ಆಗ ಕಾಂಭೋಜುರಾಜ
ಈಗ ಬಾರ್ಲು ಬಿದ್ದುಬಿಟ್ಟಾನ
ಯಪ್ಪಾ ಐವೊತ್ತು
ಕೇಳಿದಂಗ ನಿಮ್ಗೆಲ್ಲ ರೊಕ್ಕ ಕೊಡ್ತಿನಿ
ನೋಡಿದ್ರೆ ಐದು ಮಂದಿ ಸಂಬಳದವ್ರು
ಏನ್ರಿ ನನಗೆ ಅರವತ್ತು ಕೊಡ್ರಿ
ಇಪ್ಪತ್ತು ಹಳ್ಳಿ ತಿರುಗಿ
ಮೇಟಿ ಔಷಧ ಎಲ್ಲಿ ಪರಾಕ್ರದವನು ಇದಾನ
ಆತನ ಕರಕಂಡು ಬಂದು
ನಿಮ್ಮ ಹುಣ್ಣು ಬೇಸ್‌ಮಾಡಿಸ್ತೀನಿ
ಯಪ್ಪಾ ಹಾಂಗ ಆಗಲ್ರೆಪ್ಪ ಎಷ್ಟು ಕೇಳ್ತಿರಿ ಕೇಳ್ರಿ
ಆಗ ಐವತ್ತು ಅರವತ್ತು ಯಪ್ಪತ್ತು
ಕೇಳಿದಷ್ಟಗೆಲ್ಲಾ ಕೊಡ್ತಾನ ರೊಕ್ಕ
ರಿಂಬೆಗೆ ನೋಡಿ ರೆಂಬೆರೋಗಂತ
ಈಗ ರ್ವಾಗ ಬಂದಿದ್ದಕ್ಕೆ ಹುಣ್ಣು ಹುಟ್ಟಿದಿಗೆ ರೊಕ್ಕ ಕಳೀತಾನ
ಆಗ ಹತ್ತು ಪೈಸಾ ರಾಗಿ ಪೈಸೆ ಕೊಡು ಅಂದ್ರೆ ಕೊಡ್ಲಿಲ್ಲ
ಪಾವಕ್ಕಿ ಅಲ್ಲ ಅಕ್ಕಿದಾನ ಹೊಟ್ಟು ತೌಡು ಕೊಡಂದ್ರೆ ಕೊಡ್ಲಿಲ್ಲ
ಒಬ್ಬೊಬ್ರಿಗೆ ಐವತ್ತು ಅರವತ್ತು ಕೊಟ್ರೆ
ಐದು ಮಂದಿ ಕೈಯಾಗಿದ್ದೋರು ಏನಂತಾರ
ದಿನಾನ ಗಳೇವು ಹೊಡ್ಡಿರಲೆ ಹೊಲಕ್ಕೊಗ್ರಿ ಅಂತಿದ್ದ
ನಮ್ಮ ಗೌಡಗೆ ಗೊಲ್ರವ್ನಿಗೆ ಹುಣ್ಣು ಹುಟ್ಟಿದ್ದೇ ಒಳ್ಳೆದು
ನಮ್ಮ ಜೀವಕ್ಕ
ಯಪ್ಪಾ ದೊಡ್ಡ ಪ್ಯಾಟೆಸ್ಥಾನ ನೋಡ್ತಿವಿ
ದೊಡ್ಡ ರಾಜ್ಯತನ ನೋಡ್ತಿವಿ ನಾವು
ಜಲ್ಮಕ್ಕಾಗಿ
ಇದೋ ಲೋಕೆಲ್ಲ ನೊಡ್ತಿವಿ ನಾವು
ಲೇ ರೊಕ್ಕ ಆಗೋತನಕ ಕೂಡ್ಲಿಗ ಹೋತೀನಿ
ರೊಖ್ಖ ಆದ ಹೋದ ಮ್ಯಾಲೆ ಸಿಗಲಿಲ್ಲಂತ ಬರ್ತಿನಿ
ನನ್ನ ಏನ್ಮಾಡ್ತಾನ
ಯಪ್ಪಾ ಹುಣ್ಣು ಹುಟ್ಟಿದ್ದೆ ಒಳ್ಳೆದಲ್ಲ
ದೊಡ್ಡ ದೊಡ್ಡ ಪ್ಯಾಟಿ ಸ್ಥಳ ತೋರಿಸ್ತಾನ ನಮಗೆ
ಏ ಮೇಟಿ ಔಷಧನ ಹಾಕೋರು ಎಲ್ಲಿ ಇದಾರ
ಹುಡುಕ್ಯಾಡಿ ಕರಕಂಡು ಬರ್ರಿ
ಅರ್ಧಮಂದಿ ಹುಬ್ಬಳ್ಳಿಗೆ ಹೋದ್ರು
ಅರ್ಧಮಂದಿ ಕೂಡ್ಲಿಗೆ ಬಂದ್ರು
ಆಗ ಹುಬ್ಬಳ್ಳಿದಾಗ ಎಂಥವನೆಂದ್ರೆ
ಹುಬ್ಬಳ್ಳಿ ಡಾಕರ್ಟ್ ರಾಮಯ್ಯ
ಆತನ ಮುಕುಳ್ಯಾಗ ಕಟ್ಟಿಗೆ ಇಟ್ಟು ನಿಂದ್ರಿಸಿದ್ರೆ
ಪೀರಲು ದೇವ್ರೇ ಪೀರಲು ದೇವ್ರು
ಗಾಳಿಪಟ ರೌದಿ ಇದ್ದಂಗ ಇದಾನ
ಏನ್ರಿ ನಿನ್ನ ಪಾದಕ್ಕೆ ಶರಣ್ರೀ ಹುಬ್ಬಳ್ಳಿ ಡಾಕಟ್ರಿ
ನಮ್ಮ ರಾಜಗ ಹುಣ್ಣು ಹುಟ್ಟೈತಿ
ನಮ್ಮ ಗೌಡಗೆ ಗೊಲ್ಲರಾತಗೆ
ಇನ್ನ ಬೆಳ್ಳಿ ಕೇಳ್ತೀಯಾ ಬಂಗಾರ ಕೇಳ್ತೀಯ
ರೊಕ್ಕ ಕೇಳ್ತೀಯಾ ಕೇಳ್ದಂಗ ಕೊಡ್ತಾನ್ರಿ
ಬೆನ್ನ ಅಗಲಾಗೈತ್ರಿ
ಆ ಹುಣ್ಣಿ ಗೆ ಮೇಟಿ ಔಷಧ ಹಾಕುವಂತ್ರಿ ಬರ್ರಿ
ಅಂದ್ರೆ ಹುಬ್ಬಳ್ಳಿ ಡಾಕಟರ್ ಏನಂತಾನ
ಇವೊತ್ತು ಸತ್ಹೋಗಿ
ನಾಳೆ ಸುಡುಗಾಡ ತಂದ ಹೆಣನ
ಕುಣ್ಯಾಗಿಟ್ಟಿದ ಹೆಣನ ತಗದು
ಜೀವ ಕೊಟ್ಟು ಎಬ್ಬಿಸ್ತಿನಿ ಉಳಿಸ್ತೀನಿ ಅಂದ
ಅಬ್ಬಾಬ್ಬಾಬ್ಬಾ
ಸುಡುಗಾಡಾಗ ಹೆಣ ಕುಣ್ಯಾಗ ಇಟ್ಟಿದ್ದ
ಹೆಣಾ ತಗದು ಜೀವಕೊಟ್ಟು ಎಬ್ಬಿಸ್ತಾನ ಅಂತ
ಇಂಥಾದ ಹುಣ್ಣು ಬೇಸು ಮಾಡಂಗಿಲ್ವ
ಇಲ್ರಿ ತಾವು ಬರಬೇಕಂತ ಪಾದಕ್ಕ ಬಿದ್ದ
ಆಗ ಬರ್ತಿನಿ ನಡೆಪ್ಪ
ಇರ್ರೀ ಈಗಲೇ ಬರಬೇಕ್ರಿ
ಅಂಬೊತ್ತಿಗೆ ಹುಬ್ಬಳ್ಳಿ ಡಾಕ್ಟರತಲ್ಲಿ ಏನೈತಂದ್ರೆ
ಅಂಬ್ರೆ ತಪ್ಲ ಎಕ್ಕೆ ತಪ್ಲ
ಆಗ ಬಂಡೆ ಮ್ಯಾಲೆ ಅರದು ಗುಳಿಗೆ ಮಾಡಿ
ಕೈಚೀಲದಾಗ ಹಾಕ್ಯಂಡ
ಒಲಿಯಾನ ಬೂದಿ ಹಳ್ಳದಾನ ನೀರು
ಕಲಿಸಿ ಸೀಸೆದಾಗ ಹಕ್ಯಂಡ
ಕಲಿಸಿ ಸೀಸೆದಾಗ ಹಕ್ಯಂಡ
ಆಗ ಎಮ್ಮೆ ಗೊಡ್ಡುಗಳಿಗೆ ಏರಿಸೋ ಸೂಚಿಗಳು ಇಟ್ಕಂಡ
ಅಂಬ್ರೆ ಬೇರು ಆಗ ಹುಣಸೇ ತಪ್ಲ ಬೇರು
ಆಗ ಹಿಂಗೋದ್ರೆ ಯಾರು ಕರೀತಾರ
ಅಲ್ಲಿ ಕುಂದ್ರು ಇಲ್ಲಿ ಕುಂದ್ರು ಅಂತಾರ
ಬುಡಿಗೆ ಮ್ಯಾಲೆ ಬುಡಿಸಿ ಎರಡು ಬುಡ್ಗಿ ತೊಟ್ಟಿದ
ಆಗ ಅಂಗಿ ಮ್ಯಾಲೆ ಅಂಗಿ ಎರಡ ಅಂಗಿ ತೊಟ್ಟಿದ
ಮ್ಯಾಲೆ ಯಂಕಪ್ಪನ ಕೋಟು ಹಾಕಿದ
ಕಿರಿಕಿ ಕಾರಮರೆ ಹಕ್ಯಂಡ ಪಾದಕ್ಕೆ
ಹತ್ರೆಣ್ಣಿ ಬತ್ರೆಣ್ಣಿ ಹಚಿಕ್ಯಂಡ
ಗಮಗಮ ನಾಥ ಹೋಡೀಯಂಗ
ಕೈ ಚೀಲ ಹಿಡ್ಕಂಡು

ಕಿರಿಕಿ ಪುರುಕು ಕಿರಿಕಿ ಪುರುಕಂತಾ
ಒಳ್ಳೇ ನೀಟಾಗಿ ಇನ್ನೂ ಬರುತಾನಮ್ಮ
ಹುಬ್ಬಳ್ಳಿ ಡಾಕ್ಟ್ರು || ತಂದಾನ ||

ಚಾಂಪುರ ಪಟ್ಣಕ್ಕ ಬಂದ
ಏ ಆಗ ಮೇಟಿ ಔಷಧವನು
ಡಾಕುಟ್ರು ಹುಬ್ಬಳ್ಳಿ ಡಾಕುಟ್ರು ಬಂದಾನ
ಕುರ್ಚಿ ಹಾಕ್ರಿ ಬೆಂಚಿ ಹಾಕ್ರಿ ಅಂದ್ರು
ಕೂಡ್ರಿ ಅಂದ್ರು
ಆಗ ಬೆಂಚಿ ಮ್ಯಾಲೆ ಕೂಡಿಕ್ಯಂಡ
ಯಪ್ಪಾ ಎಲೈದರ
ಇಲ್ಲೇ ಬಾರ್ಲು ಬಿದ್ದಾನ್ರಿ
ಮ್ಯಾಲೆ ಬಟ್ಟೆ ಹೊದಿಸಿ ಬಿಟ್ಟಿವಿ
ಯಪ್ಪಾ ನೀನೇ ತಂದಿ
ಈಗ ನಾನೇ ಮಗ

ನನ್ನ ಜಲ್ಮ ನೀನು ಲೋಕ ಉಳಿಸೋ ಯಪ್ಪಾ
ನನ್ನ ಜಲ್ಮ ಗಡ್ಡಿಗೆ ಹಾಕಪ್ಪಾ
ನೀನೇ ತಂದಿ ನಾನೇ ಮಗ ಐದಿನೆಪ್ಪೋ
ಯಪ್ಪಾ ನನ್ನ ಜಲ್ಮ ಕಾಪಾಡೋ ಶಿವಾ || ತಂದಾನ ||

ಗುಡ್ಡದ ರೀತಿ ದುಃಖ ಮಾಡ್ತಾನ ಬಾರ್ಲು ಬಿದ್ದೋನು
ಕೈ ಜೋಡಿಸಿ
ಏನ್ರಿ
ಏನು ಪರ್ವಾಲ್ರಿ
ಕುಣಿಯಾಗಿಟ್ಟ ಹೆಣ
ಜೀವ ಕೊಟ್ಟು ಎಬ್ಬಿಸಿಕ್ಯಂಡು ಬರ್ತಿನ್ರಿ
ಆಗ ಹುಬ್ಬಳ್ಳಿ ಡಾಕಟರ್
ರಾಮಯ್ಯ ಅಂದ್ರೆ ಸಾಮಾನ್ಯವಲ್ಲ
ಹಂಗಾಗಲ್ರಿ
ಈಗ ಬಟ್ಟೆ ತಗೀರಿ ಅಂದ
ಬಟ್ಟೆ ತಗದ್ರೆ
ಬೆನ್ನಗಲಾಗ
ಆ ಹುಣ್ಣ್ ಹೆಸರು ಹೇಳಾಕ ಬರಾದಿಲ್ಲ
ಹುಬ್ಬಳ್ಳಿ ಡಾಕ್ಟ್ರು ಆಗ್ಯಾನ
ಏನ್ರಿ ಇದು ಎದುರದ್ರಿ
ಏ ಹುಣ್ಣು ರೀ ಇದರಾಗ ಹುಳ ಐತಿರೀ
ಹುಳ ಎಲ್ಲ ತಿಂತೈತಿರಿ ನಿನ್ನ
ಆಗ ತೊಗಲೆಲ್ಲ ಕೊಯ್ಯಿಕ್ಯಂಡು ತಿಂತೈತಿ
ಈ ಹುಣ್ಣು ಹೆಸರೇನ್ರಿ
ಇಲ್ರಿ ಇದರಾಗ ಹುಳ ಐತಿರೀ
ಈ ಬೆನ್ನಿಗೆ ಹುಣ್ಣು ಆಗೇತ್ರಿ
ಹೆಸರೇಳಾಕ ಬರಾದಿಲ್ಲ ಹುಬ್ಬಳ್ಳಿ ಡಾಕ್ಟ್ರುಗ
ಯಪ್ಪಾ ನಿನ್ಗ ಕೈ ಮುಗೀತಿನಿ
ಯಂಗನ್ನ ಬೇಸ್ ಮಾಡು
ಇಷ್ಟು ದೂರ ಬಂದು ಸಮ್ನೇ ಹೋಗ್ಲ್ಯಾ
ಅಂಬ್ರೆ ತಪ್ಲ ಎಕ್ಕೆ ತಪ್ಲ ಗುಳಿಗೆ ಐದಾವ
ಆಗ ಅಂಬ್ರೆ ಬೇರು ಹುಣ್ಸೇ ಬೇರೈತಿ
ಒಲ್ಯಾಗಿನ ಬೂದಿ ಹಳ್ಳದಾಗಿನ ನೀರು
ಹ್ಯಾಂಗ ಮಾಡ್ಬೇಕು
ಅಂತ ಆಗ ಸೂಜಿಗೆ ಏರಿಸಿಕ್ಯಂಡ
ಬೂದಿ ನೀರು
ಏರಿಸಿಕ್ಯಂಡು ಏನ್ಮಾಡ್ದ
ಎಡಕ್ಕೊಂದು ಬಲಕ್ಕೊಂದು ಚುಚ್ಚಿ ಬಿಟ್ಟ ಕೈಗೆ
ಆಗ ನಾಕ ಗುಳಿಗೆ ಕೊಟ್ಟ
ನೋಡಪ್ಪಾ ಇದರಾಗ ಹುಳ ಐತೆ ಹುಳಾ ಸತ್ರೆ
ನಿನ್ನ ಹುಣ್ಣು ಮಾಯಕೊಂಡ ಹೋಗುತೈತಿ
ಇದು ಬೆನ್ನಿಗೆ ಹುಟ್ಟೈತಿ ಬೇತಾಳ ಹುಣ್ಣು
ಶನಿಮಹಾತ್ಮ ಸೇರಯಾನಂತ ಹೇಳಾಕ ಬರದಿಲ್ಲ ಹುಣ್ಣಹೆಸರ
ಆಗ ಏನ್ಮಾಡಿದ
ಯಪ್ಪಾ ಯಾವಾಗ ಮಾಡ್ತಿ ಬೇಸು
ಏನಿಲ್ಲಪ್ಪ ಇದರಾಗ ಹುಳಾ ಐತಲ್ಲ
ಈ ಗುಳಿಗೆ ತಿಂದು ಬಿಡು
ಈಗ ಇದರಾಗ ಹುಳ ಇದ್ದಿದಿಗೆ
ಕೋಳಿ ಕಟ್ಟಬೇಕು ಕೋಳಿ ಮಾಂಸ
ಕೋಳಿ ಹಿಡಕಂಬೋದು
ಎರಡು ಗುಂಡಿಗ ಹಾಕಿ ರುಬ್ಬೋದು
ಹುಣ್ಣಿಗೆ ಕಟ್ಟೊದು
ಆ ಹುಳ ದಿನಾಲು ಕಾಣುತೈತಿ ತಿನ್ನ ಮಾಂಸ
ಈಗ ಇನ್ನ ಕೋಳಿ ಕಟ್ರಿ
ಕೋಳಿ ಕಟ್ಟಿದ ಮ್ಯಾಲ ಕುರಿ ಕಟ್ರಿ
ದಿನಾಲು ರುಚಿ ಕಾಣ್ತೈತಿ
ಈಗ ಅಂಗಡಿಗೆ ಗಂದ್ರೆ ಪುಕ್ಸಾಟಿ ಕೊಡೋದಿಲ್ಲ
ಗಿಡವಂದ್ರೆ ಮೇಟಿ ಔಷಧಂದ್ರೆ ಸುಮ್ನೇ ಕೊಡ್ತಿನಿ
ನೋಡ್ರಿ ಗಿಡದಾಗ
ಅಂಗಡಿವು ಕಲಿಬೇಕಲ್ರಿ
ನೋಡ್ರಿ ನನಗೆ ಹೆಚ್ಚು ಕೊಡಬೇಡ
ಐನೂರು ಕೊಡ್ರಿ ಸಾಕು
ಮೇಟಿ ಔಷಧ ತರಾಕ ನಾನೀಗ ಕೇಳಾದಿಲ್ಲ
ಹುಣ್ಣು ಬೇಸಾದ್ಮೇಲೆ ನಾನು ಕೇಳೋದು
ಯಪ್ಪಾ ಎಷ್ಟು ಕೇಳ್ತೀ
ಕೇಳಿದ್ದು ಕೊಡ್ತಿನಪ್ಪ ನನ್ನ ಗಡ್ಡಿಗೆ ಹಾಕು
ಸರಿ ಬಿಡ್ರಿ
ಐನೂರು ಲೆಕ್ಕ ಮಾಡಿಕೊಟ್ರೆ
ಬುಡ್ಗಿದಾಗ ಹಾಂಗೆ ತುರಿಕ್ಯಂಡು ಬಿಟ್ಟ
ಭೂಮಿದಾಗ ತುರಿಕ್ಯಂಡು ಬಿಟ್ಟ
ಆಗ ಏನ್ಮಾಡಿದ
ಈಗ ಹೆಣ್ಣುದಾಗ
ಈಗ ನನ್ನ ಹೆಣ್ತಿ
ಐದ ತಿಂಗಳ ಗರ್ಭವತಿ
ಹೆಣ್ಣೆ ಹುಟ್ಟಲಿ ಗಂಡೇ ಹುಟ್ಟಲಿ
ಈಗ ಏನಂತ ಹೆಸರಿಡ್ತಿನಿ
ಹುಣ್ಣಪ್ಪ ಅಂತ ಹೆಸರಿಡ್ತಿನಿ
ನನ್ನ ಹೇಂಡ್ತಿ ಹಡದ್ರೆ
ಹೆಣ್ಣು ಮಗಳು ಹುಟ್ಟಿದ್ರೆ
ಹುಣ್ಣಮ್ಮಾ ಅಂತ ಹೆಸರಿಡ್ತಿನಿ
ಅಂತ ಕೈ ಮುಗಿದ
ಯಪ್ಪಾ ಹೋಗಿ ಬರ್ತಿನಿ
ಹುಬ್ಬಳಿ ಡಾಕಟರ್ರೀ ಒಳ್ಳೆದು ಹೋಗಿಬರ್ರಿ

ಆಗ ಡಾಕುಟ್ರು ಇನ್ನ ಕೈ ಮುಗಿದು
ಹುಬ್ಬಳ್ಳಿ ಡಾಕುಟ್ರೆ ನೋಡೋ ತಾನೇ ಒಂದೇ ಕೈ ಮುಗಿದಾನ
ಹೋಗಿ ಬರತೀನಂತ ಹೋಗಿ ಬಿಟ್ಟಾನ
ಹುಬ್ಬಳ್ಳಿಗೆ ಬಂದು ಬಿಟ್ಟಾನ ಹೆಣ್ತಿನ ಒಂದೇ ಕರಕಂಡಾನಾ
ಟ್ರಂಕು ಪ್ರಂಕು ಕೈಯಾಗ ಹಿಡಿದಾನ
ಬಸ್ಸ್ಟ್ಯಾಂಡಿಗೆ ಬಂದು ಬಿಟ್ಟಾನ
ಆಗ ಇನ್ನ ಕುಂತು ಬಿಟ್ಟಾನ
ಶಿವಮೊಗ್ಗಗೆ ಬಂದು ಬಿಟ್ಟಾನಮ್ಮ
ಹುಬ್ಬಳ್ಳಿ ಡಾಕುಟ್ರು || ತಂದಾನ ||

ಹೆಣ್ತೆ ಹಡದ್ರೆ ಹುಣ್ಣಪ್ಪ ಹುಣ್ಣಮ್ಮ ಅಂತ ಹೆಸರಿಡ್ತಿನಿ
ಸ್ವಲ್ಪತ್ತು ತಡ ಮಾಡಿದ್ರೆ ಹುಣ್ಣು ದೇವರೇ ನನ್ನ ಕೇಳ್ತಾನ
ಹುಬ್ಬಳ್ಳಿ ಡಾಕುಟ್ರು ಒಳ್ಳಾಗ ಕುಂದ್ರಿಸಿ ಒಣ್ಕಿ ತಗಂಡು ಕುಟ್ಟಿ
ನನ್ನ ಬೆನ್ನಿಗೆ ಕಟ್ರಿ ಅಂತಾನ
ಅಂತ ಜೀವಕ್ಕಾಗಿ
ಆಗ ಇನ್ನ ಹುಬ್ಬಳ್ಳಿಗೆ ಬಂದು
ಹೆಣ್ತಿನ ಕರ್ಕಂಡು ಟ್ರಂಕು ತಗಂಡು
ಆಗಿನ್ನು ಶಿವಮೊಗ್ಗಕ್ಕೆ ಹೋದ
ಆಗ ಬಾಡಿಗೆ ಮನಿ ತಗಂಡು
ಆಗ ಶಿವಮೊಗ್ಗದಾಗ ಸೇರಿದ
ಹೇ ಐನೂರು ರೊಕ್ಕ ನನಗೆ ಉಳ್ಕೊಂಡು ಹೋಯ್ತು
ಅವನ ಹುಣ್ಣು ಬೇಶಾಗತೈತಾ
ಸತ್ತು ಹೋಗಿ ಬಿಡ್ತಾನ
ಹುಡುಕ್ಯಾಡಿದ್ರೆ ಇನ್ನ ನಾನು ಸಿಗಾಂಗಿಲ್ಲ
ಆಗ ಗುಳಿಗಿ ತಿಂದ ಮ್ಯಾಲೆ
ಈ ಸೂಜಿ ಏರಿಸಿದ್ದಿಗೆ
ಶನಿಮಹಾತ್ಮಗ ಎದುರಾಯ್ತು
ಹದ್ನಾರು ಹಲ್ಲುಕೂಟ ಕಡೀತಿದ್ರೆ ಬಗ್ ಬಗ್ ಬಗ್ ಅಂತೈತಪ

ಯಪ್ಪ ಇನ್ನ ಜಾಸ್ತಿ ನನಗೆ ಆಯ್ತು ಶಿವನ್ಯಾ
ಯಪ್ಪಾ ಕೈಯಾಗಿದ್ದವರೆ ನನಗಿನ್ನಾ ಹೆಚ್ಚಾಗಿ ಬಿಡ್ತಪ್ಪ
ಆಗನ್ನರೋಟು ತಣ್ಣಗ ಇತ್ತು ಶಿವನೆ
ಆಗನ್ನರೊಟು ತಣ್ಣಗಿತಪ್ಪ ನನ್ನ ಜಲ್ಮದಾಗ || ತಂದಾನ ||

ಅಂದ್ರೆ ಎಲೆ
ಕೋಳಿ ಕಟ್ಬೇಕು
ಕೋಳಿ ಕಟ್ಟಿದ್ರೆ ತಣ್ಣಗ ಆಗೈತಿ
ಅಂತಾ ಊರಾಕ ಬಂದ್ರು
ಯಾರು ಹೊಲಿಗೇರಿ
ನಾಯಕರು
ಅವರೇ ಬಾಳ ತಿಂಬೋದು
ಅವರೇ ಬಾಳ ಸಲುವೋದು
ಮುದ್ಯೋರು
ಆಗ ಏಳೆಂಟು ಕೋಳಿ ಸಲಿವಿಕ್ಯಾಂಡಾರ
ತೆತ್ತಿಗೆ ಹಾಕಾನ ಮರಿಗೆ ಹಾಕಾನಂತ
ಮನಿ ಮುಂದೆ ಓಡ್ಯಾಡತಿದ್ರೆ
ಈ ಕಾಂಭೋಜ ರಾಜನ ಕೈಯಾಗಿದ್ದ
ಸಂಬಳದಾರ ಬಂದು
ಆಗ ಕೋಲು ತಗಂಡು

ಬೀಸಿ ಹಂಗೆ ಹೊಡ್ದು ಬಿಡಾದಣ್ಣ ಇನ್ನ ಸಂಬಳದಾರ
ಕಾಲು ಎರಡೆ ಮುರಿದು ಹೋಗ್ಯಾವ
ಎರಡು ಮೂರುನೇ ಕೋಳಿ ಹಿಡ್ದಾರ || ತಂದಾನ ||

ಆಗ ಮುದುಕ್ರು ನೋಡಿದ್ರು
ಏಯಪ್ಪ ಮರಿಗೆ ಹಾಕಬೇಕಂತ
ಎಲ್ಲಾ ತತ್ತಿಯೆಲ್ಲಾ ಬಚ್ಚಿಟ್ಟೀನಿ
ಯಪ್ಪಾ ತತ್ತಿ ಇಡೋ ಕೋಳಿಗ
ಬಡಿದು ಬಿಟ್ಟ್ರಲ್ಲಪ್ಪಾ
ಏ ಮುದಿಕಿ
ಈಗ ಕೋಳಿ ಹೆಚ್ಚಾಗೈತ್ಯಾ
ನಮ್ಮ ಗೌಡ ಈ ಗುದ್ದಾಡಿ ಬಂದೋರಿಗೆಲ್ಲಾ
ರಾಜ ಮಾಡೊಂತವುನಿಗ ಉಳಿಸಿಕ್ಯಂಬೋದು ಬೇಕಾ
ಇದೋ ಈಗ ಐದು ರೂಪಾಯಿ ಕೋಡುವಂತ ಕೋಳಿಗೆ
ಹತ್ತು ರೂಪಾಯಿ ಇಸ್ಕೊಡ್ತೀನಿ ಬಾ ಅಂತ
ಎರಡು ಮೂರು ಕೋಳಿ ಹಿಡ್ಕಂಬೋದು
ತಪ್ಪಲ ಕಿತ್ತಂಗಿಲ್ಲ ಗಿಪ್ಪಲ ಕಿತ್ತಂಗಿಲ್ಲ
ಗುಂಡಿಗೆ ಹಾಕೋದು ರುಬ್ಬೋದು
ಬೆನ್ನಿಗಿಟ್ರೆ ಬೆನ್ನದಾಗೆ ಶನಿಮದಾತ್ಮ ಬಾಯಿ ತೆರೆದು ಬಿಟ್ಟಾನ
ಯಪ್ಪಾ

ನನಗೆ ವಿಷ ಸಹ ಹೋಯ್ತಿಪ್ಪಾ
ನನಗೆ ಕೋಳಿ ಮಾಂಸ ಬಂತಾಪ್ಪ
s ಬುಡುಕ್ನಂಗ ಬಾಯಾಕ ಇನ್ನ ಹಿಂಗಿ ಬಿಡುತಾನ || ತಂದಾನ ||

ಆಗ ತಾಸೊತ್ತು ನೋಡಾಣ್ಣ ಸುಮ್ಮನಾಗೆ ಇರುತಾನ
ಮ್ಯಾಲೆ ಬಟ್ಟೆ ಹೊದುಸ್ತಾರ
ಆಗ ಹಲ್ಲು ಕಡಿತಾನ
ಬಗ್ ಬಗ್ ಉರಿತೈತೋ || ತಂದಾನ ||

ಯಮ್ಮಾ ಊರಾಗಿದ್ದ ಕೋಳಿ ಎಲ್ಲಾ ನಾಶನಾಗಿ ಹೋತಾವ
ಈಗ ಕೋಳಿ ಉಳಿಯೋದಿಲ್ಲ
ಯಮ್ಮಾ ನನ್ನ ಕೋಳಿ ಬಚ್ಚಿಕ್ಕಬೇಕೆ
ಅಂತ ಕೋಳಿ ಹಿಡಕಂಬೋದು
ನನ್ನ ಕೋಳಿ ಗೂಡ ಹೋತೈತಿ ಹಿಡ್ಕಂಡು
ಈಗ ಹುಣ್ಣಿಗೆ ಕಟ್ಟುತ್ತಾರಂತ
ಆ ಕೋಳಿ ಹಿಡಕಂಬೋದು
ಭೂಮಿಮ್ಯಾಲೆ ಇಡೋದು
ಕಬ್ಬಿಣ ಪುಟ್ಟಿ ಮುಚ್ಚೋದು
ಮ್ಯಾಲೆ ಗುಂಡು ಏರಿಸೋದು

ಅವುಗ ಗಾಳಿ ಬರ್ಲಾರದಂಗ ಅವು ಹೆತ್ಗಂಡು ಸಾಯೋದು || ತಂದಾನ ||

ಗಾಳಿ ಬೀಸಾಂಗಿಲ್ಲ
ಆಗಿನ್ನ ಹೇತ್ಗಂಡು ಸಾಯೋದು
ಮುಂಜಾನೆ ಇನ್ನ ಕಬ್ಬಿಣ ಪುಟ್ಟಿ ಎತ್ತಿದ್ರೆ
ಯಾವ್ದು ಮಿಸುಕಾಡವಲ್ಲು ಕೋಳಿ
ಹೇತ್ಗಂಡು ಸತ್ತು ಹೋಗೇತಿ
ಗಾಳಿ ಬರ್ತಿದ್ರೆ ಅಲ್ಲ
ಉಸಿರಾಡ್ತಿದ್ರೆ ಗಾಳಿ
ಆಗ ಕೋಳಿ ತಗಂಡೋಗಿ
ತಿಪ್ಪಿಮ್ಯಾಲೆ ಒಗದುಬಿಟ್ರು
ಏs ಕೋಳಿ ಎಲ್ಲ ಝಳ ಝಳ ಆಗಿಬಿಟ್ಟವು
ಎಲ್ಲಿ ಚಾಂಪುರ ಪಟ್ಣದಾಗ
ಇನ್ನ ಕುರಿ ಹಟ್ಟಿಗೆ ಹೋಗ್ರಿ

ಕುರಿ ಹಿಡ್ಕಂಡು ಬರ್ರೆಲೆ ಗುಂಡಗ ಹಾಕಿ ರುಬ್ಬಾನ || ತಂದಾನ ||

ಕುರಿ ಹಟ್ಟಿಗೆ ಬಂದ್ರು
ಐದು ಮಂದಿ ಸಂಬಳದವರು
ಕುರಿ ಹಟ್ಟಿಗೆ ಬಂದ್ರೆ
ಆಗ ಮೂರು ತಿಂಗಳ ಹೋತ ಮರಿ
ಕೈಯಾಕಿದ್ರೆ ಜಾರುತೈತೆಪ್ಪ
ಬೆನ್ನಮ್ಯಾಲೆ ಆಗ ಕುರಿ ಹಿಡ್ಕಂಡು ಬಿಟ್ರು
ಕುರಿ ಹಿಡ್ಕಂಡು
ಏ ಈ ಮರಿ ಬೇಸೈತಿ
ಕೈಯಾಕಿದ್ರೆ ಜಾರುತೈತಿ
ಈಗ ಇನ್ನ ನಮ್ಮ ಗೌಡಗ ಹುಣ್ಣು ಹುಟ್ಟೈತಿ
ಹುಣ್ಣೆಗ್ಹಾಕಿ ಕಟ್ತೀವಿ
ಅಯ್ಯೋಯ್ಯಪ್ಪ ಮರಿಗಳು
ಬೇಸ ಇನ್ನ ಚಂದಾಗೈದಾವ ಹಾಲು ಕುಡಿಸಿವಿ
ಈಗ ನಾವು ಕೊಡೋದಿಲ್ಲ
ಆಗೋ ಬಡಕಲಾದೈತಿ ಆ ಕುರಿ ಅದು ಕೊಡ್ತಿವಿ
ಏ ಅದು ಕೊಡಬಾರದು
ಹುಣ್ಣು ಒಳಗೆ ಹುಳ ಐತಿ
ಹುಳ ಸಾಯ್ಬೇಕು ಅಂತ
ಇವರು ಎರಡು ಕಾಲು
ಹಿಂದೆ ಹಿಡ್ಕಂಡು ಹಿಂದಕ ಜಗ್ತಾರ
ಅವರು ತಲೆ ಹಿಡ್ಕಂಡು
ಮುಂದಕ ಜಗ್ತಾರ ಹೋತು ಮರಿ
ಹೊಟ್ಟೆ ಪಟ್ಟಂತ ಒಡೀತು
ಹೊಟ್ಟ್ಯಾಗಿನ ಕರುಳು ಹೊರಾಗ ಹೊಂಟ್ವು
ಏಯ್ಯಮ್ಮ ಹೊಟ್ಟ್ಯಾಗಿನ ಕರುಳು ಹೊಂಟಮ್ಯಾಲ
ಇನ್ನೇನು ಉಳಿತೈತಿ ಹೋತಮರಿ
ಏ ಹಿಡ್ಕಂಡು ಹೋಗ್ಯ್ರೋ ಅಂದ
ತೊಗಲು ಬಿಡಿಸಿದ್ರು
ಹಂಗೆ ಗುಂಡು ಅಡೇಲಿ ಇಟ್ರು

ಗುಂಡಿಗೆ ಹಾಕಿ ರುಬ್ಬ್ಯಾರ
ಹೊತು ಮರಿ ಮಾಂಸಾನ್ನ || ತಂದಾನ ||

ಆಗ ತಂದ್ರು
ಯಪ್ಪಾ ಹುಣ್ಣು ಒಳಗೆ ಶನಿಮಹಾತ್ಮ
ಹೋತು ಮರಿ ಗುಂಡಿಗೆ ಹಾಕಿ ರುಬ್ಬಿಕ್ಯಂಡು ತಂದೀವಿ
ಅಂದ್ರೆ
ಹುಣ್ಣು ವಳಗಿನ ಶನಿಮಹಾತ್ಮೆ ಏನಂತಾನ

ಕೋಳಿ ಹೋತು ಹೋತಮರಿ ಮಾಂಸ ಬಂತೋ
ಇನ್ನ ನನಗೆ ಕುರಿ ಸಿಕ್ಕಿತಮ್ಮಾ
ಜಲ್ಮದಾಗ ನನಗೆ ಆನಂದ ಆಯಿತು
ಗುಟುಕ್ನಂಗೆ ಬಾಯಾಗ ಇಟ್ಟನಮ್ಮಾ ಶನಿಮಹಾತ್ಮ ಶರಣು || ತಂದಾನ ||

ಆಗಿನ್ನ ಕುರಿ ಸಲುವಿದ್ರವರು ನೋಡಿದ್ರು
ಲೇ ಈ ಕುರಿ ಹಟ್ಟ್ಯಾಗಿದ್ರೆ
ಒಂದು ಕುರಿ ಉಳಿಯೋದಿಲ್ಲ ನಮಗೆ
ಎಲ್ಲಾ ಹುಣ್ಣಿಗೆ ಆಗಿ ಬಿಡ್ತೈತಿ
ಊರಿಗೆ ಗೌಡ ಊರಿಗೆ ಒಳ್ಳೆದು ಕೆಟ್ಟದು ಹೇಳೋನಿಗೆ
ಕೊಡಲಿದ್ರೆ ಆಗಂಗಿಲ್ಲ
ಲೇ ರಾತ್ರಿ ಕುರಿ ಹೊಡ್ಕಂಡು
ಹಳ್ಳದಾಗ ಹೋಗಿ ಅಡವ್ಯಾಗ ಇರಾನ ಅಂತಾ
ಲೇ ಹೇಂಡ್ರ ನಾವು ಹೋಗಿ ಬಿಡ್ತಿವಿ ಅಂತ
ಆಗ ಅಡಿವ್ಯಾಗ ಹಳ್ಳದಾಗ ತಗ್ಗನಾಗ ತರಬಿ ಬಿಟ್ರು
ಲೇ ಮಳಿ ಮಾಡಾ ಆಗೈತಲೆ ಹಳ್ಳ ಬತ್ರೈತಿ
ಹೋಗ್ಲಿ ಹಳ್ಳಕ್ಕ
ಆತನ ಹುಣ್ಣಿಗ್ಯಾಕ ಕೊಡಾನ
ಬೊಗಡಿ ಮ್ಯಾಲೆ ತರಬಿದ್ರೆ ನೋಡ್ತಾರ
ಮಾಳಿಗೆ ಏರಿ ಅಂತ
ಹಳ್ದಾಗ ತರ್ಬಿಕ್ಯಂಡ್ರಪ್ಪ ಕುರಿ
ಮುಂಜಾಲೆದ್ದು ಸಂಬಳದವರು
ಕುರಿ ಹಿಡ್ಕಂಡು ಬರಬೇಕಂತ ಮಾಳಿಗೆ ಏರಿ ನೋಡಿದ್ರ
ಒಂದೂ ಕುರಿ ಹಟ್ಟ್ಯಾಗ ಒಂದು ಕುರಿ ಇಲ್ಲ
ಈ ಊರಿಗೆ ಯಾವನಾಗಲಿ
ಮೇಟಿ ಔಷಧ ಅಂತ ಬಂದವನ್ನ
ಅವನ ಏನು ಮಾಡಬಾರದು
ಎರಡು ಕೈ ಕಾಲು ಕಟ್ಟಿ
ಆಗ ಒಳ್ಳದಾಗ ಕುಂದ್ರಿಸಿ
ಒಣಕಿ ತಗಂಡು ಮೆತ್ತಗ ಕುಟ್ಟಿ
ಆಗ ಹುಣ್ಣಿಗ್ಹಾಕಿ ಕಟ್ಟಬೇಕು

ಮದ್ದಂತ ಬರಬಾರ್ದು ನಮ್ಮ ಚಾಂಪುರ ಪಟ್ಣಕ್ಕೆ || ತಂದಾನ ||

ಔಷಧ ಅಂತ ಮಾರಾಕ
ಬರಬಾರ‍ದು ಮೇಟಿ ಔಷಧ
ಈಗ ಜೀವಕ್ಕಾಗಿ ಅಂತ
ಅಗಸಿಗಿ ಇಲಾಸ ಬೋರಡ್ರು ಹಾಕಿಬಿಟ್ಟು
ಏ ಹುಡುಕ್ಯಾಡಿಕ್ಯಂಡು ಬರ್ರೆಲೆ
ಅವನ ಒಳ್ಳಾಗ್ಹಾಕಿ ಕುಟ್ಟಿ ಹುಣ್ಣಿಗೆ ಕಟ್ಟಾನ
ಒಬ್ಬೊಬ್ರಿಗೆ ಐವತ್ತು, ಅರವತ್ತು ಕೊಟ್ರೆ
ಆಗ ಹುಬ್ಬಳ್ಳಿಗೆ ಬಂದ್ರು
ಏನ್ರಿ ಮನ್ಯಾಗ ಹುಬ್ಬಳ್ಳಿ ಡಾಕಟ್ರು ಎಲ್ಲಿಗೆ ಹೋದರ್ರೀ
ಏನೋ ತಾವಾಗಿ ಟ್ರಂಕು ಪ್ರಂಕು ತಗಂಡು
ಹೆಂಡ್ರುನ್ನ ಕರಕಂಡು ಹೋಗಿ ಬಿಟ್ಟನಪ್ಪ ಬಸ್ಸಿಗೆ
ಆಗ ಎಲ್ಲ ನೊಡಿ ಬಿಟ್ರಪ್ಪ
ಹುಬ್ಬಳ್ಳಿದಾಗಿಲ್ಲ
ಆಗ ಇನ್ನ ತಾವು ಎಲ್ಲಿಗೆ ಬಂದ್ರು
ಶಿವಮೊಗ್ಗಕ್ಕ ಬಂದು ಬಿಟ್ರು ಜೀವದಲ್ಲಿ
ಶಿವಮೊಗ್ಗೆಲ್ಲ ಹುಡುಕಿದ್ರೆ ಸಿಗಲಿಲ್ಲ
ಹಿಂದಕ ಬಂದು ಬಿಟ್ರು
ಸಿಗಲಿಲ್ಲರ್ರಿ ಏ ನನಗ ಹುಟ್ಟಿದವನು
ಐನೂರು ಹಕ್ಯಂಡು ಹೋಗಿ ಬಿಟ್ಟಾನ ಅಂತ ಅಂಬೋತ್ತಿಗೆ
ಈಗ ಜೀವದಲ್ಲಿ ಏನಂತಾನ ಈ ಕಾಂಭೋಜರಾಜ

ಯಮ್ಮಾ ಬಾರ್ಲು ಬಿದ್ದು ದುಃಖ ಪಡಿತಾನಮ್ಮ
ಬಾರ್ಲು ಗಂಜಿ ಆತ ಕುಡಿತಾನಮ್ಮೊ
ಹಗಲು ರಾತ್ರಿ ಕಣ್ಣಿಗೆ ನಿದ್ದಿಲ್ಲ
ಹೆಂಡ್ರುಗ ಬಡ್ಡದವನಿಗಿ ಇನ್ನ ಕರ್ಮ ಬಂದೈತೋ || ತಂದಾನ ||

ಹೆಣ್ಮಕ್ಕಳು ಹೇಣ್ತಿನ್ನ ಬಡಿದಿದ್ದಗೆ
ಹೇಣ್ತಿನ್ನ ಬಡಿದ ಕರ್ಮ ಅವನಿಗೆ ಸುತ್ತಿ ಬಿಡ್ತು
ಆಗ ಕುಲದಲ್ಲಿ ಏನು ಮಾಡಿದರು
ಈಗಿನ ಕೊಳಿಕಟ್ರೆ ಕುರಿ ಕಟ್ರೆ
ತಿಂಬೋದು ಏನು ಮಾಡಿಬಿಟ್ಟ ಅಂದ್ರೆ
ಐನೋರು ಈರಮ್ಮನ ಮಗವಾಗೆ
ಆಗ ಹುಣ್ಣಿಗಿ ಕಟ್ಟಬೇಕಂದ್ರೆ
ಆ ಹುಡುಗ ಹೋಗಿಬಿಟ್ಟದ್ದ
ಈ ಕಾಂಭೋಜರಾಜ ದುಃಖ ಮಾಡುತ್ತ
ಒದ್ದಾಡಿಕ್ಯಂತ ಇದಾನ