ಸರೆಮ್ಮಾ ನೀನು ಕೇಳಿದೆಲ್ಲ ಕೊಟ್ಟೀನಿ
ನಾನೂ ಒಂದು ಮಾತ ಕೇಳ್ತಿನಿ
ನೀನು ಕೊಡಬೇಕು ತಾಯಿ ಸಿರಿದೇವಿ
ಅಯ್ಯೋ ಪರಮಾತ್ಮ
ಏನು ಕೇಳ್ತಾನೋ ಏನೋ
ಹ್ಯಾಂಗ ಮಾಡಬೇಕಂತ
ಸ್ವಾಮಿ ನೀವು ಕೇಳಿದ್ದು ಕೊಡ್ತೀನ್ರಿ
ನೀನು ಕೊಟ್ರೇ ಒಳ್ಳೇದೆ ಕೊಡಲಿಲ್ಲದಿದ್ರೆ ಒಳ್ಳೇದೆ
ಮುಂಚಾಗೆ ಕೊಟ್ಟಿ
ಏನಮ್ಮಾ ಆತ್ಮ ಜೀವ ನೋಡ್ಬೇಕಂತ ಗುಣ ಹೆಂಗಿರ್ತೈತಿ ಅಂತ
ತಾಯಿ ನಾನೇನು ಕೇಳೋದಿಲ್ಲ
ನಿನ್ನ ಜೀವದ ಗಂಡಗೆ
ಬೆನ್ಹಿಂದೆ ಒಂದು ಅನುಬೋಷ್ಟು ಅಗಲಾಗ
ಅಂಬ್ರಿಯಷ್ಟು
ಬಡ್ಡಿ ಉಡ್ಸಿ ನನ್ನ ಮಠಕ್ಕ ಹೋತಿನಿ ನಾ
ಈ ಕಾಲ ಹೆಣ್ಮಕ್ಕಳಾದ್ರೆ
ಬೊಬ್ಬ ಉಡಿಸಿಲಿದ್ರೆ
ಇವತ್ತೇ ಸುಡುಗಾಡೀಗೆ ತಗಂಡು ಬಾ
ಈಗ ಸತ್ರೇನು ಇದ್ರೇನು ನನ್ನ ಜೀವಕ್ಕ
ಅಂತ ಇನ್ನ ಅಂತಿದ್ರು
ಆ ತಾಯಿ ಅಷ್ಟು ದುಷ್ಠ ಗಂಡ ಮಾಡಿದ್ರೇನ
ಏನಂತಾಳ ಸ್ವಾಮಿ ನಿನ್ನ ಪಾದಕ್ಕ ಶರಣು
ಮಲ್ಲಿ ಹೂವಂತ ಗಣ್ಸು
ಹುಲಿಯಂತ ಜೀವ
ಕರಡಿ ಅಂತ ಕುಲ

ಸ್ವಾಮಿ ನನ್ನ ಜೀವ ತಡೀಯಾಲಾಗದಿಲ್ಲ
ಸ್ವಾಮಿ ಗಂಡನ್ನ ಉಡಿಸೋ ನನ್ನ ಜೀವ ಕೊಡೋ || ತಂದಾನ ||

ಅನುಬೋಗಿಷ್ಠ ಬೊಬ್ಬೆ
ಅಂಬ್ರಿಯಷ್ಟು ಬೊಬ್ಬೆ ನನ್ನ ಬೆನ್ನಿಗೆ ಉಡಿಸು
ನನ್ನ ಜೀವಗ ಹುಟ್ರು
ಈಗ ಜೀವಗ ಹುಟ್ಟು
ಈಗ ಜೀವಗ ಉಡಿಸಿದ್ರೆ
ನಾನು ಹೆಣ್ಮಕ್ಕಳು ಹೆಂಗನ ಕಿವಿ ರಕ್ತದಲ್ಲಿ ತಡಿಯೋರು
ಯಂಗನ್ನ ಕಡೀತೀನಿ ಸ್ವಾಮಿ
ಮಲ್ಲಿಗೆ ಹೂವಿನಂತ ಗಂಡ ತಡೀಲಾರ
ಜೀವ ನೋಡೋವರಿಲ್ಲ
ಏ ಯಮ್ಮಾ ನೋಡೋರಿಲ್ಲ
ಆರು ಮಂದಿ ಮಕ್ಕಳು ಆರು ಮಂದಿ ಹೆಂಡ್ರು
ನೀನಂದ್ರೆ ಮಕ್ಕಳು ಕೊಲ್ಲಾಕಿ ಇಸ ಇಡಾಕಿ
ದುಷ್ಠ ದುರ್ಮಾರ್ಗದವಳು
ಸುಡುಗಾಡು ಜೀವದಲ್ಲಿ ತಂದು ಇಟ್ಟಾರ ಜೀವ ಪಟ್ಣಕ್ಕೆ
ಅವರು ಬಣ್ಣ ಪಟ್ಣ ಮೂರು ಅಂತಸ್ತಿನ ಮಾಳಿಗೆದಾಗೆ ಇದಾರ
ಇಲ್ಲಾ ಸ್ವಾಮಿ ನನ್ನ ಗಂಡನ್ನ ಕೊಡೋದಿಲ್ಲ
ಸರಿ ಗಂಡನ್ನ ಕೊಡೋದಿಲ್ಲಂತಿ ಆಗ್ಲೇ ಕೊಟ್ಟಿಯಲ್ಲಮ್ಮ
ಯಾಗ ಕೊಟ್ಟೀನಿ
ನನ್ನ ತಾಳಿ ಹರಿದು ಕೊಡ್ತೀನಂದೆಲ್ಲಮ್ಮ
ಜೀವಕ್ಕ ಕಟ್ಟಿದ್ದು ಗಂಡ
ಇಲ್ಲಾ ಸ್ವಾಮಿ ತಾಳಿ ಕೊಡ್ತಿನಿ
ನನ್ನ ಗಂಡನ್ನ ಕೊಡೋದಿಲ್ಲ
ನೀನೇನು ಹುಚ್ಚ
ನಿನಗ ಬುದ್ದಿ ಗ್ಯಾನ ಇಲ್ಲೇನಮ್ಮ
ಏನ್ರಿ ನಿನಗ ಅರ್ಥ ಮಾಡಿಕ್ಯಂಬಂಗಿಲ್ಲಲ್ಲ
ಅದೇನ್ರಿ ನನಗ ತಿಳೇಂಗಿಲ್ರಿ
ಇದು ನೀನೇ ಕೈಲಿದ್ದ ಕಟ್ಟಿಕಂಡಿಯಾ
ನಿನ್ನ ಜೀವ ಕಂಡ ಕೈಲಿದ್ದ ನಿನ್ನ ಜೀವಕ್ಕ ಹಾಕ್ಯಾನ
ಆತನ ಜೀವದಲ್ಲೇ ನನ್ನ ಕೊಳ್ಳಾಗ ಹಾಕ್ಯಾನ
ಮತ್ತೆ ಎದಕಾಗಿ ಹಾಕ್ಯಾನ
ನನ್ನ ಜೀವ ನಿನ್ನ ಮ್ಯಾಲಿರ್ಲಿ ಅಂತ ಹಾಕ್ಯಾನ
ಮತ್ತೆ ಆತನ ಜೀವ ಕೊಟ್ಟಂಗ ತಾಳಿ ಕೊಟ್ಟಂಗಲ್ಲ
ಇಲ್ರಿ ನಿನ್ನ ಪಾದಾಜ್ಞೆ ನನ್ನ ತಾಳಿ ಕೊಡ್ತೀನಿ
ನನ್ನ ಜೀವದ ಗಂಡನ್ನ ಕೊಡೋದಿಲ್ಲ
ಅಂತಾ ಪಾದ ಹಿಡಿದ ಹೊತ್ತಿಗೆ
ತಾಯಿ ನೀನು ನಿನ್ನ ಗಂಡನ ಮ್ಯಾಲೆ ಜೀವ ಐದಿಯೀ
ಎಂಥಾ ದುಷ್ಠನಾಗಲಿ ಕರ್ಮ ಆಗಲಿ
ನಿನ ಗಂಡ ನಿನ್ನ ಮ್ಯಾಲೆ ಯಾಕಿಲ್ಲ
ತಂದಿ ಅವ್ರುಗಂದ್ರೆ ಕೆಟ್ಟದವ್ರು
ನಾನು ಕೆಟ್ಟತನಕ್ಕ ಹೋಗಲ್ಯ
ಅವ್ರು ಅಂದ್ರೆ ದುಷ್ಠರು
ನಾನು ದುಷ್ಠದಲ್ಲಿ ಹೋಗಲ್ಯ
ಕುರುಡ ಆಗಲಿ ಕುಂಟ ಆಗಲಿ ದೊಡ್ಡೋರು ಮಾಡಿದ
ಆ ಗಂಡನ ಕೈಯಾಗ ಸಾಯಬೇಕ್ರಿ
ಜೀವಕ್ಕ ಜೀವ ಬಿಡಬೇಕು
ಓಹೋ ಸರಿಯಮ್ಮ
ಜೀವಕ್ಕ ಜೀವ ಬಿಡಬೇಕಂತಿ
ಎಷ್ಟು ಜೀವ ಐದಿಯ ತಾಯಿ
ಮತ್ತೆ ನಾನು ಮಠಕ್ಕ ಹೋತಿನಿ ಪಾದ ಬಿಡೇ ತಾಯಿ
ನೀನು ಮಠಕ್ಕ ಹೋತಿನಿ ಪಾದ ಬಿಡೇ ತಾಯಿ
ನನ್ನ ಮನಿಗೆ ನಾನು ಹೋತಿನಿ ನಿನ್ನ ಮನ್ಯಾಗ ನೀನಿರು
ಹೋಗೋದಿಲ್ಲಮ್ಮ
ಹಂಗಾರೆ ಸ್ವಾಮಿ ಶಿವ ಹೋಗಿ ಬಾ ಅಂದ್ಳು