ಕೈಯಾಗ್ಹಿಡಕಂಡಿದ್ದ ವಿಭೂತಿ ಶಿವ
ಯಪ್ಪಾ ನನಗೆ ಬೆನ್ನೆ ಧರ್ಮ ಸಾಕು ಕಾಂಭೋಜರಾಜ
ಅಂತಾ ಕೇಳವೋ ಶನಿಮಹಾತ್ಮ ಜೋಳಿಗ್ಯಾಗ ಇದ್ದವ್ನೆ
ಈಗ ನಾನು ಬೂದಿ ಉಗ್ಗುತ್ತೀನಿ ಬೆನ್ನಿಗೆ
ಆಗ ಬೆನ್ನ ಮ್ಯಾಲ ಗಜಕ್ ಅಂತ
ಅವನ ಬೆನ್ನಾಗ ತೂರಿಕೊಬೇಕು
ಬಾರ್ಲು ಬಿದ್ದೋವ್ನ ಮ್ಯಾಕ ಎಬ್ಬಿಸಬಾರದು
ಕೋಳಿಕಟ್ರೆ ಕುರಿ ಕಟ್ರೆ
ಅವನ ಯಮನ ಗುಂಡ ತೋರಸಬೇಕು
ಹೇಲ್ದಾಗ ಒದ್ದಾಡಬೇಕು ಅವನು
ಇದೋ ಸುಡುಗಾಡು ರುದ್ರ ಭೂಮಿದಾಗ
ಕೊಟ್ಟಿದ ಮಗ
ಹದಿನೆಂಟು ವರುಷದ ಮಗ ಆಗಿ
ಏಳು ಸಮುದ್ರದ ಆಕಡಿಗಿ ಹೋಗಿ
ಮಾತಾಡೊ ಅಡಿಕೆ
ನಗೊ ಎಲೆ
ಓಡಾಡೋ ಕಾಂಚು
ಸೂಗೂರು ಸುಣ್ಣ
ಇಗೋ ಬೆಂಕಿ ತಿಂಬೊ ಪಕ್ಷಿ ರಕ್ತಕೂಟ
ತಯ್ಯಾರು ಮಡಿದ ಔಷಧ
ಗಾಜಿನ ಬುಡ್ಡಿ ಮದ್ದು ತುಂಬಿದ್ದು
ಥೈ ಥೈ ಥೈ ಕುಣೀತೈತಿ
ಬೊಳ್ಳಿಟ್ರೆ ಉರಿತೈತಿ
ಭೂಮಿ ಮ್ಯಾಲ ಬಿದ್ರೆ
ತೂತು ಬಿದ್ಕೊಂಡು ಹೋಗುತೈತಿ
ಆ ಮದ್ದು ಬೆನ್ನಿಗೆ ಹಾಕುವಾಗ

ನೀನು ಬೆನ್ನು ಬಿಟ್ಟು ಬರಬೇಕು
ನನ್ನ ಮಾತು ಕೇಳು ಶನಿಮಹಾತ್ಮನೆ || ತಂದಾನ ||

ಕೋಳಿಕಟ್ರೆ ಕುರಿಕಟ್ರೆ
ನಾಯಿ ಕಟ್ರೆ ಮನುಷ್ಯರು ಕಟ್ರೆ
ಎಲ್ಲ ತಿನಬೇಕು ನೀನು
ಆಗ ಹೊಟ್ಟ್ಯಾಗಿನ ಕೆರುಳು ಹೊರಾಗ ಬೀಳಬೇಕು
ಬರೇ ಎಲುಬು ತೊಗಲು ನಿಂದ್ರಸಬೇಕು ನೀನು
ಅಷ್ಟೇ ಆಗಲೆಪ್ಪ ಇದ್ದಮನಿ ತೋರಿಸಿದೆ
ನನ್ನ ಬಾಯಿ ಸಪ್ಪಗಾಗೈತಿ
ಆತನ ಜೀವೆಲ್ಲ ಎಳ್ಕಂಡು ತಿಂದು ಬಿಡ್ತಿನಿ ಅಂತ
ಆಗ ಬೂದಿ ಉಗ್ಗೋ ಹೊತ್ತಿಗಿ ಬೆನ್ನಿಗ ಬಿತ್ತು
ಆಗ ಶನಿಮಹಾತ್ಮ ಜೋಳಿಗ್ಯಾಗಲ್ಲಿದ್ದ ಹೋಗಿ

ಆಗ ಬೆನ್ನುಮ್ಯಾಲೆ ಕುಂತಾನ ಗಜಗ್ ಅಂತ ತೂರಯಾನ || ತಂದಾನ ||

ಗಜಗ್ ಅಂತ ಬೆನ್ನಾಗ ಹೋದ
ಹೋಗೋ ಹೊತ್ತಿಗೆ ಚಟಕ್ಕಂತ ಚೋಳು ಕಡಿದಂಗಾತು
ಕೆಬ್ಬಿಣ ಚೋಳು ಕಡಿದಂಗಾತು
ಯಪ್ಪಾ ಏನ ಉರಿತೈತಿ ನೋಡಿ ಬೆನ್ನಾಗ
ನೋಡ್ರೆ ಆಗ ಅಂಬ್ರಿಕಾಳಷ್ಟು ಬೊಬ್ಬೆ ಹುಟ್ಟೈತಿ ಬೆನ್ನಿಗೆ
ಏ ಯಾವನೋ ಬಂದು
ಅವನು ವಿಭೂತಿ ಉಗ್ಗಿ ಹೋಗಲೆ
ಹಚ್ಚಿ ಹೋಗು ಬೆನ್ನಿಗ ಅಂದ್ರೆ
ಅವ್ನು ಏನೋ ಹಿಂಗ ಮಾಡಿದ ಬೆನ್ನಿಗೆ
ಆಗ ಅಂಬ್ರಿಕಾಳಿನಷ್ಟು ಬೊಬ್ಬೆ ಹುಟ್ಟೈತಿ
ಲೇ ಅವನ ಹುಡುಕ್ಯಾಡಿ ಹಿಡಕಣಬರ್ರಲೇ
ಕಂಬಕ್ಕಟ್ಟಿ ಬಡಿಯಾನ ಅವನ್ನ
ಹೊಯಕಂಡ್ರೆ ಸಿಗತಾನ ನೋಡು
ಹುಡುಕ್ಯಾಡಿದ್ರೆ ಸಿಗದಿಲ್ಲ ನಾಲಾರು ಖಳಿಸಿಬಿಟ್ನಪ್ಪ
ಯಾರು ಗೊಲ್ರವನು ಕಾಂಭೋಜರಾಜ
ನಾಲರು ಬರೋ ಹೊತ್ತಿಗೆ
ಓಣಿ ಓಣಿ ಹುಡುಕ್ಯಾಡ್ತಾರ
ಶಿವ ಆಗಲೆ ಮಠಕ್ಕ ಹೋದ ಮೂರು ಮೇಘದಾಗ