ತಾತ ಊರುದನ ಎಲ್ಲಾ ಕಾಯೋ ತಾತ
ಅಂದ ಶರಬಂಧ
ಯಾರಪ್ಪ ನೀನು ಅಂದ ಮುದ್ಯಾತ
ತಾತ ರುದ್ರಗಿರಿ ಪಟ್ನ ನಂದು ಅಂದ
ಮತ್ತೆ ನಿನ್ನ ಹೆಸರು ಏನು ಅಂದ
ನನ್ನ ಹೆಸರು ಶರಬಂದರಾಜ ತಾತ ಅಂದ
ಏಯ್ಯಪ್ಪ ಶರಣಪ್ಪೊ ಶರಣು ಅಂದ
ನಿಮ್ಮ ತಾಯಿ ಹೆಸರು ಏನಂದ
ನಮ್ಮ ತಾಯಿ ಸಿರಿದೇವಿ ಅಂದ
ನಿಮ್ಮ ಅಪ್ಪನ ಹೆಸರು ಏನಂದ
ನಮ್ಮಪ್ಪ ಗೊತ್ತಿಲ್ಲ ಅಂದ
ಅಪ್ಪನ ನೋಡಿಲ್ಲಲ್ಲ
ನೋಡಿದ್ರೆ ಹೇಳ್ತಾನ ಆ ಹುಡುಗ
ಹುಟ್ಟಿದಾಗಲಿದ್ದ ನೋಡಿಲ್ಲ
ತಾತ ಈ ಊರಾಗ ಯಾರು
ಸಿರಿದೇವಿ ಸಿರಿದೇವಿ ಸುಡುಗಾಡು ರುದ್ರಭೂಮಿ ಅಂತಾನಲ್ಲ
ಎಷ್ಟು ಮರ್ಯಾದೆ ಮಾಡಿದಿರಬಹುದು ಆಯಮ್ಮಗ
ಆತನ ಜೀವಕ್ಕ
ಅಕ್ಕ ಆಗಬೇಕ ತಂಗಿ ಅಗಬೇಕ ಅಂತ ಕೇಳಿದ
ಅಯ್ಯೋ ತಮ್ಮ ಅವಂದು ಏನು ಸುದ್ದಿ ಕೇಳ್ತೀಯಪ್ಪ
ನನ್ನ ಕೈಯಾಗೈತಿ ಅಂದ
ಹಾಂ ಈ ಮುದ್ಯೋನಿಗ ಗೊತ್ತು
ಊರು ದನ ಎಲ್ಲಾ ಕಾಯ್ತಾನ
ಊರಾಗಿನ ಸುದ್ದಿ ಎಲ್ಲಾ ಗೊತ್ತು
ತಾತ ನೀನು ಯಜಮಾನ
ನಾನು ನಿನ್ನ ಕೈಯಾಗ ಬೆಳ್ಕೊಂಡೋನು ಮೊಮ್ಮಗ
ನಿನಗೆಲ್ಲಾ ಗೊತ್ತು ತಾತ
ಹೇಳು ತಾತ
ಕಣ್ಣಿಲ್ಲೇ ನೋಡದಿದ್ರೆ
ಕಿವಿಲ್ಯನ್ನ ಕೇಳ್ತಿನಿ
ತಮ್ಮಾ ಆ ತಾಯಿನ್ನ ನೆನಸಬೇಕಪ್ಪ
ತಣ್ಣೊತ್ತಿನಾಗೆ ನೆನಸಬೇಕಪ್ಪ ತಮ್ಮ
ಬಿಸಿಲಾಗ ನೆನಸಬಾರದಪ್ಪ
ಚಮರಾಜನ ಮಗ ಕಾಂಭೋಜರಾಜ
ಈಗ ಹಡೆಯೋ ತಾಯಿನ್ನ
ಗೋಪಿನ ಕೊಲ್ಲಿ ಬಂದ ಅವನ ತಂದಿ
ಈ ಮಗ ಹುಟ್ಟಿದ ಮ್ಯಾಲೆ
ಆಗ ಎಲ್ಲೆಲ್ಲಿ ತಿರಗಿದ್ರೂ ಮಕ್ಕಳಾಗಲಿಲ್ಲ
ಏಳು ಮಂದಿ ಹೆಂಡ್ರುನ್ನ ಮಾಡಕ್ಯಂಡ್ರೇನು
ಆಗ ಕಡೇ ಲಾಸ್ಟಿಗೆ ಹನ್ನೆರಡು ವರುಷ
ಪಟ್ಟಾ ಮೀರೋ ಮುಂದೆ
ಯಾರೋ ಕೃಷ್ಣನೋ ದಾಸಪ್ಪನೋ
ದೇವರೋ ಪರಮಾತ್ಮೊ ಬಂದು
ಆರು ಮಂದಿಗೆ ಮಕ್ಕಳು ಕೊಟ್ಟ
ಹುಟ್ಟಿದ ಮೂರು ಗಂಟೆಗೆ ಹುಡುಗರು
ಚಿಕ್ಕಹೆಂಡ್ತಿಗೆ ಕೊಡಬೇಕಂತ ಹೆಳ್ಯಾನ
ಆ ಯಮ್ಮನ ಮಕ್ಕಳ ಕೊಟ್ಟಿಲ್ಲ
ತಂದು ಪಾಪ
ಆಗ ಹತ್ತು ವರುಷ ಇಪತ್ತು ವರುಷ
ಜೋಪಾನ ಮಾಡ್ದುಳು
ಮಾಡಿದ ಮ್ಯಾಲೆ
ಆಗ ಹುಡುಗ್ರು ಗೋಲಿ ಆಡಾಕ ಹೋಗಿದ್ರಂತೆ
ಅವರೇನು ಇನ್ನು ಹೆಂಡ್ರು
ಆಗ ಮಾವಿನ ಹಣ್ಣು ತಂದು ಹುಡುಗ್ರಿಗೆ ಕೊಟ್ಟಾರ
ಹುಡುಗ್ರು ಹಣ್ನು ತಿಂದು
ನೀರು ಕುಡಿದು ಕೆಳಗ ಬಿದ್ದರಂತೆ
ಮೀನು ಒದ್ದಾಡಿದಂಗ ಎಗರಾಡುತ್ತಿದ್ರಂತೆ
ಆಗ ಗಂಡಾ ಬಂದು
ಆಗಿನ್ನು ತಾವಾಗಿ ಬಡ್ತಾಬಡಿದ ಯಪ್ಪಾ
ಚೂಟಿದ್ರೆ ಕೆಂಪು ರಕ್ತ ಚಿಮ್ತಿತಂತೆ
ನೆಗ್ಗಿನ ಮುಳ್ಳು ದಬ್ಬ್‌ಗಳ್‌ಮುಳ್ಳುಗಳ ಮ್ಯಾಲೆ
ಕೆಬ್ಬಿಣ ಹೊರ್ಸ
ಕತ್ತರಿ ಕುಡುಗೋಲು ಮ್ಯಾಲೆ
ಬಾರೆಣ್ಣ ಬೇಲಿ
ಕೈಗೆ ಸರಪಣಿ ಕಾಲಿಗೆ ಸರಪಣಿ ಮ್ಯಾಲೆ
ಆಗ ಜೀವ ಇದ್ದಾಕಿನ ಕರ್ಕಂಡು ಹೋಗಿ
ಆ ಯಮ್ಮನ ಒದ್ದಾಟ ಇಟ್ಟುಬಿಟ್ಟು
ಸುಡುಗಾಡ್ಯಾಗಿಟ್ಟು ಬಂದ
ಈ ಹುಡುಗ್ರಿಗೆ ಹಳೇ ಹುಣಸಿಹಣ್ಣು
ಮಜ್ಜಿಗೆ ಕಲಿಸಿ ಕುಡಿಸೋ ಹೊತ್ತಿಗೆ
ಬುಡ್ಗ್‌ಅಂತ ತಿರುವಿಕ್ಯಂಡ್ರು
ಮ್ಯಾಕ ಎದ್ದು ಕುಂತಗಂಡ್ರು
ಆಗಿನ್ನವರು ಯಾವನೋ ಜಂಗಮ ಬಂದಿದ್ನಂತೆ
ಶಿವರಾತ್ರಿ ಜಾಗರಣೆ
ಹಿಡಿಕಿ ದಾನ ಮಾಡಿಲ್ಲ
ಅವನು ಗೊಲ್ರವನು
ಮಾಡ್ಲಿಲ್ಲದ್ರೆ ವಿಭೂತಿ ಹಚ್ಚಂದ್ರೆ
ನಾನು ಹಣೀಗೆ ಹಚ್ಚಿಗಂಬಾದಿಲ್ಲ
ಶಿವನ ವಿಭೂತಿ
ಬೆನ್ನಿಗೆ ಹಚ್ಚುಹೋಗ ಅಂದನಂತೆ
ಯಪ್ಪಾ ಬೆನ್ನಗಲಾಗ ಹುಣ್ಣು ಹುಟ್ಟೈತಲೋ
ಹೊಟ್ಟ್ಯಾಗ ಕರುಳು ತಿರುವಣ ಬರ್ತಾವಲ್ಲೋ
ಬರೇ ಎಲುಬು ತೊಗಲು ಐತೆಪ್ಪ
ಬಕ್ ಬಾರ್ಲಿ ಬಿದ್ದೋನು
ಮ್ಯಾಕ ಎದ್ದೇಳಂಗಿಲ್ಲ
ಅದಕ್ಕೆ ಈವಾಗ ನೆನಸಿಕ್ಯಂತಾನ
ಕಳಕಂಡು ಹುಡುಕಾಡಿದ್ರ
ಇವಾಗ್ಹೆಂಗ ಸಿಗುತೈತಪ್ಪಾ ತಮ್ಮಾ
ತಾತ ಆತಗೆ ಏನಾಗಬೇಕು ಅಂದ
ಚಿಕ್ಹೇಣ್ತಿಯಪ್ಪಾ
ಧರ್ಮತಾಯಿ ಆಕೇನೆ ನೆನಸಬೇಕಪ್ಪ ಅಂದ
ಇವರಾರು ಮಂದಿನ
ಮೂರು ದಾರಿಯಾಗ ಇಕ್ಕಬೇಕು ಇವ್ರನ
ಆಗ ಮ್ಯಾಲಿಟ್ರ ಮಳಿ ಬರಾಂಗಿಲ್ಲ
ಭೂಮ್ಯಾಗಿಟ್ರೆ ಬೆಳಿಯಂಗಿಲ್ಲ
ಅಂಥಾ ದುಷ್ಠರಿಗೆ ಮಕ್ಕಳ ಕೊಟ್ಟಾನ
ಅಂಬೋತ್ತಿಗೆ
ಸರೇ
ಹೇಣ್ತಿಯಾಗಬೇಕೇನು ತಾತ
ಹೌದು
ಮತ್ತೆ ಯಾರನ್ನ ಇದಾರ ಸಿರಿದೇವಿಯಂಬಾಕಿ
ಆಕಿ ಒಬ್ಬಾಕೇನ
ನೋಡಪ್ಪಾ ದೇಶ ಹುಟ್ಟಿತ್ತಲ್ಲಿ
ದೇಶ ಮುಳುಗಿತ್ತಲ್ಲ ಯಾರು
ಸಿರಿದೇವಿ ಅಂತ ಇಲ್ಲ
ಸಿರಿಗೇರೊಂದು ಐತಿ
ಆಕೆಯೊಬ್ಬಾಕಿ ನಮ್ಮ ಚಾಂಪುರದಾಗ
ಸಿರಿದೇವಿ ಅಂಬಾಕೆ ಹೆಣುಮಗಳು ಅಂದ
ಸರಿ
ಹೋತಿನಿ ತಾತ ಅಂದ
ಅಯ್ಯೋ ಹೋಗಪ್ಪ ನಿನ್ನ್ಯಾರು ಹಿಡಕಂಡ್ರು