ಗೋ ಕರ್ಮ ಅಪ್ಪ ಲೋಕ್ದಾಗ ನಡಿಯೋದು
ಆಗ ಗೋಪೀ ಅಂತ ಜೀವ ಬಿಟ್ಟು ಬಿಟ್ನಪ್ಪ ಚಾಮರಾಜ
ಆಗ ಬಕ್ಣ ರಕ್ತ ತಿರ್ವಿ
ಇನ್ನು ಜೀವ ಬಿಟ್ಟು ಮ್ಯಾಲೆ
ಹೆಣ್ತಾಗಿ ಇನ್ನ ನೀಲವೇಣಿ ದೇವಿಯಮ್ಮಾ
ಆಗ ಮಗನ ಪಾದಗ್ಹಾಕಿ

ಆಗ ಮಗನೂ ಪಾದಗ್ಹಾಕಿ ದುಃಖ ಮಾಡುತಾಳಾs
ಯಮ್ಮಾ ಜೀವದ ಗಂಡಾ ಲೋಕ ಹೋದನಮ್ಮಾ
ಪರಮಾತ್ಮಾ ನಾನ ಯ್ಯಾ ದೇವ್ರಿಗೆ ಪಾಪ ಮಾಡಿದ್ನೇನಪಗಪಾ || ತಂದಾನ ||

ಅಯ್ಯಾ ನನ್ನ ರಂಡೆ ಮಾಡಿ ಹೋದೆ ವಯ್ಯೋs
ಅಯ್ಯಾ ನನ್ನ ರಂಡೆ ಮಾಡಿಬಿಟ್ಟೆ ಭೂಮಿಮ್ಯಾಲೆ
ಅಯ್ಯಾ ಒಬ್ಬೆ ಮಗನು ಇನ್ನ ಹುಟ್ಟ್ಯಾನಯ್ಯಾ
ಅಯ್ಯಾ ಮಗ ಹುಟ್ಟಿ
ಮೂರು ತಿಂಗಳು ಆಗಲಿಲ್ಲ ಶಿವನೇ ಪರಮಾತ್ಮನೇ || ತಂದಾನ ||

ಆ ತಾಯಿ ಉಳ್ಳಾಡಿ
ಪಾದ ಮ್ಯಾಲೆ ಬಿದ್ದು ದುಃಖ ಮಾಡುತಾಳ
ಆಗಿನ್ನ ಐನೂರ ಮಂದಿ
ಹಿಂದೆ ಬ್ಯಾಟೆಗೆ ಹೋದೋರು
ನೋಡಮ್ಮಾ ನಿನ್ನ ಗಂಡಗೇ ಏನ ಬ್ಯಾನಿಲ್ಲ
ನಿನ್ನ ಗಂಡಗೇನು ರ್ವಾಗ ಇಲ್ಲ
ಈಗ ಕಲ್ಪವೃಕ್ಷದ ಕಾಮದೇವತಿ
ಗೋಪಿ ದೇವಿತಿನ ಹಡೆಯೋ ತಾಯಿನ
ಏಳು ಗುಂಡುಗೆ ಹೊಟ್ಟಿಗೆ ಬಿಟ್ರೆ
ಬೆನ್ನಿಲಿ ಹೊಂಟ್ಹೋದುವು
ಗೋಪಿ ದೇವಿ ತಾಯಿಗಿ

ಜೀವವೊಂದು ಕೊಲ್ಹ್ಯಾನ ಜನ್ಮವೊಂದು ಬಿಟ್ವಾನ || ತಂದಾನ ||

ಈ ಕಾಲಾಗಾಗಲಿ ಆ ಕಾಲದಲ್ಲಾಗಲಿ
ಗೋವು ಕಡದವ್ನು
ಆಗ ಬಸುರು ತಾಯಿ ಕೊಲ್ಲಿದವ್ನು
ಬಸುರಿ ಗಿಡಕಡ್ದವ್ನಿಗೆ

ಲೋಕದಾಗ ನೋಡಮ್ಮಾ
ಅವ್ನಿಗೆ ಗೋಪಾಪ ಕರ್ಮಮ್ಮಾ
ಅದಕೆ ಜೀವದಲ್ಲಿ ನೊಡಮ್ಮಾ
ನಿಮ್ಮ ಮನಿದೇವತಿ ಗೋಪ್ಯಮ್ಮ || ತಂದಾನ ||

ಆ ಗೋವು ಕರ್ಮಲಿದ್ದ ನಿನ್ನ ಗಂಡ ಸತ್ತಾನ
ಇಲ್ಲದಿದ್ರೆ ಸಾಯೋನಲ್ಲ
ಚಾಮರಾಜ ಆಗಿ
ಓಹೋ ಅಮ್ಮಾ
ಹೋದ ಗಂಡ ಬರಂಗಿಲ್ಲ
ಈಗ ಹೋದ ಜೀವ ತಿರುಗಿ ವಾಪಸು ಬರಂಗಿಲ್ಲ
ಆಗ ನಿನಗ್ಯನ್ನ ಒಬ್ಬ ಮಗ ಹುಟ್ಯ್ಯಾನ
ಈ ಭೂಮಿಮ್ಯಾಲೆ
ಈಗ ಮದುವ್ಯಾದ ತಿಂಗಳಿಗೆ ಎರಡು ತಿಂಗಳಿಗೆ
ಲೋಕದಲ್ಲಿ ಗಂಡಗ ಜೀವಗಿಲ್ಲದ್ಹಂಗ ಕಳಕಂಡು

ಯಮ್ಮಾ ಧರ್ಮ ಪಾಪ ಕಾಣ್ದವ್ರು
ಲೋಕದಾಗ ಇನ್ನೆಲ್ಲಿದ್ದಾರಾ
ಯಮ್ಮಾ ಅರ್ಧ ಸುಖವೈತ್ಯಮ್ಮಾ
ಲೋಕ ಅರ್ಧ ದುಃಖ ಐತ್ಯಮ್ಮಾ
ಲೋಕದಾಗ || ತಂದಾನ ||

ಅರ್ಧಮಂದಿಗೆ ಕಷ್ಟ ಐತೆ ಬಾಳ
ಅರ್ಧ ಮಂದಿಗೆ ಸುಖ ಐತೆ
ಯಮ್ಮಾ ದುಃಖ ಪಡಿಬೇಡ
ಈಗ ಜೀವದ ಗಂಡಗ ಜೀವದ ಮಗ ಹುಟ್ಟ್ಯಾನ
ಈಗ ನಿನ್ನ ರಾಜ್ಯವು ಎತ್ತಾಗೋಗದಿಲ್ಲ
ಚಾಮಪುರ ಪಟ್ಣಕ್ಕೆ
ಊರಿಗೆ ಗೌಡಿಕೆ ಆಗಿ ರಾಜ್ಯವಾಳ್ತಾನ
ತಂದ್ಯಾಳೋ ರಾಜ್ಯ ಮಗ ಆಳ್ತಾನ
ತಂದ್ಯಾಳೋ ತಖ್ತ ಮಗ ಆಳ್ತಾನ
ಏನು ದುಃಖ ಮಾಡಬ್ಯಾಡ
ನಿನ ಗಂಡನ ವ್ಯಸನ ಬಿಟ್ಟು
ಈ ಮಗನ ಮಕ ನೋಡಿ
ಜೋಪಾನ ಮಾಡೆ ತಾಯಿ
ನೀಲವೇಣಿ ದೇವಿ
ಓಹೋ ಅಪ್ಪಾ
ಈಗ ದೊಡ್ಡೋರು ಬುದ್ಧಿ ತಿಳಿದೋರು
ಈತನ್ನ ಎಲ್ಲಿಡಬೇಕ್ರಿ ಜೀವದಲ್ಲಿ
ನಾವಿಡ್ತೀವಮ್ಮಾ
ನೀನೇನು ದುಃಖ ಮಾಡಬ್ಯಾಡ
ದಡಿಯಂತ ಮಲ್ಲುವ್ವ ತಂದು
ಹೂ ಇನ್ನ ನೀವಾಳಿ ಕಟ್ಟಿ
ಆಗ ಚಾಮರಾಜಗೆ ಮೈ ತೊಳ್ದು
ಆಗ ಇನ್ನು ನಿವ್ವಾಳದಾಗ ಕುಂದಿರಿಸಿ
ಆಗ ಇನ್ನ ಮ್ಯಾಳ ತಾಳ ತಂದು

ಈಗ ತಾ ಒಂದು ನೋಡಣ್ಣಾ ಹೆಣಾ ಮ್ಯಾಕೆ ಎತ್ತ್ಯಾರೋ
ಯಮ್ಮನ ತುಂಬಾ ಸೆಠಗು ವಾಕ್ಯಾರ ಹೆಣ್ಣುಮಕ್ಕಳು ಹಿಡ್ದಾರೋ
ಏಯ್ದುಃಖ ಮಾಡಬ್ಯಾಡಮ್ಮ ನೀನ ಎದೆ ಬೀಳು ಬ್ಯಾಡಮ್ಮಾ
ಆಗ ಮಗನ ಎತ್ತಿಕ್ಯಂಡ್ಯಾರ ನಿಮ ತಂದಿಹೋದ ಹೇ ಯಪ್ಪಾ || ತಂದಾನ ||

ನಿಮ್ಮ ತಂದಿ ಹೋಗಿ ಬಿಟ್ಪಪ್ಪಾ
ನೀನು ಹುಟ್ಟಿದ ಟೇಮು ಎಂತಾದು
ಯಪ್ಪಾ ಮೂರು ತಿಂಗಳಿಗೆ ತಂದೆ
ಮಖ ನೋಡಲಾರ್ದಾಂಗ ಹೋಗಿಬಿಟ್ಟ
ಅಂತ ಸುಡುಗಾಡು ರುದ್ರಭೂಮಿಗೆ
ತರಬೇಕು ಅಂಬೊತ್ತಿಗೆ
ನನ್ನಂಥ ಇನ್ನ ಚಿಕ್ಕೋರು ದೊಡ್ಡೋರು ನೋಡಿದ್ರು
ಛೀ ಛೀ ಛೀ ಹಾಂಗ ಹಿಡ್ಯಂಗಿಲ್ಲ ಕೆಂಪುಗೊಲ್ಲರು
ಗೋಪೀನ ಕೊಲ್ಲಿದೋವನ್ನ
ಗೋಪಿ ಬಗಲಾಗ ಇಡಬೇಕು ಈತನ್ನ
ಅಂತ ತ್ವಾಟದಾಗ ಹೊತ್ತಕಂಡುಬಂದ್ರು
ಎಲೆ ವನಂತ್ರದಾಗ
ತಂದು
ಗೋವು ಬಗಲಾಗ ಎದೆ ಮಟ್ಟ ಕುಣಿ ತೋಡಿ
ಆಗ ಆತನ್ನ ಕುಂದ್ರಿಸಿ
ಅಮ್ಮಾ ನೀಲವಣಿ ದೇವಿ

ಗಂಡಗ ನೀನೆ ರಂಡೆವಾಗು ಮಗಳೇ
ಬಲಗೈಯೇ ಎಡಗೈ ಬಳೆಯಮ್ಮಾ
ಮೂಗಿನ ಮುತ್ತು, ಇನ್ನು ತಾಳಿಯಮ್ಮೋ
ಆಯ್ತು ನಿನಗೆ ಅರಿಸಿನ ಭಂಡಾರ ಹೋಯ್ತಮ್ಮಾ
ಬೆಳ್ಳಿ ಕಡಗ ನಿನಗ್ಯಮ್ಮೋ ಕೈಗಾಗಿ ನಡೀತಾವ || ತಂದಾನ ||

ಅಂದ್ರೇ ಆಗ ಜೀವದಲ್ಲಿ ಏನಂತಾರ
ಈಗ ತಾಯಿ ನೋಡ ಮುತ್ತೀನ ಸೆರಗು ಹಾಸಿ

ಆಯಿತಯ್ಯಾ ಲೋಕಾ ಇಲ್ಲವಯ್ಯೋ
ಅಯ್ಯಾ ಈಗ ಜೀವದಲ್ಲಿ ಒಬ್ಬೆಮಗ ನನಗೆ
ನಾನು ಲೋಕದಾಗ ಹೆಂಗ ಇರ್ಲಿ ಶಿವನೇ
ಒಂದು ಕೂಸಿನ ತಾಯಿ ಹರೆದವ್ಳಪ್ಪಾ || ತಂದಾನ ||

ಅಯ್ಯಾ ಎಂಥ ಕರ್ಮ ತಂದು ಕಟ್ಟಿದೇ
ಎಂಥ ಪಾಪದಲ್ಲಿ ಹೆಂಗ ಮೋಸ ಬಿದ್ದೆ
ಅಂದ್ರೆ
ಆತೇನು ಮೋಸ ಬೀಳೋನಲ್ಲ
ಏನೋ ಆಗ ನವಿಲ್ಯೋ ಹಾಳಗದ್ಯೋ
ಮ್ಯಾಕಿಲಿದ್ದ ಬರುತೈತೆ
ಈಟಗಲಾಗೈತಂತೆ
ಎರ್ಡು ರೆಕ್ಕೆ ನಾಕು ಪಾದ
ಆಗ ಇನ್ನ ಎರ್ಡು ರೆಕ್ಕೆ ನಾಕು ಪಾದ ಇದ್ದ
ಗೋಪಿ ದೇವತೇನ ಯಾರೂ ಕಂಡಿಲ್ಲ
ಆಗ ನಾವು ಗೂಡ ನೋಡಿಲ್ಲ
ಹೆಂಗ್‌ ಗೊತ್ತಾಗಬೇಕು
ಅಬಬ ಏನೋ ಬರ್ತೈತಿ ಈಟಗಲಾಗಂತ
ಏಳುಗುಂಡು ಢಮಾಂತ ಬಿಟ್ಟ
ಹೊಟ್ಟೀಗಿ ತಟ್ಟಿ ಬೆನ್ನಿಲ್ಹೋದುವು
ದುಷ್ಠದವ್ನ ಏಟು ಮೈ ಮ್ಯಾಲೆ ಇಟ್ಟುಗೊಂಡು
ವಿಷ್ಣ ಪರಮಾತ್ಮ ಸಾಂಬ
ಗೋರ್ಕ ಮುನೇಶ್ವರ ದೇವೇಶ್ವರ ತಲ್ಲಿಗೆ
ಹೋಗಬಾರ್ದು ನಾನು
ದುಷ್ಠಲೋಕದಾಗ ಸತ್ತು
ಲೋಕನೇ ಪೂಜೆ ನಡಿಬೇಕು
ಅಂತ ಜೀವ ಬಿಟ್ಟು ಗೋಪೆಮ್ಮಾ
ಏನಮ್ಮಾ ಈಗ ಹೋದ ಜಲ್ಮ ಬರೋದಿಲ್ಲ
ಯಾಕ ದುಃಖ ಮಾಡ್ತೀ ಮಗಳ
ಮುತ್ತೈದೆತನ ಕಳೀ ಅಂದ್ರೇ

ಆಗ ಎಡಗೈ ಬಳೆ ಒಡಿದಳಣ್ಣಾ
ಆಗ ಮೂಗು ಮುತ್ತು ತಗದಾಳಣ್ಣ
ಕೊಳ್ಳಾಗಿನ ತಾಳಿ ತಗದಾಳಣ್ಣ
ಆಗ ಎರ್ಡು ಬೋಗಸ್ಯಣ್ಣೋ ಮಣ್ಣು ಒಂದು ಹಾಕ್ಯಾಳ
ಗಂಡನ ಜೀವಕ್ಕ
ಏಯ್ಮುತ್ತಿನ ಸೆರಗಿಲಿ ನೋಡಣ್ಣ
ಜೀವ ಗಂಡವಂತ ಮುಗಿದಾಳ ತಾಯಿ || ತಂದಾನ ||

ಜನಲೋಕೆಲ್ಲ ಇನ್ನ ತಾವಾಗಿ
ಚಲಿಕೇಲಿದ್ದ ಮಣ್ಣು ಏಳ್ದು ಬಿಟ್ರು
ಮ್ಯಾಲೆ ಬಂಡೆ ಹೊರಿಸಿದ್ರು
ಆಗ ಹಳ್ಳದ ನಾರ್ಯಾಳ್ಳದಾಗ ಬಂದು
ಆಗ ತಣ್ಣೀರ ಹರಿಯೋ
ನೀರುದಾಗ ಸ್ನಾನ ಮಾಡಿಕ್ಕಂಡ್ರು

ಬಿಳೆಸೀರೆ ಉಟ್ಟಾಳ ಇನ್ನ ರಂಡೆ ಮುಸುಗು ಹಾಕ್ಯಾಳ || ತಂದಾನ ||

ಬಿಳೇ ಮುಸುಕು ಹಾಕ್ಯಂಡು
ಮನಿಗ ಕರಕಂಡು ಬಂದ್ರೆ
ಹದ್ನಾರು ಬಾಕಿಲ ಮನಿ
ಎರ್ಡು ಎಕರೆ ಭೂಮಿ ಅಗಲಾಗ
ಕೆಂಪುಗೊಲ್ಲರು
ಕೃಷ್ಣಗೊಲ್ಲರುದವನು
ಅಪ್ಪಾs ಊರಿಗೆ ರಾಜ ಆಗಿ ನಡಿತಿದ್ದಿ
ಗೌಡಿಕ್ಯಾಗಿ ರಾಜ್ಯವಾಳ್ತಿದ್ದಿ
ಈಗ ನಿನ್ನ ಪಟ್ಣ ಯಾರು ಆಳೋದು
ಅಂತ ಆಗ ದುಃಖ ಮಾಡ್ತಿದ್ರೆ
ಅಮ್ಮಾ ದುಃಖ ಮಾಡಬ್ಯಾಡ
ನಾವು ಐದಿವಿ ಹೆಣಮಕ್ಕಳು
ಅಡಗಿ ಮಾಡವ್ರು
ಬುದ್ಧಿಗ್ಯಾನ ಹೇಳ್ತಾರ
ಯಮ್ಮಾ ಈ ಮಗನ ಮಖ ನೋಡು

ಊಟ ನೀನು ಇನ್ನು ಮಾಡು ಮಗಳೆ
ನಿದ್ದಿ ಮಾಡೆ ನನ್ನ ಮಗಳೆ
ಎದೆ ಒಡೆದು ನಿನ್ನ ಜಲ್ಮ ಕಳೆಯಬೇಡ
ತಂದಿ ಜೀವಕ್ಕ ಒಬ್ಬೋನೋ ಮಗನ ಲೋಕ ಬೆಳೆಸಮ್ಮಾ
s ಜೀವ ಮಗ ವಳ್ಯೂದೆ ನೀನು ಸತ್ರೆ ಮಗ ಉಳ್ಯೋದಿಲ್ಲೆ || ತಂದಾನ ||

ಅಂತ ಹೆಣ್ಮಕ್ಕಳೆಲ್ಲ ಬುದ್ಧಿ ಹೇಳ್ತಿದ್ರೆ
ಹದ್ನೈದು ದಿನದಲ್ಲಿ
ಇನ್ನಾವರ ದಿವ್ಸ ಮಾಡಿಬಿಟ್ರು
ಯಾರಿಗೇ ಚಾಮರಾಜಗೆ
ನೀಲವೇಣಿ ದೇವಿ ಇನ್ನವರ ಹದ್ನೈದು
ದಿವಸಕ್ಕೆ ಗಂಡನ್ನ ಮರ್ತುಳು
ಈ ಮಗನೇ ನನ್ನ ಜೀವಕ್ಕಂತ