ಏನಾಯ್ತು ವನಂತ್ರದಲ್ಲಿ
ಮಗ್ಗೇ ಹೋಗಿ ಹೂವ್ವ ಆಯಿತಣ್ಣಾ
ಶಿವರಾತ್ರಿ ಶಿವಲಿಂಗದೊಟುವಾದ್ವು
ಊಗಾದಿ ಊದಿಕೊಂಡು ಹಣ್ಣವಾದ್ವು || ತಂದಾನ ||

ಊಗಾದಿ ಹಣ್ಣು ಆದ ಮ್ಯಾಲೆ
ಹಣ್ಣು ತಿಂಬಗಿಲ್ಲಾ
ಯಾರಿಗ ಮಾರಂಗಿಲ್ಲ
ಈಗ ಏಳು ಸಮುದ್ರದಾಕಡಿಗೆ
ಆಗಿನವರತಾವಾಗಿ ಸಾವಿರ ಗಿಣಿ
ಈಗ ಕೋಗಿಲೆಗಳು
ಆಗ ಬಾಯಿಲ್ಲುದ್ವು ಎರ್ಡು ರೆಕ್ಕೆ ಇದ್ದುದ್ವು
ಈಗಿನವರತಾ ನಾತ್ಹಿಡುದ್ವು
ಇಲ್ಲಿಗೇ ಇಷ್ಟು ನಾತ ಹೊಡೀತೈತಿ ಜೀವಕ್ಕಾ
ಜಲ್ಮಗೊಂಡ್ರೆ ಎಷ್ಟು ಇನವರತ ಸುಖ ಕಾಣಬೋದು
ಅಂತ ಆಗಿನ್ನವರ ಗಿಣೀವಾಗಿ
ಕೋಗಿಲೆಗಳಾಗಿ
ಜೀವ ಗಡ್ಡಿಯೊಳಗಿರೋವು
ಆಗ ಎಷ್ಟು ಬೇಲಿ ಬಡಿರಿ
ಎಷ್ಟನ್ನ ಕಾಯ್ಲಿ
ಒಂದ ಹಣ್ಣನ್ನ್‌ ಬಾಯಾಗಿಟ್ಕೋಂಡು ಬರಬೇಕು ಜೀವಕ್ಕಾ ಅಂತ

ಬಡ ಬಡ ರೆಕ್ಕೆ ಬಡುದಾವಾ
ಸಾವರ ಒಂದು ಎದ್ದಾವ
ಏಳು ಸಮುದ್ರದ ಕಡಿಗೆ
ಒಟ್ಟುವಾಗಿ ಬಂದಾವು || ತಂದಾನ ||

ಇಳುಕಂಡ್ವು
ಒಂದು ಬಾರ ಬಯ್ಲಿಗೆ ಇಳುಕಂಡ್ವು
ಅಮ್ಮಾ ಒಳ್ಯವ್ನು ಹಾಕ್ಯಾನ
ಕೆಟ್ಟವ್ನು ಹಾಕ್ಯಾನ ದುಷ್ಟಾಕ್ಯಾನ
ಸಾವಿರ ಬಣ್ಣ ಗಿಳಿ
ಸಾವಿರ ಲೋಕ ತಿಳುವರಿಕೆ ಮಾಡೋದು
ಇದರಾಗ ಒಳ್ಳೇವ್ನು ಕೆಟ್ಟವ್ನು
ಹಣ್ಣಿಡ್ಕುಂಡು ಬಾಯಿಗಿಟ್ರೆ
ಲೋಕೆಲ್ಲ ಕಾಣ್ತೈತೆ ಅಂತ
ನಾನು ಹೋಗಿ ಬಂದು ಹೇಳ್ತಿನಮ್ಮ
ಪಟ ಪಟ ರೆಕ್ಕೆ ಬಡುದು
ಸಾವಿಎ ಬಣ್ಣ ಗಿಣಿ
ದೊಡ್ಡಗಿಣಿ
ದೊಡ್ಡ ಮಾವುಳ ಗಿಡ ಮ್ಯಾಲೆ ಕಂತು ಬಿಡ್ತು
ವಿಷ್ಣ ಪರುಮಾತ್ಮ ಅಂತ ಹಣ್ಣ ಹರ್ದು ಬಿಟ್ತು
ಬಾಯಿ ಕೂಟ
ಒಂದು ಕಡೀಗೆ ಹಣ್ಣು ತಿಂದ್ರೆ
ಬಾಯಿಗಿಟ್ರೆ ಕರೀಗ್ಹೋತು
ಆಗ ಅರ್ಧಹಣ್ಣ ಊಟ ಮಾಡಿ
ಅರ್ಧ ಬಾಯ್ಲಿ ಹಿಡ್ಕಂಡು ತಗಂಡು ಬಂದುಬಿಡ್ತು
ಯಮ್ಮಾ ಗಿಣೀಲಾರ
ಆಗಿನವರತಾ ಕೋಗಿಲೆಗಳಾರಾ
ನನ್ನ ಮಾತ ಕೇಳ್ರಿ
ಈಗ ದುಷ್ಟದವ್ನಾಕಿದ್ರೆ
ದುರುಮಾರ್ಗಾಕಿದ್ರೆ ಸಪ್ಪಗಿರ್ತೈತಿ
ಒಳ್ಳೇವ್ನು ದರ್ಮದವ್ನಾಕ್ಕ್ಯಾನ
ಮಕ್ಕಳಿಲ್ದ ಮಾರಂಗಿಲ್ಲ
ಆಗ ಒಬ್ಬರಿಗೆ ದಾನಾ ಮಾಡಂಗಿಲ್ಲ
ನನ್ನ ಜೀವಗಾಗಿ ಆಯ ನೀರ್ಹಾಕಿ
ಆಗ ಗಿಡುಗಳ ಬೆಳಿಸ್ಯಾನಮ್ಮಾ
ಆಗ ಮಕ್ಕಳಿಲ್ಲಾ ಹಾಲು ಗೊಲ್ರವ್ನು
ಕಾಂಭೋಜರಾಜ ಹಾಕ್ಯಾನ
ಊಟ ಮಾಡ್ತೀರ್ಯಾ
ಅಯ್ಯೋಯ್ಯಮ್ಮ ನಾವು ಹೊತ್ತುಟ್ಟೊತ್ಗೆ
ಮಕ್ಕಳ್ಹಡ್ದು ಮಕ್ಕಳು ಮುದ್ದು ಕೊಡೋರು
ಗೊಡ್ರವ್ನು ಹಾಕಿದ್ದ ನಾವು ಊಟ ಮಾಡಿದ್ರೆ

ನಾವು ಗೂಡ ಗೊಡ್ಡರಾಗ್ತಿವಮ್ಮಾ
ನಾವು ಗೂಡವೂ ಬಂಜಿರಾಗ್ತವಮ್ಮಾ
ಹಡಿಯೋ ಮಕ್ಕಳು ಹಾಳಾಗೋಯ್ತರಮ್ಮ || ತಂದಾನ ||

ಆಗ ಹೊಟ್ಟ್ಯಾಗಿರೋ ಮಕ್ಕಳು ಕರಿಗ್ಹೋಗಿ ಬಿಡ್ತಾರ
ಆ ಹಣ್ಣು ತಿಂದ್ರೆ ನಮಗೆನು ಬೊಜ್ಜು ಬರಂಗಿಲ್ಲ
ಯಾವ ಕಾಲದ ಜೀವ ಹಂಗೆ ನಡೀತೈತಿ
ಯಮ್ಮಾ ನಮ್ಮ ದೇಶಕ್ಕೆ ನಾವು ಹೋತೀವಿ
ಏಳು ಸಮುದ್ರದಾ ಕಡಿಗೆ ಹೋತೀವಿ
ಅಂಬೋತ್ತಿಗೆ ಆಗ ಸಾವಿರ್ದಾಗ
ಅರ್ಧ ಸಾವಿರ ನೋಡಿದ್ವು
ಅಮ್ಮ ಆಕಿಗೆ ಮಕ್ಕುಳಿಲ್ಲ
ನಮಗೆ ಮಕ್ಕುಳಿಲ್ಲ

ಮಕ್ಕಳಿಲ್ಲದವರು ನಾವು ಉಣ್ತಿವಮ್ಮಾ
ಅವ್ರು ಬಂಜಿರವ್ರೆ ನಾವು ಬಂಜಿರವ್ರೆ
ಮಕ್ಕುಳಾಗೋರು ನೀವು ಹೋಗಿರಮ್ಮ || ತಂದಾನ ||

ಅರ್ಧ ಹೋಗಿ ಬಿಟ್ವು ಮಕ್ಕಳಾಗೋರೆಲ್ಲ
ಮಕ್ಕಳಿಲ್ಲದೋವು ಅವ್ನು ಬಂಜಿರೋವ್ನೆ
ನಾವು ಬಂಜಿರೇ ಅಂತ ಪಟ ಪಟ ರೆಕ್ಕಿ ಬಡ್ದು
ಆಗ ದೊಡ್ಡ ಮಾವ್ಳಿ ವನಂತ್ರುದ ಗಿಡಗುಳ ಮ್ಯಾಲೆ ಕುಂತು ಬಿಟ್ಟು

ಹಣ್ಣು ಆಗ ಅವು ತಿಂತವಮ್ಮಾ
ಬಾಯಿಯಿಲ್ಲದ್ದು ರೆಕ್ಕೀ ಇಲ್ಲುದ್ವು
ಒಂದೇ ಎಂಟೇ ದಿವ್ಸ ತಿಂದಾವಾ
ಬಲಾ ಏರಿತೂ ಎಲ್ಲಾ ಇನ್ನ ಸೆದೇ ತಂದವಣ್ಣಾ
ಗಿಡ ಮ್ಯಾಕ || ತಂದಾನ ||

08_80_KMKM-KUH

 

ಎಂಟು ದಿನ ಹಣ್ಣು ತಿಂದ ಮ್ಯಾಲೆ
ಬಲಾ ಬಂತು
ಎಲ್ಲ ಸೆದೆ ತಂದ್ಕಂಡು
ಗಿಡ ಮ್ಯಾಲೆ ಗೂಡು ಹೆಣುಕಂಡ್ವು

ಗೂಡ್ನಾಗ್ನೆ ತೆತ್ತ ಇಟ್ಟಾವಣ್ಣಾ
ತೆತ್ತ ಇಟ್ಟಿದ ಮ್ಯಾಲೆ ನೋಡುವಣ್ಣಾ
ಒಂದೊಂದು ಏಳು ಎಂಟು ಮರಿಗಳೆ ಎಬಿಸೆವಣ್ಣಾ || ತಂದಾನ ||

ಮರಿಗಳು ಎಬಿಸಿದ್ರೆ
ಮೂರು ವಾರುಗೆಲ್ಲ
ಮೂರು ವನಂತ್ರ ಹಾಳು ಮಾಡಿಬುಟ್ವು
ರೆಕ್ಕೆ ಆರಿಕೆಂಡಿಲ್ಲ ಕೂದಲು ಬಂದಿಲ್ಲ
ಬರೀ ತಪ್ಪಲು ಕಿತ್ಕ್ಯಂಡು ತಿಂತಾವ ಹೊಟ್ಯಸ್ಗಂಡು
ಮಕ್ಕಳೂ ಕರ್ಕಂಡು ಹೋಗಾಕಿಲ್ಲ
ಹಾರಾಕಿಲ್ಲ ಕೂದಲು ಬಂದಿಲ್ಲ ರೆಕ್ಕಿಗೆ
ಹೋಗಾಕ ಪ್ರಯತ್ನಾಗ್ಯಾವ
ಕುಂದ್ರುಸ್ಕ್ಯಂಡು ಹೋಗಾನಂತ
ಈ ಕಾಂಭೋಜರಾಜ ಹಾಲುಗೊಲ್ರು
ಈಗ ಊರಿಗೇ ಗೌಡ್ಕ್ಯಾಗಿ ಆಳೋನು
ಇಲ್ಲಿಗಿನ್ನವರ ಮೂರು ತಿಂಗಳಲ್ಲ
ನಾಕು ತಿಂಗಳಾತು
ನಾನು ವನಂತ್ರ ಹೋಗಿ ನೋಡಿಲ್ಲಂತ
ಕುದ್ರಿ ಹೊರಗು ತಗದ
ಬಾಯಿಗೆ ಸರಪಣಿ ಹಾಕ್ದ
ಬೆನ್ನಿಗೆ ಹತ್ತಿನ ದಿಂಡ್ಹಾಕಿದ

ಕುದ್ರಿ ಮ್ಯಾಲೆ ಕುಂತಾನ
ಹಾಲು ಗೊಲ್ರ ಗೌಡಮ್ಮಾ
ಮೂರು ವನಂತ್ರ ಬಂದಾ
ತೋಥಡಿ ತಾವು ಹೊಂಟು ಬಂದಾ
ತಾವು ಕುಂತು ಬಿಟ್ಟಾ
ಹೇs ಆಗ ಒಂದ ಜಲ್ಮಕ್ಕೆ || ತಂದಾನ ||

ಬಂದು ಕುತ್ಕಂಡಾ
ಕುದ್ರಿ ಮ್ಯಾಲಿದ್ದ ಇಳ್ದ
ಗಿಡದ ಕೆಳ್ಗ ಕುತ್ಕಂಡು ನೋಡ್ದಾ
ಆಹಾ ಗಲ್ಲ ಗಲ್ಲ ಗಲ್ಗಲ್ಲ ಅಂತಾವಪ್ಪಾ
ಕೋಗಿಲ್ಗುಳು
ಗಿಣಿಗುಳೂ
ಅಹಾ! ಏಳು ಸಮುದ್ರದಾಕಡಿಗಿರಾವು
ಇವು ಬಾಯಿಲ್ಲುದ್ವು
ಎರಡು ರೆಕ್ಕಿದ್ದುದ್ವು
ಜೀವು
ಆಗ ಜೀವಕೂಟ ಮಾಡ್ಯಾರಲ್ಲ
ಅಮ್ಮಾ ನಿಮ್ಮ ಜೀವಕ್ಕೆ ಶರಣು
ನಾನು ನೀರು ಹಾಕಿ ಗಿಡುಗುಳ ದೊಡ್ಡವು ಮಾಡಿ ಬಿಟ್ಟಿನಿ
ಕೈಯ್ಯಾಗ ನೋಡು ಚರ್ಮ ಸುಲ್ದು ಬಿಟೈತಿ
ಬಗ್ಗಿದ ನಡುವು ಹಿಡಕಂಡ್ಹೋಗಿ ಬುಟ್ಟವಾ
ನೀರು ಹೊತ್ತು ತೆಲ್ಯಾಗಿ ಕೂದಲು ಉದುರ್ಯಾವಾ
ಯಮ್ಮಾ ಒಬ್ಬ ಮಗನ್ನು ಕೊಟ್ಟುಹೋಗ್ರಿ
ನಾನು ಹಣ್ಣು ಹಾಕಿ ಹಾಲಿಟ್ಟು
ಜೋಪಾನ ಮಾಡ್ತೀನಿ ದೇವಿಯವ್ರೆ
ನೋಡ್ರೀ ನಿನ್ನ ಹಣ್ಣುನ್ನ ನಾವು ತಿಂದ್ವಿ
ಏನಪಾ ಈ ಮಕ್ಕಳು ಕೊಟ್ರೆ
ನೀನು ಗೂಡ್ನಾಗ್ಹಾಕ್ತಿ ಹಣ್ಣಿಡ್ತಿ
ಕೈಯಾಗಿಡುಕಂತೀ ಮುದ್ದು ಕೊಡ್ತಿ
ಆಗಿನ್ನ ಮಕ್ಕಳು
ಆಗ ಬಾಯಿಲ್ಲ ನಿನಗೆ ಒಡುದೇಳಾಕ
ಕೈಯಿಲ್ಲಾ ತಂದಿಕ್ಕಾಕ
ನೋಡು ಎರ್ಡು ಕಾಲೈದಾವಾ
ಎರ್ಡು ರೈಕ್ಕೆದಾವಾ
ಬೇಸಿ ಕೈಯ್ಯಾಗಿಡುಕಂಡ ಮ್ಯಾಲೆ
ಬೇಸಿ ತಿಂದು ನನ್ನ ಮಕ್ಕುಳು
ಪಟ ಪಟ ರೆಕ್ಕಿ ಬಡ್ದು ಕೈ ತೆಪ್ಪಿಸಿಗಂಡು
ಏಳು ಸಮುದ್ರ ದಾಕಡಿಗೆ ಬಂದು ಬಿಡ್ತಾವ
ನಮ್ಮ ಜೀವುದ ಗಡ್ಡಿಗೆ
ನಮ್ಮ ಜೀವು ಗಡ್ಡಿಗೆ
ನಮ್ಮಕ್ಕಳು ನಮ್ಮತಲ್ಲಿಗೆ ಬರ್ತಾರ್ರಿ
ತಿಂದ್ಹೋಗೋ ಮಕ್ಕುಳ್ನಾ
ಕೊಟ್ಹೊದ್ರೆ ಏನು ಪುಣ್ಯಾ
ಬ್ಯಾಡ್ರೀ ನಮ್ಮಕ್ಕುಳು
ನಿನಗೆ ಕೊಡೋನು ಪರುಮಾತ್ಮಾ
ಜೀವದಲ್ಲಿದ್ದಾನಪ್ಪಾ
ಈಗ ಅಪ್ಪಣೀ ಕೊಡು ಹೊಯ್ತಿನೀ
ಯಮ್ಮಾ ಹೋಗಿ ಬರ್ಯಂಬೊತ್ತಿಗೆ
ಒಬ್ಬೊಬ್ರು ಮೂವರು ನಾಲಾರು ಕುದ್ರಿಸಿಗ್ಯೊಂಡು
ಬೆನ್ನು ಮ್ಯಾಲೆ ಮಕ್ಕುಳ್ನಾ
ಆಗಿನ್ನವರ ಚಾಂಪುರ ಪಟ್ಣಾ ಬಿಟ್ಟು

ಅಣ್ಣಾ ಇನ್ನು ಹೊಂಟು ಹೋತಾವೆ
ಬಡ ಬಡ ರೆಕ್ಕೆ ಬಡುದಾವು
ತಾವು ಹೊಂಟು ಹೋತಾವ
ಏಳು ಸಮುದ್ರದಾಕಡೀಗೆ || ತಂದಾನ ||

ಜೀವು ಗಡ್ಡಿಗೆ ಬಂದ್ವು
ಇಳುಕಂಡೊತ್ತಿಗೆಲ್ಲ
ಆ ಜೀವಗಡ್ಡಿಗೆ ಇನ್ನ ಇಳ್ಕೊಂಡೊತ್ತಿಗೆ
ಈಗಿನ್ನವರ ವನಂತ್ರೆಲ್ಲ ಸಪ್ಪುಗಾಗಿ ಬಿಡ್ತಪ್ಪಾ
ವನಂತ್ರ ಸಪ್ಪುಗಾಗ ಹೊತ್ತಿಗೆ
ಎಷ್ಟು ಚೆಲುವಿರಬಹುದು ತಾ ಜೀವದಾಗ
ಆಹಾ ಎಷ್ಟು ಚೆಂದಿರಬಹುದು
ಮಕ್ಳು ಬಾಯಿಲ್ಲೂದ್ರೇನಂತ ಗಬ ಗಬಾಂತಿದವಂತ
ಕಾಂಭೋಜರಾಜ ಗೊಲ್ರವ್ನು
ಏನು ಮಾಡ್ದಾ
ಈಗ ಕುದ್ರಿ ಮ್ಯಾಲ ಕುಂತುಗೊಂಡು ಮನೀಗೆ ಬಂದ