೀನು ಕೊಟ್ಟಿದಮಗ
ಆನೆಗುಂದಿ ಬಿಟ್ಟು ನೀನು ಇಲ್ಲಿ ಸೇರಿಯೋ
ಆಗ ಗುಡ್ಡದ ಒಳಗೆ ಈಶ್ವರ
ಯಮ್ಮಾ ರಾಮನಿಗೆ ಮುಂಚೆಗೆ ನಾನೇ ಬಂದು ಬಿಟ್ಟೀನಿ
ರಾಮನಿಗಿನ್ನ ಮುಂಚೇಗ ಬಂದು ಗುಡ್ಡದಾಗ ಸೇರಿದ್ದಿಗೆ
ರಾಮ ಹಿಂದೆ ಬಂದು
ನನ್ನ ಇನ್ನ ನಗರ ತಳ್ದು
ಏಳು ಅಗಸಿ
ಏಳು ಮಂದಿನ್ನ ಕಡಿದು
ಅಲ್ಲಿದ್ದ ರಾಮಯ್ಯ

ಈಗ ಆರಂಡಿ ಸೇರಿದಂಗವಾಯ್ತು ರಾಮ
ಆಗ ಏಳು ಗುಡ್ಡದ ರಾಮ ದೇವ ನೀನು
ಸ್ವಾಮಿ ಅಪ್ಪಣೆ ಕೋಡೋ ನಾವು ಹೋಗ್ತೀವಯ್ಯಾ || ತಂದಾನ ||

ಯಪ್ಪಾ ಜೀವ ಮಗನ್ನ ಬಿಟ್ಟಿರಲಾರೆ
ಜೀವ ಅಂಬೋತ್ತಿಗೆ
ಕೇಳಮ್ಮಾ ಹರಿಯಾಳದೇವಿ ಕಂಪಿಲಿ ರಾಜ

ಕೊಲ್ಲು ಕೊಲ್ಲು ನೋಡಿಕ್ಯಂತ ಗಿಡಗಿಡ ನೋಡಿಕ್ಯಂತ
s ಕೊಲ್ಲು ಏರಬೇಕಮ್ಮ ಗುಂಡು ಇಳಿಯಾಬೇಕಮ್ಮ || ತಂದಾನ ||

ಆರಂಡಿ ಅಡಿವ್ಯಾಗ ಹೋಗಬೇಕು ಗುಡ್ಡ ಏರಿ
ಎಲ್ಲಿದ್ದಾನ ಗುಡ್ಡದಾಗ
ರಾಮಯ್ಯ ಆರಂಡಿ ರಾಮಯ್ಯ ಅಂತ

ತಾಯಿ ತಂದಿ ನೋಡಮ್ಮ ಹುಡಿಕ್ಯಂತ ಬರುತಾರೆ
ತಾಯಿಗೆ ನೀರಡಿಕೆವಾಗೈತೋ ಜಲ್ಮದಾಗ ಹಡದಮ್ಮಗೆ || ತಂದಾನ ||

ಯಪ್ಪಾ ಮಗ ರಾಮ ಆರಂಡಿ ರಾಮ
ಆಹಾ ರಾಮ ಕಿವಿಲಿ ಕೇಳ್ದ
ಜೀವದಲ್ಲಿ ತಾಯಿ
ಆಗ ಒಂಬತ್ತು ತಿಂಗಳ ಹೊಟ್ಟ್ಯಾಗ
ಹದಿನೆಂಟು ವರುಷ ಕೈಯಾಗ
ಜೀವ ಬೇಳಿಸಿದ ತಾಯಿ ಜೀವಕ್ಕ ಇನ್ನ ಬಿಡುತಾನಲ್ಲ
ನಮ್ಮ ತಾಯಿ ಜೀವ ಕಳೀತಾಳಲ್ಲ ಅಂತ

ಕ್ಯಾವು ಕ್ಯಾಕಿ ಹೊಡೆದಾನ ಐದಿನಮ್ಮ ಬಾ ತಾಯಿ || ತಂದಾನ ||

ತಾಯಿ ತಂದಿ ಬಂದ್ರು ರಾಮಾ ಆರಂಡಿ
ಹೋದಿಯಪ್ಪಾ ರಾಮ

s ದೂರ ಇದ್ದು ಮಾತಾಡ್ರಿ ನನ್ನ ಹತ್ತಿರಾಗಿ ಬರಬ್ಯಾಡ್ರಿ || ತಂದಾನ ||

ಯಾಕಪ್ಪ ರಾಮಯ್ಯ
ಛೀ ಈಗ ತಾಯಿ ಹೊಟ್ಟ್ಯಾಗ ಹುಟ್ಟಿ
ತಾಯಿ ಮೊಲಿ ಹಾಲು ಕುಡ್ದು
ತಾಯಿಯೇ ಜೀವ ಕಳಿಯುವಾಗ

ಜೀವಗ ನೋಡಂಗಿಲ್ಲಮ್ಮ
ನನ್ನ ಜೀವ ಕಣ್ಣಿಲಿ ನೋಡಬಾರ್ದು || ತಂದಾನ ||

ಆಗ ನೋಡಿಬಿಟ್ಟ
ರಾಮಯ್ಯ ನಿಂತ್ಕಂಡು ಹೊತ್ತಿಗೆ
ತಾಯಿ ಬಂದು ದುಃಖ ಪಡೀತಾಳ
ಹಾಲು ಕೊಟ್ಟಿದೆ
ಈಗ ಬ್ಯಾಡಂತಿಯೋ ರಾಮಯ್ಯ
ಯಮ್ಮಾ
ಮೂರು ಗೆಣು ದೂರ ಇರಬೇಕು ತಾಯಿ ಜೀವಕ್ಕೆ
ತಾಯಿತಂದಿ
ಈಗಿನ್ನ ತಾಯಿ ಬೇಡಿಕ್ಯಂತಾಳ
ಈಗ ಜೀವದಲ್ಲಾಗಿ
ಯಮ್ಮಾ ಈಗ ಹ್ಯಾಂಗ ಮಾಡಬೇಕು
ನಾನ ಜೀವದಾಗ
ಸರೆಪ್ಪ ರಾಮದೇವ
ಈಗ ನೀನು ಆರಂಡಿದಾಗ ಬಂದು ಸೇರಿಕ್ಯಂಡ್ರೆ
ಆನೆಗುಂದಿ ಪಟ್ಣನೆ ಲೋಕನೆ
ಯಾರಿಗೆ ಬಿಟ್ಟು ಬಂದೆ ರಾಮಯ್ಯ
ಅಂದ್ರೆ
ಸ್ವಾದರಮಾವ ಬಚ್ಚಣ್ಣ ಸ್ವಾದರತ್ತಿ ಹಂಪಕ್ಕ

ಯಮ್ಮಾ ರಾಮನ ಹುಡುಕುತ್ತಾರ ಆರಂಡ್ಯಾಗಮ್ಮ
ಅಳಿಯಾ ಎಲ್ಲಿ ಐದಿಯೀ ರಾಮ ಹೊದಮ್ಯಾಲೆ
ಇನ್ನ ಸ್ವಾದರಮಾವ ಸ್ವಾದರತ್ತಿ ನೋಡಾ
ಹಂಪಕ್ಕ ಹಂಪಯ್ಯ
ರಾಮನತಲ್ಲಿ ಆರಂಡಿ ಹುಡುಕುತ ಬರುತಾರಲ್ಲಾ || ತಂದಾನ ||

ಬಂದೇನಪ್ಪಾ ರಾಮ
ಓಹೋ ಶರಣು ಮಾವ ನಿನ್ನ ಪಾದಕ್ಕೆ
ಈಗ ಆನೆಗುಂದಿ ಬಿಟ್ಟು
ಹರಿಕಂಪ್ಲಿ ಬಿಟ್ಟು ಯಾಕ ಬಂದ್ರಿ ಮಾವ
ಅಪ್ಪಾ ನೀನು ಆರಂಡಿ ಸೇರಿದ್ದಿಗೆ
ನಾವು ಗೂಡಾ ಆರಂಡಿ ಹುಡುಕ್ಯಾಡಿ ಬಂದಿವೋ
ಊರುಬಿಟ್ಟು ಆನೆಗೊಂದಿ
ಛೀ ಮಾವ ಈಗ ನಿನ್ನ ಪೂಜೆನೆ ಮುಂದೆ ಆಗಿಹೋಗ್ಲಿ
ಅತ್ತೆ ಮಾವನ ತೇರು ಮುಂದೆ ಆಗಲಿ
ಅಳಿಯನ ತೇರು ಹಿಂದೆ ಆಗಲಿ
ಕೋಟಿಲಿಂಗ ಪೂಜೆ ಮಾಡಿಕ್ಯಂತಿರೊ
ನಿನ್ನನ್ನ ನಡೆಸೋ ಆನೆಗೊಂದಿ ಮಾವ
ಓಹೋ ಮಾವ ನನ್ನ ಬಿಟ್ಟು ಹೋಗು ಮಾವ
ಹ್ಯಾಂಗ ಹೋಗಲಪ್ಪ ರಾಮಯ್ಯ
ಅಯ್ಯೋ ಬಿಟ್ಟು ಹೋಗಬೇಕಪ್ಪ ಮಾವ
ನೀನನ್ನ ಆನೆಗುಂದ್ಯಾಗಿದ್ದು
ಈಗಿನ ತಾವಾಗಿ ನಿಮ್ಮ ಪೂಜೆನೆ ಮುಂದೆ ಮಾಡಿಕ್ಯಂಡ್ರೆ
ಕೋಟಿಲಿಂಗಪೂಜೆ ಮಾಡೋವಾಗ
ನಿಮ್ಮ ಪೂಜೆ ಲೋಕ ನಡೀತೈತೆ ಮಾವ
ನನ್ನ ಲೋಕೆಲ್ಲ ನಿನಗೇ ಬಿಟ್ಟಿನೋ
ಆಗ ಇನ್ನ ಸ್ವಾದರತ್ತಿ ಹಂಪಕ್ಕ
ಅಷ್ಟಾಗಲೆಪ್ಪ ರಾಮ
ತಾಯಿ ನೋಡಿದಳು ಹರಿಯಾಳದೇವಿ
ಈಗ ಜೀವಕ್ಕಾಗಿ
ಆಗ ತಾಯಿ ನೋಡಿ ಏನಂತಾಳ
ಲೋಕಗಾಗಿ
ಓಹೋ ಮಗನಾ ರಾಮಯ್ಯ
ನೀನು ತಾಯಿ ಅಲ್ಲಂತ ಹ್ಯಾಗಂತಿಯೋ

ಈಗ ನನ್ನವಾಗಿ ಹಾಲಪ್ಪ ನನಗೆ ಹಿಂದಕ್ಕಾಗಿ ಕೊಡಪ್ಪ
s ನಾನು ಏರಿಸಿದ ರಕ್ತಾಪ್ಪ ನನ್ನಗ ಹಿಂದಕ್ಕಾಗಿ ತಿರುವಪ್ಪ || ತಂದಾನ ||

ನಾನು ಕೊಟ್ಟಿದ್ದ ಹಾಲು ನನಗೆ ಕೊಡಪ್ಪ ಹಿಂದಕ
ಯಾಗ ತಾಯಿ ಅಲ್ಲ ದೂರ ಇರು ಅಂಬೋನು
ನನ್ನ ಹಾಲು ನನಗೆ ಕೊಡು ನೀನು ಮಗ ಅಲ್ಲ
ಓಹೋ ಅಷ್ಟೇ ಆಗಲ್ಯಂತ

ಬಲಕ್ಕೆ ನೋಡಮ್ಮ ಬಕ್ನಂಗೆ ತಿರುವಣ ಮಾಡ್ಯಾನ || ತಂದಾನ ||

ಬಲಕ್ಕೆ ಬಕ್‌ನಂತ ತಿರುವಣ ಮಾಡಿದ್ರೆ
ಬೆಳ್ಳಗ ಹಾಲು ಹೋಗಿ ವಿಭೂತಿ ಆಗಿಬಿಡ್ತು
ಎಡಕ್ಕೆ ತಿರುವಿಬಿಟ್ಟ ಇನ್ನ ಬಕ್‌ ನಂಗೆ
ಆಗ ಕೆಂಪು ರಕ್ತ ಬಿದ್ದುಬಿಡ್ತು
ರಕ್ತನೇ ಒಂದು ಜಾಜ ಆಗಿಬಿಡ್ತು
ಈ ಲೋಕನೇ ಹೆಣುಮಕ್ಕಳು ನೋಡಬಾರದು
ಆಗ ನನ್ನ ಜಾಜ ನನ್ನ ರಕ್ತನೇ
ಇನ್ನವ್ರು ಬಾಕ್ಲಿಗೆ ಸಾರಿಸಬೇಕು
ಸೆರೆಗೊಡ್ಡಿ ಶರಣಮಾಡಿ
ಊದಿನಕಡ್ಡಿ ಹಚ್ಚಿ ಕೈ ಮುಗೀಬೇಕು
ಈಗ ನನ್ನ ಈ ವಿಭೂತಿಯೇ ಮೊಲೆ ಹಾಲು
ಈಗ ಹಣೀಮ್ಯಾಲೇ ಇನ್ನ ರಾಮಂದು ಅಂತ
ವಿಭೂತಿ ಹಚ್ಚಬೇಕು
ಅಂತ ರಾಮ ನುಡಿದ
ಈಗಿನ ಆರಂಡಿದಾಗ ಕುಮಾರಸ್ವಾಮಿ ಅಂತ
ಇಲ್ಲಿಗೆ ರಾಮಯ್ಯ
ಮೂರು ಅವತಾರ ರಾಮ ನಿಂತ್ಕಂಡ ಬಿಟ್ಟ
ಜೀವದಲ್ಲಾಗಿ ಲೋಕೆಲ್ಲ ಬಿಟ್ಟು