ವಿಷ್ಣ ಪರಮಾತ್ಮ
ಶಾಂಭ ದೇವೇಂದ್ರ
ಜಟಿಂಗೇಶ್ವರತದಲ್ಲಿರೋದು
ಜಟಿಂಗೇಶ್ವರತಲ್ಲಿರೋದು
ಕಲ್ಪವೃಕ್ಷದ ಕಾಮದೇವತೆ
ಆಗಿನ್ನ ಆಗ ಈಗ ಹಡ್ಯಾಂಗೈತಿ
ಎಲ್ಡುರೆಕ್ಕೇ ನಾಕ್‌ಪಾದ
ಗೋಪ್ಯಮ್ಮ
ಎಲ್ಡು ರೆಕ್ಕೆ ಕೂಟ ಶರಣ ಮಾಡಿ ಬಿಡ್ತವರಿಗೆ
ಎದುಕಮ್ಮಾ ನಮಗೆ ಕೈಮುಗೀತ್ತಿದೀ
ಏನ್ರಿ
ಎಲ್ಡ ರೆಕ್ಕೆ ಹಿಡ್ಕೊಂಡು ಹೋಗಿ ಬಿಟ್ಟಾವ
ನಿಂತ ಕಾಲು ಬಾತ್ಕೊಂಡ್‌ ಬಿಟ್ಟಾವ

ಒಂದು ಗಂಟೆ ಬಿಡ್ರಿ ರೆಕ್ಕೆ
ಸಡ್ಲು ಮಾಡಿ ಬರ್ತೀನಿ || ತಂದಾನ||

ಎಲ್ಡು ರೆಕ್ಕೆ ಸಡ್ಲು ಮಾಡಿಕ್ಯಂಡು ಬರ್ತಿನಿ
ಆಗ ಊದಿಕೆಂಡಿದ್ದ ಪಾದ
ಈಗ ನನ್ನ ಮೈನಲ್ಲಿರುವ ಬ್ಯಾನೆಲ್ಲ ಇಳಿದೋತೈತ್ರಿ
ಓಹೋ ಅಮ್ಮ ಕಾಮದೇವತಿ
ಈಗ ದುಷ್ಟಲೋಕ ಕರ್ಮಲೋಕದಾಗ
ಕಣ್ಣಿಗೆ ಕಾಣಬಾರ್ದು ನಾವು
ಈಗ ಲೋಕಿದ್ದವರು ನಮ್ಮನ್ನು ನೋಡಲಿಲ್ಲವು
ಅವ್ರಿಗೇನು ಇಚ್ಚಿತ್ರಾಗಿ ಬಿಡ್‌ತೈತಿ
ಏಯೆಮ್ಮಾ ನವುಲಿರ್ಬೋದ ಹಾಳ ಗದ್ದಿರಬೋದ
ಎಲ್ಡುರೆಕ್ಕೆ ನಾಕ್‌ಪಾದ ಇಷ್ಟಗಲಾಗೈತಂತಾ

ನಿನ್ನ ಕೊಲ್ಲಿ ಬಿಡ್ತಾರ ನೀನ್ಹೋಗಬಾರ್ದು ನನ್ನ ತಾಯಿ
ಹೇ ಇನ್ನ ಕರ್ಮಲೋಕದಾಗ ನೀ ಜೀವ ಕಳಿಯಬ್ಯಾಡಮ್ಮಾ ತಾಯಿ ||ತಂದಾನ ||

ಇಲ್ರೀ ಕೋಟಿಲಕ್ಷ ಜೀವ ಕೊಟ್ಟು
ಜೀವ ಎಳಿಯಂತ ಪರಮಾತ್ನೆ
ಜಟಿಂಗೇಶ್ವರ ಗೊರ್ಕಾ ಮುನೇಶ್ವರ
ನಾಗೇಶ್ವರ ದೇವೇಶ್ವರ
ನಿಮ್ಮ ಪಾದುಕ್ಕೆ ದೇವತ್ರಿಗೆ ಶರಣರ್ರೀ
ಈಗ ನನಗೆ ಇನ್ನು ನಿಂತು ನಿಂತು ಸಾಕಾಗೈತ್ರಿ
ಓಹೋ ಅಮ್ಮ
ಈಗ ಇನ್ನ ಅಷ್ಟೊಂದು ಬೇಡಿಕೊಂಡ್ತಿದಿ
ಹೋಗಿ ಬಾ ಒಂದು ಗಂಟೆ ಕೊಡ್ತೀವಿ ನಾವು ಅಂದ್ರು

ಆಹಾ ನೋಡಣ್ಣ
ಪಟ ಪಟಾ ರೆಕ್ಕೆ ಬಡೀತೋ
ಗೋಪ್ಯಮ್ಮ ಕಾಮದೇವತಿ
ಇನ್ನ ಬರತೈತಣ್ಣ ಚಾಮರಾಜನ ವನಂತ್ರಕ್ಕ || ತಂದಾನ ||

ಗಡ್ಡೆ ಮ್ಯಾಲೆ ಹಾರಿ
ನಾರಳ್ಳದಾಗ ಬಂತು
ಈಗ ಸ್ನಾನವಿಲ್ಲದ
ನಾನು ಊಟ ಮಾಡಬಾರ್ದು
ಎಲ್ಲ ಕೀಲು ಸಲ್ಡಾಗಿ ಬಿಟ್ಟಾವಂತ
ಆಗ ಬಲಪಾದ ಕೂಟ ವರ್ತಿಮಾಡಿ
ಬಲ ರೆಕ್ಕೆಲಿ ನೀರು ಒಗ್ದು
ಆಗ ಎರ್ಡ ರೆಕ್ಕೆ ಕೂಟ
ಮೈಮ್ಯಾಲ ನೀರ ಹಾಕ್ಯಂಡು
ಸ್ನಾನ ಮಾಡಿಕ್ಯಂತು
ಸ್ನಾನ ಮಾಡಿಕ್ಯಂತು
ಸ್ನಾ ಮಾಡಿಕ್ಯಂಡು
ಚಾಮರಾಜನ ತ್ವಾಟದಾಗ ಬಂದು
ಆಗ ಮಲ್ಲಿಗಿ ಹೂವ್ವಾ ತಪ್ಪಲು
ನಿಂಬೆ ತಪ್ಪಲು
ಗಿಡ ಮ್ಯಾಲೆ ಹರ್ಕಂಡು ತಿಂದು
ತಾಸ್ಹೊತ್ತು ನಿದ್ದಿ ಮಾಡಿ
ಹೋತಿನಲ್ಲಾ ಅಂತ
ಸಂಪೂರ್ಣ ಆತು ನನಗೆ
ಅಂತ ನಿದ್ದಿ ಮಾಡುವಾಗ
ಆಗ ಚಾಮರಾಜ ಎಂಬೋನು
ಕಷ್ಣಗೊಲ್ರೋನು ಬಂದುಬಿಟ್ಟ
ಆಗ ವರ್ತಿತಲ್ಲಿ ನೀರ
ಕುಡ್ಯೋಣಂತ ಬಂದ್ರೆ
ಆವಾಗ ಹೊಂಡ ಮಾಡಿ ಹೋಗೈತಿ
ಆಲೆಲೆಲೇ
ಹೊಂಡ ಮಾಡಿ ಹೋಗೈತಿ ಇವಾಗ
ನಾಕ ಪಾದ ಹಂಗೆ ಬಿದ್ದಾವ
ಹುಲಿ ಹೋಗೈತೊ ಕರ್ಡಿ ಹೋಗೈತೊ
ತ್ವಾಟದಾಗ ಅಂತ
ಏ ಜನರೇ
ಈಗ ಗಲಾಟೆ ಎಬ್ಬಿಸೆರಪ್ಪ
ಏನೈತೋ ಎದ್ದೇಳತದಂತ
ಅಂದ್ರೆ ನಾನು ಬಂದೂಕು ಹಿಡಕಂತಿನಿ
ನಾನು ಕೊಲ್ಲಿ ಬಿಡ್ತಿನಿ ಅಂಬೊತ್ತಿಗೆ
ಆಗ ಬಂದೂಕ ಹಿಡ್ಕಂಡು ನಿಂತ್ಕಂಡ
ಆಗ ಟೋಪ್‌ ಟೋಪ್‌ ಅಂತ
ಜನರೆಲ್ಲ ಗಲಾಟೆ ಮಾಡಿ ಬಿಟ್ರು
ಆಗ ಆ ಶಬ್ದ ಕೇಳಿ
ಕಾಮದೇವತಿ
ದೃಷ್ಟರ ಕಣ್ಣಿಗಿ ಬೀಳಲಾರ್ದಂಗ
ನಾನು ಹೋಗಬೇಕಲ್ಲ ಅಂತ
ಪಟಪಟ ರೆಕ್ಕೆ ಬಡ್ದು
ಗಗನಕ್ಕೆ ಹಾರುವುದು

ಹೋಗಲಿದ್ರೆ ನೋಡಣ್ಣೋ
ಚಮರಾಜ ಇನ್ನಾಗಿ ಅದ್ಕ ಮ್ಯಾಕಾಗಿ ನೋಡ್ಯಾನ
ತಲೆತ್ತಿ || ತಂದಾನ ||

ಅಬಾಬಬಬಾಬಾ
ಎಲ್ಡು ರೆಕ್ಕೆ ಇನ್ನ ನಾಕಪಾದ
ಎಷ್ಟಗಲಾಗ
ನೆವಿಲಿರುಬೋದಾ ಹಾಳು ಗದ್ದಿರಬಹುದಾ

07_80_KMKM-KUH

 

ಓಹೋ ಹೋತದಂತಾನೋ
ಏಳುಗುಂಡ ಹಿಡದಾನ
ಇನ್ನೂವಾಗಿ ಬಿಟ್ಟಾನ
ಹೊಟ್ಟಿನಾಗೆ ತಟ್ಟ್ಯಾವ ಬೆನ್ನಿಲ್ಹೊಂಟು ಹೋಗ್ಯಾವ
ಏಳುಗುಂಡು || ತಂದಾನ ||

ಆಗ ಈಗ ಹಡೆಗಂಗೈತೆ
ಆಗ ತಾಯಿ ಕೆಚ್ಚಲಾಗ ಒಂದು ಕೊಡ ಹಾಲೈತಿ
ಅರೇ ದುಷ್ಟ
ನನ್ನ ಗರ್ಭದಲ್ಲಿ
ಮಗ ಐದಾನೋ ಮಗಳೈದಾಳೋ
ಈಗ ಹಡೀಲಿಲ್ಲ ಈಗಿನ್ನ ದುಷ್ಟದವನು
ಏಟ್‌ ಮೈ ಮ್ಯಾಲಿಟ್ಕೊಂಡ್ಹೋದ್ರೆ
ಆಗ ಪರಮಾತ್ಮ
ಗೋರ್ಕ ಮುನಿಶ್ವರ ನಾಗೇಶ್ವರ
ನನ್ನ ಬರಗೊಡಿಸ್ತಿದ್ದಾರ
ಬರಗೊಡಿಸೋದಿಲ್ಲ
ದುಷ್ಟದವನು
ಇನ್ನ ಲೋಕ ಏಟು ತಿಂದುಕೊಂಡು
ಮೈಮ್ಯಾಲ ಬರಬ್ಯಾಡೇ
ದೇವಿ ಅಂತಾರ
ಈ ದುಷ್ಟ ಲೋಕನೇ ನನಗೆ ಪೂಜೆ ಆಗಲಿ
ಈಗ ಇನ್ನ ಏಟು ಬಿಟ್ಟಿದನು
ಇವನ ಜೀವಕ್ಕ ಶಾಪ್ನಕೊಟ್ಟು
ನಾನು ಜೀವ ಬಿಡ್ತೀನಿ ಅಂತ
ಆಗ

ಕುಪ್ಪಳಿಸಿ ಕೆಳಗೆ ಹಾರಿತಮ್ಮಾ
ಅಮ್ಮಾ ತಾಯಿ ಗೋಪಿ ದೇವಿತಿ ||ತಂದಾನ ||

ಯ್ಯಾಗ ಕೆಳಗೆ ಹಾರಿತೋ
ಈಗ ಚಾಮರಾಜ ನೋಡಿಬಿಟಟ
ಎರ್ಡುಪಾದಕ್ಕೆ ಬಾರ್ಲು ಬಿದ್ದ

ಯಮ್ಮ ನಮ್ಮ ಮನಿ ದೇವತಿ
ನಾವು ಇನ್ನ ಕೆಂಪಗೊಲ್ಲರಮ್ಮ ನಾವು
ತಾಯೆ ನಿನ್ನ ಹಾಲು ಕುಡಿಯುವರು
ನಿನ್ನ ಲೋಕ ಸಲುವೋರು ನಾವು || ತಂದಾನ ||

ಯಮ್ಮಾ ನಾನು ಲೋಕ ನೋಡಿಲ್ಲಾ
ಹುಟ್ಟಿದಾಗಲಿದ್ದ
ಎರ್ಡು ರೆಕ್ಕೆ ಇದ್ದ ಕಾಮದೇವಡಿ
ಗೋಪಿದೇವತೇನ್ನ ನೋಡಲಿಲ್ಲ
ನಾಕು ಪಾದ ಇರೋ ತಾಯೀನ್‌ ನೋಡೀನಿ
ಯಮ್ಮಾ ಸರ್ವ ತಪ್ಪಾತು
ನವಿಲು ಹಾಳುಗದ್ದೇಂತೆ ತಿಳ್ದು ಏಳುಗುಂಡು ಬಿಟ್ಟೀನಿ
ತಾಯಿ ನಿನ್ಗೆ ಬೆಳ್ಳಿಪೊಟ ಇಳಿಸೀನಿ
ಯುಗಾದಿ ಸ್ವಾಮಾರಾ
ಆಗ ಹನ್ನೆರಡು ಗಂಟ್ಯಾಗ ಜೀವ ಬಿಟ್ಟಿದ್ದಾಕಿ

ಹನ್ನೆರಡು ಗಂಟೀಗೆ ನಿನ್ನ ಪೂಜೆ ನಾನು ಮಾಡೀನಾ || ತಂದಾನ ||

ಬರ್ರಿ ಕೆಂಪು ಗೊಲ್ಲರದವ್ನೇ
ಈಗ ಗೋಪಾಲ ಕೃಷ್ಣವಿದ್ದಂಗ
ಇನ್ನವರ ಗೋಪಿನ ಕೊಲ್ಲಿಬಿಟ್ಟೆ
ಹಡ್ಯೋ ತಾಯೀನ ಕೊಲ್ಲಿಬಿಟ್ಟೆ
ನಿನ್ನ ನಾನು ಬಯ್ದಿಲ್ಲ
ನಿನ್ನೇನು ಮಾಡಿಲ್ಲ
ಈಗ ನನ್ನ ಲೋಕಕ್ಕೆ ನಾನು ಹೋತಿದ್ರೆ
ನನ್ನ ಜೀವಕ್ಕೆ
ಏಟು ಬಿಟ್ಟಿದ್ಯಲ್ಲೋ ದುರ್ಮಾರ್ಗ
ಇಗೋ ನನ್ನ ಗರ್ಭದಲ್ಲಿ ಒಬ್ಬ ಮಗ
ನಿನಗೆ ಮಗ ಹುಟ್ಟಿ ಮೂರು ತಿಂಗಳು ಆಗೈತಿ
ಈಗ ಹಡ್ಯೋ ತಾಯೀನ ಹ್ಯಾಂಗ ಕೊಲ್ಲೀಯೋ
ನಿನ್ನ ಮನಿಗೆ ಹಡ್ಯೋರು ಇಲ್ದಂಗ

ಗೊಡ್ಡೋನವಾಗಲಿ ನಿನ್ನ ಲೋಕದಾಗ ಬೆಳೆಯಾಲಿ
s ಏಸ್ಮಂದಿ ಮದುವಾದ್ರೆ ನಿನಗೆ ಮಕ್ಕಳಾಗಲ್ಲಿದ್ಗಂಗ || ತಂದಾನ ||

ಆಗ ನನ್ನ ಕರ್ಮ
ನಿನ್ನ ಮೂರು ತಿಂಗಳು ಮಗನಿಗೆ ಮುಟ್ಟಲಿ ಅಂತ
ಶಾಪನ ಕೊಟ್ಟ್ಯಾಳಮ್ಮ

ಅಮ್ಮ ನನಗೆ ಶಾಪಾನಾಗಿ ಕೊಡಬ್ಯಾಡ || ತಂದಾನ ||

ಆಗ ವಿಷ್ಣಾ ಅಂತ ಜೀವ ಬಿಟ್ಟು ಬಿಡ್ತಪ್ಪಾ
ಜೀವ ಬಿಡೋ ಹೊತ್ತಿಗೆ
ಗರ್ಭದಾಗಿದ್ದ ಮಗ
ಅಮ್ಮಾ ಅಂತ ಜೀವ ಬಿಟ್ಟ
ನೋಡಿದ ಚಾಮರಾಜ
ಕೆಂಪುಗೊಲ್ಲರ ಕೃಷ್ಣಗೊಲ್ಲರು
ಅಮ್ಮಾ ಗೋಪಿ ದೇವತಿ
ನೀನು ಒದ್ದಾಡಿ ಜೀವ ಬಿಟ್ಟುಬಿಟ್ಟಿ
ನಿನಗೆ ಪೂಜೆ ಮಾಡ್ತೀನಿ
ನನ್ನ ತ್ವಾಟದಾಗ
ಎಲೆ ವನಂತ್ರದಾಗಂತ
ಮಲ್ಲಿ ಹೂವ ಗಿಡ ಕೆಳಗೆ
ಎದೆ ಮಟ್ಟ ಇನ್ನವರ ಕುಣಿ ತೋಡಿ
ಆಗ ಗೋಪಿ ದೇವತೆ ಮೈ ತೋಳ್ದು
ಈಭೂತಿ ಗಂಧವೂ ಆಗ ದೇವಿಗಚ್ಚಿ
ಆಗ ಇನ್ನ ಎದೆ ಮಟ್ಟ ಕುಣಿವಳಗೆ
ಗೋಪಿ ದೇವತೆಯನ್ನಿಟ್ಟು
ಮ್ಯಾಲೆ ಬಂಡೆಗಲ್ಹಾಕಿ
ದಡಿಯಂತ ಮಲ್ಲಿವುವ್ವಾಕಿ
ಪರದಕ್ಷಿಣೆ ಮಾಡಿಕ್ಯೆಂಡು ದೇವಿಗೆ
ಆಗ ಇನ್ನ ಸಣ್ಣಗ ಮಖ ಮಾಡಿಕ್ಯಂಡು
ಬ್ಯಾಟಿ ಮಾರ್ಗಂತ ಬಂದ್ರೆ
ಒಂದು ಏನು ಸಾಗಲಿಲ್ಲ
ಗೋಪೀನ್ನ ಕಡ್ದು ನಾನು ಕರ್ಮ ಕಟ್ಟಿಕ್ಯಂಡೆ
ಅಂತ ಆ ಚಾಮರಾಜ

ಚಾಮರಾಜ ನೋಡಣ್ಣ ತಾ ಮನಿಗೆ ಹೊಂಟು ಬರುತಾನ || ತಂದಾನ ||

ಮನಿಗೆ ಬರ್ಹೊತ್ತಿಗೆ
ಆಗ ಒಂದೇ ಮಗ ಹುಟ್ಯನಪ್ಪ
ಯಾರಿಗೆ ಚಾಮರಾಜ್ಗೆ
ಮಗ ಹುಟ್ಟಿ ಮೂರು ತಿಂಗಳಾತು
ಈಗ ಚೂಟಿದ್ರೆ ರಕ್ತ ಇಳಿತೈತೆ
ಆಹಾ ನನ್ನ ಜೀವ ಗಂಡದವನು ಬಂದನಂತ
ಬಲಗೈಲಿ ಚೆರಿಗಿಲಿ ನೀರು ಹಿಡಕಂಡು
ಎಡಗೈಲಿ ಬಗಲಾಗ ಮಗನ ಎತ್ತಿಕ್ಯಂಡು
ನಿಲವೇಣಿ ದೇವಿ ಬಂದು ಹಿಡ್ರೀ ಜೀವದವ್ನೆ ಜೀವ ತೊಳಿರಿ
ಅಂತ ನೀರು ಕೊಟ್ಟರೆ
ಆಗ ಚೆರಗಿ ನೀರು ತೊಗೊಂಡು
ಕಾಲು ಮಕ ತೊಳಕೊಂಡ
ಬಾಕ್ಲಿಗ ಬಗ್ಗಿ ಶರಣು ಮಾಡುವಾಗ

ಆಗ ಗೋಪಿ ಅಂದಾನ ಬಕ್ಣರಕ್ತ ತಿರುವಣ ಮಾಡ್ಯಾನ
ಮನಿದೇವ್ತಿ ನೋಡಮ್ಮ ಮನಿ ಮುಂದೆ ಜೀವ ಬಿಟ್ಟಾನ ಅವ್ನು || ತಂದಾನ ||

ಗೋವ್‌ ಕಡ್ದವರು
ಬಸವನ ತಾಯಿ ಕೊಲ್ಲಿದವರು
ಆಗಿನ್ನವರೂ ಬಸೂರೀಗಿಡ ಕಡ್ಡವರಿಗೆ

ಗೋಪಾಪ ನೋಡಣ್ಣಾ
ಲೋಕ ಜೀವ ನಡಿಯೋದು || ತಂದಾನ ||