ಏನೋ ಶಿವ
ಪರಮಾತ್ಮ ಹೇಳ್ಯಾನ ನಿನ್ಹಿಂದೆ ಬರ್ತೀನಪ್ಪ
ನೀನು ಯಾವ ಮನಿಗೆ ಹೋದ್ರೆ
ಅದೇ ಮನ್ಯಾಗ ಹೊಕ್ಕಂಬಿಡ್ತೀನಿ ನಾ ಶನಿಮಾತ್ಮ
ನಡೆಪ್ಪ ಹೋಗಾನಂತ
ಆಗ ಮಕ್ಳ ಫಲ ಜೋಳಿಗ್ಯಾಗಿಟ್ಟುಕೊಂಡು
ಆಗ ಶಿವರಾತ್ರಿ ಜಾಗರಣ
ಹಬ್ಬದ ದಿವಸ
ಬಲಗೈಲೆ ಗಂಟೆ ಎಡಗೈಲೆ ಜೋಳಿಗೆ
ಬೆನ್ಹಿಂದೆ ಶಂಕು
ಹಾಕ್ಯಂಡು ಆಗ ಶಿವ ಬಂದುಬಿಟ್ಟ
ಸುಡುಗಾಡು ರುದ್ರಭೂಮಿದಾಗ

ಗಣಗಣಗಣ ಗಂಟೆ ಬಾರಿಸ್ಯಾನಮ್ಮ
ಸುಡುಗಾಡು ಬೋಮ್ಬೋಮ್ಬೊಮ್ಬೊಮ್ಶಖ ಉದ್ಯಾನಮ್ಮೋ
ಶಿವರಾತ್ರಿ ಸಿರಿದೇವಮ್ಮ ನನ್ಗೆ ದಾನ ಕೊಡೊ ಎದ್ದಮ್ಮಾ || ತಂದಾನ ||

ಶಿವರಾತ್ರಿ ಶಿವ ಬಂದಿನಿ
ಎದ್ದ ಬಂದು ಧರ್ಮ ಕೊಡು ತಾಯಿ ಸಿರಿದೇವಿ
ದಾನಗೊಲ್ರು ನೀವು
ಧರ್ಮ ಗೊಲ್ರು ಧರ್ಮ ಮಾಡಮ್ಮ
ಅಂದ್ರೆ ಈ ಕಾಲದವರಾಗಿದ್ರೆ
ಸ್ವಾಮಿ ಜೀವ ಹೋಗೋ ಕಾಲಕ್ಕೆ
ಯಾವ ದಾನ ಮಾಡಲಿ
ಜಲ್ಮ ಹೋಗೋ ಕಾಲಕ್ಕೆ
ಯಾವ ದೇವ್ರ ಐದಾನ
ಸ್ವಾಮಿ ನಿನ್ನ ಸುಡುಗಾಡಿಗೆಳಿಯಾ
ನನ್ನ ಸುಡುಗಾಡಿಗಿಟ್ಟಾರ ಸ್ವಾಮಿ
ಏನ ದಾನ ಮಾಡ್ಲಿ ಸ್ವಾಮಿ ಅಂತಿದ್ಳು
ಆ ತಾಯಿ ಏನ್‌ ಅಂತಾಳ
ಸ್ವಾಮಿ ಇದುಸುಡುಗಾಡು ರುದ್ರಮಠ
ಈ ಜೀವದ ಮಠಕ್ಕೆ ಯಾಕ ಬಂದಿ ಸ್ವಾಮಿ
ಈಗ ಮ್ಯಾಗಡೆಗೆ ಹೋಗು
ಮೂರು ಹೊಲ ಪೆಟ್ಟು
ಚಾಂಪರು ಪಟ್ಣ
ಊರೀಗೇ ಇನ್ನ ಗೌಡಾಗಿ ರಾಜ್ಯವಾಳ್ತಾನ
ನನ್ನ ಜೀವದ ಗಂಡಗೆ
ಏಳು ಮಂದಿ ನಾವು ಹೆಂಡ್ರು
ಆರು ಮಂದಿ ನಮ್ಮ ಅಕ್ಕನೋರು
ನಿನ್ನ ಮನ್ಯಾಗ ಕರ್ದು
ನಿನ್ನ ಪಾದ ಗಂಗಾಳದಾಗ ತೊಳ್ದು
ಆಗ ತೊಳ್ದ ನೀರು ಕುಡ್ದು
ನಿನಗಿನ್ನ ಅಕ್ಕಿಬ್ಯಾಳಿ ಗೋಧಿ ಬೆಲ್ಲ
ಆಗ ಕುಂಬ್ಳಕಾಯಿ ಹಿರೆಕಾಯಿ ಬೆಂಡೆಕಾಯಿ
ಎಲ್ಲ ದಾನ ಮಾಡ್ತಾರ ಸ್ವಾಮಿ
ಶಿವರಾತ್ರಿ ಜಾಗರಾಣ ಶಿವ
ಆಂದ್ರೆ ಆ ಮಾತಿಗಿ ಏನಂತಾನ

ಯಮ್ಮಾ ಮ್ಯಾಗಿರೋದು ನೋಡಮ್ಮ
ಅದು ಸುಡುಗಾಡಿಗೆ ಹೋಯಿತಮ್ಮ
s ಕೆಳಗಿರೋದು ನೋಡಮ್ಮ ಇದು ಜೀವ ಸುಡುಗಾಡೈತಮ್ಮ
ಜೀವದ ಪಟ್ಣ || ತಂದಾನ ||

ಛೀಛೀಛೀ ಮ್ಯಾಲಿರೋದು ಜೀವದ ಪಟ್ಣಲ್ಲ
ಸುಡುಗಾಡು ರುದ್ರಭೂಮಿ
ಇದೇ ಜೀವದ ಪಟ್ಣ
ನಮ್ಮ ಜೀವಕ್ಕ ಸ್ಥಿರವಾಗಿದ್ದು